New therapy against cancer:

ಕ್ಯಾನ್ಸರ್​ಗೆ ನೂತನ 'ಪ್ರತಿರಕ್ಷಾ
ಥೆರೆಪಿ:
ಸ್ಯಾಂಟಿಯಾಗೊ:
ಮನುಷ್ಯರಲ್ಲಿ ಗಡ್ಡೆ ನಿರೋಧಿ
ಸ್ಪಂದನೆಯನ್ನು ಹೆಚ್ಚಿಸುವ ಮೂಲಕ
ಕ್ಯಾನ್ಸರ್ ಕೋಶಗಳ ಮೇಲೆ ದಾಳಿ
ನಡೆಸುವಂತಹ ಹೊಸ 'ಪ್ರತಿರಕ್ಷಾ
ಚಿಕಿತ್ಸೆ'ಯನ್ನು
(ಇಮ್ಯೂನೊಲಾಜಿಕಲ್ ಥೆರೆಪಿ)
ಚಿಲಿಯ ಸ್ಯಾಂಟಿಯಾಗೊ
ನಗರದಲ್ಲಿ ಪತ್ತೆ ಮಾಡಲಾಗಿದೆ.
'ಚಿಕಿತ್ಸೆಯು ಇನ್ನೂ ಕ್ಲಿನಿಕ್​ಪೂರ್ವ
ಹಂತದಲ್ಲಿದೆ' ಎಂದು ಇದನ್ನು
ಕಂಡು ಹಿಡಿದಿರುವ
ಸ್ಯಾಂಟಿಯಾಗೊ
ವಿಶ್ವವಿದ್ಯಾಲಯದ ಸಂಶೋಧಕ
ಕ್ಲಾಡಿಯೊ ಅಕ್ಯುನಾ
ಹೇಳಿದ್ದಾರೆ. ಶೀಘ್ರದಲ್ಲೇ ಈ
ಚಿಕಿತ್ಸೆಗೆ ಅಮೆರಿಕದಲ್ಲಿ ಪೇಟೆಂಟ್
ಪಡೆಯಲಾಗುವುದು ಎಂದು
ಅವರು ಹೇಳಿರುವುದಾಗಿ ಕ್ಷಿನ್​
ಹುವಾ ಸುದ್ದಿ ಸಂಸ್ಥೆ ವರದಿ
ಮಾಡಿದೆ.
'ಕ್ಯಾನ್ಸರ್ ಲಕ್ಷಣಗಳು ಕಂಡು
ಬಂದ ವ್ಯಕ್ತಿಗಳಿಗಾಗಿ ಲಸಿಕೆ
ತಯಾರಿಸುವುದು ಈ ಚಿಕಿತ್ಸೆಯ
ಗುರಿ. ಇದು ಕ್ಯಾನ್ಸರ್ ಲಕ್ಷಣಗಳು
ಕಂಡು ಬಂದ ವ್ಯಕ್ತಿಗಳ ಕ್ಯಾನ್ಸರ್
ಗಡ್ಡೆಗಳ ವಿರುದ್ಧ ಪ್ರತಿರಕ್ಷಾ
ಸ್ಪಂದನೆಯನ್ನು ವರ್ಧಿಸಲು
ಅನುಕೂಲ ಮಾಡಿಕೊಡುತ್ತದೆ.
ಕ್ಯಾನ್ಸರ್ ಸ್ಥಿತಿಯಿಂದ ಹಿಂದಕ್ಕೆ
ತರಲಾದೀತು ಎಂದು ನಾವು
ನಿರೀಕ್ಷಿಸುವುದಿಲ್ಲ ಆದರೆ
ಪರ್ಯಾಯದ ಕೊಡುಗೆ
ನೀಡುತ್ತಿದ್ದೇವೆ' ಎಂದು
ಅಕ್ಯುನಾ ಹೇಳಿದರು.
'ಮುಂದಿನ ಹಂತಗಳಿಗೆ ಹೋಗುವ
ಮುನ್ನ ನಾವು ಪೇಟೆಂಟ್
ಅನುಮೋದನೆಗಾಗಿ ಕಾಯುವ
ಅಗತ್ಯವಿದೆ. ನಮ್ಮ ಯೋಜನೆಯು
ದೀರ್ಘಾವಧಿಯಲ್ಲಿ ರೋಗಿಗಳ
ಬದುಕಿನ ಗುಣಮಟ್ಟವನ್ನು
ಸುಧಾರಿಸುವತ್ತ ಗಮನ ಹರಿಸಿದೆ.
ಮತ್ತು ಪರಂಪರಾಗತ ಚಿಕಿತ್ಸೆಗಳಿಗೆ
ಪೂರಕವಾದ ಚಿಕಿತ್ಸೆಯನ್ನು
ಸೃಷ್ಟಿಸುವ ಉದ್ದೇಶ ಹೊಂದಿದೆ'
ಎಂದು ಅವರು ನುಡಿದರು.
ಈ ಹೊಸ ಚಿಕತ್ಸೆಯು ಇಂತಹ ಇತರ
ಚಿಕಿತ್ಸೆಗಳಿಗೆ ಹೋಲಿಸಿದರೆ ಜಾಗತಿಕ
ವೈದ್ಯಕೀಯ ವೆಚ್ಚವನ್ನು
ಶೇಕಡಾ 70ರಷ್ಟು ಇಳಿಸಲಿದೆ. 'ಈ
ಪ್ರತಿರಕ್ಷಾ ಚಿಕಿತ್ಸೆಯು ಉಲ್ಬಣ
ಹಂತಕ್ಕೆ ತಲುಪಿದ ಸ್ತನ, ಚರ್ಮ,
ಶ್ವಾಸಕೋಶ, ಗರ್ಭಾಶಯ ಮತ್ತು
ಪ್ರಾಸ್ಟೇಟ್ ಕ್ಯಾನ್ಸರ್
ರೋಗಿಗಳಿಗೆ ವ್ಯಾಪಕ ಮಟ್ಟದಲ್ಲಿ
ಲಭಿಸಲಿದೆ' ಎಂದು ಅಕ್ಯುನಾ
ಹೇಳಿದರು.
'ಈ ಪ್ರತಿರಕ್ಷಾ ಚಿಕಿತ್ಸೆಯಲ್ಲಿ
ಯಾವುದೇ ಅಡ್ಡ ಪರಿಣಾಮಗಳು
ಇರುವುದಿಲ್ಲ. ಒಮ್ಮೆ
ಮಾರುಕಟ್ಟೆಗೆ ಬಂದರೆ ಇದರ ಬೆಲೆ 750
ಡಾಲರ್​ಗಳಿಗಿಂತ ಹೆಚ್ಚಾಗದು'
ಎಂದು ಅವರು ನುಡಿದರು.
ವಿಶ್ವ ಆರೋಗ್ಯ ಸಂಘಟನೆಯ
(ಡಬ್ಲ್ಯೂಎಚ್​ಒ) ಪ್ರಕಾರ ಜಗತ್ತಿನಲ್ಲಿ
ಪ್ರತಿವರ್ಷ 1 ಕೋಟಿ ಜನರಲ್ಲಿ
ಹೊಸದಾಗಿ ಕ್ಯಾನ್ಸರ್ ತಗುಲಿದ
ಪ್ರಕರಣಗಳು ವರದಿಯಾಗುತ್ತಿವೆ.
2012ರಲ್ಲಿ ಕ್ಯಾನ್ಸರ್ ರೋಗಕ್ಕೆ 82
ಲಕ್ಷ ಮಂದಿ ಬಲಿಯಾಗಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023