Drop


Sunday, August 2, 2015

Kim Jong -un wins global statesmanship award:

ಉ.ಕೊರಿಯಾದ ಕಿಮ್​ಜೊಂಗ್​ಗೆ 'ಜಾಗತಿಕ ಮುತ್ಸದ್ಧಿ'
ಪ್ರಶಸ್ತಿ:
ಜಕಾರ್ತ (ಇಂಡೋನೇಷ್ಯಾ):
ಉತ್ತರ ಕೊರಿಯಾದ ಸರ್ವಾಧಿಕಾರಿ
ಕಿಮ್​ಜೊಂಗ್-ಉನ್ ಅವರು 'ಜಾಗತಿಕ
ಮುತ್ಸದ್ಧಿ' ಪ್ರಶಸ್ತಿಗೆ
ಪಾತ್ರರಾಗಿದ್ದಾರೆ.
ಬಾಲಿಯ ಸುಕರ್ಣೋ
ಕೇಂದ್ರದಲ್ಲಿ ಕಿಮ್​ಅವರಿಗೆ ಪ್ರಶಸ್ತಿ
ಪ್ರದಾನ ಮಾಡಲಾಗುವುದು
ಎಂದು ಇಂಡೋನೇಷ್ಯಾದ
ಸ್ಥಾಪಕ ಅಧ್ಯಕ್ಷರ ಪುತ್ರಿ ರಚ್ಮಾವತಿ
ಸುಕರ್ಣೋಪುತ್ರಿ ಭಾನುವಾರ
ಪ್ರಕಟಿಸಿದರು.
'ಸಾಮ್ಯಾಜ್ಯ ಶಾಹಿ ವಿರುದ್ಧ
ಹೋರಾಡಿದ ಕಿಮ್2 ಸುಂಗ್ ಅವರ
ತತ್ವಾದರ್ಶಗಳನ್ನು ಅಧ್ಯಕ್ಷ ಕಿಮ್​
ಜೊಂಗ್ ಮುಂದಕ್ಕೆ
ಒಯ್ಯುತ್ತಿದ್ದಾರಾದ್ದರಿಂದ
ಅವರಿಗೆ ನಾವು ಈ ಪ್ರಶಸ್ತಿಯನ್ನು
ನೀಡುತ್ತಿದ್ದೇವೆ' ಎಂದು ಅವರು
ನುಡಿದರು.
ಈ ಹಿಂದೆ ಮಹಾತ್ಮಾ ಗಾಂಧಿ,
ಅಂಗ್ ಸಾನ್ ಸೂ-ಕಿ ಅವರಿಗೆ ಈ ಪ್ರಶಸ್ತಿ
ಲಭಿಸಿತ್ತು.