ಇಸ್ರೋ ವಿಶ್ವದಾಖಲೆ : ಒಂದೇ ರಾಕೆಟ್‌ನಿಂದ 104 ಉಪಗ್ರಹಗಳು ಕಕ್ಷೆಗೆ.*

*

ಶ್ರೀಹರಿಕೋಟಾ, ಫೆ. ೧೫- ಒಂದೇ ರಾಕೆಟಿನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶಗಳ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ.

* ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ.

* ಇದುವರೆವಿಗೆ ಯಾವುದೇ ದೇಶ ಮಾಡದ ಸಾಧನೆಯನ್ನು ಮಾಡಿ ತೋರಿಸಿದ ಇಸ್ರೋ.

* ಬೆಳಿಗ್ಗೆ 9.28ಕ್ಕೆ 104 ಉಪಗ್ರಹಗಳನ್ನು ಹೊತ್ತು ಸಾಗಿದ ಪಿ.ಎಸ್.ಎಲ್.ವಿ- .ಸಿ 37 ನಿಗಧಿತ ಅವಧಿಯಲ್ಲಿ ಗುರಿಸಾಧಿಸಿತು.

* ಒಟ್ಟು 104 ಉಪಗ್ರಹಗಳ ತೂಕ 1350 ಕೆ.ಜಿ.

* ಭಾರತದ 730 ಕೆ.ಜಿ. ತೂಕದ ಕಾರ್ಟೋನಾಸಾಟ್, ತಲಾ 19 ಕೆ.ಜಿ.ತೂಕದ 103 ಉಪಗ್ರಹಗಳು.

* ಅಮೇರಿಕಾದ `ನಾಸಾ`ಗೆ ಹೋಲಿಸಿದರೆ ಅತಿ ಕಡಿಮೆ ಖರ್ಚಿನಲ್ಲಿ ಇಸ್ರೋದ ಉಪಗ್ರಹಗಳ ಉಡಾವಣೆ.

* ಹೀಗಾಗಿಯೇ, ಅಮೆರಿಕಾ ಸೇರಿದಂತೆ ವಿದೇಶಗಳಿಂದ ಇಸ್ರೋ ಆಶ್ರಯ ಕೋರಿಕೆ.

ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದುವರೆವಿಗೆ ಯಾವುದೇ ದೇಶ ನೂರು ಉಪಗ್ರಹಗಳನ್ನು ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಉದಾಹರಣೆ ಇಲ್ಲ.PSGadyal teacher Vijayapur

ಇಂದು ಬೆಳಿಗ್ಗೆ ನಿಗದಿತ ಸಮಯ 9.20ಕ್ಕೆ ಸರಿಯಾಗಿ 104 ಉಪಗ್ರಹಗಳನ್ನು ಹೊತ್ತು ಪಿ.ಎಸ್.ಎಲ್.ವಿ.- ಸಿ. 37 ರಾಕೆಟ್ ಗುರಿಯತ್ತ ಚಿಮ್ಮಿತು.

ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡ ಪಿ.ಎಸ್.ಎಲ್.ವಿ.- ಸಿ 37 ಹಾರಿದ 28ನೇ ನಿಮಿಷದಲ್ಲಿ ಉಪಗ್ರಹಗಳನ್ನು ನಿಗಧಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು. ಉಪಗ್ರಹಗಳು ಕಕ್ಷೆಗೆ ಸೇರ್ಪಡೆಯಾಗುತ್ತಿದ್ದಂತೆ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಲ್ಲಿ ಕುತೂಹಲ, ಆತಂಕದಿಂದ ರಾಕೆಟ್‌ನ ಹಾದಿಯನ್ನೇ ಗಮನಿಸುತ್ತಿದ್ದ ಇಸ್ರೋ ವಿಜ್ಞಾನಿಗಳ ಸಂಭ್ರಮ, ಸಂತೋಷಗಳು ಮುಗಿಲು ಮುಟ್ಟಿದವು.

ಎಲ್ಲಾ 104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ತಲುಪಿವೆ. ಈ ಸಾಧನೆಗೈದ ಇಸ್ರೋ ಎಲ್ಲಾ ವಿಜ್ಞಾನಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.

*ಹೊಸ ಇತಿಹಾಸ*

ಭಾರತದ ಒಂದು ಉಪಗ್ರಹವೂ ಸೇರಿದಂತೆ 103 ವಿದೇಶಿ ಉಪಗ್ರಹಗಳನ್ನು 505 ಕಿ.ಮೀ. ದೂರದ ಪೊಲಾರ್ ಸನ್ ಸಿಂಕ್ರೋನಸ್ ಆರ್ಬಿಟ್ (ಎಸ್.ಎಸ್.ಒ)ಗೆ ಸೇರಿಸುವ ಮೂಲಕ ಇಸ್ರೋ ಹೊಸ ಇತಿಹಾಸ ನಿರ್ಮಿಸಿದೆ.

ಆ ಮೂಲಕ ಇಡೀ ದೇಶ ಹೆಮ್ಮೆ ಪಡುವಂತಹ ಸಾಧನೆಗೆ ಇಸ್ರೋ ಪಾತ್ರವಾಗಿದೆ. ಒಟ್ಟು 1350 ಕೆ.ಜಿ. ತೂಕದ 104 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿದ ಪಿ.ಎಸ್.ಎಲ್.ವಿ.- ಸಿ 37ಗೆ ಇದು 16ನೇ ಯಾನ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಗರಿಷ್ಠ ಸಾಧನೆ ಮಾಡಿರುವ ಅಮೇರಿಕಾ, ರಷ್ಯಾಗಳಿಗೂ ಕೂಡ ಈ ಸಾಧನೆ ಸಾಧ್ಯವಾಗಿಲ್ಲ. ರಷ್ಯಾ 2014ರಲ್ಲಿ 37 ಉಪಗ್ರಹಗಳನ್ನು ಒಟ್ಟಿಗೆ ಕಕ್ಷೆಗೆ ತಲುಪಿಸಿದ್ದರೆ, 2015ರಲ್ಲಿ ಅಮೇರಿಕಾ 29 ಉಪಗ್ರಹಗಳನ್ನು ಒಂದೇ ಉಡಾವಣೆಯಲ್ಲಿ ಕಕ್ಷೆಗೆ ಸೇರಿಸಿತ್ತು.

ಇಸ್ರೋದ ಅತಿ ನಂಬಿಕಸ್ತ ಉಡಾವಣಾ ವಾಹನವಾದ ಪಿ.ಎಸ್.ಎಲ್.ವಿ.- ಸಿ 37 ಕಳೆದ ವರ್ಷವಷ್ಟೆ 20 ಉಪಗ್ರಹಗಳನ್ನು ಹೀಗೆಯೆ ಕಕ್ಷೆಗೆ ಸೇರಿಸಿತ್ತು.

ಈ ಬಾರಿ ಅದು ಹೊತ್ತೊಯ್ದ ಉಪಗ್ರಹಗಳಲ್ಲಿ 730 ಕೆ.ಜಿ. ತೂಕದ ಭಾರತದ ಕಾರ್ಟೋಸಾಟ್ ಒಂದು ಉಪಗ್ರಹ ಮತ್ತು ತಲಾ 19 ಕೆ.ಜಿ. ತೂಕದ 103 ವಿದೇಶಿ ಉಪಗ್ರಹಗಳು ಇದ್ದವು.

*ಪ್ರಧಾನಿ ಅಭಿನಂದನೆ*

104 ಉಪಗ್ರಹಗಳನ್ನು ಒಂದೇ ಉಡಾವಣೆಯಲ್ಲಿ ಕಕ್ಷೆಗೆ ಸೇರಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

`ಭಾರತದ ಕಾರ್ಟೋಸಾಟ್ ಉಪಗ್ರಹ ಸೇರಿದಂತೆ 103 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿದ ಇಸ್ರೋದ ವಿಜ್ಞಾನಿಗಳನ್ನು, ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ಇದು ಇಡೀ ದೇಶ ಹೆಮ್ಮೆಪಡುವಂತಹ ಕ್ಷಣ ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟ್‌ನಲ್ಲಿ ಹೇಳಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK