ಭಾರತ-ಜರ್ಮನಿ ೧೮ ಒಪ್ಪಂದಗಳಿಗೆ ಸಹಿ.

👆 ಭಾರತ-ಜರ್ಮನಿ 18 ಒಪ್ಪಂದಕ್ಕೆ ಸಹಿ.👆
GKPOINTS

👉🏾ನವದೆಹಲಿ: ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ರಕ್ಷಣಾ ಸಾಮಗ್ರಿಗಳ
ಉತ್ಪಾದನಾ ಕ್ಷೇತ್ರ, ವ್ಯಾಪಾರ
ವಹಿವಾಟು, ಶುದ್ಧ ಇಂಧನ ಮೂಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ
ನಿಟ್ಟಿನಲ್ಲಿ 18 ಒಪ್ಪಂದಗಳಿಗೆ ಭಾರತ ಮತ್ತು ಜರ್ಮನಿ ಸಹಿ ಹಾಕಿವೆ.

👉🏾ಭಾರತದ ಪ್ರವಾಸದಲ್ಲಿರುವ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ನಾಯಕರು ಎರಡೂ ರಾಷ್ಟ್ರಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಮತ್ತು ಕೆಲವೊಂದು ಮುಖ್ಯ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಸಿದರು.
ಭವಿಷ್ಯದಲ್ಲಿ ಭಾರತದ ಆರ್ಥಿಕ ವೃದ್ಧಿಯಲ್ಲಿ ಜರ್ಮನಿ ಪ್ರಮುಖ ಪಾತ್ರ
ವಹಿಸಲಿದೆ. ಈ ಹಿನ್ನೆಲೆಯಲ್ಲಿ ಜರ್ಮನಿ ಮತ್ತು ಭಾರತದ ನಡುವೆ ಆರ್ಥಿಕ ಸಂಬಂಧವನ್ನು ವೃದ್ಧಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಶಾಂತಿಯುತ, ಸುಸ್ಥಿರ ಭವಿಷ್ಯ
ಹೊಂದಿರುವ ಪ್ರಪಂಚ ನಿರ್ಮಾಣಕ್ಕಾಗಿ ಭಾರತ ಮತ್ತು ಜರ್ಮನಿ ಒಟ್ಟಾಗಿ ಶ್ರಮಿಸಲಿದೆ.

👉🏾ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಉನ್ನತ ತಂತ್ರಜ್ಞಾನಗಳ
ವಿನಿಮಯ, ಗುಪ್ತಚರ ವಿಭಾಗ,
ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಡಲು ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ
ನೀಡಲಿವೆ ಎಂದು ಮೋದಿ ತಿಳಿಸಿದ್ದಾರೆ.

👉🏾ಭಾರತದಲ್ಲಿ ಜರ್ಮನ್ ಭಾಷೆಗೆ ಉತ್ತೇಜನ ನೀಡುವುದು ಮತ್ತು ಜರ್ಮನಿಯಲ್ಲಿ ಭಾರತೀಯ ಭಾಷೆಗಳ ಕಲಿಕೆಗೆ ಉತ್ತೇಜನ ನೀಡುವ ಸಂಬಂಧ ಭಾರತ ಮತ್ತು ಜರ್ಮನಿ ಒಪ್ಪಂದಕ್ಕೆ ಸಹಿ ಹಾಕಿವೆ.

👉🏾ಉನ್ನತ ಶಿಕ್ಷಣ, ನಾಗರಿಕ ವಿಮಾನಯಾನ, ರೈಲ್ವೆ, ಆಹಾರ ಭದ್ರತೆ ಕ್ಷೇತ್ರಗಳಲ್ಲೂ ಸಹ ಸಹಕಾರಕ್ಕೆ ಉಭಯ ರಾಷ್ಟ್ರಗಳು ಸಹಿ
ಹಾಕಿವೆ. ಜತೆಯಲ್ಲೇ ಜರ್ಮನಿಯ ಕಂಪನಿಗಳು ಭಾರತದಲ್ಲಿ ಉದ್ದಿಮೆ ಸ್ಥಾಪಿಸಲು ಪೂರ್ಣ ಸಹಕಾರ ನೀಡಲೂ ಸಹ ಒಪ್ಪಂದ ಮಾಡಿಕೊಳ್ಳಲಾಗಿದೆ.

👉🏾ಜರ್ಮನಿಯು ಭಾರತದಲ್ಲಿ ಸೋಲಾರ್ ಯೋಜನೆಗಳಲ್ಲಿ 7300 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ. ಜತೆಯಲ್ಲೇ ಭಾರತದ
ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ, ಸ್ವಚ್ಛ ಗಂಗಾ ಯೋಜನೆ ಮತ್ತು ಕಸ ವಿಲೇವಾರಿ ಯೋಜನೆಗಳಲ್ಲಿ ನೆರವು ನೀಡುವುದಾಗಿ ತಿಳಿಸಿದೆ.

👉🏾ಜರ್ಮನಿಯ ಇಂಜಿನಿಯರಿಂಗ್ ಕೌಶಲ್ಯ ಮತ್ತು ಭಾರತೀಯರ ಕಂಪ್ಯೂಟರ್ ತಂತ್ರಜ್ಞಾನ
ಕೌಶಲ್ಯದೊಂದಿಗೆ ಮುಂದಿನ ತಲೆಮಾರಿನ ಉದ್ದಿಮೆಯಲ್ಲಿ ಪ್ರಗತಿ ಸಾಧಿಸಬಹುದು. ಈಗಾಗಲೇ ಭಾರತದಲ್ಲಿ 1600 ಜರ್ಮನ್ ಕಂಪನಿಗಳಿದ್ದು, ಇನ್ನೂ ಹೆಚ್ಚಿನ ಕಂಪನಿಗಳು ಭಾರತದಲ್ಲಿಸ್ಥಾಪನೆಯಾಗುತ್ತಿವೆ, ಭಾರತದಲ್ಲಿ ಜರ್ಮನ್ ಕಂಪನಿಗಳಿಗೆ ಉತ್ತೇಜಕ
ವಾತಾವರಣವಿದೆ ಎಂದು ಜರ್ಮನಿ ಚಾನ್ಸಲರ್ ಮರ್ಕೆಲ್ ತಿಳಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023