ಜಾಗತಿಕ ಶಿಕ್ಷಕರ ಪ್ರಶಸ್ತಿ ಪಟ್ಟಿ ಬೆಂಗಳೂರಿನ ಶಿಕ್ಷಕಿ( ಶಾಂತಿ)ಗೆ ಸ್ಥಾನ:-


10 Dec, 2015
ಲಂಡನ್ (ಪಿಟಿಐ):
'ಬೋಧನೆಗಾಗಿ ನೀಡುವ
ನೊಬೆಲ್
ಪ್ರಶಸ್ತಿ' ಎಂದು
ಪರಿಗಣಿತವಾಗಿರುವ 'ಜಾಗತಿಕ
ಶಿಕ್ಷಕ ಪ್ರಶಸ್ತಿ'ಯ 50
ಪ್ರಮುಖರ ಪಟ್ಟಿಯಲ್ಲಿ
ಬೆಂಗಳೂರಿನ ಶಿಕ್ಷಕಿ ಸೇರಿ
ಭಾರತದ ನಾಲ್ವರು ಶಿಕ್ಷಕರು ಸ್ಥಾನ
ಪಡೆದಿದ್ದಾರೆ.
ಪ್ರಶಸ್ತಿ ಮೊತ್ತ
10 ಲಕ್ಷ ಡಾಲರ್ (₹ 5.53 ಕೋಟಿ)
ಇದೆ. ಪ್ರಶಸ್ತಿಯ 50
ಅತ್ಯುತ್ತಮ ಶಿಕ್ಷಕರ
ಪಟ್ಟಿಯಲ್ಲಿರುವ ಭಾರತದ
ನಾಲ್ವರು ಶಿಕ್ಷಕರಲ್ಲಿ
ಮುಂಬೈನ ಇಬ್ಬರು,
ಬೆಂಗಳೂರು ಮತ್ತು
ದೆಹಲಿಯ ತಲಾ ಒಬ್ಬರು ಸ್ಥಾನ
ಪಡೆದಿದ್ದಾರೆ.
ಬೆಂಗಳೂರಿನ
ಎಡ್ವೆಂಚರ್ ಅಕಾಡೆಮಿಯ
ಶಾಂತಿ ಕರಮ್ಚೇಟಿ,
ಮುಂಬೈನ ಕೆಂಪು
ದೀಪದ
ಬಾಲಕಿಯರಿಗಾಗಿ ಸ್ಥಾಪಿಸಿರುವ
'ಕ್ರಾಂತಿ' ಸಂಸ್ಥೆ
ಸ್ಥಾಪಕ ರಾಬಿನ್ ಚೌರಾಸಿಯಾ,
ಮುಂಬೈನ ಜೆನೆಸಿಸ್ ಶಿಕ್ಷಣ
ಸಂಸ್ಥೆಯ ಧವಲ್
ಭಾಟಿಯಾ ಮತ್ತು ದೆಹಲಿಯ
ಹಂಸರಾಜ್ ಮಾದರಿ ಶಾಲೆಯ
ರಶ್ಮಿ ಕಥೂರಿಯಾ ಅವರ ಹೆಸರು
ಇದೆ.
ಕೇರಳ ಮೂಲದ ಉದ್ಯಮಿ,
ಲಂಡನ್ನ ವಾರ್ಕೆ
ಫೌಂಡೇಷನ್ನ ಸ್ಥಾಪಕ ಸನ್ನಿ
ವಾರ್ಕೆ ಎಂಬುವರು ಗ್ಲೋಬಲ್
ಎಜುಕೇಷನ್ ಅಂಡ್ ಸ್ಕಿಲ್ಸ್
ಫೋರಂ 2014
(ಜಿಇಎಂಎಸ್) ಅಡಿ ಜಾಗತಿಕ
ಶಿಕ್ಷಕ ಪ್ರಶಸ್ತಿ ಸ್ಥಾಪಿಸಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿ
ಅತ್ಯುತ್ತಮ ಸಾಧನೆ
ಮಾಡಿದವರಿಗಾಗಿ ಈ ಪ್ರಶಸ್ತಿ
ಸ್ಥಾಪಿಸಲಾಗಿದ್ದು, 2016ರ ಮಾರ್ಚ್
ತಿಂಗಳಲ್ಲಿ ಪ್ರಶಸ್ತಿ
ಪುರಸ್ಕೃತರ ಹೆಸರು ಘೋಷಣೆ
ಮಾಡಲಾಗುವುದು. ಒಟ್ಟು 148
ದೇಶಗಳ 8 ಸಾವಿರ ಶಿಕ್ಷಕರು ಅರ್ಜಿ
ಸಲ್ಲಿಸಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023