Drop


Thursday, January 21, 2016

ಕೊಹ್ಲಿ ಮತ್ತೊಂದು ದಾಖಲೆ.. ವೇಗವಾಗಿ 25 ಶತಕ ಸಿಡಿಸಿದ ಡೆಲ್ಲಿ ಡ್ಯಾಶರ್:*

:
ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರನೇಯ ಏಕದಿನ
ಪಂದ್ಯದ ವೇಳೆ ವೇಗವಾಗಿ 7 ಸಾವಿರ ಪೂರೈಸಿದ ದಾಖಲೆ
ನಿರ್ಮಿಸಿದ್ದ ಬೆನ್ನಲ್ಲೇ ಟೀಂ ಇಂಡಿಯಾ
ಉಪನಾಯಕ ವಿರಾಟ್ ಕೊಹ್ಲಿ ಇದೀಗ
ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ
ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ಅತಿ ವೇಗವಾಗಿ
25 ಶತಕ ಸಿಡಿಸಿದ ಪ್ರಥಮ ಆಟಗಾರ
ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 170
ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್
ಕೊಹ್ಲಿ 162ನೇ ಇನ್ನಿಂಗ್ಸ್ನಲ್ಲಿ 25 ಶತಕ
ಸಿಡಿಸಿ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ವಿರಾಟ್ ಕೊಹ್ಲಿಯಿಂದ ಏಕದಿನ ಕ್ರಿಕೆಟ್ನಲ್ಲಿ
ಮತ್ತೊಂದು ದಾಖಲೆ
ನಂತರದ ಸ್ಥಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್
ತೆಂಡೂಲ್ಕರ್ 234 ಇನ್ನಿಂಗ್ಸ್ನಲ್ಲಿ 25 ಶತಕ ಸಿಡಿಸಿದ್ರೆ,
ಆಸ್ಟ್ರೇಲಿಯಾದ ಪಾಂಟಿಂಗ್ 279 ಇನ್ನಿಂಗ್ಸ್,
ಜಯಸೂರ್ಯ 373 ಇನ್ನಿಂಗ್ಸ್ ಹಾಗೂ ಕುಮಾರ್ ಸಂಗಕ್ಕಾರ್
379 ಇನ್ನಿಂಗ್ಸ್ನಲ್ಲಿ 25 ಶತಕ ದಾಖಲಿಸಿದ್ದರು. ಆದರೆ
ವಿರಾಟ್ ಕೊಹ್ಲಿ ಹೊರತುಪಡಿಸಿ
ಉಳಿದವರೆಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ
ವಿದಾಯ ಹೇಳಿದ್ದಾರೆ.