"ಬಾನಾಡಿ"ಗೆ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿ:*

ನಾಗರಾಜ್ ಕೋಟೆ ಅವರ ಚೊಚ್ಚಲ
ನಿರ್ದೇಶನದ ಮಕ್ಕಳ ಚಿತ್ರ "ಬಾನಾಡಿ'ಗೆ
ಅತ್ಯುತ್ತಮ ಭಾರತೀಯ ಚಿತ್ರ
ಪ್ರಶಸ್ತಿ ಲಭಿಸಿದೆ. ನವೆಂಬರ್ 22 ರಿಂದ 26
ರವರೆಗೆ ಮಂಗಳೂರಿನಲ್ಲಿ ನಡೆದ
ಹತ್ತನೇ ಅಂತಾರಾಷ್ಟ್ರೀಯ
ಮಕ್ಕಳ ಚಿತ್ರೋತ್ಸವದಲ್ಲಿ "ಬಾನಾಡಿ'
ಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ.
ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ
ಆಯೋಜಿಸಿದ್ದ ಈ ಚಿತ್ರೋತ್ಸವದಲ್ಲಿ
ಅಂತಾರಾಷ್ಟ್ರೀಯ ಮತ್ತು
ರಾಷ್ಟ್ರೀಯ ಎಂಬ ಎರಡು
ವಿಭಾಗಗಳಲ್ಲಿ ಸ್ಪರ್ಧೆ ಏರ್ಪಟ್ಟಿತ್ತು.
ಭಾರತೀಯ ಚಿತ್ರ ವಿಭಾಗದಲ್ಲಿ
"ಬಾನಾಡಿ' ಚಿತ್ರ ಸೇರಿದಂತೆ ಒಟ್ಟು
ಒಂಭತ್ತು ಕನ್ನಡ ಚಿತ್ರಗಳು
ಸ್ಫರ್ಧೆಯಲ್ಲಿದ್ದವು. ಇವುಗಳೊಂದಿಗೆ
ಹಿಂದಿಯ ಎರಡು, ತಮಿಳು ಭಾಷೆಯ
ಎರಡು ಹಾಗು ಒಂದು
ಮಲಯಾಳಂ ಭಾಷೆಯ ಚಿತ್ರಗಳು ಸಹ
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಈ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿದ
"ಬಾನಾಡಿ' ಚಿತ್ರ ಅಲ್ಲಿನ ಜ್ಯೂರಿಗಳ
ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ
ಪಾತ್ರವಾಗಿ, ಭಾರತೀಯ
ಅತ್ಯುತ್ತಮ ಚಿತ್ರ
ಪಡೆದುಕೊಳ್ಳುವಲ್ಲಿ
ಯಶಸ್ವಿಯಾಗಿದೆ. ಚಿತ್ರ ತಂಡಕ್ಕೆ ಪ್ರಶಸ್ತಿ
ಹಾಗೂ ಒಂದು ನೆನಪಿನ
ಕಾಣಿಕೆಯನ್ನು ನೀಡಲಾಗಿದೆ.
ತಮ್ಮ ಮೊದಲ ಚಿತ್ರಕ್ಕೆ ಮೊದಲ
ಪ್ರಶಸ್ತಿ ಸಿಕ್ಕ ಕುರಿತು ಖುಷಿ
ಹಂಚಿಕೊಂಡ ನಿರ್ದೇಶಕ ನಾಗರಾಜ್
ಕೋಟೆ, "ನಾನು ನಿಜವಾಗಲೂ ಈ
ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ.
"ಬಾನಾಡಿ' ನನ್ನ ಮೊದಲ ಚಿತ್ರ.
ಒಳ್ಳೆಯ ಕಥಾಹಂದರ ಇರುವ
ಚಿತ್ರವಾಗಿದ್ದರಿಂದ ಜನರಿಗೆ
ಇಷ್ಟವಾಗುತ್ತೆ ಎಂಬ ನಂಬಿಕೆ
ಇತ್ತಷ್ಟೇ. ಆದರೆ, ಪ್ರಶಸ್ತಿ ಪಡೆಯುತ್ತೆ
ಎಂದು ನಿರೀಕ್ಷೆ ಮಾಡಿರಲಿಲ್ಲ.
ಪ್ರಶಸ್ತಿ ಬಂದಿರುವುದು ನನ್ನ
ಜವಾಬ್ದಾರಿಯನ್ನು ಮತ್ತಷ್ಟು
ಹೆಚ್ಚಿಸಿದೆ. ಇಂತಹ ಕಥೆಯನ್ನು
ಹೊರಗಿನವರೂ ಇಷ್ಟಪಡುತ್ತಾರಲ್ಲ
ಎಂದು ಹೆಮ್ಮೆ ಆಗುತ್ತಿದೆ. ಮುಂದಿನ
ದಿನಗಳಲ್ಲಿ ಇನ್ನೂ ಒಳ್ಳೆಯ
ಸಿನಿಮಾಗಳನ್ನು ಕೊಡಬೇಕು
ಎಂಬ ಉತ್ಸಾಹ ಬಂದಿದೆ. ಈ
ಚಿತ್ರವನ್ನು ನಿರ್ಮಿಸಿ, ನನಗೊಂದು
ಒಳ್ಳೆಯ ಅವಕಾಶ ಕೊಟ್ಟ ನಿರ್ಮಾಪಕ
ಎಂ.ನಾಗರಾಜ್ ಅವರಿಗೆ ನಾನು
ಧನ್ಯವಾದ ಅರ್ಪಿಸುತ್ತೇನೆ.
ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ
ಕಲಾವಿದರಿಗೂ ಈ ಗೌರವ ಸಲ್ಲುತ್ತದೆ'
ಎನ್ನುತ್ತಾರೆ ನಾಗರಾಜ್ಕೋಟೆ.
ಇದೇ ಖುಷಿಯಲ್ಲಿ ನಾಗರಾಜ್
ಕೋಟೆ ಅವರು ಕಮರ್ಷಿಯಲ್
ಅಂಶಗಳಿರುವ ಒಂದು ಪ್ರೇಮಕಥೆ
ಇರುವ ಚಿತ್ರವನ್ನು ನಿರ್ದೇಶಿಸಲು
ರೆಡಿಯಾಗಿದ್ದಾರೆ. ಈಗಾಗಲೇ ಕಥೆ,
ಚಿತ್ರಕಥೆ ರೆಡಿಯಾಗಿದ್ದು,
ಲಂಡನ್ನಲ್ಲಿರುವ ಭಾರತೀಯ
ಮೂಲದ ಗೆಳೆಯರೊಬ್ಬರು
ನಿರ್ಮಾಣ ಮಾಡುವ ಕುರಿತು
ಮಾತುಕತೆ ನಡೆಯುತ್ತಿದೆ. ಎಲ್ಲವೂ
ಅಂದುಕೊಂಡಂತೆ ನಡೆದರೆ 2016ರ
ಹೊತ್ತಿಗೆ ಹೊಸ ಚಿತ್ರ ಸೆಟ್ಟೇರಲಿದೆ
ಎಂದು ವಿವರ ಕೊಡುತ್ತಾರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023