ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ಱ್ಯಾಂಕ್ ಗಳಿಸಿದ ಕೆ.ಆರ್.ನಂದಿನಿ (ಕೋಲಾರ ತಾ. ಕೆಂಬೋಡಿ ಗ್ರಾಮ)
- ಕೆ.ಆರ್.ನಂದಿನಿ ತಂದೆ ರಮೇಶ್ ಸರ್ಕಾರಿ ಶಾಲಾ ಶಿಕ್ಷಕರು. - ಪ್ರಸ್ತುತ ಇಡೀ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. - ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. - ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ. - ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ. - ದೆಹಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸ ಪ್ರಾರಂಭ. - ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ 642ನೇ ರ್ಯಾಂಕ್ ಪಡೆದಿದ್ದ ಕೆ.ಆರ್.ನಂದಿನಿ. - ಐಆರ್ ಎಸ್ ಗೆ ಆಯ್ಕೆಯಾಗಿರುವ ನಂದಿನಿ ಪ್ರಸ್ತುತ ಫರಿದಾಬಾದ್ ನಲ್ಲಿ ತರಬೇತಿಯಲ್ಲಿದ್ದಾಳೆ. - ತರಬೇತಿಯಲ್ಲಿದ್ದೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಂದಿನಿ.