* 1ರಿಂದ 10ನೇ ತರಗತಿ ವರೆಗಿನ ಪಠ್ಯ
ಲಭ್ಯ
* ಪಠ್ಯ ಪುಸ್ತಕ ವಿತರಣೆ ವಿಳಂಬ ಆದರೂ
ಪಾಠಕ್ಕಿಲ್ಲ ತೊಂದರೆ
* ವೆಬ್ಸೈಟ್ನಿಂದ ಪಠ್ಯ ಡೌನ್ಲೋಡ್
ಮಾಡಿಕೊಳ್ಳಬಹುದು
* ಪ್ರೊಜೆಕ್ಟರ್ ಬಳಸಿ ಶಿಕ್ಷಕರು ಪಾಠ
ಮಾಡಲು ಅವಕಾಶ
ಬಿ.ಎಸ್.ಜಯಪ್ರಕಾಶ್ ನಾರಾಯಣ ಬೆಂಗಳೂರು
ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ
ಪುಸ್ತಕ ಬಂದಿಲ್ಲ ಎಂಬ
ಗೊಣಗಾಟ ಇನ್ನು ಮಕ್ಕಳಿಗಿಲ್ಲ.
ಯಾಕೆಂದರೆ ಶಾಲೆಗಳ
ಅರಂಭದಿಂದಲೇ 1 ರಿಂದ 10 ನೇ
ತರಗತಿವರೆಗಿನ ಪಠ್ಯ ಪುಸ್ತಕಗಳ 'ಕಣಜ'
ಕಂಪ್ಯೂಟರ್ ಪರದೆ ಮೇಲೆಯೇ ಮೂಡಲಿದೆ.
ಹೌದು!. ಟೆಂಡರ್, ಮುದ್ರಣ ವಿಳಂಬ
ಮುಂತಾದ ಸಬೂಬುಗಳಿಂದ ಪ್ರತೀ
ವರ್ಷ ವಿದ್ಯಾರ್ಥಿಗಳಿಗೆ
ತೊಂದರೆ ತಪ್ಪಿಸಲು ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ಸರಕಾರ ಪೂರೈಸುವ ಪಠ್ಯ ಪುಸ್ತಕಗಳನ್ನು ಇಲಾಖೆ
ನಡೆಸುತ್ತಿರುವ ಮಾಹಿತಿ ಕೋಶ 'ಕಣಜ'ದಲ್ಲಿ
(ಘ್ಕಿಡಿಡಿಡಿ.ka್ಞa್ಜa.್ಚಟಞ) ಸೇರಿಸಲಿದೆ.
ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕ
ಹಂತದಲ್ಲಿದ್ದ ಈ ಯೋಜನೆ ಮೇ
26ರಿಂದ (ಗುರುವಾರ) ವಿಧ್ಯುಕ್ತವಾಗಿ
'ಕಣಜ'ವನ್ನು ಸೇರಲಿದ್ದು, ಶಾಲೆ
ಪುನಾರಂಭವಾಗುತ್ತಿದ್ದಂತೆ, ಸರಕಾರಿ ಶಾಲೆ
ಶಿಕ್ಷಕರು ಕುಂಟು ನೆಪ ಹೇಳದೆ ಕಣಜದಿಂದ
ಪಠ್ಯ ಡೌನ್ ಲೋಡ್ ಮಾಡಿಕೊಂಡು
ಪಾಠ ಆರಂಭಿಸಬಹುದು.ಸರಕಾರವು ಬಹಳ
ಹಿಂದಿನಿಂದಲೂ ತನ್ನ ಪ್ರಾಥಮಿಕ,
ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿಗೆ ತಾನೇ
ಪಠ್ಯಪುಸ್ತಕ ಒದಗಿಸುತ್ತ ಬಂದಿದೆ. ಇದನ್ನು
ಬೆಂಗಳೂರಿನಲ್ಲಿರುವ ಕರ್ನಾಟಕ ಪಠ್ಯ
ಪುಸ್ತಕಗಳ ಸಂಘ
ಮಾಡಿಕೊಂಡು ಬರುತ್ತಿದ್ದು,
ಇದಕ್ಕೆ ದಶಕಗಳ ಇತಿಹಾಸವೇ ಇದೆ. ಆದರೆ,
ಆರಂಭದಲ್ಲಿ ಸರಿಯಿದ್ದ ಈ ಯೋಜನೆ ಕೂಡ
ಕ್ರಮೇಣ ಜಡವಾಗಿತ್ತು. ಹೀಗಾಗಿ
ಪ್ರತೀ ಶೈಕ್ಷಣಿಕ ವರ್ಷ
ಆರಂಭವಾದಾಗಲೂ ಒಂದು ಪುಸ್ತಕ ಸಿಕ್ಕಿದರೆ,
ಇನ್ನೊಂದು ಬಂದಿಲ್ಲ
ಎನ್ನುವ ಕಿರಿಕಿರಿ ಮಾಮೂಲಿಯಾಗಿತ್ತು.
ಇದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯು ಈಗಾಗಲೇ ತಾನು ಆರಂಭಿಸಿರುವ
ಕನ್ನಡದ ಸಮಗ್ರ ಮಾಹಿತಿ ಕೋಶ 'ಕಣಜ'ದ ತೆಕ್ಕೆಗೆ ಈ
ಪಠ್ಯ ಪುಸ್ತಕಗಳನ್ನೂ
ತೆಗೆದುಕೊಳ್ಳಲು ಈ ಸಲ
ಮುಂದಡಿ ಇಟ್ಟಿದೆ. ಇಲಾಖೆ 15 ದಿನಗಳ
ಹಿಂದೆ ಕರ್ನಾಟಕ ಪಠ್ಯ ಪುಸ್ತಕಗಳ
ಸಂಘದೊಂದಿಗೆ
ಒಡಂಬಡಿಕೆ
ಮಾಡಿಕೊಂಡಿದೆ. ಇದಕ್ಕೆ
ಪ್ರಾಥಮಿಕ ಶಿಕ್ಷಣ ಇಲಾಖೆ ಕೂಡ ಹಸಿರು ನಿಶಾನೆ
ತೋರಿಸಿದೆ.
''ಕಣಜದಲ್ಲಿ ಕೇವಲ ಸಾಹಿತ್ಯ ಅಥವಾ
ಗೆಜೆಟಿಯರ್ಗಳನ್ನು ಮಾತ್ರ ಹಾಕುವುದಕ್ಕೆ ನಾವು
ಸೀಮಿತವಾಗಬಾರದು ಎನ್ನುವ ತುಡಿತ
ಮೊದಲಿನಿಂದಲೂ ಇತ್ತು.
ತಂತ್ರಜ್ಞಾನವೇ ನಮ್ಮನ್ನು ಆಳುತ್ತಿರುವ
ಕಾಲದಲ್ಲಿ ಅದನ್ನು ಹೀಗೆ ಸದ್ಬಳಕೆ
ಮಾಡಿಕೊಳ್ಳಬೇಕೆನಿಸಿತು. ಒಂದು
ವೇಳೆ ಮುದ್ರಿತ ಪಠ್ಯ ಪುಸ್ತಕಗಳು ಸಕಾಲಕ್ಕೆ
ಪೂರೈಕೆಯಾಗದಿದ್ದರೂ ಸರಕಾರಿ ಶಾಲೆಗಳ ಲಕ್ಷಾಂತರ
ಮಕ್ಕಳು ಪಾಠ-ಪ್ರವಚನಗಳಿಂದ
ವಂಚಿತರಾಗಬಾರದು ಎನ್ನುವ
ಉದ್ದೇಶದಿಂದ ಈಕ್ರಮ
ಕೈಗೊಳ್ಳಲಾಗಿದೆ. ಶಿಕ್ಷಕರು ಮತ್ತು
ವಿದ್ಯಾರ್ಥಿಗಳು ಇದರ ಪ್ರಯೋಜನ
ಪಡೆದುಕೊಳ್ಳಬೇಕು ಎನ್ನುತ್ತಾರೆ ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ ಎ
ದಯಾನಂದ.
'ಕಣಜ'ದ ಈ ಹೆಜ್ಜೆ ಕೇವಲ ಪಠ್ಯ ಪುಸ್ತಕಗಳನ್ನು
ಅಪ್ಲೋಡ್ ಮಾಡುವುದಕ್ಕೆ ಮಾತ್ರ
ಸೀಮಿತವಾಗಿಲ್ಲ. ಇದರ ಜತೆಗೆ
ವಿದ್ಯಾರ್ಥಿಗಳಿಗೋ, ಶಿಕ್ಷಕರಿಗೋ ಒಂದು
ವಿಷಯವನ್ನು ಕುರಿತು ಇನ್ನೂ ಹೆಚ್ಚು
ತಿಳಿದುಕೊಳ್ಳುವ ಆಸೆ ಇದ್ದರೆ ಅದನ್ನು
ಸಾಧ್ಯವಾಗಿಸಲು ಅನೇಕ ಲಿಂಕ್ಗಳನ್ನು ಕೂಡ
ಕೊಡಲಾಗುತ್ತಿದೆ. ಉದಾಹರಣೆಗೆ
ಹೇಳುವುದಾದರೆ, ಗುರುತ್ವಾಕರ್ಷಣ ತತ್ವವನ್ನು
ಕಂಡುಹಿಡಿದ ನ್ಯೂಟನ್ ಬಗ್ಗೆ ಹೆಚ್ಚು
ತಿಳಿದುಕೊಳ್ಳುವ ಆಸೆ ಇದೆ
ಎಂದುಕೊಳ್ಳಿ. ಆಗ,
ಪಠ್ಯಪುಸ್ತಕದಲ್ಲಿರುವ ನ್ಯೂಟನ್ನನ ಚಿತ್ರದ
ಮೇಲೆ ಕ್ಲಿಕ್ ಮಾಡಿದರೆ ಸಾಕು, ಅದು ಇನ್ನೂ ಹತ್ತಾರು
ಲಿಂಕ್ಗಳನ್ನು ತಕ್ಷಣ ತೋರಿಸುತ್ತದೆ. ಇದಲ್ಲದೆ,
''ಇದರಲ್ಲಿ ಆಡಿಯೋ ಮತ್ತು ವಿಡಿಯೋ
ಸೌಲಭ್ಯವನ್ನೂ
ಬಳಸಿಕೊಳ್ಳಲಾಗುತ್ತಿದೆ. ಅಂದರೆ,
ಪಠ್ಯದಲ್ಲಿರುವ ಒಂದು ನಿರ್ದಿಷ್ಟ ವಿಚಾರಕ್ಕೆ
ಸಂಬಂಧಿಸಿದಂತೆ ಧ್ವನಿ ಮತ್ತು
ಚಿತ್ರಗಳನ್ನು ಕೂಡ ಒದಗಿಸಲಾಗುತ್ತದೆ.
ಇದರೊಂದಿಗೆ ಜಿಐಎಫ್ (ಗ್ರಾಫಿಕ್
ಇಂಟರ್ಫೇಸ್ ಪಿಕ್ಚರ್) ಸೌಲಭ್ಯವನ್ನೂ
ಅಭಿವೃದ್ಧಿಪಡಿಸಲಾಗುತ್ತಿದೆ'' ಎನ್ನುತ್ತಾರೆ ಇಲಾಖೆ
ಪ್ರಧಾನ ತಾಂತ್ರಿಕ ಸಲಹೆಗಾರ
ರವೀಂದ್ರ.
ಕೋಟ್...
ಈಗ ಎಲ್ಲ ಸರಕಾರಿ ಶಾಲೆಗಳಲ್ಲೂ
ಪ್ರೊಜೆಕ್ಟರ್ ಇದೆ. ಹೀಗಾಗಿ
ಅವುಗಳ ಮೂಲಕವೂ ಬೋಧನೆ ಸಾಧ್ಯವಾಗಬೇಕು. ಶಿಕ್ಷಕರು
ಕಣಜದಲ್ಲಿ ಸಿಕ್ಕುವ ಪಠ್ಯಗಳನ್ನು ಇಡಿಯಾಗಿ
ಅಥವಾ ಅಧ್ಯಾಯಗಳನ್ನು ಡೌನ್ಲೋಡ್
ಮಾಡಿಕೊಂಡು, ಸುಲಭವಾಗಿ ಪಾಠ
ಮಾಡಬಹುದು. ಪಠ್ಯಪುಸ್ತಕ ಬಂದಿಲ್ಲ
ಎನ್ನುವ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳ
ಭವಿಷ್ಯ ಹಾಳಾಗಬಾರದು ಎನ್ನುವುದು ಇದರ
ಹಿಂದಿನ ಕಳಕಳಿಯಾಗಿದೆ.
-ಕೆ ಎ ದಯಾನಂದ, ನಿರ್ದೇಶಕರು, ಕನ್ನಡ
ಮತ್ತು ಸಂಸ್ಕೃತಿ ಇಲಾಖೆ
ಇಂದು ಎಲ್ಲಾ ಉದ್ಯೋಗಾವಕಾಶಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳ ಮೇಲೆ ದೊರೆಯುತ್ತವೆ. ಈ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಬರುತ್ತವೆ..ಈ ಜಿ ಕೆ ವಿಭಾಗದ ಅಲ್ಪ ಭಾಗವನ್ನು ಪೂರೈಸುವ ಗುರಿ ನಮ್ಮದು....( (01/September/2009 ರಿಂದ ಆರಂಭ) SMS @freegksms to +91 92 48 948837 to get latest post -#ಸೋಮಶೇಖರ Like our Facebook pages #Jnanavedike and #freegksms
Thursday, May 26, 2016
ಕಣಜ » » ಕನ್ನಡ ಶಾಲಾ ಪಠ್ಯ ಪುಸ್ತಕಗಳು
Subscribe to:
Post Comments (Atom)