KPTCL ನಲ್ಲಿ 912 ಹುದ್ದೆಗಳಿಗೆ ನೇಮಕಾತಿ (ಸಂಪೂರ್ಣ ವಿವರ)

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಈ ಬಾರಿ ಭರ್ಜರಿ ಓಪನಿಂಗ್ಸ್. ಒಟ್ಟು 912 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇವುಗಳ ಪೈಕಿ ಹೈದರಾಬಾದ್ -ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ 104 ಹುದ್ದೆಗಳನ್ನು ಮೀಸಲಿಡಲಾಗಿದೆ.

ಯಾವ್ಯಾವ ಹುದ್ದೆಗಳು?
ಸಹಾಯಕ ಎಂಜಿನಿಯರ್ : ಒಟ್ಟು 417 ಹುದ್ದೆಗಳು (ಎಲೆಕ್ಟ್ರಿಕಲ್: 413 ಮತ್ತು
ಸಿವಿಲ್ : 4). ಇವುಗಳ ಪೈಕಿ ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿ ಎಲೆಕ್ಟ್ರಿಕಲ್ ವಿಭಾಗಕ್ಕೆ 68 ಹುದ್ದೆಗಳನ್ನು ಮೀಸಲಿಡಲಾಗಿದೆ.
ಕಿರಿಯ ಎಂಜಿನಿಯರ್ : ಒಟ್ಟು 480 (ಎಲೆಕ್ಟ್ರಿಕಲ್ ಮಾತ್ರ). ಇದರಲ್ಲಿ ಹೈ-ಕ ಪ್ರದೇಶಕ್ಕೆ 34 ಹುದ್ದೆಗಳನ್ನು ಮೀಸಲಿಡಲಾಗಿದೆ.
ಸಹಾಯಕ ಲೆಕ್ಕಾಧಿಕಾರಿಗಳು: ಒಟ್ಟು 15 ಹುದ್ದೆಗಳಿವೆ. ಇವುಗಳಲ್ಲಿ ಹೈ-ಕ ವಿಭಾಗಕ್ಕೆ 2 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಹತೆ ಏನು?
ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಯಾವುದಾದರೂ ಅಂಗೀಕೃತ ವಿವಿಯಿಂದ ಬಿ.ಇ ಪದವಿ ಅಥವಾ ಎಎಂಐಇ (ಭಾರತ) ನಡೆಸುವ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಅಂತೆಯೇ ಸಿವಿಲ್ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಿವಿಲ್ ವಿಭಾಗದಲ್ಲಿ ಬಿ.ಇ ಪದವಿ ಅಥವಾ ಎಎಂಐಇಯ ಎ ಮತ್ತು ಬಿ (ಸಿವಿಲ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕಿರಿಯ ಎಂಜಿನಿಯರ್‌ಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೊಮಾ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಆಫ್ ಎ ಪಾಲಿಟೆಕ್ನಿಕ್) ಪಡೆದರೆ ಸಾಕು.
ಇನ್ನು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳ ಆಕಾಂಕ್ಷಿಗಳು ಫೈನಾನ್ಸ್ ವಿಭಾಗದಲ್ಲಿ ಎಂ.ಕಾಂ / ಎಂ.ಬಿ.ಎ ಅಥವಾ ಐಸಿಡಬ್ಲ್ಯೂಎ/ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಅರ್ಜಿ ಶುಲ್ಕ /ವಯೋಮಿತಿ
ಸಾಮಾನ್ಯ ವರ್ಗ ಸೇರಿದಂತೆ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 500 ರೂ. ಹಾಗೂ ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಳಿಗೆ 300 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಕರ್ನಾಟಕದ ಯಾವುದಾದರೂ ಗಣಕೀಕೃತ ಅಂಚೆ ಕಚೇರಿಯಲ್ಲಿ ನಿಗದಿಪಡಿಸಿರುವ ದಿನಾಂಕದೊಳಗೆ ಸಂದಾಯ ಮಾಡಬೇಕು. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಗರಿಷ್ಠ ವಯೋಮಿತಿ; ಸಾಮಾನ್ಯ ವರ್ಗ-35, ಪ್ರವರ್ಗಗಳಾದ 2ಎ, 2ಬಿ, 3ಎ ಮತ್ತು 3ಬಿ-38 ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷವೆಂದು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಎಲ್ಲ ಹುದ್ದೆಗಳಿಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶ. ಹೈ-ಕ ಪ್ರದೇಶ ಮೀಸಲಾತಿಯ ಹುದ್ದೆಗಳು ಮತ್ತು ಹೈ-ಕರ್ನಾಟಕೇತರ ವಿಭಾಗದ ಹುದ್ದೆಗಳು-ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಅಷ್ಟೇ ಅಲ್ಲ, ಹೈ-ಕ ಪ್ರದೇಶದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೈ-ಕ ಪ್ರದೇಶ ಮೀಸಲಾತಿಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ 'ಅಪ್‌ಲೋಡ್' ಮಾಡಬೇಕು. ಹೀಗಾಗಿ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಬಳಿಕ ಅರ್ಜಿ ಸಲ್ಲಿಸಬೇಕು.

ನೇಮಕ ಹೇಗೆ?
'ಆನ್‌ಲೈನ್ ಅಪ್ಟಿಟ್ಯೂಡ್ ಟೆಸ್ಟ್' ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅರ್ಹತೆಯ ಆಧಾರದ ಮೇಲೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಬಹು ಆಯ್ಕೆ ಮಾದರಿಯ 100 ಅಂಕಗಳ ಪ್ರಶ್ನೆಗೆ ಉತ್ತರಿಸಲು ಎರಡು ಗಂಟೆ ಕಾಲಾವಕಾಶವಿರುತ್ತದೆ. ಪ್ರತಿ ಪ್ರಶ್ನೆಗೆ 1 ಅಂಕ. ತಪ್ಪು ಉತ್ತರಗಳನ್ನು ನೀಡಿದಲ್ಲಿ ಪ್ರತಿ ಉತ್ತರಕ್ಕೂ 0.25 ಅಂಕ ಕಡಿತಗೊಳಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ (ಮೇ 15, 2015) ಮುಗಿದ ತಕ್ಷಣ ಕೆಪಿಟಿಸಿಎಲ್ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಿದೆ.

ಪರೀಕ್ಷೆಗೆ ಏನೇನು ಓದಬೇಕು?
ಸಹಾಯಕ ಎಂಜಿನಿಯರ್ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ /ಸಿವಿಲ್ ಎಂಜಿನಿಯರಿಂಗ್ ವಿಭಾಗಗಳಿಗೆ ನಿಗದಿಪಡಿಸಿದ ಸಿಲೆಬಸ್ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು
ಸಹಾಯಕ ಎಂಜಿನಿಯರ್: ಬೆಂಗಳೂರು ವಿವಿ ಎಂ.ಕಾಂ.ಗೆ ನಿಗದಿಪಡಿಸಿದ ಸಿಲೆಬಸ್ ಮತ್ತು ಸಾಮಾನ್ಯ ಜ್ಞಾನ
ಕಿರಿಯ ಎಂಜಿನಿಯರ್: ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಡಿಪ್ಲೊಮಾ ಸಿಲೆಬಸ್ ಮತ್ತು ಸಾಮಾನ್ಯ ಜ್ಞಾನ

ಕ್ವಿಕ್ ಲುಕ್
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 15, 2015
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ: ಮೇ 16, 2015
ಅರ್ಜಿ ಸಲ್ಲಿಸಲು ವೆಬ್ ವಿಳಾಸ: www.kptcl.com
ಹೆಲ್ಪ್ ಲೈನ್ : 080-22211527/22392668
ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023