Monday, May 23, 2016

ಸ್ನೂಕರ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪಂಕಜ್


ಮುಂಬೈ, ಮೇ ೨೩- ಭಾರತದ ಖ್ಯಾತ
ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪಟು ಪಂಕಜ್
ಆಡ್ವಾಣಿ ಅಬುಧಾಬಿಯಲ್ಲಿ ನಡೆದ ಏಷ್ಯನ್ 6-
ರೆಡ್ ಸ್ನೂಕರ್ ಪ್ರಶಸ್ತಿಯನ್ನು
ಗೆದ್ದುಕೊಳ್ಳುವ ಮೂಲಕ ಇತಿಹಾಸ
ನಿರ್ಮಿಸಿದ್ದಾರೆ.
ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ
ಮೂಲಕ ಒಂದೇ ಋತುವಿನಲ್ಲಿ ವಿಶ್ವ ಮತ್ತು
ಏಷ್ಯಾ ಖಂಡ ಪ್ರಶಸ್ತಿಗೆ ಭಾಜನರಾದ ವಿಶ್ವದ
ಮೊದಲ ಆಟಗಾರ
ಎನಿಸಿಕೊಂಡಿದ್ದಾರೆ. ಕಳೆದ ರಾತ್ರಿ
ನಡೆದ ಕಾದಾಟದಲ್ಲಿ ಅಗ್ರ ಸೀಡ್ ಆಟಗಾರ
ಮಲೇಷ್ಯಾದ ಕೀನ್ ಹಾಹ್ಹ್ ಅವರನ್ನು
7-5 ಅಂತರದಲ್ಲಿ ಮಣಿಸಿ ಈ ಸಾಧನೆ
ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಕಜ್ ಆಡ್ವಾಣಿ,
'ಇದು ನನ್ನ ಮೊದಲ ಏಷ್ಯನ್
ಸ್ನೂಕರ್ ಚಾಂಪಿಯನ್ ಶಿಪ್. ಹೀಗಾಗಿ
ಸಹಜವಾಗಿಯೇ ಖುಷಿ ಕೊಟ್ಟಿದೆ.
ಕಳೆದ ತಿಂಗಳಲ್ಲಿ 15-ರೆಡ್ ಏಷ್ಯನ್ ಸ್ನೂಕರ್
ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಂದೇ
ವರ್ಷದಲ್ಲಿ 6-ರೆಡ್ ವಿಶ್ವ ಮತ್ತು ಏಷ್ಯನ್
ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರುವುದು ಸಂತಸ
ತಂದಿದೆ ಎಂದಿದ್ದಾರೆ. ಪಂಕಜ್
ಆಡ್ವಾಣಿ ಟೀಮ್ ಈವೆಂಟ್ನಲ್ಲಿ
ಆದಿತ್ಯಾ ಮೆಹ್ತಾ, ಮನನ್ ಚಂದ್ರ ಮತ್ತು
ಕಮಲ್ ಚಾವ್ಲ ಜತೆಗೂಡಿ ಆಡಲಿದ್ದಾರೆ.