Drop


Thursday, September 10, 2015

Indian -Origin Boy Anirudh Kathirvel (9yrs)Sweeps Australian Spelling Bee Contest .

ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಗೆಲುವಿನ ನಗೆ
ಬೀರಿದ ಭಾರತೀಯ ಮೂಲದ
ಬಾಲಕ
ಮೆಲ್ಬರ್ನ್: ಮೆಲ್ಬರ್ನ್ ನಲ್ಲಿ ನಡೆದ 'ದಿ
ಗ್ರೇಟ್ ಆಸ್ಟ್ರೇಲಿಯನ್ ಸ್ಪೆಲ್ಲಿಂಗ್ ಬಿ'
ಸ್ಪರ್ಧೆಯಲ್ಲಿ ಭಾರತೀಯ ಮೂಲದ 9
ವರ್ಷದ ಬಾಲಕ ಅನಿರುದ್ದ್ ಕತ್ರಿವೇಲ್
ವಿಜಯದ ನಗೆ ಬೀರಿದ್ದಾನೆ.
ಈತನೊಂದಿಗೆ ಅಂತಿಮ ಸ್ಪರ್ಧೆಯಲ್ಲಿ
ಪಾಲ್ಗೊಂಡಿದ್ದ ಐವರನ್ನು
ಹಿಂದಿಕ್ಕಿ ಈ ಸಾಧನೆ ಮಾಡಿದ್ದಾನೆ.
ಸ್ಪರ್ಧೆಯಲ್ಲಿ ಕೇಳಲಾದ exorbitant,
continuum, Guernsey, ricochet
ಹಾಗೂ camaraderie ಮೊದಲಾದ
ಕಠಿಣ ಪದಗಳಿಗೆ ಸರಿಯಾದ ಸ್ಪೆಲ್ಲಿಂಗ್
ಹೇಳಿದ ಅನಿರುದ್ದ್ ಕತ್ರಿವೇಲ್ ಈ
ಸಾಧನೆ ಮಾಡಿದ್ದು, ಇದರಿಂದಾಗಿ ಈತ
50 ಸಾವಿರ ಆಸ್ಟ್ರೇಲಿಯನ್ ಡಾಲರ್
(33,20,250 ರೂ.) ಸ್ಕಾಲರ್ ಶಿಪ್
ಪುರಸ್ಕಾರಕ್ಕೆ ಪಾತ್ರನಾಗಿದ್ದಾನೆ.
ಮೂಲತಃ ತಮಿಳುನಾಡಿನವರಾದ
ಪೃಥ್ವಿರಾಜ್ ಹಾಗೂ ಸುಜಾತಾ
ದಂಪತಿಗಳ ಪುತ್ರನಾದ ಅನಿರುದ್ದ್
ಬಾಲ್ಯದಿಂದಲೂ ಪ್ರತಿಭಾವಂತ
ಬಾಲಕನೆನಿಸಿಕೊಂಡಿದ್ದಾನೆ. ಈತನ
ಪೋಷಕರು ಕಳೆದ 16 ವರ್ಷಗಳಿಂದ
ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ಅಂತಿಮ ಸುತ್ತಿನಲ್ಲಿ ಭಾರತೀಯ
ಮೂಲದ ಇನ್ನೂ ಇಬ್ಬರು ಸ್ಪರ್ಧಿಗಳು
ಪಾಲ್ಗೊಂಡಿದ್ದು ವಿಶೇಷ.
ತಂದೆ- ತಾಯಿಗಳು ನೀಡಿದ
ಪ್ರೋತ್ಸಾಹವೇ ನನ್ನ ಸಾಧನೆಗೆ
ಕಾರಣ ಎಂದು ಅನಿರುದ್ದ್ ಕತ್ರಿವೇಲ್
ಹೇಳಿದ್ದಾನೆ.