Drop


Friday, December 18, 2015

ಮದರ್ ತೆರೆಸಾಗೆ ಸಂತ ಪದವಿ : ಪಶ್ಚಿಮಬಂಗಾಳ ಸಿಎಂ ಮಮತಾ ಸ್ವಾಗತ

ಕೋಲ್ಕತಾ, ಡಿ.೧೯-ಮಹಾನ್ ಮಾನವತಾವಾದಿ,
ದೀನ ದಲಿತರ ಸೇವಕಿಯಾಗಿ ಜೀವ ಸವೆಸಿದ ಮದರ್
ತೆರೆಸಾ ಅವರನ್ನು ಸಂತ ಪದವಿಗೆ ಏರಿಸುವ
ವ್ಯಾಟಿಕನ್ ಪೋಪ್ ಅವರ ನಿರ್ಧಾರವನ್ನು
ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ
ಬ್ಯಾನರ್ಜಿ ಹಾರ್ಧಿಕವಾಗಿ ಸ್ವಾಗತಿಸಿದ್ದಾರೆ.
ಮನುಕುಲದ ಒಳಿತಿಗಾಗಿ ಬದುಕಿದ ಮದರ್ ತೆರೆಸಾ
ಅವರಿಗೆ ೨೦೧೬ರಲ್ಲಿ ಸಂತ ಪದವಿ
ದೊರೆಯುತ್ತಿರುವುದು ನಮಗೆ ಅತ್ಯಂತ ಹರ್ಷ
ತಂದಿದೆ ಎಂದು ಮಮತಾ ಬ್ಯಾನರ್ಜಿ ಸಂತಸ
ವ್ಯಕ್ತಪಡಿಸಿದ್ದಾರೆ. ಸಧ್ಯದಲ್ಲೇ ಮದರ್ ತೆರೆಸಾ
ಅವರಿಗೆ ಮರಣೋತ್ತರ ಸಂತ ಪದವಿ ನೀಡಿ
ಗೌರವಿಸಲಾಗುವುದು.