ಆದಾಯ ತೆರಿಗೆ ಇಳಿಕೆ, ಯಾರಿಗೆ ಎಷ್ಟು? ಇಲ್ಲಿದೆ ವಿವರ

 Wednesday, 01.02.2017, 4:44 PM     ವಿಜಯವಾಣಿ ಸುದ್ದಿಜಾಲ     No Comments

FacebookTwitterGoogle+Share

ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಇಳಿಸುವ ಮೂಲಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ ತಮ್ಮ 2017-18ರ ಸಾಲಿನ ಮುಂಗಡಪತ್ರದಲ್ಲಿ ವೇತನದಾರರು ಮತ್ತು ಹಿರಿಯ ನಾಗರಿಕರು ಮತ್ತು ಮಧ್ಯಮ ವರ್ಗದ ಆದಾಯ ಹೊಂದಿರುವವರಿಗೆ ನಿರಾಳತೆಯನ್ನು ಉಂಟು ಮಾಡಿದರು.

ಮುಂಗಡ ಪತ್ರದಲ್ಲಿ ತಿಳಿಸಿರುವ ಪ್ರಕಾರ ಆದಾಯ ತೆರಿಗೆ ಇಳಿಕೆಯ ವಿವರ ಇಲ್ಲಿದೆ:

1). ರೂ.2,50,000 ವರೆಗಿನ ಆದಾಯ ಉಳ್ಳವರಿಗೆ ಆದಾಯ ತೆರಿಗೆ ಇಲ್ಲ.

ರೂ.2,50,001ರಿಂದ ರೂ.5,00,000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5 (ಉಳಿತಾಯ ರೂ.7,725)

2). ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷದ ಒಳಗೆ)

ರೂ.3,00,000 ವರೆಗಿನ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ.

ರೂ 3,00,001ರಿಂದ ರೂ.5,00.000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5. (ಉಳಿತಾಯ ರೂ.2,575)

3). ಹಿರಿಯ ನಾಗರಿಕರಿಗೆ (80ವರ್ಷ ಮತ್ತು ಮೇಲ್ಪಟ್ಟವರು):

ರೂ.5,00.000 ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ.

ರೂ. 5,00,001 ರಿಂದ ರೂ. 10,00,000 ವರಿಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.20 (ಉಳಿತಾಯ 7,775)

ಮೇಲ್ತೆರಿಗೆ (ಸರ್ಚಾರ್ಜ್): ರೂ. 50 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 1 ಕೋಟಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ 1 ಕೋಟಿ ರೂ ಮೀರಿದ ಆದಾಯದ ಮೇಲೆ ಶೇಕಡಾ 15 ಸರ್ಚಾರ್ಜ್.

-ಏಜೆನ್ಸೀಸ್

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023