ಪೂರ್ಣ ವಿರಾಮ ( Full stop) (.) ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ ವಾಕ್ಯ ಕೊನೆಯಾದಾಗ ವಾಕ್ಯದ ಕೊನೆಗೆ ಪೂರ್ಣ ವಿರಾಮ ಹಾಕಬೇಕು, ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ ಮತ್ತು ಲೇಖನವೊಂದರ ಕೊನೆಯ ವಾಕ್ಯದ ಕೊನೆಯ ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ ಹೊಸ ವಾಕ್ಯವನ್ನು ಪ್ರಾರಂಭಿಸಬೇಕು. ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ ಬಳಸುವಾಗ ಮೊದಲನೆ ಅಕ್ಷರ ದೊಡ್ಡ ಅಕ್ಷರದಿಂದಲೆ ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ ಅನುಸರಿಸಿ ಓದಬೇಕು ಬರೆಯಬೇಕು. ಅಲ್ಪವಿರಾಮ ( Comma) (,) ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆ ಅನುಗುಣವಾಗಿ ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು, ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ. ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ ಅಂಶಗಳು ಸೇರಿದ್ದು ಆ ಪ್ರತಿಯೊಂದು ಅಂಶವನ್ನು ಓದುಗನಿಗೆ ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು. ಅರ್ಧವಿರಾಮ ( Semi Colon) ( ; ) ಅರ್ಧ ನಿಲುಗಡೆಯ ತಾನಗಳನ್ನು ಅಲವಡಿಸಿ ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ. ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ ಅಂಶಗಳು ನಿರಂತರವಾಗಿ...