e-ಪುಸ್ತಕ:-download :-


10 Dec, 2015
ಕನ್ನಡ ಪುಸ್ತಕಗಳನ್ನು ಪಿಡಿಎಫ್ ಆವೃತ್ತಿಯಲ್ಲಿ
ಹಂಚಿಕೊಳ್ಳಲು ಅನೇಕರು
ಅನೇಕ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ.
ಓಸ್ಮಾನಿಯ ವಿಶ್ವವಿದ್ಯಾಲಯ ಮತ್ತು
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ
ಇರುವ ಪುಸ್ತಕಗಳನ್ನು ಡೌನ್ ಲೋಡ್
ಮಾಡಿಕೊಳ್ಳುವುದಕ್ಕೆ ಇರುವ
ಕಷ್ಟವನ್ನು ಗಮನಿಸಿ ಕೆಲವರು ಅವನ್ನು
ತಮ್ಮದೇ ಆದ ತಾಣಗಳಲ್ಲಿ
ಸಂಗ್ರಹಿಸಿಟ್ಟುಕೊಂಡು
ಮರು ಹಂಚಿಕೆ ಮಾಡುತ್ತಾರೆ.
ಹಾಗೆಯೇ ಅಲ್ಲಲ್ಲಿ ಇರುವ ಕನ್ನಡ
ಪುಸ್ತಕಗಳನ್ನು ದೊಡ್ಡ
ಫೈಲುಗಳನ್ನು ಹಂಚಿಕೊಳ್ಳಲು
ಸಾಧ್ಯವಿರುವ ತಾಣಗಳಲ್ಲಿ ಹಾಕಿ
ಹಂಚಿಕೊಳ್ಳುವ ವ್ಯವಸ್ಥೆ
ಮಾಡಿರುವವರೂ ಇದ್ದಾರೆ. ಅಮೆರಿಕದ
ಅರಿಜೊನ ಮಿತ್ರರ ಬ್ಲಾಗ್
ಒಂದು ಇಂಥದ್ದೇ ಕೆಲಸ ಮಾಡುತ್ತಿದೆ.
ಸಾಹಿತ್ಯ ಮತ್ತು ಸಂಸ್ಕೃತಿಯ ಆಫ್ ಲೈನ್
ಚರ್ಚೆಗಳನ್ನು ಏರ್ಪಡಿಸುವ ಈ ಗುಂಪು ತನ್ನ
ಬ್ಲಾಗ್ನಲ್ಲಿ ಕನ್ನಡದ ಕೆಲವು ಮಹತ್ವದ
ಕೃತಿಗಳನ್ನು
ಹಂಚಿಕೊಳ್ಳುತ್ತಿದೆ.
ತ್ರಿವೇಣಿ, ಎಂ.ಕೆ.ಇಂದಿರಾ ಮತ್ತು
ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ
ಕೃತಿಗಳು ಇಲ್ಲಿ ಲಭ್ಯವಿವೆ. ಈ ಪುಸ್ತಕಗಳ
ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದ
ವ್ಯವಹಾರಗಳನ್ನು ಈ ತಾಣ ಹೇಗೆ
ನಿರ್ವಹಿಸುತ್ತದೆ ಎಂಬುದು ಸ್ಪಷ್ಟವಿಲ್ಲ.
ಅಂತರ್ಜಾಲದಲ್ಲಿ ಲಭ್ಯವಿರುವ
ಪುಸ್ತಕಗಳ
ಪಟ್ಟಿಯೊಂದನ್ನು ಈ
ಬ್ಲಾಗ್ ಪ್ರಕಟಿಸಿದೆ.
2012ರಿಂದ ಇಲ್ಲಿ ಹೊಸ
ಪೋಸ್ಟ್ಗಳು ಬಂದಿಲ್ಲ. ಇಲ್ಲಿರುವ
ಪುಸ್ತಕಗಳ ಪಟ್ಟಿಯಲ್ಲಿ ಸುದರ್ಶನ ದೇಸಾಯಿ,
ಎಚ್.ಜಿ.ರಾಧಾದೇವಿ, ಸಾಯಿಸುತೆ ಮುಂತಾದವರ
ಜನಪ್ರಿಯ ಕಾದಂಬರಿಗಳೂ ಲಭ್ಯವಿವೆ.
ಇವುಗಳನ್ನು ಡೌನ್ ಲೋಡ್
ಮಾಡಿಕೊಳ್ಳಲು ಇಲ್ಲಿರುವ
ಲಿಂಕ್ ಬಳಸಬಹುದು: http://goo.gl/vPX4Bc

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023