ದುಬೈನಲ್ಲಿ ತಲೆಯೆತ್ತಲಿದೆ ವಿಶ್ವದ ಮೊದಲ ತ್ರಿಡಿ ಪ್ರಿಂಟರ್ ಕಚೇರಿ


ಏಜೆನ್ಸೀಸ್ | Jul 2, 2015, 11.54AM
IST

ದುಬೈ : ಗಗನ ಚುಂಬಿ ಕಟ್ಟಡಗಳಿಗೆ
ಪ್ರಸಿದ್ಧವಾದ ದುಬೈ ಇದೀಗ ಮೂರು
ಆಯಾಮಗಳುಳ್ಳ (ಉದ್ದ ಅಗಲ ಮತ್ತು ಆಳ) ತ್ರಿ
ಡಿ ಪ್ರಿಂಟರ್ ತಂತ್ರಜ್ಞಾನ ಬಳಸಿ
ಜಗತ್ತಿನಲ್ಲೇ ಮೊದಲನೆಯದು
ಎಂದೆನಿಸುವ ಕಚೇರಿ
ಕಟ್ಟಡವೊಂದನ್ನು ನಿರ್ಮಿಸುವ
ಯೋಜನೆಯನ್ನು ರೂಪಿಸಿದೆ.
ಅತ್ಯಾಧುನಿಕ ತಂತ್ರಜ್ಞಾನ
ಒಳಗೊಂಡ ಇದನ್ನು
ನಾವೀನ್ಯತೆಯ ಜಾಗತಿಕ
ಕೇಂದ್ರವಾಗಿಸುವ ಕನಸು ನಮ್ಮದು ಎಂದು
ಸಂಯುಕ್ತ ಅರಬ್ ಎಮಿರೇಟ್ಸ್ನ ಸಂಪುಟ
ವ್ಯವಹಾರಗಳ ಖಾತೆ ಸಚಿವ
ಮೊಹಮ್ಮದ್ ಅಲ್ ಜೆರ್ಗಾವಿ
ಹೇಳಿದ್ದಾರೆ.
ಈ ಕಟ್ಟಡವೊಂದು ದಕ್ಷತೆ
ಮತ್ತು ಸೃಜನಶೀಲತೆಗೆ ಮಾದರಿಯಾಗಲಿದೆ.
ಕಟ್ಟದ ಆಕಾರ ಮತ್ತು ವಿನ್ಯಾಸ ವಲಯದಲ್ಲಿ ತ್ರಿ
ಡಿ ಪ್ರಿಂಟರ್ ಕ್ರಾಂತಿಕಾರಿ ಪಾತ್ರ ವಹಿಸಲಿದೆ
ಎಂದು ಅವರು ಹೇಳಿದ್ದಾರೆ.
ಇದು ಎರಡು ಸಾವಿರ ಚದರ ಅಡಿ ವಿಸ್ತೀರ್ಣ
ಹೊಂದಿದ್ದು,
ಇದರೊಳಗೆ ಇರುವ
ಪೀಠೋಪಕರಣಗಳ ಮಾದರಿಯನ್ನೂ ಕೂಡ 20
ಅಡಿ ಉದ್ದ ತ್ರಿ ಡಿ ಪ್ರಿಂಟರ್ನಿಂದ
ತೆಗೆದುಕೊಳ್ಳಲಾಗುತ್ತದೆ.ವಿನ್ಸನ್
ಗ್ಲೋಬಲ್ ಎಂಬ ಚೈನಾ ಕಂಪನಿ
ಸಹಯೋಗದಲ್ಲಿ ಈ ಯೋಜನೆ
ಸಾಕಾರಗೊಳ್ಳುತ್ತಿದೆ.
ತ್ರಿಡಿ ಪ್ರಿಟಂರ್ ಬಳಕೆಯಿಂದ ಕಟ್ಟಡ
ನಿರ್ಮಾಣಕ್ಕೆ ವ್ಯಯವಾಗುವ ಸಮಯ, ಶ್ರಮದ
ವೆಚ್ಚ ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ಕಟ್ಟಡ
ನಿರ್ಮಾಣದಲ್ಲಿ ಶೇ 30ರಿಂದ 60ರಷ್ಟು
ತ್ಯಾಜ್ಯಗಳ ಉಳಿತಾಯವಾಗುತ್ತದೆ. ತ್ರಿಡಿ
ಪ್ರಿಂಟರ್ ಬಳಸಿ ನಿರ್ಮಿಸಿದ
ದೊಡ್ಡ ರಚನೆ ಇದಾಗಲಿದೆ. ಇದು
2017ರ ವೇಳಗೆ ತಲೆಯೆತ್ತಲಿದೆ. ಇದಕ್ಕೆ ತಗುಲುವ
ವೆಚ್ಚವನ್ನು
ಬಹಿರಂಗಗೊಳಿಸಿಲ್ಲ. ಇದು
'ಮ್ಯೂಸಿಯಂ ಆಫ್ ಫ್ಯೂಚರ್'ನ
ಕಚೇರಿಯಾಗಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023