ಅಗ್ನಿ -5 ಖಂಡಾತರ ಕ್ಷಿಪಣಿ ಪರೀಕ್ಷೆ ಯಶಸ್ವಿ -
ಬಾಲಸೋರ್(ಒಡಿಶಾ): ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ವೀಲ್ಹರ್ ದ್ವೀಪದಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಿಗದಿತ ಗುರಿಯನ್ನು ತಲಪಿದೆ ಎಂದು ಐಟಿಆರ್ ನಿರ್ದೇಶಕ # ಎಂವಿಕೆ_ಪ್ರಸಾದ್ ತಿಳಿಸಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. ಬಳಿಕ 2013ರಲ್ಲಿ ಎರಡನೇ ಬಾರಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿತ್ತು. ಎರಡೂ ಬಾರಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿತ್ತು. ಇಂದು ಮೂರನೇ ಬಾರಿ ನಡೆದ ಪರೀಕ್ಷಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಇನ್ನೂ ಎರಡು ಬಾರಿ ಅಗ್ನಿ-5ರ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದ್ದು, ಬಳಿಕ ಸೇನೆಗೆ ಸೇರ್ಪಡೆಯಾಗಲಿದೆ. ಈ ಕ್ಷಿಪಣಿ 10 ಅಣುವಸ್ತ್ರ ಸಿಡಿತೆಲೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು ಐದೂವರೆ ಸಾವಿರ ಕಿಲೋ ಮೀಟರ್ ವ್ಯಾಪ್ತಿಯ ಗುರಿಯನ್ನು ತಲುಪುವ ಸಾಮರ್ಥ್ಯ ಕ್ಷಿಪಣಿಗಿದೆ. ಅಗ್ನಿ-5 ಅಗ್ನಿ-3ರ ಮತ್ತೊಂದು ಮಾದರಿಯಾಗಿದೆ. ☆ಅಗ್ನಿ – 5 ವಿಶೇಷತೆಗಳೇನು..? – ದೂರಗಾಮಿ ಖಂಡಾಂತರ ಕ್ಷಿಪಣಿ – ದೇಶಿಯವಾಗಿ ನಿರ್ಮಿಸಿದ 50 ಟನ್ ಭಾರದ ಅಗ್ನಿ-5 ಕ್ಷಿಪಣಿ – 8000 ಕಿ.ಮೀ. ಸಾಮಥ್ರ್ಯ ಹೊಂದಿರುವ ಕ್ಷಿಪಣಿ – 56 ಅಡಿ 17 ಮೀಟರ್ ಎತ್ತರ – 2 ಮೀಟರ್ ಅಗಲವಿರುವ ಕ್ಷಿಪಣಿ – 5000 ಕಿ.ಮೀ. ಗಿಂತಲೂ ಅಧಿಕ ದೂರ ಕ್ರಮಿಸಬಲ್ಲದು – ಪರಮಾಣ...