Tuesday, December 8, 2015

ಕೇರಳ ಪ್ರವಾಸೋದ್ಯಮಕ್ಕೆ ಕೇಂದ್ರದಿಂದ 200ಕೋಟಿ ರೂ.ಬಿಡುಗಡೆ:*-


· DEC 8, 2015
KERALA TORI
ತಿರುವನಂತಪುರಂ : ಆಧ್ಯಾತ್ಮಿಕ ಹಾಗೂ
ಪರಿಸರ ಪ್ರವಾಸೋದ್ಯಮವನ್ನು
ಅಭಿವೃದ್ಧಿ ಗೊಳಿಸುವ
ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 200
ಕೋಟಿ ರೂ. ಬಿಡುಗಡೆ ಮಾಡಿದೆ
ಎಂದು ಪ್ರವಾಸೋದ್ಯಮ
ಮಂತ್ರಿ ಎ.ಪಿ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಐತಿಹಾಸಿಕ ತಿರುವನಂತಪುರ ದೇವಾಲಯದ
ಅಭಿವೃದ್ಧಿ ಹಾಗೂ ಪರಿಸರ
ಪ್ರವಾಸೋದ್ಯಮ
ಅಭಿವೃದ್ಧಿಗೋಸ್ಕರ ಈಗಾಗಲೇ ನೂರು
ಕೋಟಿ ಹಣ ಪಡೆದಿದ್ದು,
ಇದರಲ್ಲಿ 84 ಕೋಟಿ ರೂ. ಸ್ವಾಮಿ
ಪದ್ಮನಾಭ ದೇವಾಲಯದಲ್ಲಿನ ಮೂಲಭೂತ ಸೌಲಭ್ಯ
ಅಭಿವೃದ್ಧಿಗೆ, 5.6 ಕೋಟಿ
ಪಾರ್ಥಸಾರಥಿ ದೇವಾಲಯ
ಜೀಣೋದ್ಧಾರಕ್ಕೆ, 6
ಕೋಟಿ ರೂ. ಶಬರಿಮಲೈ ದೇವಾಲಯ
ಅಭಿವೃದ್ಧಿಗೆ ಒದಗಿಸಲಾಗುವುದು ಎಂದು ಮಾಹಿತಿ
ನೀಡಿದ್ದಾರೆ.