Follow by Email

Sunday, March 27, 2016

ಗುಜರಾತ್ನಲ್ಲಿ ದೇಶದ ಮೊದಲ ಸಾವಯವ ಕೃಷಿ ವಿವಿ.:

ವಡೋದರಾ: ಕೃಷಿಕರನ್ನು ಅಸಂಪ್ರದಾಯಿಕ ಕೃಷಿಯೆಡೆಗೆ
ತೆರಳುವಂತೆ ಪ್ರೋತ್ಸಾಹಿಸಲು ಹಾಗೂ ರೈತರ ಸಮಸ್ಯೆ
ನಿವಾರಣೆಗೆ ದೇಶದಲ್ಲಿಯೇ ಮೊದಲು
ಎನ್ನಬಹುದಾದ ಸಾವಯವ ಕೃಷಿ ವಿಶ್ವವಿದ್ಯಾಲಯ
ಗುಜರಾತಿನಲ್ಲಿ ಸ್ಥಾಪನೆಯಾಗುತ್ತಿದೆ.
ಇಲ್ಲಿನ ಹೊರವಲಯದಲ್ಲಿ
ಹಮ್ಮಿಕೊಂಡಿದ್ದ ರೈತ
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ
ಮುಖ್ಯಮಂತ್ರಿ ಆನಂದಿ ಬೇನ್ ಪಟೇಲ್,
'ರಾಸಾಯನಿಕಯುಕ್ತ ಗೊಬ್ಬರ,
ಕ್ರಿಮಿನಾಶಕ ಬಳಸಿ ಕೃಷಿ ಮಾಡುತ್ತಿರುವ ಅನ್ನದಾತರು
ಒಂದಲ್ಲ ಒಂದು ಸಮಸ್ಯೆ
ಎದುರಿಸುತ್ತಿದ್ದಾರೆ. ಇದನ್ನು ತಡೆಯಲು ಸಾವಯವ ಕೃಷಿ
ವಿವಿ ಸ್ಥಾಪಿಸಲಾಗುವುದು,' ಎಂದು ಹೇಳಿದ್ದಾರೆ.
ಸಾವಯವ ಕೃಷಿ ವಿವಿ ಸ್ಥಾಪನೆಗಾಗಿ 2016-17ನೇ ಸಾಲಿನ
ಬಜೆಟ್ನಲ್ಲಿ 10 ಕೋಟಿ ರೂ. ಅನುದಾನ
ನೀಡಲಾಗಿದ್ದು, ವಿವಿ ಸ್ಥಾಪನೆಗೆ ಇನ್ನು ಜಾಗ ಗುರುತು
ಮಾಡಿಲ್ಲ ಎಂದು ಗುಜರಾತ್ ಕೃಷಿ ಸಚಿವ ಬಾಬುಭಾಯಿ
ಬೋಖಿರಾ ತಿಳಿಸಿದ್ದಾರೆ.
ರಾಜ್ಯದ ರಾಜಧಾನಿ ಗಾಂಧಿನಗರದಲ್ಲಿ ಕಾಮಧೇನು
ಕೃಷಿ ವಿವಿ ಹತ್ತಿರವೇ ಈ ವಿವಿಗೂ ಸ್ಥಳ ಗುರುತಿಸಬಹುದು
ಎನ್ನಲಾಗುತ್ತಿದೆ.