Drop


Saturday, August 8, 2015

ಸ್ವಚ್ಛ ಭಾರತ್: ದೇಶದ ರಾಜಧಾನಿಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ, ಮೈಸೂರು ಎಲ್ಲ ನಗರಗಳಲ್ಲಿ ಶ್ರೇಷ್ಠ

ಹೊಸದಿಲ್ಲಿ: ಕೇಂದ್ರ
ನಗರಾಭಿವೃದ್ಧಿ ಸಚಿವಾಲಯ ಪಟ್ಟಿ ಮಾಡಿರುವ
ಸ್ವಚ್ಛ ಭಾರತ ಶ್ರೇಯಾಂಕದ ಪ್ರಕಾರ ದೇಶದ
ರಾಜಧಾನಿಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ
ಸಿಕ್ಕಿದೆ.
ಅದಕ್ಕಿಂತಲೂ ವಿಶೇಷವೆಂದರೆ ದೇಶದ 476
ನಗರಗಳಲ್ಲಿ ಮೈಸೂರು ಎಲ್ಲಕ್ಕಿಂತ ಶ್ರೇಷ್ಠ
ಸ್ಥಾನವನ್ನು
ತನ್ನದಾಗಿಸಿಕೊಂಡಿದೆ. ಅಷ್ಟೇ
ಅಲ್ಲ, ಟಾಪ್ 10ರಲ್ಲಿ ಕರ್ನಾಟಕದ ನಾಲ್ಕು ನಗರಗಳು
ಸ್ಥಾನ ಗಿಟ್ಟಿಸಿಕೊಂಡಿವೆ.
ಪಶ್ಚಿಮ ಬಂಗಾಳ ಕೂಡ ಉತ್ತಮ ಸಾಧನೆ
ಮಾಡಿದ್ದು ಆ ರಾಜ್ಯದ 25 ನಗರಗಳು ಅಗ್ರ 100ರ
ಪಟ್ಟಿಯಲ್ಲಿ ಸ್ಥಾನವನ್ನು
ಗಿಟ್ಟಿಸಿಕೊಂಡಿವೆ.
ಬಯಲು ಶೌಚಾಲಯ ಹಾಗೂ ಘನ ತ್ಯಾಜ್ಯ
ನಿರ್ವಹಣೆ ಪದ್ಧತಿಗಳ ಆಧಾರದಲ್ಲಿ ಈ
ಶ್ರೇಯಾಂಕದ ಪಟ್ಟಿಯನ್ನು ಮಾಡಲಾಗಿದೆ.
ದೇಶದ ಎಲ್ಲ ನಗರಗಳ ಪೈಕಿ ಮೈಸೂರು ಕನಿಷ್ಠ
ಪ್ರಮಾಣದ ಬಯಲು ಶೌಚಾಲಯ ಹಾಗೂ ಉತ್ತಮ
ಘನ ತ್ಯಾಜ್ಯ ನಿರ್ವಹಣೆ
ವ್ಯವಸ್ಥೆಯಿಂದ ದೇಶದ ಗಮನ ಸೆಳೆದಿದೆ.
ದಕ್ಷಿಣ ಭಾರತದ ನಗರಗಳು ಉತ್ತಮ ಸಾಧನೆ
ಮಾಡಿದ್ದು ಅಗ್ರ 100ರಲ್ಲಿ 39 ನಗರಗಳು ದಕ್ಷಿಣ
ರಾಜ್ಯಗಳಿಗೆ ಸೇರಿವೆ. ದೇಶದ 15 ರಾಜ್ಯಗಳ
ರಾಜಧಾನಿಗಳು ಮಾತ್ರ ಅಗ್ರ 100ರಲ್ಲಿ ಅವಕಾಶ
ಪಡೆದಿವೆ. ಪೂರ್ವ ರಾಜ್ಯಗಳ 27 ನಗರಗಳು,
ಪಶ್ಚಿಮ ಭಾರತದ 15, ಉತ್ತರ ಭಾರತದ 12 ಹಾಗೂ
ಈಶಾನ್ಯ ರಾಜ್ಯಗಳ 7 ನಗರಗಳು
100ರೊಳಗೆ ಅವಕಾಶ
ಪಡೆದುಕೊಂಡಿವೆ. ಇನ್ನು ಐದು
ರಾಜ್ಯಗಳ ರಾಜಧಾನಿಗಳ ಸ್ಥಿತಿ
ಹೇಗಿದೆಯೆಂದರೆ, ಅವು ಟಾಪ್ 300 ಒಳಗೂ ಸ್ಥಾನ
ಪಡೆದುಕೊಂಡಿಲ್ಲ!
ದುರಂತವೆಂದರೆ ಪಾಟ್ನಾದ ಸ್ಥಾನ 429!
ಕೊನೆಯಿಂದ ಲೆಕ್ಕ ಹಾಕುತ್ತ
ಬಂದರೆ ಮಧ್ಯಪ್ರದೇಶದ ದಮೊಹ್
476ನೇ ಸ್ಥಾನದಲ್ಲಿದೆ. ಆ ಬಳಿಕ ಮಧ್ಯಪ್ರದೇಶದ
ಭಿಂಡ್, ಹರಿಯಾಣದ ಪಾಲ್ವಲ್ ಹಾಗೂ ಭಿವಾನಿ,
ರಾಜಸ್ಥಾನದ ಚಿತ್ತೋರ್ಗಢ, ಉತ್ತರಪ್ರದೇಶದ
ಬುಲಂದ್ಶಹರ್, ಮಧ್ಯಪ್ರದೇಶದ
ನೀಮುಖ್, ಹರಿಯಾಣದ ರೇವಾರಿ, ರಾಜಸ್ಥಾನದ
ಹಿಂಡೌನ್, ಒಡಿಶಾದ ಸಂಬಲ್ಪುರ 467
ಸ್ಥಾನದಲ್ಲಿವೆ.
ಟಾಪ್ 10 ಸ್ಥಾನ ನಗರಗಳು:
ಮೈಸೂರು( ಕರ್ನಾಟಕ), ತಿರುಚಿರಾಪಳ್ಳಿ (ತಮಿಳುನಾಡು), ನವಿ
ಮುಂಬಯಿ, ಕೊಚ್ಚಿ (ಕೇರಳ), ಹಾಸನ,
ಮಂಡ್ಯ ಮತ್ತು ಬೆಂಗಳೂರು (ಕರ್ನಾಟಕ),
ತಿರುವನಂತಪುರಂ (ಕೇರಳ), ಹಲಿಸಹರ್
(ಪಶ್ಚಿಮ ಬಂಗಾಳ) ಮತ್ತು ಗ್ಯಾಂಗ್ಟಕ್
(ಸಿಕ್ಕಿಂ)