---------- Forwarded message --------- From: SOMASHEKHAR BELLUBBI < bellubbi.shekhar@gmail.com > Date: 14:54, Sun, Jul 1, 2018 Subject: 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ To: < go@blogger.com > July 1, 2018 ಬೆಂಗಳೂರು,ಜೂ.01: ಮಹಿಳೆಯರ ಆರೋಗ್ಯಕ್ಕಾಗಿ ಅನನ್ಯ ಸೇವೆ ನೀಡುತ್ತಿರುವ ಆಸ್ಪತ್ರೆ ಫೋರ್ಟಿಸ್ ಲಾ ಫೆಮ್ಮೆ, ರಾಜ್ಯದ ಮಹಿಳೆಯರ ಸಾಧನೆ ಗುರುತಿಸಿ ಗೌರವಿಸಲು ತನ್ನ ಮೊದಲನೆ ಆವೃತಿಯ ಕರ್ನಾಟಕ ಮಹಿಳಾ ಸಾಧಕ ಪ್ರಶಸ್ತಿ 2018 ಸಮಾರಂಭ ಹಮ್ಮಿಕೊಂಡಿತ್ತು. ಸ್ಫೂರ್ತಿವಿಶ್ವಾಸ್ ಮತ್ತು ತಂಡದ ಒಂದು ದಿಟ್ಟ ಹೆಜ್ಜೆಯಾದ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ವಿವಂತಾ ಬೈ ತಾಜ್ ಯಶವಂತಪುರದಲ್ಲಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 33 ಜನ ಮಹಿಳೆಯರನ್ನು ಈ ಸಂದರ್ಭದಲ್ಲಿ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮುಖ್ಯ ಅತಿಥಿಯಾಗಿ, ಶ್ರೀಮತಿ ಚೆನ್ನಮ್ಮದೇವೆಗೌಡ ವಿಶೇಷ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಐಪಿಎಸ್ ಡಿಜಿ ಮತ್ತು ಐಜಿಪಿ ಓಂಪ್ರಕಾಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಕೇವಲ ಸಾಧಕರನ್ನು ಗೌರವಿಸುವುದಕ್ಕೆ ಮಾತ್ರ ಈ ಸಮಾರಂಭ ಸೀಮಿತವಾಗಿರಲಿಲ್ಲ. ಯಾರಿಗೂ ಗೊತ್ತಿಲ್ಲದ ಅನೇಕ ಸಾಧಕರನ್ನು...