Drop


Thursday, December 3, 2015

43ನೇ ಮುಖ್ಯ ನ್ಯಾಯಮೂರ್ತಿಯಾಗಿ ಟಿ.ಎಸ್. ಠಾಕೂರ್ ಪ್ರಮಾಣವಚನ ಸ್ವೀಕಾರ:*

ನವದೆಹಲಿ (ಪಿಟಿಐ)
ಸುಪ್ರೀಂ ಕೋರ್ಟ್ನ
43ನೇ ಮುಖ್ಯ
ನ್ಯಾಯಮೂರ್ತಿಯಾಗಿ
ಹಿರಿಯ ನ್ಯಾಯಮೂರ್ತಿ
ಟಿ.ಎಸ್. ಠಾಕೂರ್ ಅವರು
ಗುರುವಾರ ರಾಷ್ಟ್ರಪತಿ
ಪ್ರಣಬ್ ಮುಖರ್ಜಿ ಅವರಿಂದ
ಪ್ರಮಾಣವಚನ
ಸ್ವೀಕರಿಸಿದರು.
ರಾಷ್ಟ್ರಪತಿ ಭವನದ
ದರ್ಬಾರ್ ಹಾಲ್ನಲ್ಲಿ ನಡೆದ
ಅಧಿಕಾರ ಸ್ವೀಕಾರ
ಸಮಾರಂಭದಲ್ಲಿ 63
ವಯಸ್ಸಿನ ಠಾಕೂರ್ ಅವರಿಗೆ
ಪ್ರಣಬ್ ಅವರು ಅಧಿಕಾರ
ಗೌಪ್ಯತಾ ಪ್ರಮಾಣ ವಚನ
ಬೋಧಿಸಿದರು.
ಸಮಾರಂಭದಲ್ಲಿ
ಪ್ರಧಾನಮಂತ್ರಿ
ನರೇಂದ್ರ ಮೋದಿ,
ಕೆಲ ಕೇಂದ್ರ ಸಚಿವರು,
ಹಿರಿಯ
ನ್ಯಾಯಮೂರ್ತಿಗಳು
ಹಾಜರಿದ್ದರು.
ಠಾಕೂರ್ ಅವರು
ದೇವರ ಹೆಸರಿನಲ್ಲಿ
ಪ್ರಮಾಣವಚನ
ಸ್ವೀಕರಿಸಿದರು.
ಠಾಕೂರ್ ಅವರ
ಅಧಿಕಾರಾವಧಿಯು
ಒಂದು ವರ್ಷವಿದ್ದು,
ಅವರು 2017 ಜನವರಿ 4ಕ್ಕೆ
ನಿವೃತ್ತರಾಗಲಿದ್ದಾರೆ.