Drop


Sunday, January 10, 2016

ತ್ರಿಪುರಾ ಸಿ.ಎಂ ಗೆ ‘ಬಸವ ಕೃಷಿ ಪ್ರಶಸ್ತಿ’


10 Jan, 2016
ಪ್ರಜಾವಾಣಿ ವಾರ್ತೆ
ಬಾಗಲಕೋಟೆ: ಕೂಡಲಸಂಗಮದ
ಲಿಂಗಾಯತ
ಪಂಚಮಸಾಲಿ ಜಗದ್ಗುರು
ಪೀಠದಿಂದ
ನೀಡಲಾಗುವ 'ಬಸವ ಕೃಷಿ
ಪ್ರಶಸ್ತಿ'ಗೆ ಈ ಬಾರಿ ತ್ರಿಪುರಾ
ಮುಖ್ಯಮಂತ್ರಿ ಮಾಣಿಕ್
ಸರ್ಕಾರ್ ಅವರನ್ನು ಆಯ್ಕೆ
ಮಾಡಲಾಗಿದೆ.
ಪ್ರಶಸ್ತಿಯು ₹ 1 ಲಕ್ಷ ನಗದು,
ತಾಮ್ರ ಪತ್ರದ ಸ್ಮರಣಿಕೆಯನ್ನು
ಒಳಗೊಂಡಿದೆ.
ಮಾರ್ಚ್ನಲ್ಲಿ ಪ್ರಶಸ್ತಿ ಪ್ರದಾನ
ಮಾಡಲಾಗುವುದು ಎಂದು
ಬಸವಜಯ
ಮೃತ್ಯುಂಜಯ
ಸ್ವಾಮೀಜಿ ಶನಿವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಣಿಕ್ ಅವರು ಭ್ರಷ್ಟಾಚಾರ ರಹಿತ,
ಪ್ರಾಮಾಣಿಕ
ಮುಖ್ಯಮಂತ್ರಿ
ಎಂದು ಹೆಸರಾಗಿದ್ದಾರೆ.
ಕೃಷಿಕರು, ಕಾರ್ಮಿಕರು ಹಾಗೂ ಶ್ರಮಿಕರ
ಪರವಾಗಿ ಕೆಲಸ ಮಾಡುತ್ತಿರುವ
ಅವರನ್ನು ಪ್ರಶಸ್ತಿಗೆ ಆಯ್ಕೆ
ಮಾಡಲಾಗಿದೆ ಎಂದು ಅವರು
ಹೇಳಿದರು.