ಮೋಹಕ ಬಲೆಯ ಮಾಂಸಾಹಾರಿ ಸಸ್ಯಗಳು


BY ವಿಜಯವಾಣಿ ನ್ಯೂಸ್
· DEC 5, 2015
ನಯನ ಎಸ್
ಸಸ್ಯಗಳನ್ನು ಕೀಟಗಳು
ತಿನ್ನುವುದನ್ನು, ಹೂವಿನ
ಮಕರಂದವನ್ನು ದುಂಬಿ
ಹೀರುವುದನ್ನು
ನೋಡಿದ್ದೇವೆ. ತಮ್ಮ ಬೇರುಗಳ
ಮೂಲಕ ಮಣ್ಣಿನಲ್ಲಿಯ
ಪೋಷಕಾಂಶಗಳು, ನೀರು
ಪಡೆದು ಸಸ್ಯಗಳು ಬೆಳೆಯುತ್ತವೆ
ಎನ್ನುವುದು ಕೂಡ ಹೊಸ
ಸಂಗತಿಯೇನಲ್ಲ. ಕುಂಡ,
ಕೈತೋಟ, ಗದ್ದೆ, ತೋಟಗಳಲ್ಲಿ
ಗಿಡಗಳು ಬಾಡಲಾರಂಭಿಸಿದಾಗ
ಯಥೇಚ್ಛ ಗೊಬ್ಬರ, ನೀರು
ಒದಗಿಸಿ, ಬೆಳವಣಿಗೆಗೆ ಪೂರಕ ಕ್ರಮಗಳನ್ನು
ಕೈಗೊಳ್ಳುವುದನ್ನೂ
ನೋಡಿದ್ದೇವೆ. ಆದರೆ ತಮ್ಮನ್ನು
ತಿನ್ನಲು ಬರುವ, ಆಶ್ರಯ ಬಯಸಿ
ಬರುವ ಕೀಟ, ಚಿಟ್ಟೆ, ದೊಡ್ಡ
ದುಂಬಿ, ಕಪ್ಪೆ ಮರಿಗಳು ಇಂಥ ಪುಟ್ಟ
ಜೀವಿಗಳನ್ನೇ ಸ್ವಾಹಾ ಮಾಡುವ
ಸಸ್ಯಗಳಿವೆ ಎನ್ನುವುದು ಗೊತ್ತಾ?
ಹೌದು, ಅಂಥ 'ಮಾಂಸಾಹಾರಿ
ಸಸ್ಯ'ಗಳೂ ನಮ್ಮ ಭೂಮಿ ಮೇಲಿವೆ,
'ಸೈಲೆಂಟ್ ಕಿಲ್ಲರ್' ಥರ. ಸೃಷ್ಟಿ
ವೈಚಿತ್ರ್ಯ ಗಣಿಯಲ್ಲಿನ ವಿಶೇಷದ
ಪಟ್ಟಿಗೆ ಈ ಮಾಂಸಾಹಾರಿ ಸಸ್ಯಗಳು
ಸೇರಿವೆ. ಈ ಗಿಡಗಳೆಲ್ಲ ಕೀಟಗಳನ್ನು
ಹೇಗೆ ಆಕರ್ಷಿಸುತ್ತ್ತೆ, ಕೀಟಗಳೂ
ಇವುಗಳ ಆಕರ್ಷಣೆಗೆ ಹೇಗೆ
ಬಲಿಯಾಗುತ್ತವೆ ಎಂಬ ಕುತೂಹಲದ
ಮಾಹಿತಿ ನಿಮಗಾಗಿ.
ಅದೊಂದು ಸಸ್ಯದಲ್ಲಿ
ಸುಂದರವಾದ ಹೂವೊಂದು
ಅರಳಿದೆ. ಮಕರಂದವನ್ನರಸಿ
ಹಾರಿಕೊಂಡು ಬಂದ
ದುಂಬಿಯೊಂದು ರೆಕ್ಕೆಗಳನ್ನು
ಮಡಚುತ್ತ ಆ ಹೂವಿನ ಮೇಲೆ
ಕುಳಿತುಕೊಳ್ಳಲು
ಕಾಲುಗಳನ್ನು ಊರುತ್ತದೆ.
ಇನ್ನೇನು ಹೀರಬೇಕು
ಎನ್ನುವಷ್ಟರಲ್ಲಿ ಅದರ ಒದ್ದಾಟ,
ಯಾರಿಗೂ ಕೇಳದ ಸಾವಿನ
ಅರ್ತನಾದ… ಕ್ಷಣ ಉರುಳುತ್ತಿದ್ದಂತೆ
ಆ ದುಂಬಿ ಇನ್ನಿಲ್ಲವಾಗುತ್ತದೆ.
ಇದೇನು? ಹೂವಿನಿಂದ ದುಂಬಿಯ
ಪ್ರಾಣ ಹೊರಟುಹೋಯಿತೆ
ಎಂದಿರಾ? ನಿಜವೇ. ಹಲವು
ಸಸ್ಯಗಳು ಕೀಟಗಳು, ಪುಟ್ಟ
ಪ್ರಾಣಿಗಳನ್ನು ತಿಂದು
ಬದುಕುತ್ತವೆ. ಇವನ್ನು
ಮಾಂಸಾಹಾರಿ (Carnivorous plants)
ಅಥವಾ ಕೀಟಭಕ್ಷಕ ಸಸ್ಯಗಳು
ಎಂದು ಕರೆಯಲಾಗುತ್ತದೆ. ವಿಶ್ವದಲ್ಲಿ
580ಕ್ಕೂ ಹೆಚ್ಚು ಪ್ರಭೇದದ
ಮಾಂಸಾಹಾರಿ ಸಸ್ಯಗಳಿವೆ.
ಭಾರತದಲ್ಲಿ 50ಕ್ಕೂ ಹೆಚ್ಚು ವಿಧವಾದ
ಇಂತಹ ಸಸ್ಯಗಳಿವೆ.
ಬೇಟೆಯ ಮಾಯಾ ಲೋಕ
ಈ ಮಾಂಸಾಹಾರಿ ಸಸ್ಯಗಳು
ಕೀಟಗಳನ್ನು ತಮ್ಮ ಬಲೆಗೆ ಬೀಳಿಸುವ
ರೀತಿ ಒಂದಕ್ಕಿಂತ ಒಂದು ಭಿನ್ನ.
ತಾವು ಮಣ್ಣಿನಲ್ಲಿ ನೆಲೆಯೂರಿದ
ಸ್ಥಳದಿಂದಲೇ ಕೀಟಗಳನ್ನು ಆಕರ್ಷಿಸಿ
ಶಿಕಾರಿ ನಡೆಸುತ್ತವೆ. ಸೌಂದರ್ಯ,
ಕುತೂಹಲ, ಆಹಾರದ ಆಸೆಯಿಂದ
ಇವನ್ನು ರ್ಸ³ಸಿದ ಕೀಟಗಳು
ಅರಿಯದೇ ಮೋಸದ ಬಲೆಗೆ ಬಿದ್ದು
ಬಲಿಯಾಗುತ್ತವೆ. ವಿಜ್ಞಾನಿ ಚಾರ್ಲ್ಸ್
ಡಾರ್ವಿನ್ ಇಂಥ ಮಾಂಸಾಹಾರಿ
ಸಸ್ಯಗಳ ಕುರಿತು 1875ರಲ್ಲೇ ಕೃತಿ
ರಚಿಸಿದ್ದರು.
ಕೆಲವು ಲೋಟದಂತಹ ಆಕೃತಿಯ
ಹಸಿರು ತಟ್ಟೆಯಲ್ಲಿ ಕೀಟಗಳನ್ನು
ತಮ್ಮ ಬಲೆಗೆ ಬೀಳಿಸಿ ಶಿಕಾರಿ
ಪಡೆಯುತ್ತವೆ. ಇನ್ನು ಕೆಲವು ಅದೇ
ರೀತಿಯ ಕೊಳವೆ/ತಂಬಿಗೆ/ಹೂಜಿ
ರೀತಿಯ ಶಿಕಾರಿಬಟ್ಟಲ ಅಂಗವನ್ನು
ಹೊಂದಿವೆ. ಈ ಅಂಗ ಬಲೂನ್
ರೀತಿಯ ತೆಳು ಅಂಗರಚನೆ ಪಡೆದಿದೆ.
ಕೆಲವು ಸಸ್ಯಗಳ ಇಂಥ ಊಟದ
ಬಲೆಬಟ್ಟಲು ನೈಸರ್ಗಿಕ ಹಸಿರಿನಿಂದ
ಕೂಡಿದ್ದರೆ, ಕೆಲವು ನೇರಳೆ, ಕೆಂಪು,
ಹಸಿರು-ಕೆಂಪು, ಇತರ ಬಣ್ಣಗಳನ್ನು
ಹೊಂದಿರುತ್ತವೆ. ಕೆಲವು ಬಲೆಬಟ್ಟಲ
ಮೇಲ್ಭಾಗದಲ್ಲಿ ಒನಪಿನ
ಮುಚ್ಚಳವಿದ್ದು, ಅದು ಅರೆ
ತೆರೆದಿರುತ್ತದೆ. ಇಂತಹ ಆಹಾರದ ಬಟ್ಟಲಿಗೆ
ಕೀಟಗಳು, ಕಪ್ಪೆ, ಚಿಟ್ಟೆ, ದುಂಬಿ,
ಪುಟ್ಟ ಪ್ರಾಣಿಗಳು
ಕುತೂಹಲದಿಂದ ಇಣುಕಿ
ನೋಡಲು ಹೋಗಿ
ಬಿದ್ದುಬಿಡುತ್ತವೆ. ಒಮ್ಮೆ ಬಲಿಕೀಟ ಈ
ಬಟ್ಟಲಿನ ಗುಂಡಿಗೆ ಬಿತ್ತೆಂದರೆ ಮೇಲೆ
ಬರಲು ಸಾಧ್ಯವಾಗದು. ಅದರ
ದೇಹಕ್ಕೆ ಹೋಲಿಸಿದರೆ ಬಟ್ಟಲು
ಆಳವಾಗಿರುತ್ತದೆ, ಮೇಲಕ್ಕೆ ಹತ್ತಿ
ಬಂದು ಹಾರಿಹೋಗಲು
ಸಾಧ್ಯವಿಲ್ಲ. ಬಲೆಬಟ್ಟಲಿಗೆ
ಶಿಕಾರಿಯು ಬಿದ್ದ ಕೂಡಲೇ
ಸಸ್ಯವು ಆ ಬಟ್ಟಲ ಕೆಳತುದಿಯ
ಮೂಲಕ ಕೀಟವನ್ನು
ಜೀರ್ಣಿಸಿಕೊಳ್ಳಲು
ಆರಂಭಿಸಿಬಿಡುತ್ತದೆ.
ವೈವಿಧ್ಯಮಯ ಪ್ರಪಂಚ
ಕೀಟಭಕ್ಷಕ ಅಥವಾ ಮಾಂಸಾಹಾರಿ
ಸಸ್ಯಗಳನ್ನು ಅವು ಶಿಕಾರಿ ಹಿಡಿಯುವ
ಪರಿಗೆ ಅನುಸಾರವಾಗಿ ಐದು
ರೀತಿಯಲ್ಲಿ ವಿಂಗಡಿಸಲಾಗಿದೆ.
ಕೊಳವೆ/ತಂಬಿಗೆ/ಹೂಜಿ ಆಕಾರದ
ಗುಳಿಯ(ಬಟ್ಟಲಿನ) ಸಸ್ಯಗಳು.
ಇಂಗ್ಲಿಷಿನಲ್ಲಿ ಇವನ್ನು Pitfall traps
ಎನ್ನುತ್ತಾರೆ. ಇವುಗಳ ಹಲವು
ಪ್ರಭೇದಗಳನ್ನು 'ಮಂಗನ
ತಟ್ಟೆ'ಗಳೆಂದು ಕರೆಯುತ್ತಾರೆ. ತಮ್ಮ
ನುಣುಪಾದ ಎಲೆ ಅಥವಾ ಹೂವಿನಲ್ಲಿ
ಮಂಜಿನಂತಹ ಅಂಟಿನ ಮೂಲಕ
ಬೇಟೆಯನ್ನು ಬಲೆಗೆ ಕೆಡುಹುವ
ಸಸ್ಯಗಳಿಗೆ Flypaper ಎಂದೂ
ಕರೆಯಲಾಗಿದೆ. ಕೆಲವು ಸಸ್ಯದ
ಭಾಗಗಳು ಕರ್ಜಿಕಾಯಿ ಅಚ್ಚಿನ
ರೀತಿಯ ಶಿಕಾರಿಅಂಗ
ಹೊಂದಿರುತ್ತವೆ. ಈ ಶಿಕಾರಿಅಂಗದ
ಹೊರಭಾಗ ಹಸಿರಾಗಿದ್ದು, ಕೆಂಪಗಿನ
ಒಳಭಾಗ ತೆರೆದುಕೊಂಡಿರುತ್ತದೆ.
ತುದಿಯಲ್ಲಿ ಮುಳ್ಳುಗಳಿಂದ
ಕೂಡಿರುತ್ತದೆ. ಬೇಟೆಯ ಕೆಂಪಗಿನ
ಒಳಭಾಗದಲ್ಲಿ ಏನೋ ಇದೆ ಎಂದು
ಒಳಹೊಕ್ಕರೆ ಸಾಕು. ಅಮ್ಮ
ಕರ್ಜಿಕಾಯಿ ಮಾಡುವಾಗ ಅಚ್ಚಿನಲ್ಲಿ
ಹೂರಣವಿಟ್ಟು ಮುಚ್ಚಿ ಬಂದ್
ಮಾಡಿದಂತೆ ಮುಳ್ಳಿನ ಹೊರಭಾಗದ
ತುದಿ ಮುಚ್ಚಿಕೊಂಡು ಬಿಡುತ್ತದೆ.
ಒಳಗೆ ಸಿಕ್ಕಿಕೊಂಡ ಬೇಟೆ ಹುಳು
ನಿಮಿಷಾರ್ಧದಲ್ಲಿ
ಪ್ರಾಣಕಳೆದುಕೊಳ್ಳುತ್ತದೆ.
ಇವುಗಳಿಗೆ Snap traps ಎಂದು
ಕರೆಯುತ್ತಾರೆ. ಈ ಸಸ್ಯಗಳ ಶಿಕಾರಿ
ಅಂಗದ ಕೆಳಗಿನ ಮುಳ್ಳುಗಳು
ಮೇಲ್ಭಾಗಕ್ಕೂ, ಮೇಲ್ಭಾಗದ
ಮುಳ್ಳುಗಳು ಕೆಳಭಾಗಕ್ಕೂ ಸರಿದು
ಮುಚ್ಚುವ ಪರಿ ಬೆರಗು
ಮೂಡಿಸುತ್ತದೆ.
ಇನ್ನು ಕೆಲವು ಕೀಟಭಕ್ಷಕ ಸಸ್ಯಗಳು
ಪ್ರಾಣಿಗಳ ಕರುಳಿನಾಕೃತಿ ಬಲೆ (bladder
traps) ಹೊಂದಿವೆ. ಇವುಗಳಲ್ಲಿ
ಹಸಿರು, ಗುಲಾಬಿ ವರ್ಣದವು ಇವೆ.
ಪಾರದರ್ಶಕವಾದ ಪುಟ್ಟ ಶಿಕಾರಿ
ಅಂಗ ಈ ಸಸ್ಯಕ್ಕಿದೆ. ಬೇಟೆಯ
ಹುಳು ಈ ಅಂಗದಲ್ಲಿ ಬಿದ್ದಾಗ
ಅದರಲ್ಲಿ ನೀರು ಮತ್ತು ಅಂಟಿನ
ದ್ರವದಲ್ಲಿ ಸಿಕ್ಕಿಕೊಳ್ಳುತ್ತದೆ.
ನಿರ್ವಾತದ ಪ್ರದೇಶದ
ಕಾರಣದಿಂದಲೂ ಹುಳುವಿಗೆ ಮೇಲೆ
ಬಂದು ಹಾರಿಹೋಗಲು
ಸಾಧ್ಯವಾಗುವುದಿಲ್ಲ. ಇನ್ನೂ
ಹಲವು ಕೀಟಭಕ್ಷಕ ಸಸ್ಯಗಳು
ಕೊಳವೆ ಆಕಾರದ ಜತೆಗೆ ಮುಂಚಾಚಿದ
ಭಾಗ ಹೊಂದಿರುತ್ತವೆ. ಇವುಗಳಿಗೆ
Lobster-pot traps ಎಂದು
ಕರೆಯುತ್ತಾರೆ. ಈ ಪ್ರಭೇದದಲ್ಲಿ
ಹಾವಿನ ಹೆಡೆಯಾಕೃತಿಯ ಸಸ್ಯ
'ಕೋಬ್ರಾ ಲಿಲ್ಲಿ' ವಿಶೇಷ ಆಕರ್ಷಣೆ
ಹೊಂದಿದೆ.
ಅನಾನಸ್ ಗಿಡದ ಅಂಗರಚನೆಯನ್ನು
ಹೋಲುವ Brocchinia reducta
ಎಂಬ ಸಸ್ಯದ ಎಲೆಗಳು ಮೇಣದ
ರೀತಿಯ ಪದರವನ್ನು ಹೊಂದಿದ್ದು,
ಕೊಳವೆಕರಂಡಕದ ಅಂಗರಚನೆಯಲ್ಲಿ
ಕಪ್ಪೆ, ಕೀಟಗಳನ್ನು ಆರಾಮಾಗಿ ಬಲಿ
ಪಡೆಯುತ್ತದೆ.
ಮಂಜಿನ ಬಲೆಯ ಹೂಗಳನ್ನು
ಹೊಂದಿರುವ ಕೀಟಭಕ್ಷಕ
ಸಸ್ಯಗಳಲ್ಲಿ ನೂರಾರು
ಪ್ರಭೇದಗಳಿರುವುದನ್ನು
ವಿಜ್ಞಾನಿಗಳು ಪತ್ತೆ ಹೆಚ್ಚಿದ್ದಾರೆ.
ಇವುಗಳಲ್ಲಿ ಅಧಿಕ ಪ್ರಭೇದಗಳು
ಆಸ್ಟ್ರೇಲಿಯಾದಲ್ಲಿವೆ. ಮಂಜಿನಹನಿಗಳ
(ಅಂಟು ದ್ರವ) ದ್ರೊಸೆರಾ
ಗ್ಲ್ಯಾನ್​ಡುಲಿಗೆರಾ (Drosera
glanduligera) ಅಂತೂ ಬೆಡಗಿನ
ಸೌಂದರ್ಯವತಿ. ಕೆಲವು ಸಸ್ಯಗಳು
ಕಪ್ಪೆಯಂತಹ ಚಿಕ್ಕಪ್ರಾಣಿಗಳನ್ನೂ,
ಕೀಟಗಳನ್ನೂ ಭಕ್ಷಿಸುತ್ತದೆ. ಅಂದರೆ
ಈ ಸಸ್ಯಗಳಿಗೆ 'ದ್ವಿ ಶಿಕಾರಿ' ಸಲೀಸು.
ದಕ್ಷಿಣ ಅಮೆರಿಕ ಮತ್ತು
ಕ್ಯಾಲಿಫೋರ್ನಿಯಾ, ಕೆನಡಾ,
ಆಸ್ಟ್ರೇಲಿಯಾಗಳಲ್ಲಿ
ಮಾಂಸಾಹಾರಿ ಸಸ್ಯಗಳ ಇವೆ.
ಭಾರತದ ಈಶಾನ್ಯ ರಾಜ್ಯಗಳಲ್ಲಿ
ಹಲವು ಪ್ರಭೇದದ ಈ ಸಸ್ಯಗಳಿವೆ.
ಕೈತೋಟ, ಹಿತ್ತಿಲು,
ತೋಟದಲ್ಲಿ ಇಷ್ಟವಾದ ಹೂವಿನ
ಅಥವಾ ಇತರ ಸಸ್ಯಗಳನ್ನು ಬೆಳೆಸಿದಂತೆ
ಇವುಗಳನ್ನು ಬೆಳಸುವುದು ಕಷ್ಟಕರ.
ಅವುಗಳಿಗೆ ಪೂರಕ, ಸಹಜ
ವಾತಾವರಣವೇ ಸರಿಯಾದುದು.
ಮಾಂಸಾಹಾರಿ ಸಸ್ಯಗಳ
ತವರುನೆಲೆಯಿಂದ ಕಿತ್ತು ಬೇಕಾದ
ಕಡೆಗೆ ನೆಡಲು ಉಪಕ್ರಮಿಸಿದರೆ, ಮೂಲ
ನೆಲೆಯಿಂದ ಅವುಗಳ ಅಸ್ತಿತ್ವವೇ
ನಾಶವಾಗಬಹುದು. ಆದರೂ
ಅಮೆರಿಕದ ನರ್ಸರಿಗಳಲ್ಲಿ ಕೆಲವು
ಮಾಂಸಾಹಾರಿ ಸಸ್ಯಗಳ
ಪ್ರಭೇದಗಳನ್ನು ಬೆಳೆಸಲಾಗುತ್ತಿದೆ. ಈ
ಕ್ರಿಯೆಯಲ್ಲಿ ಅವುಗಳ ಬೀಜ ಮತ್ತು
ಜೀವಕೋಶಗಳನ್ನು
ಪಡೆಯಲಾಗುತ್ತದೆ ಭಾರತದಲ್ಲೂ
ಅಂಥ ಕಾರ್ಯಗಳು ನಡೆಯುತ್ತಿವೆ.
ಮುತ್ತಿನ ಹನಿಗಳ ಮೋಸದ ಜಾಲ
ಕೆಲವು ಮಾಂಸಾಹಾರಿ ಸಸ್ಯಗಳು
ಬಹುಸುಂದರ ಹೂವಿನ ಭಾಗವನ್ನು
ಹೊಂದಿರುತ್ತವೆ. ಕೆಂಪು,
ಗುಲಾಬಿ, ಸಂಪಿಗೆ ಹಳದಿ ಬಣ್ಣದ
ಹೂವುಗಳಿವು. ಇವುಗಳ
ಸೌಂದರ್ಯವನ್ನು ಇನ್ನಷ್ಟು ವರ್ಧಿಸುವ
ಕಡುವರ್ಣಗಳ ಕೇಸರಗಳು,
ಕಳಶಪ್ರಾಯವೆನಿಸುವ ಪಕಳೆಗಳ
ಮೇಲಿರುವ ಮಂಜಿನ ಹನಿಗಳ
ಲಾವಣ್ಯ ಕಂಡುಬರುತ್ತದೆ. ಹೂವಿಗೆ
ಮತ್ತು ಮಂಜಿನ ಹನಿಗಳಿಗೆ ಮನಸೋತ
ಕೀಟ, ಪತಂಗ, ದುಂಬಿಗಳು
ಝುುಂಯ್ಗುಡುತ್ತ ಇವುಗಳ
ಮೇಲೆ ಕುಳಿತರೆ ಅವುಗಳ ಆಯುಷ್ಯ
ಅಲ್ಲಿಗೆ ಮುಗಿದಂತೆ. ಏಕೆಂದರೆ ಈ
ಹನಿಗಳು ಮಂಜಿನ ಹನಿಗಳಲ್ಲ, ಬದಲಾಗಿ
ಇಂಥ ಹೂವುಗಳಿಗೆ ಮಾತ್ರ
ವರಪ್ರಸಾದವಾಗಿರುವ ಅಂಟು ದ್ರವ.
ನೋಡಲು ಮಂಜಿನ ಮುತ್ತಿನ
ಹಾರದಂತಿರುವ ಮುತ್ತಿನ ಹನಿಗಳು
'ಮಾಯದ ಬಲೆಗಳು' ಎಂಬುದನ್ನು
ಅರಿಯದ ಕೀಟಗಳು ಹೂವಿನ ಮೇಲೆ
ಕುಳಿತೊಡನೆ ಅವುಗಳ ಕಾಲುಗಳು
ಹೂವಿಗೆ ಅಂಟಿಕೊಂಡು
ಬಿಡಿಸಿಕೊಳ್ಳಲಾಗದಂತೆ ಭದ್ರವಾಗಿ
ಬಿಡುತ್ತವೆ. ಆಗ ಪಕಳೆ ಅಥವಾ ಇತರ
ಅಂಗದ ಮೂಲಕ ಹೂವು
ಕೀಟವನ್ನು ಆಕ್ರಮಿಸಿ ಭಕ್ಷಿಸಿಬಿಡುತ್ತದೆ.
ಇನ್ನು ಕೆಲವು ಸಸ್ಯಗಳ ದಪ್ಪನೆಯ
ಎಲೆಗಳ ಮೇಲ್ಭಾಗ
ಮೃದುವಾಗಿದ್ದು ಹಾತೆ,
ನೊಣಗಳು ಇವುಗಳ ಮೇಲೆ ಕುಳಿತರೆ
ಸಾಕು. ಆ ಪುಟ್ಟ ಜೀವಿಗಳ
ಕಾಲ್ಗಳು ಎಲೆಗೆ ಅಂಟಿಕೊಂಡು
ಪ್ರಾಣಹಾನಿ ನಿಶ್ಚಿತ.
ಯಾಕೆ ಇವು ಮಾಂಸಾಹಾರಿಗಳು?
ಪರಿಸರದಲ್ಲಿ ತಮ್ಮ ಬೆಳವಣಿಗೆಗೆ
ಪೂರಕವಾದ ಪೌಷ್ಟಿಕತೆ ಕೊರತೆ
ತುಂಬಿಕೊಳ್ಳಲು ಈ ರೀತಿ
ಮಾಂಸಾಹಾರದ ಶಿಕಾರಿಯಲ್ಲಿ
ತೊಡಗುತ್ತವೆ. ಬಲಿಕೀಟಗಳಿಂದ
ಪೌಷ್ಟಿಕ ಸತ್ವಗಳನ್ನು ತಮಗೆ
ಒದಗಿಸಿಕೊಳ್ಳುತ್ತವೆ. ಈ ಸಸ್ಯಗಳು
ಇತರ ಸಾಮಾನ್ಯ ಸಸ್ಯಗಳಂತೆ
ಬೇರುಗಳ ಮೂಲಕ ಆಹಾರ,
ನೀರು ಪಡೆಯುತ್ತವೆ. ಕೆಲವು
ಪ್ರಭೇದದ ಮಾಂಸಾಹಾರಿ
ಸಸ್ಯಗಳು ಜೌಗು/ಸವಳು ನೆಲದಲ್ಲಿ
ಕಂಡುಬರುತ್ತವೆ. ಅಲ್ಲಿನ ಮಣ್ಣಿನಲ್ಲಿ
ಪೌಷ್ಟಿಕ ಸತ್ವದ ಕೊರತೆ ಇರುತ್ತದೆ.
ಇನ್ನು ಕೆಲವು ಸಸ್ಯಗಳು ದಟ್ಟ
ಕಾಡಿನಲ್ಲಿದ್ದು, ಪೌಷ್ಟಿಕತೆ ಮತ್ತು
ಸಾಕಷ್ಟು
ಬೆಳಕು ದೊರೆಯುವುದಿಲ್ಲ.
ಸಾಮಾನ್ಯ ಸಸ್ಯಗಳು
ಸಾರಜನಕವನ್ನು ತಮ್ಮ
ಬೇರುಗಳು ಮೂಲಕ ಮಣ್ಣಿನಿಂದ
ಪಡೆಯುತ್ತವೆ. ಆದರೆ, ಮಾಂಸಾಹಾರಿ
ಸಸ್ಯಗಳು ಬಲಿಕೀಟದಿಂದ
ಸಾರಜನಕವನ್ನು
ದೊರಕಿಸಿಕೊಳ್ಳುತ್ತವೆ. ಒಂದೇ
ಜೌಗು ಪ್ರದೇಶದಲ್ಲಿ 13 ಪ್ರಭೇದದ
ಮಾಂಸಾಹಾರಿ
ಸಸ್ಯಗಳಿರುವುದನ್ನು ವಿಜ್ಞಾನಿಗಳು
ಪತ್ತೆಹಚ್ಚಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023