Drop


Tuesday, September 15, 2015

ಆಸ್ಟ್ರೇಲಿಯಾದ 29ನೇ ಪ್ರಧಾನಿಯಾಗಿ ಮಾಲ್ಕಂ ಅಧಿಕಾರ ಸ್ವೀಕಾರ.:


ಕ್ಯಾನ್ ಬೆರಾ, ಸೆ. 15: ಆಸ್ಟ್ರೇಲಿಯಾದಲ್ಲಿ ನಡೆದ
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಆಂತರಿಕ
ಚುನಾವಣೆಯಲ್ಲಿ ಹಾಲಿ ಪ್ರಧಾನಿ ಟೋನಿ
ಅಬೊಟ್ ಅವರನ್ನು ಸೋಲಿಸಿ
ಮಾಲ್ಕಂ ಟರ್ನ್ಸ್ ಬುಲ್ಸ್ ಅವರು
ಮಂಗಳವಾರ ಅಧಿಕಾರ
ಸ್ವೀಕರಿಸಿದ್ದಾರೆ. ಸೋಮವಾರ ನಡೆದ
ಚುನಾವಣೆಯಲ್ಲಿ ಮಾಲ್ಕಂ ಟರ್ನ್ಬುಲ್ಸ್
ವಿರುದ್ಧ ಅಬೋಟ್ ಸೋತಿದ್ದ ಅಬೊಟ್
ಅವರು ಅಧಿಕಾರಕ್ಕೇರಿದ ಕೇವಲ ಎರಡು ವರ್ಷಗಳ
ಅವಧಿಯಲ್ಲಿಯೇ ಪ್ರಧಾನಿ ಪಟ್ಟವನ್ನು
ತ್ಯಜಿಸಬೇಕಾಯಿತು.
ಗವರ್ನರ್ ಜನರಲ್ ಪೀಟರ್
ಕೊಸ್ ಗ್ರೋವ್ ಅವರು ಮಾಲ್ಕಂ
ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದೇಶದ
29ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ
60 ವರ್ಷ ವಯಸ್ಸಿನ ಮಾಲ್ಕಂ ಅವರು
ಹೊಸ ಮಾದರಿಯ ಕನ್ಸರ್ವೇಟಿವ್
ಆಡಳಿತವನ್ನು ನೀಡುವ ಭರವಸೆ
ನೀಡಿದ್ದಾರೆ. ಮಲ್ಟಿ ಮಿಲಿಯನೇರ್, ಮಾಜಿ
ಬ್ಯಾಂಕರ್ ಟರ್ನ್ ಬುಲ್ ಅವರಿಗೆ
ವಿದೇಶಾಂಗ ಸಚಿವರಾದ ಜೂಲಿ ಬಿಷಪ್ ಅವರ
ಬೆಂಬಲವೂ ಸಿಕ್ಕಿದೆ. ರಾಜಕೀಯ
ಅಸ್ಥಿರತೆ: ಮಾಜಿ ಲಿಬರಲ್ ಪಾರ್ಟಿ ನಾಯಕ ಹಾಗೂ
ಸಂಪರ್ಕ ಖಾತೆ ಸಚಿವ ಮಾಲ್ಕಂ
ಟರ್ನ್ಬುಲ್ರನ್ನು ಅಬೊಟ್ರ ಸ್ಥಾನಕ್ಕೆ
ಬದಲಾಯಿಸುವ ಬಗ್ಗೆ ನಡೆದ ಚುನಾವಣೆಯಲ್ಲಿ
ಅಬೊಟ್ 54-44 ಮತಗಳ
ಅಂತರದಿಂದ ಸೋಲು ಕಂಡಿದ್ದಾರೆ. 2
ವರ್ಷಗಳ ಕನ್ಸರ್ವೇಟಿವ್ ಸಮ್ಮಿಶ್ರ ಸರಕಾರದಲ್ಲಿ
ಉಂಟಾದ ನಾಯಕತ್ವ ಬದಲಾವಣೆಯು
ಆಸ್ಟ್ರೇಲಿಯಾದಲ್ಲಿ ತೀವ್ರ
ರಾಜಕೀಯ ಸಂಚಲನಕ್ಕೆ
ಕಾರಣವಾಗಿತ್ತು.
25 ವರ್ಷಗಳ ಸತತ ಆರ್ಥಿಕ ಅಭಿವೃದ್ಧಿಯ
ಹೊರತಾಗಿಯೂ ನಾಯಕತ್ವ
ಬದಲಾವಣೆಯು ಆಸ್ಟ್ರೇಲಿಯಾದಲ್ಲಿ
ಮುಂದುವರಿಯುತ್ತಿರುವ ರಾಜಕೀಯ
ಅಸ್ಥಿರತೆಗೆ ಸಾಕ್ಷಿಯಾಗಿದೆ. ಹೊಸ
ನಾಯಕತ್ವದ ಹಿನ್ನೆಲೆಯಲ್ಲಿ ಸಂಪುಟದಲ್ಲಿ
ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ.
ಟರ್ನ್ಬುಲ್ರ ವಿರುದ್ಧ ಅಬೊಟ್ರಿಗೆ
ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದ
ಸಚಿವ ಜೋ ಹ್ಯಾಕಿ, ಹಣಕಾಸು ಸಚಿವ ಮಥಿಯಾಸ್
ಕೊರ್ಮಾನ್, ರಕ್ಷಣಾ ಸಚಿವ ಕೆವಿನ್
ಆಅಂಡ್ರೂಸ್ ಹಾಗೂ ಉದ್ಯೋಗ ಸಚಿವ ಎರಿಕ್
ಅಬ್ಟೆಝ್ರ ತಲೆದಂಡವಾಗುವ ಸಾಧ್ಯತೆ
ಹೆಚ್ಚಿದೆ. ಭಾರತಕ್ಕೆ ಯುರೇನಿಯಂ ಮಾರಾಟ
ಮಾಡಲು ಈ ಹಿಂದಿನ ಪ್ರಧಾನಿ
ಅಬೊಟ್ ಅವರು ಒಪ್ಪಂದ
ಮಾಡಿಕೊಂಡಿದ್ದರು.
ಸೆಪ್ಟೆಂಬರ್ 2014ರಲ್ಲಿ ಭಾರತದ ಪ್ರಧಾನಿ
ನರೇಂದ್ರ ಮೋದಿ ಅವರ ಜೊತೆ
ಟೋನಿ ಅವರು ಡೀಲ್ ಗೆ ಸಹಿ ಹಾಕಿದ್ದರು. ಈ
ಬಗ್ಗೆ ಟರ್ನ್ ಬುಲ್ ಯಾವ ನಿರ್ಣಯ
ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.