Drop


Friday, December 4, 2015

ಪಿಸ್ಟೋರಿಯಸ್ಗೆ 15 ವರ್ಷ ಜೈಲು?:-


2013ರಲ್ಲಿ ಪ್ರೇಯಸಿಯನ್ನು ಹತ್ಯೆಗೈದ ಆರೋಪ,
ಹಿಂದಿನ ತೀರ್ಪನ್ನು ತಳ್ಳಿಹಾಕಿದ
ಸುಪ್ರಿಂ ಕೋರ್ಟ್
ಬ್ಲೊಮ್ಫೊನ್ಟೈನ್
(ದಕ್ಷಿಣ ಆಫ್ರಿಕಾ): ಎರಡು ವರ್ಷಗಳ ಹಿಂದೆ
ಪ್ರೇಮಿಗಳ ದಿನದಂದೇ ಪ್ರೇಯಸಿಯನ್ನು
ಗುಂಡಿಟ್ಟು ಕೊಂಡ
ಪ್ಯಾರಾಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್
ಅವರು ಅಪರಾಧಿ ಎಂದು ಸಾಬೀತಾಗಿದ್ದು,
ಸುಮಾರು 15 ವರ್ಷಗಳ ಕಾಲ ಜೈಲು ಶಿಕ್ಷೆ
ಅನುಭವಿಸಲಿದ್ದಾರೆ.
2013ರಲ್ಲಿ ಪ್ರೇಯಸಿ ರೀವಾ
ಸ್ಟೀನ್ಕ್ಯಾಂಪ್ ಅವರನ್ನು ಹತ್ಯೆ
ಮಾಡಿಲ್ಲವೆಂದು ಬ್ಲೇಡ್ರನ್ನರ್
ನೀಡಿರುವ ಸಾಕ್ಷ್ಯ ಸತ್ಯಕ್ಕೆ
ದೂರವಾದದ್ದು ಎಂದು ಹೇಳಿರುವ
ನ್ಯಾಯಮೂರ್ತಿಗಳು, ಹಿಂದೆ
ನೀಡಿರುವ ತೀರ್ಪನ್ನೇ ಎತ್ತಿ
ಹಿಡಿದಿದ್ದಾರೆ.
ಎರಡೂ ಕಾಲುಗಳಿಲ್ಲದೆ 'ಬ್ಲೇಡ್ ರನ್ನರ್' ಎಂದೇ
ಖ್ಯಾತಿ ಪಡೆದಿರುವ ಪಿಸ್ಟೋರಿಯಸ್ ಅವರನ್ನು ಕಳೆದ
ಅಕ್ಟೋಬರ್ನಲ್ಲಿ ಪೆರೋಲ್ ಮೇಲೆ ಬಿಡುಗಡೆ
ಮಾಡಲಾಗಿತ್ತು. ಇದಕ್ಕೂ ಮುನ್ನ ಪಿಸ್ಟೋರಿಯಸ್
ಒಂದು ವರ್ಷ ಕಾಲ ಜೈಲುವಾಸ ಅನುಭವಿಸಿದ್ದರು.
ಎರಡು ವರ್ಷಗಳ ಹಿಂದೆ ಪ್ರೇಮಿಗಳ
ದಿನದಂದು ಮಾಡೆಲ್ ಹಾಗೂ ಕಾನೂನು
ಪದವೀಧರೆಯಾಗಿರುವ ಪ್ರೇಯಸಿ
ಸ್ಟೀನ್ಕ್ಯಾಂಪ್ ಅವರನ್ನು
ಗುಂಡಿಕ್ಕಿ ಕೊನೆ ಮಾಡಿರುವ
ಪಿಸ್ಟೋರಿಯಸ್ ಅದು ತಪ್ಪಿನಿಂದಾದ
ಕೊನೆ ಎಂದು ನ್ಯಾಯಾಲಯದ
ಮುಂದೆ ಹೇಳಿಕೊಂಡಿದ್ದರು.
ಶಿಕ್ಷಾರ್ಹ ನರಹತ್ಯೆಯಾದ ಕಾರಣ
ಪ್ಯಾರಾಲಿಂಪಿಯನ್ಗೆ ಐದು ವರ್ಷ ಜೈಲು ಶಿಕ್ಷೆ
ವಿಧಿಸಲಾಗಿತ್ತು. ಅದರಲ್ಲಿ ಒಂದು ವರ್ಷವನ್ನು
ಅವರು ಜೈಲಿನಲ್ಲಿ ಕಳೆದಿದ್ದರು.
ಆದರೆ ನಾಟಕೀಯ ತಿರುವು ಕಂಡ
ವಿಚಾರಣೆ ವೇಳೆ ಪಿಸ್ಟೋರಿಯಸ್ ಉದ್ದೇಶಪೂರ್ವಕವಾಗಿ
ಕೊಲೆ ಮಾಡಿರುವುದು
ಸಾಬೀತಾಗಿದೆ. ''ಆರೋಪಿಯು
ಕೊಲೆ ಮಾಡುವ ಉದ್ದೇಶದಿಂದಲೇ
ಗುಂಡು ಹಾರಿಸಿರುವುದು ಸಾಬೀತಾಗಿದೆ,
ಆದ್ದರಿಂದ ಪಿಸ್ಟೋರಿಯಸ್ ಅಪರಾಧಿ,''
ಎಂದು ನ್ಯಾಯಮೂರ್ತಿ ಎರಿಕ್ ಲೀಚ್
ಹೇಳಿದ್ದಾರೆ.
''ಸೂಕ್ತ ಶಿಕ್ಷೆಯ ಪ್ರಮಾಣವನ್ನು ತಿಳಿಸಲು ವಿಚಾರಣಾ
ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ,''
ಎಂದು ಲೀಚ್ ನ್ಯಾಯಾಲಯದಲ್ಲಿ
ತಿಳಿಸಿದರು. ಪ್ಯಾರಾಲಿಂಪಿಕ್ನಲ್ಲಿ ಚಿನ್ನದ
ಪದಕ ಗೆದ್ದಿರುವ ಪಿಸ್ಟೋರಿಯಸ್ ಈ ಅಪರಾಧಕ್ಕೆ
ಕನಿಷ್ಠ 15 ವರ್ಷಗಳ ಕಾಲ ಜೈಲು ಶಿಕ್ಷೆ
ಅನುಭವಿಸಬೇಕಾಗುತ್ತದೆ.