Thursday, July 2, 2015

ನಾಳೆಯಿಂದ(೩/೭/೧೫) ದೇಶಾದ್ಯಂತ ಮೊಬೈಲ್ ಪೋರ್ಟಬಲಿಟಿ:


ಏಜೆನ್ಸೀಸ್ | Jul 2, 2015, 01.28PM
IST
ಹೊಸದಿಲ್ಲಿ : ಜುಲೈ 3ರಿಂದ
ದೇಶಾದ್ಯಂತ ಮೊಬೈಲ್
ಸಂಖ್ಯೆ ಪೋರ್ಟಬಲಿಟಿ (ಎಂಎನ್ಪಿ)
ಸಾಧ್ಯವಾಗಲಿದೆ.
ಮೊಬೈಲ್ ಸೇವೆ ಪೂರೈಕೆದಾರರು ಜುಲೈ
3ರಿಂದ ದೇಶವ್ಯಾಪಿ ಪೋರ್ಟಬಲಿಟಿ ಸೇವೆ
ಒದಗಿಸಲಿದ್ದಾರೆ ಎಂಬ ಟೆಲಿಕಾಂ
ಇಲಾಖೆಯ ಕಾರ್ಯದರ್ಶಿ ರಾಕೇಶ್ ಗಾರ್ಗ್ ಅವರ
ಹೇಳಿಕೆಯನ್ನು ಹಿಂದೂ ಪತ್ರಿಕೆ ವರದಿ
ಉಲ್ಲೇಖಿಸಿದೆ.
ಮೊಬೈಲ್ ಚಂದಾದಾರರು ತಮ್ಮ
ಈಗಿನ ನಂಬರ್
ಉಳಿಸಿಕೊಂಡು ಸೇವೆ
ಪೂರೈಕೆದಾರರನ್ನು ಬದಲಿಸುವುದು ಪೋರ್ಟಬಲಿಟಿ. ಈ
ಮೊದಲು ಚಂದಾದಾರರಿಗೆ ಕೇವಲ
ತಮ್ಮ ಟೆಲಿಕಾಂ
ವಲಯದೊಳಗೆ ಮಾತ್ರ
ಎಂಎನ್ಪಿಗೆ ಅವಕಾಶ ಇತ್ತು. ಪ್ಯಾನ್
ಇಂಡಿಯಾ ಎಂಎನ್ಪಿಯಿಂದ ದೇಶದ
ಯಾವುದೇ ರಾಜ್ಯ/ ವಲಯದಲ್ಲಿ ಗ್ರಾಹಕರು
ತಮ್ಮ ಈಗಿನ ನಂಬರನ್ನು
ಉಳಿಸಿಕೊಂಡು ಸೇವೆ
ಪೂರೈಕೆದಾರರನ್ನು ಬದಲಿಸಬಹುದಾಗಿದೆ.
ಈ ಯೋಜನೆ ಜಾರಿಗೆ ಬೇಕಾದ ತಾಂತ್ರಿಕ ವ್ಯವಸ್ಥೆ
ಮಾಡಿಕೊಳ್ಳಲು ಸೆಲ್ಯೂಲಾರ್
ನಿರ್ವಾಹಕರ ಸಂಘಟನೆ (ಸಿಓಎಐ) ಹೆಚ್ಚಿನ
ಕಾಲಾವಕಾಶ ಕೋರಿದ ನಂತರ, ಹಿಂದೆ
ವಿಧಿಸಿದ್ದ ಗಡುವನ್ನು 2 ತಿಂಗಳು ವಿಸ್ತರಿಸಿದ
ದೂರಸಂಪರ್ಕ ಇಲಾಖೆ ಜುಲೈ 3ಕ್ಕೆ ಅಂತಿಮ
ಗಡುವು ನಿಗದಿಪಡಿಸಿತ್ತು.
'ರಾಷ್ಟ್ರವ್ಯಾಪಿ ಮೊಬೈಲ್
ಸಂಖ್ಯೆ ಪೋರ್ಟಬಲಿಟಿ ಜಾರಿಗೆ ನಾವು
ಸಜ್ಜಾಗಿದ್ದೇವೆ. ಜತೆಗೆ, ರೋಮಿಂಗ್ ವೇಳೆ ಉಚಿತ
ಇನ್ಕಮಿಂಗ್ ಕಾಲ್, ಬಾಕಿ ಮೊತ್ತ
ವರ್ಗಾವಣೆ, ಬಾಕಿ ಉಳಿದರುವ ಕರೆ ಮತ್ತು ಡೇಟಾ ಅವಧಿ
ಮುಂದುವರಿಕೆ (ಕ್ಯಾರಿ ಫಾರ್ವರ್ಡ್)
ಆಯ್ಕೆಯನ್ನೂ ನೀಡಲಿದ್ದೇವೆ. ಗ್ರಾಹಕರ
ಪೋರ್ಟಬಲಿಟಿ ಕೋರಿಕೆ ಪ್ರಕ್ರಿಯೆ
ತ್ವರಿತಗೊಳಿಸಲಿದ್ದೇವೆ,' ಎಂದು
ದೇಶದ ನಂಬರ್ 1 ಟೆಲಿಕಮ್ಯೂನಿಕೇಷನ್ ಸೇವೆ
ಪೂರೈಕೆದಾರ ಸಂಸ್ಥೆ ಭಾರ್ತಿ ಏರ್ಟೆಲ್ ಪ್ರಕಟಣೆ
ತಿಳಿಸಿದೆ.