Kannada Prabha2019-02-01 15:10:00 View Source ಸಂಗ್ರಹ ಚಿತ್ರ ನವದೆಹಲಿ: ಹಾಲಿ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಪಿಯೂಶ್ ಗೋಯಲ್ ಹಿರಿಯ ಉದ್ಯೋಗಸ್ಥರ ಗ್ರಾಚ್ಯುಟಿ ಮೊತ್ತವನ್ನು 10 ರಿಂದ 30 ಲಕ್ಷ ರೂಗಳಿಗೆ ಏರಿಕೆ ಮಾಡಿದೆ. ಇಷ್ಟಕ್ಕೂ ಗ್ರಾಚ್ಟುಟಿ ಎಂದರೇನು..? ಗ್ರಾಚ್ಟುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನೀಡಲಾಗುವ ಗೌರವಧನವೇ ಗ್ರಾಚ್ಟುಟಿ.. ಉದ್ಯೋಗದಾತ ಕಂಪನಿಯು ತನ್ನಲ್ಲಿನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನ ಇದಾಗಿದೆ. ಅಂದರೆ, ಉದ್ಯೋಗಿಯು ಕಂಪನಿಯಿಂದ ನಿವೃತ್ತನಾದಾಗ ಅಥವಾ ಸೇವೆಗೆ ರಾಜಿನಾಮೆ ಸಲ್ಲಿಸಿದಾಗ ನೀಡಲಾಗುವ ಮೊತ್ತವಿದು. ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ. ಗ್ರಾಚ್ಯುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ...