ಮಕ್ಕಳ ಸಹಾಯವಾಣಿ-1098 ಮತ್ತು ಲೋಗೊ ಬರೆಸಲು ಸೂಚನೆ.(koppal district)

ಕೊಪ್ಪಳ, ಅ.03 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ-1098 ಮತ್ತು ಲೋಗೊ ಚಿತ್ರ ಬರೆಸುವಂತೆ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರುಸೂಚನೆ ನೀಡಿದ್ದಾರೆ.

★ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಲೋಗೊ ಚಿತ್ರವನ್ನು ಜಿಲ್ಲೆಯ ಎಲ್ಲ ಶಾಲೆಗಳ ಗೋಡೆಯ ಮೇಲೆ ಚಿತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತು ವರದಿ ಸಲ್ಲಿಸುವಂತೆ ಈ ಹಿಂದೆ ತಿಳಿಸಲಾಗಿತ್ತುಆದರೆ, ಈವರೆಗೂ ಯಾವುದೇ ಶಾಲೆಗಳಿಂದ ಮಾಹಿತಿ ಸಲ್ಲಿಕೆಯಾಗಿಲ್ಲ.ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಸಹಾಯವಾಣಿ ಸಂಖ್ಯೆ ಹಾಗೂ ಲೋಗೊ ಚಿತ್ರವನ್ನು ಬರೆಸುವಂತೆ ಪುನಃ ಸೂಚಿಸಲಾಗಿದೆ.

★ಲೋಗೋ ಚಿತ್ರವನ್ನು ಈಗಾಗಲೇ ಎಲ್ಲಾ ಶಾಲೆಗಳಿಗೂ ಈ-ಮೇಲ್ ಮೂಲಕಕಳುಹಿಸಲಾಗಿದ್ದು,ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಶಾಲಾ ಹಂತದಲ್ಲಿ ಲಭ್ಯವಿರುವ ಶಾಲಾ ನಿರ್ವಹಣಾ ಅನುದಾನದಲ್ಲಿ ಖರ್ಚು ಭರಿಸಿ, ಎಲ್ಲ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ-1098 ಇದರ ಲೋಗೊ ಹಾಗೂ ಮಾಹಿತಿಯನ್ನು ಅ.30 ರೊಳಗಾಗಿ ಚಿತ್ರಿಸಿ, ಅನುಷ್ಠಾನ ಮಾಹಿತಿ ಸಲ್ಲಿಸುವಂತೆ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023