Drop


Thursday, May 7, 2015

Today GENERAL ELECTION IN BRITAIN ..

ಬ್ರಿಟನ್‌ನಲ್ಲಿ ಇಂದು ಸಾರ್ವತ್ರಿಕ ಚುನಾವಣೆ
 
ಉದಯವಾಣಿ, May 07, 2015, 3:40 AM IST

ಲಂಡನ್‌: ಬ್ರಿಟನ್‌ನ 56ನೇ ಸಂಸತ್ತಿಗೆ ಗುರುವಾರ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಒಟ್ಟು 650 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಸದ್ಯ ಪ್ರಧಾನಿಯಾಗಿರುವ ಡೇವಿಡ್‌ ಕ್ಯಾಮರೂನ್‌ ಅವರ ಕನ್ಸರ್‌ವೆàಟಿವ್‌ ಪಕ್ಷ ಬಹುತೇಕ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಇನ್ನು ಲೇಬರ್‌ ಪಕ್ಷ ಎರಡನೇ ಸ್ಥಾನವನ್ನುಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

2010ರಲ್ಲಿ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಯಾವ ಪಕ್ಷಕ್ಕೂ ಬಹುಮತವಿಲ್ಲದ್ದರಿಂದ ಕನ್ಸರ್‌ವೆàಟಿವ್‌ ಮತ್ತು ಲಿಬರಲ್‌ ಡೆಮಾಕ್ರಾಟ್‌ ಪಕ್ಷ ಮೈತ್ರಿ ಸರ್ಕಾರ ರಚಿಸಿದ್ದವು. ಹೀಗೆ 2 ನೇ ಮಹಾಯುದ್ಧ ಬಳಿಕ ಬ್ರಿಟನ್‌ನಲ್ಲಿ ಮೊದಲ ಮೈತ್ರಿ ಸರ್ಕಾರ ಸ್ಥಾಪನೆಯಾಗಿತ್ತು. 2013ರಲ್ಲಿ ಚುನಾವಣೆ ಕಾಯ್ದೆಗೆ ಬದಲಾವಣೆ ತರಲಾಗಿದ್ದು, ಸ್ಥಿರ ಅವಧಿಯ ಸಂಸತ್ತು ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಅದರಂತೆ ಪ್ರತಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಸಲೇಬೇಕಿದೆ.