Drop


Monday, February 22, 2016

ಸುಮಾರು 163 ವರ್ಷಗಳ ಸುದಿರ್ಘ ಇತಿಹಾಸವಿರುವ ಭಾರತೀಯ ರೈಲ್ವೆ ಅನೇಕ ಆಸಕ್ತಿದಾಯಕ ವಿಷಯಗಳು:

ಭಾರತೀಯ ರೈಲ್ವೆ ಇಂದು ಅನೇಕ ಹೊಸ
ಆಯಾಮ ಒಳಗೊಂಡು
ಕಾರ್ಯನಿರ್ವಹಿಸುತ್ತಿದೆ. 163 ವರ್ಷಗಳ
ಸುದೀರ್ಘ ಇತಿಹಾಸ ತಿರುವಿ ಹಾಕಿದಾಗ ನಮಗೆ
ಅನೇಕ ಸಂಗತಿಗಳು ಕಾಣಸಿಗುತ್ತವೆ.
1. 1844 ರಲ್ಲಿ ಭಾರತೀಯ ರೈಲ್ವೆಗಳ
ಅಭಿವೃದ್ಧಿ ಕಡೆಗೆ ಮೊದಲ ಪ್ರಯತ್ನ ಗವರ್ನರ್
ಜನರಲ್ ಲಾರ್ಡ್ ಹಾರ್ಡಿಂಗ್ ಮಾಡಿದ್ದಾರೆ.
2. 1850 ರಲ್ಲಿ ಗ್ರೇಟ್ ಇಂಡಿಯನ್
ರೈಲ್ವೆ ಹಾಗೂ ಈಸ್ಟ್ ಇಂಡಿಯನ್ ರೈಲ್ವೆಯ
ಎರಡು ರೈಲ್ವೆ ಕಂಪನಿಗಳು ಹೆಸರಿನಲ್ಲಿ
ರಚನೆಯಾಯಿತು. ಒಂದು ಮುಂಬೈ ಹಾಗೂ
ಕೋಲ್ಕತಾದಲ್ಲಿ ಸ್ಥಾಪನೆ
3. ಮುಂಬೈ ಮತ್ತು ಥಾಣೆ, ಏಪ್ರಿಲ್ 16, 1853
ರ ನಡುವೆ ಮೊದಲ ಭಾರತದಲ್ಲಿ ಉಗಿ ಎಂಜಿನ್
ರೈಲು ಸಂಚಾರ ಯಶಸ್ವಿ
4. ಬಾಂಬೆ ಸರ್ಕಾರದ ಮುಖ್ಯ
ಇಂಜಿನಿಯರ್ ಜಾರ್ಜ್ ಕ್ಲಾರ್ಕ್ ಕಲ್ಪನೆ ಕೂಸಾಗಿದ್ದ
ಮೊದಲ ರೈಲು 1853ರಲ್ಲಿ
ಮುಂಬೈ-ಠಾಣೆ ನಡುವೆ ಮೊದಲ
ರೈಲು ಸಂಚಾರ
5. ಮೊದಲ ರೈಲು ಸಂಚಾರದಲ್ಲಿ
400 ಪ್ರಯಾಣಿಕರ ಪ್ರಯಾಣ
6. ದಕ್ಷಿಣದಲ್ಲಿ, ರೈಲು ಜುಲೈ 1856 ಮದ್ರಾಸ್ ರೈಲ್ವೆ
ಕಂಪನಿ ಆರಂಭಿಸಿದರು.
7. ಭಾರತದಲ್ಲಿ ಪ್ರಥಮ ರೈಲು 1853ರಲ್ಲಿ
ಆರಂಭಗೊಂಡರೇ,
ಚೀನಾದಲ್ಲಿ 23 ವರ್ಷಗಳ ನಂತರ, 1876
ರಲ್ಲಿ ಆರಂಭ
8. ರೈಲು ಸೇವೆ 1853 ರಲ್ಲಿ ಆರಂಭವಾದರೂ
ರೈಲಿನಲ್ಲಿ ಶೌಚಾಲಯ 50 ವರ್ಷಗಳ ನಂತರ
1909 ರಲ್ಲಿ ಅಳವಡಿಸಲಾಯಿತು
9. ಇಂದು, 23 ದಶಲಕ್ಷಕ್ಕಿಂತಲೂ ಹೆಚ್ಚು
ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. 64 ಸಾವಿರ 600
ಕಿಲೋಮೀಟರ್ ದೂರದ ರೈಲ್ವೆ ನೆಟ್ವರ್ಕ್ ಇದೆ.
10. ಭಾರತೀಯ ರೈಲ್ವೆ ಏಷ್ಯಾದಲ್ಲಿ ವಿಶ್ವದ
ನಾಲ್ಕನೇ ಅತಿ ದೊಡ್ಡ ರೈಲು ನೆಟ್ವರ್ಕ್
11. 1951 ರಲ್ಲಿ ಭಾರತೀಯ ರೈಲ್ವೆ
ರಾಷ್ಟ್ರೀಕರಣಗೊಳಿಸಲಾಯಿತು.
12. 1969 ರಲ್ಲಿ ದಹಲಿ ಮೊದಲ ರಾಜಧಾನಿ
ಎಕ್ಸ್ಪ್ರೆಸ್ ಹೌರಾ ರೈಲು
13. 1974 ರಲ್ಲಿ ಭಾರತೀಯ ರೈಲ್ವೆ 20
ದಿನಗಳ ಅತಿದೊಡ್ಡ ಮುಷ್ಕರ
ನಡೆಸಿದ್ದರು.
14. ಫೆಬ್ರವರಿ 01.1977ರಲ್ಲಿ ದೆಹಲಿಯಲ್ಲಿ
ರೈಲ್ವೆ ಮ್ಯೂಸಿಯಂ ಹಾಗೂ ಜೂನ್ 2, 1979
ಮೈಸೂರಿನಲ್ಲಿ  ರೈಲು ಮ್ಯೂಸಿಯಂ
ಸ್ಥಾಪಿಸಲಾಯಿತು.
15. 1985 ಗಣಕೀಕೃತ ಟಿಕೆಟ್ ಮೀಸಲಾತಿ
16. 2005ರಲ್ಲಿ ರೈಲ್ವೆ ಇಲಾಖೆಯಲ್ಲಿ ಇ-
ಟಿಕೆಟಿಂಗ್ ಆರಂಭ
17. ಈಗ ಇ-ಟಿಕೆಟಿಂಗ್ ಮೂಲಕ ಪ್ರತಿ ನಿಮಿಷ
15 ಸಾವಿರ ಟಿಕೆಟ್ ಮುಗಂಡ ಕಾಯ್ದಿರಿಸುವಿಕೆ
18. ಭಾರತೀಯ ರೈಲ್ವೆ 160 ವರ್ಷಗಳ ಸೇವೆ
ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗೂಗಲ್ ತನ್ನ
ಲೋಗೋ ಬದಲಾಯಿಸಿತು.
19. ಭಾರತದ ಅತ್ಯಂತ ದೀರ್ಘ ರೈಲು
ಸೇತುವೆ ನೆಹರು ಸೇತುವೆ, ಇದರ ಉದ್ದ 100,44
ಅಡಿ ಉದ್ದ
20. ಭಾರತದ ಅತಿವೇಗದ ರೈಲು ಶತಾಬ್ದಿ ಎಕ್ಸ್ಪ್ರೆಸ್
21. ಭಾರತದ ಮೊದಲ ಮೆಟ್ರೋ ಕೋಲ್ಕತ್ತಾದಲ್ಲಿ
ಆರಂಭ
22. ಭಾರತದ ಪ್ರಪ್ರಥಮ ರೈಲ್ವೆ ಬಜೆಟ್ ಜಾನ್
ಮಥಾಯ್ ಅವರಿಂದ ಮಂಡನೆ
23. ಭಾರತೀಯ ರೈಲ್ವೆ 17 ವಲಯಗಳು 69
ವಿಭಾಗಗಳಾಗಿ ವಿಂಗಡಿಸಲಾಗಿದೆ.
24. ಪ್ರತಿ ಗಂಟೆಗೆ 160 ಕಿ 99. ಅತಿ
ವೇಗದ ರೈಲು ದೆಹಲಿ-ಆಗ್ರಾ ನಡುವೆ ಸಂಚಾರ
25. ಭಾರತೀಯ ರೈಲ್ವೆ ಇಲಾಖೆಯ ಎರಡು
ಸ್ಥಳಗಳು ಯುನೆಸ್ಕೊ ವಿಶ್ವ
ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ
ಪಡೆದಿವೆ.
26. ಪ್ರತಿದಿನ 7.421 ಸರಕು-ಸಾಗಾಣೆ ರೈಲುಗಳ
ಸಂಚಾರ ರೈಲ್ವೆ
27. 12,617 ಪ್ರಯಾಣಿಕರ ರೈಲುಗಳ ಸಂಚಾರ,
ಪ್ರತಿನಿತ್ಯ 2.3 ಕೋಟಿಗೂ ಹೆಚ್ಚು ಪ್ರಯಾಣಿಕರ
ಸಂಚಾರ