ಅನಂತ ಮತ್ತು ನಾಗೇಂದ್ರಗೆ ಆರ್ಯಭಟ ಪ್ರಶಸ್ತಿ


ಉದಯವಾಣಿ, Aug 10, 2015, 4:17 PM
IST
ಯಾವುದೇ ಒಂದು ಸಿನಿಮಾ
ಸಂಭ್ರಮವಿರಲಿ ಅಥವಾ ಸಿನಿಮಾ
ಮಂದಿಯ ಖಾಸಗಿ ಕಾರ್ಯಕ್ರಮವಿರಲಿ,
ಅಲ್ಲೊಬ್ಬ ವ್ಯಕ್ತಿ ಖಾಯಂ
ಹಾಜರಿರುತ್ತಾರೆ.
ಕೈಯಲ್ಲೊಂದು ಮೊಬೈಲ್,
ಕಣ್ಣಿಗೊಂದು ಕನ್ನಡಕ, ಸದಾ
ಲವಲವಿಕೆಯ ಮಾತು, ಅತ್ತಿಂದಿತ್ತ
ಓಡಾಟ, ಬಂದ ಅತಿಥಿಗಳನ್ನೆಲ್ಲಾ
ಪ್ರೀತಿಯಿಂದ ಸ್ವಾಗತಿಸಿ ಅವರನ್ನು
ಸೇಫ್ ಆಗಿ ಕಾರ್ಯಕ್ರಮದ
ಸ್ಥಳದವರೆಗೂ
ಕರೆದೊಯ್ಯುವುದೇ ಆ
ವ್ಯಕ್ತಿಯ ಕೆಲಸ. ಅದು ಆ ವ್ಯಕ್ತಿ ಕಳೆದ
ಮೂರು ದಶಕಗಳಿಂದಲೂ
ನಡೆದುಕೊಂಡ ಬಂದಿರುವ ರೀತಿ.
ಅವರು ಬೇರಾರೂ ಅಲ್ಲ.
ಎಸ್.ಕೆ.ಅನಂತ. ಇವರನ್ನು ಗಾಂಧಿನಗರದ
ಮಂದಿ ಪ್ರೀತಿಯಿಂದ ಅನಂತು
ಅಂತಾರೆ. ಇಂತಹ ಅನಂತು ಈಗ
"ಆರ್ಯಭಟ' ಪ್ರಶಸ್ತಿ ಸ್ವೀಕರಿಸಿದ್ದಾರೆ.
ಆರ್ಯಭಟ ಸಾಂಸ್ಕೃತಿ ಸಂಸ್ಥೆ
ಅಪರೂಪದ ವ್ಯಕ್ತಿಗಳ ಸೇವೆ
ಗುರುತಿಸಿ ನೀಡುವ ಈ ಆರ್ಯಭಟ
ಪ್ರಶಸ್ತಿ ಸ್ವೀಕರಿಸಿರುವ ಅನಂತ ಅವರು
ಸಿನಿಮಾ ರಂಗ ಸೇರಿದಂತೆ ಇತರೆ
ಕ್ಷೇತ್ರದವರಿಗೂ ಗೊತ್ತು. ಆದರೆ,
ಅವರ ಬಗ್ಗೆ ಗೊತ್ತಿರದ ಒಂದಷ್ಟು
ವಿಷಯ ಇಲ್ಲಿದೆ. ಅನಂತು ಎಲ್ಎನ್ಟಿ
ಫ್ಯಾಕ್ಟರಿಯಲ್ಲಿ ಕೆಲಸ
ಮಾಡುತ್ತಿದ್ದವರು. ಅಲ್ಲೊಂದು
ಸಂಘ ಕಟ್ಟಿಕೊಂಡು ನಾಟಕದ
ಗೀಳು ಹಚ್ಚಿಕೊಂಡವರು.
ಎಲ್ಲೇ ನಾಟಕ ನಡೆದರೂ ಅಲ್ಲಿ
ಅನಂತು ಹಾಜರಾಗುತ್ತಿದ್ದರು.
ಅಲ್ಲೊಂದಷ್ಟು ಕಲಾವಿದರ
ಪರಿಚಯಿಸಿಕೊಂಡು ಹಾಗೇ,
ಸಿನಿಮಾ ಮಂದಿ ಜತೆಯಲ್ಲೂ
ಬೆರೆಯುತ್ತಾ ಹೋದರು.
ಸುಂದರ್ರಾಜ್ ಈ ಅನಂತು
ಅವರನ್ನು ಸಿನಿಮಾ ರಂಗಕ್ಕೆ
ಪರಿಚಯಿಸಿದರು. ಅಲ್ಲಿಂದ ಅವರ ಸಿನಿಮಾ
ಸೇವೆ ನಿರಂತರವಾಯಿತು. 2000 ರಲ್ಲಿ
ಶೃಂಗೇರಿಯಲ್ಲಿ ನಡೆದ
ಡಾ.ರಾಜ್ಕುಮಾರ್ ನೈಟ್ಸ್ ಎಂಬ
ಕಾರ್ಯಕ್ರಮಕ್ಕೆ ಅನಂತು ಮೊದಲ
ಸಲ ನಟ,ನಟಿಯರನ್ನು
ಕರೆದುಕೊಂಡು ಹೋಗುವ ಕೆಲಸ
ಮಾಡಿದ್ದರು.
ಸುಮಾರು 60 ಮಂದಿ ನಟರನ್ನು
ಕರೆದುಕೊಂಡು ಹೋಗಿ,
ಕಾರ್ಯಕ್ರಮ ಯಶಸ್ವಿಗೊಳಿಸಿದ್ದು
ಅನಂತ್ ಲೈಫಲ್ಲಿ ಮರೆಯದ ದಿನವಂತೆ.
ಕಳೆದ 30 ವರ್ಷಗಳಿಂದಲೂ ಕಲಾವಿದರ
ಸಂಘದ ಕೆಲಸ ಕಾರ್ಯ
ಮಾಡಿಕೊಂಡು, ನಟ,ನಟಿಯರ
ಸಂಪರ್ಕದಲ್ಲಿದ್ದು, ನೂರಾರು
ಕಾರ್ಯಕ್ರಮಗಳಲ್ಲಿ ತಮ್ಮನ್ನು
ತೊಡಗಿಸಿಕೊಂಡು ಸಿನಿಮಾ
ಮಂದಿಯ
ಅಚ್ಚುಮೆಚ್ಚಿನ ಅನಂತು
ಎನಿಸಿಕೊಂಡರು. ರಜನಿಕಾಂತ್ ಅವರ
ಕಾರ್ಯಕ್ರಮಗಳು, ಕಮಲ್ಹಾಸನ್
ಡಾಕ್ಟರೇಟ್ ಪಡೆವ ಸಂದರ್ಭ,
ಜಯಲಲಿತಾ ಅವರ ಟಿವಿ ಶೋ,
ಮೀನಾ ಮದುವೆ ಹೀಗೆ ಅನೇಕ
ನಟ,ನಟಿಯರ ಖಾಸಗಿ
ಕಾರ್ಯಕ್ರಮಗಳಲ್ಲಿ ಮುಂದೆ ನಿಂತು
ಎಲ್ಲರನ್ನು ಪ್ರೀತಿಯಿಂದ
ಆಹ್ವಾನಿಸುತ್ತಲೇ ಇಲ್ಲಿಯವರೆಗೆ
ಅನೇಕ ಹಿರಿಯ ಅಶಕ್ತ ಕಲಾವಿದರಿಗೂ
ಕೈಲಾದ ಸಹಾಯ
ಮಾಡಿಕೊಂಡು ಬಂದವರು.
ವಾಣಿಜ್ಯ ಮಂಡಳಿಯ 99 ನೇ
ಸಭೆಯಲ್ಲಿ ಅನಂತು ಅವರಿಗೆ
ಮುಖ್ಯಮಂತ್ರಿಗಳು
ಸನ್ಮಾನಿಸಿದ್ದಾರೆ. ಹಲವು ಸಂಘ-
ಸಂಸ್ಥೆಗಳಿಂದಲೂ ಇವರಿಗೆ ಪ್ರಶಸ್ತಿ ಸಿಕ್ಕಿವೆ.
ಸಿನಿಮಾ ಕ್ಷೇತ್ರವಷ್ಟೇ ಅಲ್ಲ,
ಪೊಲೀಸ್ ಇಲಾಖೆಯಲ್ಲೂ
ಅನಂತು ಹೆಸರು ಪರಿಚಿತ. ಇಂತಹ
ಅನಂತು ಈ ಸಾಲಿನ "ಆರ್ಯಭಟ' ಪ್ರಸಸ್ತಿ
ಪಡೆದಿದ್ದಾರೆ.
ಪ್ರಚಾರಕರ್ತ ನಾಗೇಂದ್ರಗೂ
ಪ್ರಶಸ್ತಿ: ಹಿರಿಯ ಸಿನಿಮಾ ಪ್ರಚಾರಕರ್ತ
ನಾಗೇಂದ್ರ ಅವರೂ ಈ ಸಾಲಿನ
ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.
ಸುಮಾರು 700 ಕ್ಕೂ ಹೆಚ್ಚು
ಚಿತ್ರಗಳಿಗೆ ಪ್ರಚಾರದ ಕೆಲಸ ಮಾಡಿದ
ನಾಗೇಂದ್ರ ಅವರ ಸಿನಿಮಾ
ಕ್ಷೇತ್ರದ ಸೇವೆಯನ್ನು ಗುರುತಿಸಿ
ಈ ಪ್ರಶಸ್ತಿಯನ್ನು ನೀಡಲಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023