ಟ್ವಿಟ್ಟರ್ ನಲ್ಲಿ ಎಲ್ಲವೂ ಕನ್ನಡಮಯ ಸುಂದರ.

ಟ್ವಿಟ್ಟರ್ ನಲ್ಲಿ ಎಲ್ಲವೂ ಕನ್ನಡಮಯ ಸುಂದರ.

ಬೆಂಗಳೂರು, ಆಗಸ್ಟ್ 02: ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ಟ್ವಿಟ್ಟರ್. ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯವಾಗಲಿದೆ. ಕನ್ನಡ, ಗುಜರಾತಿ, ಮರಾಠಿ ಹಾಗೂ ತಮಿಳು ಭಾಷೆಗಳಲ್ಲಿಯೂ ಟ್ವಿಟ್ಟರ್ ಲಭ್ಯವಾಗಲಿದೆ. ನಾವು ಗುಜರಾತಿ, ಕನ್ನಡ, ಮರಾಠಿ ಹಾಗೂ ತಮಿಳು ಭಾಷೆಗಳಲ್ಲಿ ಟ್ವಿಟ್ಟರ್ ಲಭ್ಯವಾಗುವಂತೆ ಮಾಡಿದ್ದೇವೆ. ಈ ಭಾಷೆಗಳಿಗೆ ಪೂರಕವಾಗಿ ಆಂಡ್ರಾಯ್ಡ್ ಅಪ್ಲಿಕೇಶನ್‌ನ್ನು ಕೂಡಾ ನಾವು ಅಪ್ಡೇಟ್ ಮಾಡಿದ್ದೇವೆ ಎಂದು ಟ್ವಿಟ್ಟರ್ ಸಂಸ್ಥೆ ತನ್ನ ಬ್ಲಾಗಿನಲ್ಲಿ ಪ್ರಕಟಿಸಿದೆ. [ಟ್ವಿಟ್ಟರ್ ನಲ್ಲಿ ಇನ್ಮುಂದೆ ಕನ್ನಡದಲ್ಲೇ ಹುಡುಕಾಟ ನಡೆಸಿ!]

ಟ್ವಿಟ್ಟರ್‌ನ ಬಳಕೆದಾರರು ಟ್ವೀಟ್ ಮಾಡಲು ಯಾವುದೇ ಭಾಷೆಯನ್ನು ಬಳಸಬಹುದಾಗಿತ್ತು. ಈವರೆಗೆ ಯೂಸರ್ ಇಂಟರ್‌ಫೇಸ್ (ಟ್ವಿಟ್ಟರ್ ಪುಟ) ಹಿಂದಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಲಭ್ಯವಿದೆ. ವಿಶ್ವಕಪ್ ಪಂದ್ಯದ ವೇಳೆ ದೇವನಾಗರಿ ಲಿಪಿಯಲ್ಲಿ ಜೈ ಹಿಂದ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಮಾಡಿದ ಟ್ವೀಟ್ ಸಕತ್ ಟ್ರೆಂಡಿಂಗ್ ಆಗಿತ್ತು. ಇದನ್ನು ಗಮಿಸಿದ ಟ್ವಿಟ್ಟರ್ ಈಗ ಕನ್ನಡ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಹ್ಯಾಶ್ ಟ್ಯಾಗ್ ಬಳಸುವ ಅವಕಾಶವನ್ನು ಮೈಕ್ರೋ ಬ್ಲಾಗರ್ಸ್ ಗಳಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಟ್ವಿಟ್ಟರ್‌ನಲ್ಲಿನ್ನು ವಿಡಿಯೋ, ಗ್ರೂಪ್ ಮೆಸೇಜ್]

ಟ್ವಿಟ್ಟರ್ ನಲ್ಲಿ ಕನ್ನಡ ಮೆನು, ಯೂಸರ್ ಇಂಟರ್ ಫೇಸ್ ಪಡೆಯಲು ಟ್ವಿಟ್ಟರ್ ಗೆ ಲಾಗ್ ಇನ್ ಆಗಿ ಸೆಟ್ಟಿಂಗ್ಸ್ ಗೆ ಹೋಗಿ ನಂತರ ಫ್ರೊಫೈಲ್ ನ ಡ್ರಾಪ್ ಡೌನ್ ಮೆನುನಲ್ಲಿ ಅಕೌಂಟ್ ಕ್ಲಿಕ್ ಮಾಡಿ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಿ. ಇದೇ ಮಾದರಿಯಲ್ಲಿ ಆಂಡ್ರಾಯ್ಡ್ ಅಪ್ಲಿಕೇಷನ್ ಬಳಕೆದಾರರು ತಮ್ಮ ಮೊಬೈಲಿನಲ್ಲಿ ಭಾಷೆ ಬದಲಾಯಿಸಿಕೊಂಡರೆ ಸಾಕು.

ಈ ನಾಲ್ಕು ಭಾಷೆಯ ಬಳಕೆದಾರರು ತುಂಬಾ ಉತ್ಸಾಹ ತೋರಿ ಭಾಷಾಂತರ ಮಾಡಿದ ಪರಿಣಾಮ ಶೀಘ್ರವಾಗಿ ಈ ಸೌಲಭ್ಯ ನೀಡಲು ಸಾಧ್ಯವಾಯಿತು. ನಿಮ್ಮ ನೆರವಿಗೆ ಧನ್ಯವಾದ ಅರ್ಪಿಸುತ್ತೇವೆ. ಇನ್ನೂ ಅನೇಕ ಭಾರತೀಯ ಭಾಷೆಗಳಲ್ಲಿ ಟ್ವಿಟ್ಟರ್ ಕಾಣಲು ಬಯಸಿದ್ದರೆ, ಭಾಷಾಂತರ ಮಾಡಲು ಸಹಕರಿಸಿ ಎಂದು ಟ್ವಿಟ್ಟರ್ ಕೇಳಿಕೊಂಡಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023