The 'NOTA' symbol approved by the Commission shows a paper carrying a cross (X) sign. ಬಿಹಾರ ಚುನಾವಣೆಯಲ್ಲಿ ನೊಟಾಗೆ ಪ್ಲಸ್ ‘ನೋಟ’

ಹೊಸದಿಲ್ಲಿ: ವಿದ್ಯುನ್ಮಾನ ಮತ
ಯಂತ್ರಗಳು (ಇವಿಎಂ) ಹಾಗೂ
ಮತಪತ್ರಗಳಲ್ಲಿ (ಬ್ಯಾಲೆಟ್ ಪೇಪರ್)
2013ರಿಂದ
ಪ್ರಾರಂಭಗೊಂಡ 'ಯಾರಿಗೂ
ನನ್ನ ಮತವಿಲ್ಲ' (ನೊಟಾ-ನನ್ ಆಫ್
ದಿ ಎಬೋವ್) ಎಂಬ ಆಯ್ಕೆಗೆ ಚಿಹ್ನೆ ಲಭಿಸಿದೆ.
'ಕಪ್ಪು ಬಣ್ಣದಲ್ಲಿರುವ ಕ್ರಾಸ್' (+) ಚಿಹ್ನೆಯು
ಮುಂಬರುವ ಬಿಹಾರ ಚುನಾವಣೆಯಲ್ಲಿ ಎಲ್ಲ
ಇವಿಎಂ ಮತ್ತು ಬ್ಯಾಲೆಟ್ ಪೇಪರ್ಗಳ ಮೇಲೆ
ಕಾಣಿಸಿಕೊಳ್ಳಲಿದೆ ಎಂದು
ಕೇಂದ್ರ ಚುನಾವಣಾ ಆಯೋಗ ಹೇಳಿದೆ.
ಅಹಮದಾಬಾದ್ನಲ್ಲಿರುವ 'ರಾಷ್ಟ್ರೀಯ
ವಿನ್ಯಾಸ ಸಂಸ್ಥೆ' ಈ ಚಿಹ್ನೆಯನ್ನು
ವಿನ್ಯಾಸಗೊಳಿಸಿದೆ.
ನೊಟಾ ಆಯ್ಕೆಯನ್ನು ಮತದಾರರಿಗೆ
ನೀಡುವಂತೆ 2013ರ
ಸೆಪ್ಟೆಂಬರ್ನಲ್ಲಿ ಸುಪ್ರೀಂ
ಕೋರ್ಟ್ ಆದೇಶಿಸಿತ್ತು. 2014ರ ಲೋಕಸಭೆ
ಚುನಾವಣೆಯಲ್ಲಿ ಸುಮಾರು 60 ಲಕ್ಷ ಮತದಾರರು
ನೊಟಾ ಆಯ್ಕೆ ಚಲಾಯಿಸಿದ್ದರು.
ಇದಕ್ಕೂ ಮುಂಚೆ, ಮತದಾರರು ಯಾರಿಗೂ ಮತ
ನೀಡಲು ಮನಸ್ಸಿಲ್ಲದಿದ್ದರೆ, 1961ರ
ಚುನಾವಣೆ ನೀತಿ ಸಂಹಿತೆಯ ಅಡಿ
ಮತಗಟ್ಟೆಯಲ್ಲಿ ಅಧಿಕಾರಿಗಳಿಂದ '49-ಓ'
ಎಂಬ ಹೆಸರಿನ ನಮೂನೆ ಪಡೆದು ಅದನ್ನು
ತುಂಬಿ ಕೊಡಬೇಕಿತ್ತು. ಆದರೆ,
49-ಓ ಫಾರ್ಮ್ನಲ್ಲಿ ಮತದಾರನ ವಿವರ ಗುಟ್ಟಾಗಿ
ಉಳಿಯದಿರುವುದೊಂದು
ತೊಡಕಾಗಿತ್ತು. ಹೀಗಾಗಿ
ನೊಟಾ ಆಯ್ಕೆಗೆ ಆಗ್ರಹ
ಕೇಳಿಬಂದಿತ್ತು.
-----
ರಾಹುಲ್ ಅವರು ಕಾಂಗ್ರೆಸ್ನ 'ಶಿಶು'. ಅವರನ್ನು
ಪಕ್ಷದವರೇ ಗಂಭೀರವಾಗಿ
ಪರಿಗಣಿಸುವುದಿಲ್ಲ. ಹೀಗಾಗಿಯೇ ಅವರಿಗೆ
ಪಕ್ಷದ ಚುಕ್ಕಾಣಿ ಕೊಡಲಿಲ್ಲ.
ಜೆಡಿಯು ಹಾಗೂ ಆರ್ಜೆಡಿ ಪಕ್ಷಗಳಂತೂ ರಾಹುಲ್
ಅವರನ್ನು ಪರಿಗಣಿಸುವುದೇ ಇಲ್ಲ.
ಹೀಗಾಗಿಯೇ ಈ ಪಕ್ಷಗಳ
ಧುರೀಣರು ರಾಹುಲ್ ರ್ಯಾಲಿಗೆ ಬರಲಿಲ್ಲ.
ಲಾಲು ಅವರು ತಮ್ಮ ಶಿಶುವನ್ನು (ತೇಜಸ್ವಿ) ರ್ಯಾಲಿಗೆ
ಕಳಿಸಿ
ಕೈತೊಳೆದುಕೊಂಡರು
.
-ಶ್ರೀಕಾಂತ್ ಶರ್ಮಾ ಬಿಜೆಪಿ
ಕಾರ್ಯದರ್ಶಿ
**
ಬಿಜೆಪಿ ಬತ್ತಳಿಕೆ ಸೇರಿದ ಜೆಡಿಯು 'ಬಾಣ'
ಹೊಸದಿಲ್ಲಿ/ಪಟನಾ: ಬಿಹಾರ
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಾಳಯದ ಬಲ
ಹೆಚ್ಚಾಗಿದ್ದು, ಜೆಡಿಯುವಿನ ಪ್ರಭಾವಿ ಶಾಸಕ
ಸತೀಶ್ ಕುಮಾರ್ರನ್ನು ಪಕ್ಷಕ್ಕೆ
ಸೆಳೆಯಲಾಗಿದೆ. 2010ರ
ಚುನಾವಣೆಯಲ್ಲಿ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್
ಯಾದವ್ ಪತ್ನಿ ರಾಬ್ರಿ ದೇವಿ ಅವರನ್ನು ರಘೋಪುರ
ಕ್ಷೇತ್ರದಲ್ಲಿ ಸೋಲಿಸಿದ್ದ ಸತೀಶ್ ಕುಮಾರ್
ಅವರನ್ನು ಈ ಚುನಾವಣೆಯಲ್ಲಿ ಅದೇ
ಕ್ಷೇತ್ರದಿಂದ ಲಾಲು ಪುತ್ರ ತೇಜಸ್ವಿ
ಎದುರಾಳಿಯಾಗಿಸಲು ಕಮಲ ಪಕ್ಷ ತಂತ್ರ
ಹೂಡಿದೆ. ಈ ಚುನಾವಣೆಯಲ್ಲಿ ಆರ್ಜೆಡಿ
ಮುಂದಾಳುವಾಗಿರುವ ತೇಜಸ್ವಿಗೆ ಇದು
ಚೊಚ್ಚಲ ಸ್ಪರ್ಧೆಯಾಗಿದ್ದು,
ಅವರನ್ನು ಸೋಲಿಸುವ ಮೂಲಕ ಆರ್ಜೆಡಿ-ಜೆಡಿಯು-
ಕಾಂಗ್ರೆಸ್ ಮಹಾಮೈತ್ರಿಯ ಶಕ್ತಿಗುಂದಿಸಲು
ಬಿಜೆಪಿ ಯೋಜಿಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023