Tuesday, December 8, 2015

2017ಕ್ಕೆ ಕೂಡಗಿ ವಿದ್ಯುತ್ ಘಟಕ ಆರಂಭ:-


8 Dec, 2015
ನವದೆಹಲಿ (ಪಿಟಿಐ ):
ರಾಷ್ಟ್ರೀಯ
ಶಾಖೋತ್ಪನ್ನ ವಿದ್ಯುತ್ ನಿಗಮ
(ಎನ್ಟಿಪಿಸಿ) ವಿಜಯಪುರ
ಜಿಲ್ಲೆಯ ಕೂಡಗಿಯಲ್ಲಿ
ನಿರ್ಮಿಸುತ್ತಿರುವ ನಾಲ್ಕು ಸಾವಿರ ಮೆಗಾ
ವಾಟ್ ಸಾಮರ್ಥ್ಯದ ವಿದ್ಯುತ್
ಸ್ಥಾವರ 2017ರಲ್ಲಿ
ಕಾರ್ಯಾರಂಭ ಮಾಡಲಿದೆ
ಎಂದು ಕೇಂದ್ರ ಸರ್ಕಾರ
ಸೋಮವಾರ ಪ್ರಕಟಿಸಿದೆ.
ಕೂಡಗಿಯ 800 ಮೆಗಾ ವಾಟ್
ಸಾಮರ್ಥ್ಯದ ಮೂರು ಸ್ಥಾವರಗಳು
ದಕ್ಷಿಣ ಭಾರತದ ವಿದ್ಯುತ್ ಬೇಡಿಕೆ
ಪೂರೈಸಲಿವೆ ಎಂದು ಎಂದು
ಇಂಧನ ಸಚಿವ ಪಿಯೂಷ್
ಗೋಯೆಲ್ ಸೋಮವಾರ ರಾಜ್ಯಸಭೆಗೆ
ತಿಳಿಸಿದರು.
ಮಳೆ
ಕೊರತೆಯಿಂದ
ಜಲವಿದ್ಯುತ್ ಉತ್ಪಾದನೆ ಕುಸಿದ
ಕಾರಣ ಕರ್ನಾಟಕ ತೀವ್ರ
ವಿದ್ಯುತ್ ಅಭಾವ ಎದುರಿಸುತ್ತಿದೆ
ಎಂದು ತಿಳಿಸಿದರು. ದೇಶದಲ್ಲಿ
ಬೇಡಿಕೆಗಿಂತ ಹೆಚ್ಚಿನ
ಪ್ರಮಾಣದ ವಿದ್ಯುತ್
ಉತ್ಪಾದಿಸಲಾಗುತ್ತಿದೆ. ಅಸಮರ್ಪಕ
ವಿದ್ಯುತ್ ಸರಬರಾಜು ಜಾಲದ ಕಾರಣ
ಕರ್ನಾಟಕ ಮತ್ತು ಈಶಾನ್ಯ
ರಾಜ್ಯಗಳಲ್ಲಿ ವಿದ್ಯುತ್
ಕೊರತೆ ಎದುರಾಗಿವೆ
ಎಂದು ಸಚಿವರು ಹೇಳಿದರು.