Posts

Tennis Doubles : Sania and Martina Hingis got first RANK(WTA)

Image
ಟೆನಿಸ್‌: ಡಬಲ್ಸ್‌ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಸಾನಿಯಾ ಚಾರಿತ್ರಿಕ ಸಾಧನೆ Mon, 04/13/2015 - 01:07 ಚಾರ್ಲ್ಸ್‌ಟನ್‌, ಅಮೆರಿಕ (ಪಿಟಿಐ):  ಸಾನಿಯಾ ಮಿರ್ಜಾ ಅವರು ಡಬ್ಲ್ಯುಟಿಎ ಡಬಲ್ಸ್‌ ವಿಶ್ವ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವ ಅವರಿಗೆ ಒಲಿದಿದೆ. ಸಾನಿಯಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೋಡಿ ಭಾನುವಾರ ಇಲ್ಲಿ ಕೊನೆಗೊಂಡ ಫ್ಯಾಮಿಲಿ ಸರ್ಕಲ್‌ ಕಪ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಯಿತು. ಭಾರತ–ಸ್ವಿಸ್‌ ಜೋಡಿ ಫೈನಲ್‌ನಲ್ಲಿ 6–0, 6–4 ರಲ್ಲಿ ಕ್ಯಾಸೆ ಡೆಲಾಕ್ವ ಮತ್ತು ಡರಿಜಾ ಜುರಾಕ್‌ ವಿರುದ್ಧ ಗೆಲುವು ಪಡೆಯಿತು. ಶಿಸ್ತಿನ ಆಟವಾಡಿದ ಸಾನಿಯಾ– ಹಿಂಗಿಸ್‌ 57 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಇಲ್ಲಿ ಪ್ರಶಸ್ತಿ ಗೆದ್ದ ಕಾರಣ ಸಾನಿಯಾಗೆ 470 ಪಾಯಿಂಟ್‌ಗಳು ಲಭಿಸಿದವು. ಈ ಮೂಲಕ ತಮ್ಮ ಒಟ್ಟು ಪಾಯಿಂಟ್‌ಗಳನ್ನು 7965ಕ್ಕೆ ಹೆಚ್ಚಿಸಿಕೊಂಡು ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಈ  ಹಿಂದಿನ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು. ಇದೀಗ ಸಾರಾ ಎರಾನಿ (7640) ಮತ್ತು ರಾಬರ್ಟಾ ವಿನ್ಸಿ (764) ಅವರನ್ನು ಹಿಂದಿಕ್ಕಿದರು. ಅಧಿಕೃತ ರ್‍್ಯಾಂಕಿಂಗ್‌ ಪಟ್ಟಿ ಸೋಮವಾರ ಪ್ರಕಟವಾಗಲಿದೆ. ಹಿಂಗಿಸ್‌ ಮತ್ತು ಸಾನಿಯಾ ಗೆದ್ದ ಸತತ ಮೂರನೇ ಪ್ರಶಸ್ತಿ ಇದು. ಹೋದ ವಾರ ಮಿ
Image
ಆಜ್ಲಾನ್ ಶಾ ಹಾಕಿ: ಭಾರತಕ್ಕೆ ಕಂಚಿನ ಪದಕ (PSG) ಕೌಲಾಲಂಪುರ್(ಏಪ್ರಿಲ್ 12): ನಿನ್ನೆಯಷ್ಟೇ ಪ್ರಬಲ ಆಸ್ಟ್ರೇಲಿಯಾವನ್ನ ದಂಗುಗೊಳಿಸಿದ್ದ ಭಾರತ ತಂಡ ಇಂದು ದಕ್ಷಿಣ ಕೊರಿಯಾವನ್ನ ಸೋಲಿಸಿ ಸುಲ್ತಾನ್ ಆಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ 3ನೇ ಸ್ಥಾನ ದಕ್ಕಿಸಿಕೊಂಡಿದೆ. ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್'ನಲ್ಲಿ ದಕ್ಷಿಣ ಕೊರಿಯಾವನ್ನ ಭಾರತ 4-1 ಗೋಲುಗಳಿಂದ ಸೋಲಿಸಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಎರಡೂ ತಂಡಗಳು 2 ಗೋಲು ಗಳಿಸಿ ಸರಿಸಮಾನವಾಗಿದ್ದವು. ಪೆನಾಲ್ಟಿ ಶೂಟೌಟ್'ನಲ್ಲಿ ಭಾರತ ನಿರಾಯಾಸ ಗೆಲುವು ಸಾಧಿಸಿ ಕಂಚಿನ ಪದಕ ಗಳಿಸಿತು. ಪಂದ್ಯದ ರೆಗುಲೇಶನ್ ಅವಧಿಯಲ್ಲಿ ಕೊಡಗಿನ ವೀರ ನಿಕಿಲ್ ತಿಮ್ಮಯ್ಯ ಮತ್ತು ಸತ್'ಬೀರ್ ಸಿಂಗ್ ಭಾರತದ ಪರ ಗೋಲು ಗಳಿಸಿದರು. ಪೆನಾಲ್ಟಿ ಶೂಟೌಟ್ ವೇಳೆ, ಆಕಾಶ್'ದೀಪ್ ಸಿಂಗ್, ಸರ್ದಾರ್ ಸಿಂಗ್, ರೂಪೀಂದರ್ ಪಾಲ್ ಸಿಂಗ್ ಮತ್ತು ಬಿರೇಂದ್ರ ಲಾಕ್ರಾ ಗೋಲು ಗಳಿಸಿದರು. ನಮ್ಮ ಗೋಲ್'ಕೀಪರ್ ಶ್ರೀಜೇಶ್ ದಿನದ ಹೀರೋ ಎನಿಸಿದರು. ಪೆನಾಲ್ಟಿ ಶೂಟೌಟ್'ನಲ್ಲಿ ಶ್ರೀಜೇಶ್ ಮೂರು ಗೋಲುಗಳನ್ನ ತಡೆದು ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು. ಈ ಟೂರ್ನಿಯಲ್ಲಿ ಭಾರತಕ್ಕಿದು ಹ್ಯಾಟ್ರಿಕ್ ಗೆಲುವಾಗಿದೆ. ಭಾರತ ತಂಡ ಈ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಕೆನಡಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಭಾರಿಸಿತ್ತು. ಇನ್ನು, ಟೂ

ವಿಶ್ವ ಶೂಟಿಂಗ್‌: ಜಿತು ರಾಯ್ ಕಂಚಿನ ಸಾಧನೆ

Image
ವಿಶ್ವ ಶೂಟಿಂಗ್‌: ಜಿತು ರಾಯ್ ಕಂಚಿನ ಸಾಧನೆ (PSG...) ಚಾಂಗ್‌ವೊನ್‌, ದಕ್ಷಿಣ ಕೊರಿಯಾ(ಪಿಟಿಐ): ಭಾರತದ ಭರವಸೆಯ ಶೂಟರ್‌ ಜಿತು ರಾಯ್‌ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್‌ ಪುರುಷರ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾನುವಾರ ಕಂಚಿನ ಸಾಧನೆ ತೋರಿದ್ದಾರೆ. ಜಿತು ಅವರು ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಡೆದ ಏಳನೇ ಪದಕ ಇದಾಗಿದೆ.ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕೂಟಗಳಲ್ಲಿ ಬಂಗಾರ ಪದಕ ವಿಜೇತ ಜಿತು, ಒಟ್ಟು 181.1 ಪಾಯಿಂಟ್ಸ್‌ ಕಲೆ ಹಾಕಿ ಮೂರನೇ ಸ್ಥಾನ ತೃಪ್ತಿ ಪಟ್ಟರು. 0.4ಗಳಷ್ಟು ಪಾಯಿಂಟ್‌ಗಳ ಅತ್ಯಲ್ಪ ಅಂತರದಲ್ಲಿ ಅವರು ಕೊನೆಯ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಕೈತಪ್ಪಿತು. ಸ್ಥಳೀಯ ಸ್ಪರ್ಧಿ ಜಿನ್‌ ಜೊಂಕೊಹ್ 206 ಪಾಯಿಂಟ್‌ ಗಳಿಸಿ ಚಿನ್ನದ ಪದಕ ಬಾಚಿದರು. ಮ್ಯಾನ್ಮಾರ್‌ನ ನವುಂಗ್‌ ಯೆ ತುನ್‌ ಅವರು 201 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಸಾಧನೆ ತೋರಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಪ್ರಕಾಶ್ ನಂಜಪ್ಪ ಮತ್ತು ಗುರುಪ್ರೀತ್ ಸಿಂಗ್ ಅವರು ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 18 ಹಾಗೂ 48ನೇ ಸ್ಥಾನ ಪಡೆದರು. ಜಿತು ಅವರು 2014ರ ಸೆಪ್ಟೆಂಬರ್‌ನಲ್ಲಿಯೇ ಮುಂದಿನ ವರ್ಷ ರಿಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಶನಿವಾರವಷ್ಟೇ ಇದೇ ಟೂರ್ನಿಯ 10 ಮೀಟರ್‌ ಏರ್ ರೈಫಲ್‌ ವಿಭಾಗದಲ್ಲಿ ರಾಜಸ್ತಾನದ ಅಪೂರ್ವಿ ಚಾಂಡೇಲಾ ಕಂಚಿ

FREEGKSMS ನ ಇಂದಿನ 05 ನೇರ ಪ್ರಶ್ನೆಗಳು ನೇರ ಸರಿ ಉತ್ತರಗಳು. 12/04/2015

FREEGKSMS ನ  ಇಂದಿನ 05 ನೇರ ಪ್ರಶ್ನೆಗಳು ನೇರ ಸರಿ ಉತ್ತರಗಳು. 12/04/2015 01). ಡಾ. ಬಿ.ಆರ್. ಅಂಬೇಡ್ಕರ್ ರವರನ್ನು 'ಸಂವಿಧಾನಶಿಲ್ಪಿ' ಎಂದು ಕರೆದವರು ಯಾರು? a) ಕೆ.ಎಂ. ಮುನ್ಷಿ b) ಟಿ.ಟಿ. ಕೃಷ್ಣಮಾಚಾರಿ c) ಎಂ.ವಿ. ಪೈಲಿ● d) ಭಾರತ ಸರ್ಕಾರ 02).  ಕರ್ನಾಟಕ ಪ್ರಹಸನ ಪಿತಾಮಹ .... a) ಸಿ.ಪಿ.ಕೆ b) ಟಿ.ಪಿ.ಕೈಲಾಸಂ● c) ಮಾಸ್ತಿ d) ಯಾರೂ ಅಲ್ಲ 03). ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯಲಿರುವ ಯಾವ ಗಣತಿಗೆ ರಾಜ್ಯಾದ್ಯಂತ ಶನಿವಾರ ಏಕಕಾಲದಲ್ಲಿ ವಿಧ್ಯುಕ್ತ ಚಾಲನೆ ಸಿಕ್ಕಿದೆ? a) ಜನರ ಮತ್ತು ಪ್ರಾಣಿಗಳ ಗಣತಿ b) ಪಶು ಮತ್ತು ಸಾಮಾಜಿಕ ಗಣತಿ c)  'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ'  (ಜಾತಿಗಣತಿ)● d) ಆರ್ಥಿಕ ಮತ್ತು ಸಮುದಾಯ ಗಣತಿ 04).  ರಾಜ್ಯದಲ್ಲಿ ಶಿಕ್ಷಣ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿ ಸಮೀಕ್ಷೆ (ಜಾತಿವಾರು ಗಣತಿ) ಶನಿವಾರ ಆರಂಭವಾಗಿದೆ. ಇದು ಎಷ್ಟು ವರ್ಷಗಳ ನಂತರ ನಡೆಯುತ್ತಿದೆ? a) ೭೫ b) ೨೫ c) ೫೩ d) ೮೪● 05). 2015ನೇ ಸಾಲಿನ ಪದ್ಮಭೂಷಣ ಡಾ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಲಾಯಿತು? a) ಪ್ರವೀಣ್ ಘೋಡ್ಕಿಂಡಿ b) ಡಾ.ಕೆ.ಜೆ.ಯೇಸುದಾಸ್● c) ಪಂಡಿತ್ ರವಿಶಂಕರ್ d) ಯಾರೂ ಅಲ್ಲ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

ಇತ್ತೀಚೆಗೆ ಅನ್ವೇಷಣೆಯಾದ ಹೊಸ ಕ್ಷುದ್ರಗ್ರಹಕ್ಕೆ ಮಲಾಲಾ ಹೆಸರು

Image
ಉದಯವಾಣಿ, Apr 12, 2015, 11:51 AM IST ಇಸ್ಲಾಮಾಬಾದ್‌:  ನೊಬೆಲ್‌ ಶಾಂತಿ ಪುರಸ್ಕೃತ ಪಾಕ್‌ ಬಾಲಕಿ ಮಲಾಲಾ ಯೂಸಫ್ ಝೈ  ಹೆಸರನ್ನು ಇತ್ತೀಚೆಗೆ ಅನ್ವೇಷಣೆಯಾದ ಕ್ಷುದ್ರಗ್ರಹಕ್ಕೆಇಡಲಾಗಿದೆ.  ನಾಸಾ ಖಗೋಳ ಶಾಸ್ತ್ರಜ್ಞೆ ಆ್ಯಮಿ ಮೈಂಜರ್‌ ತಾವು 5 ವರ್ಷದ ಕೆಳಗೆ ಅನ್ವೇಷಿಸಿದ ಆಕಾಶಕಾಯಕ್ಕೆ ಮಲಲಾ ಹೆಸರನ್ನು ನೀಡಿದ್ದಾರೆ. ಮಂಗಳಮತ್ತು ಗುರು ಗ್ರಹಗಳ ಮುಖ್ಯ ರೇಖೆ ಈ ಆಕಾಶಕಾಯ ಇದೆ. ಇದು 5.5 ವರ್ಷಕ್ಕೆ ಒಂದು ಸಲ ಸೂರ್ಯನ ಸುತ್ತ ಸುತ್ತುತ್ತದೆ.

ಜಾತಿ ಗಣತಿ: ಪ್ರಾಮಾಣಿಕ ವಿವರ ಸಲ್ಲಿಸಿ..

ಬೆಂಗಳೂರು: ಮುಂಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾಟಾಚಾರವಾಗಿ ನಡೆಯುತ್ತಿಲ್ಲ. ಸಮೀಕ್ಷೆ ವೇಳೆ ಸಂಗ್ರಹಿಸುವ ಕೆಲವು ಮಾಹಿತಿಯ ಸತ್ಯಾಸತ್ಯತೆ ಪರಾಮರ್ಶೆಯೂ ನಡೆಯುತ್ತದೆ. ಒಂದು ವೇಳೆ ನೀಡಿದ ಮಾಹಿತಿ ಸುಳ್ಳೆಂಬುದು ಗೊತ್ತಾದರೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಈಗಾಗಲೇ ಸಾರ್ವಜನಿಕರು ವಿವಿಧ ಸೌಲಭ್ಯ ಬಳಸಿಕೊಳ್ಳಲು ಸರ್ಕಾರ ನೀಡಿದ ಮಾಹಿತಿ ಯನ್ನು ಕ್ರೋಡಿsಕರಿಸಿದೆ. ಹಾಗೆಯೇ ಮುಂದೆ ಈ ಸಮೀಕ್ಷೆ ನಡೆದ ನಂತರ ಸಂಗ್ರಹವಾಗುವ ಮಾಹಿತಿಯನ್ನು ವಿವಿಧ ಇಲಾಖೆಗೂ ಕಳುಹಿಸಲಾಗುತ್ತದೆ. ಈ ಸಂಗತಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೇ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಗ್ರಹಿಸಿದ ಮಾಹಿತಿಯ ಸಾಮ್ಯತೆ ನೋಡಲಾಗುತ್ತದೆ ಎಂದರು. ಪ್ರಚಾರಕ್ಕೆ ಹಂಸಲೇಖ ಹಾಡು ಸಮೀಕ್ಷೆಯ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿಯೇ  ಬೇರೆ ಬೇರೆ ತಂತ್ರ ರೂಪಿಸಲಾಗಿದೆ. ಈ ಪೈಕಿ ಹಂಸಲೇಖ ರಚಿಸಿ, ನಿರ್ದೇಶಿಸಿ ಚಿತ್ರಿಸಿರುವ ಹಾಡುಕೂಡ ಒಂದು. ಈ ಹಾಡುಗಳನ್ನು ಸಚಿವ ಆಂಜನೇಯ ಗುರುವಾರ ಬಿಡುಗಡೆಗೊಳಿಸಿದರು. ಜಾತಿ ಗಣತಿ ಏಕೆ ಬೇಕು ಮತ್ತು ಅದರಿಂದಾಗುವ ಉಪಯೋಗದ ಕುರಿತಾಗಿ ರಚಿತವಾಗಿರುವ ಸಣ್ಣ ಹಾಡು ಗಮನ ಸೆಳೆಯುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆಂಜನೇಯ ಅವರು ಹಾಡಿನ ವಿಡಿಯೋ  ತುಣುಕಿನಲ್ಲಿ ಬಂದುಹೋಗುತ್ತಾರೆ

ಶನಿವಾರದಿಂದ ಜಾತಿಗಣತಿ ಆರಂಭ: ನೀವು ಏನು ಮಾಹಿತಿ ನೀಡಬೇಕು?(PSG)

ಶನಿವಾರದಿಂದ ಜಾತಿಗಣತಿ ಆರಂಭ: ನೀವು ಏನು ಮಾಹಿತಿ ನೀಡಬೇಕು?(PSG) - ಏಪ್ರಿಲ್ 11ರಿಂದ ಏ.30 ರವರೆಗೆ ಜಾತಿಗಣತಿ - 55 ಪ್ರಶ್ನೆಗಳನ್ನು ಕೇಳುತ್ತಾರೆ ಗಣತಿದಾದರು - ಜಾತಿ ಗಣತಿ ಅರ್ಜಿಯಲ್ಲಿ ನಿಮ್ಮ ಸಹಿ ಕಡ್ಡಾಯ ಬೆಂಗಳೂರು: ಶನಿವಾರದಿಂದ ಜಾತಿ ಜನಗಣತಿ ಆರಂಭವಾಗಲಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಸುಬು, ಜಾತಿ ಸೇರಿದಂತೆ ನಿಮ್ಮ ಮನೆಯ ಸದಸ್ಯರ ಎಲ್ಲರ ವಿವರಗಳನ್ನ ಪಡೆಯಲಿದ್ದಾರೆ ಗಣತಿದಾದರು. ರಾಜ್ಯದಲ್ಲಿ ಸುಮಾರು 6.50 ಕೋಟಿ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದ್ದು, ಸುಮಾರು 1.26 ಲಕ್ಷ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಗಣತಿ ನಡೆಯಲಿದೆ. ಏಪ್ರಿಲ್ 11ರಿಂದ ಏ.30 ರವರೆಗೆ ಜಾತಿಗಣತಿ ನಡೆಯಲಿದೆ. ಸುಮಾರು 1500ಕ್ಕೂ ಹೆಚ್ಚು ಜಾತಿಗಳ ಪಟ್ಟಿಯನ್ನು ನೀಡಲಾಗಿದ್ದು, ಜಾತಿ ಜನಗಣತಿ ವೇಳೆ ಜಾತಿಗಳಿಗೆ ಕೋಡ್ ಕೂಡ ನೀಡಲಾಗಿದೆ. ನೀವು ನಿಮ್ಮ ಜಾತಿಯ ಹೆಸರು ಹೇಳಿದರೆ ಗಣತಿದಾರ ಜಾತಿ ಹೆಸರನ್ನು ನಮೂದಿಸುವುದಿಲ್ಲ. ಬದಲಾಗಿ ಜಾತಿಗೆಂದು ನಿಗದಿಯಾಗಿರುವ ಪ್ರತ್ಯೇಕ ಕೋಡ್‍ನ್ನು ನಮೂದಿಸುತ್ತಾರೆ. ಹೀಗಾಗಿ ಜಾತಿ ಕೋಡ್ ನಮೂದಿಸುವಾಗ ಗಮನಿಸಿ ಎಚ್ಚರ ತಪ್ಪಬೇಡಿ. ಸುಮಾರು 1.33 ಲಕ್ಷ ಗಣತಿದಾರರು ಜಾತಿ ಜನಗಣತಿಗೆ ಸಂಯೋಜನೆಗೊಂಡಿದ್ದು, ಒಬ್ಬ ಗಣತಿದಾರ 120 ರಿಂದ 150 ಮನೆಗಳನ್ನು ಗಣತಿ ನಡೆಸುತ್ತಾರೆ. ನಿಮ್ಮ ಮಾಹಿತಿಯನ್ನು ಸರಿಯಾಗಿ ನಮೂದಿಸಿಕೊಳ್ಳದ ಗಣತಿದಾರರ ವಿರುದ್ಧವೂ ದೂರು ನೀಡಬಹುದಾಗಿದ್ದು, ಆಯೋಗಕ್ಕೆ ಆನ

FREEGKSMS ನಲ್ಲಿ ಪ್ರಕಟವಾದ ಇಂದಿನ 11 ಪ್ರಶ್ನೆಗಳಿಗೆ ಸರಿ ಉತ್ತರಗಳು. 10/04/2015

FREEGKSMS ನಲ್ಲಿ ಪ್ರಕಟವಾದ ಇಂದಿನ 11 ಪ್ರಶ್ನೆಗಳಿಗೆ ಸರಿ ಉತ್ತರಗಳು. 10/04/2015 01. ಭಾರತೀಯ ಷೇರು ವಿನಿಮಯ ಕೇಂದ್ರದ (Security Exchange Board of India -SEBI) ಮಾರ್ಗಸೂಚಿಯನ್ವಯ ಮ್ಯೂಚುಯಲ್ ಫಂಡ್ ಗಳನ್ನು ಅವುಗಳು ಹೊಂದಿರುವ 'ರಿಸ್ಕ್'ಗಳಿಗೆ ಅನುಗುಣವಾಗಿ ಬಾಂಡ್ ಗಳಿಗೆ ಈ ಕೆಳಗಿನ ಬಣ್ಣಗಳನ್ನು ನೀಡಿದೆ, ಇವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದಿರುವುದು ಯಾವುದು? A. ನೀಲಿ ಬಣ್ಣ- ಕಡಿಮೆ ರಿಸ್ಕ್ ಸಂಕೇತ B. ಹಳದಿ ಬಣ್ಣ- ಮಧ್ಯಮ ರಿಸ್ಕ್ ಸಂಕೇತ C. ಕೆಂಪು ಬಣ್ಣ- ರಿಸ್ಕ್ ರಹಿತ ಸಂಕೇತ■■■ D. ಕಂದು ಬಣ್ಣ- ಅತಿ ಹೆಚ್ಚು ರಿಸ್ಕ್ ಸಂಕೇತ 02. ಪ್ರತಿಷ್ಠಿತ ಆಸ್ಕರ್ ಮತ್ತು ಬೂಕರ್ ಪ್ರಶಸ್ತಿ ಪಡೆದ ಪ್ರಪಂಚದ ಏಕೈಕ ಪ್ರತಿಭೆ ಯಾರು A. ಅಮೆರಿಕಾದ ಸ್ಟೀವನ್ ಸ್ಪೀಲ್ ಬರ್ಗ್ B. ಜಪಾನಿನ ಲಾ-ನಿ-ಟು C. ಲಂಡನ್ನಿನ ರಿಕಿ ಕೇಜ್ D. ಜರ್ಮನಿಯ ರುಥ್ ಪ್ರಾವರ್ ಝಬ್ ವಾಲ■■■ 03. ಸದ್ಯ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ "ಡೆಂಗ್ಯೂ" ಜ್ವರದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ    1 ಡೆಂಗ್ಯೂ ಜ್ವರ ವೈರಸ್ ನಿಂದ ಬರುವಂತ ಖಾಯಿಲೆಯಾಗಿದೆ     2 ಈಡಿಸ್ ಎಂಬ ಸೊಳ್ಳೆ ಈ ಖಾಯಿಲೆಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ     3 ಡೆಂಗ್ಯೂ ಜ್ವರಕ್ಕೆ ಯಾವುದೇ ಔಷಧವಿಲ್ಲ    4 ಪರಂಗಿ ಮರದ ಎಲೆಯ ರಸ ಮತ್ತು ಗ್ಯಾಂಬೂಸಿಯಾ ಮೀನು ರೋ

India successfully test-fired nuclear weapons- capable Dhanush missile from a ship, off the Odisha coast on Thursday.

Image
ನೌಕಾಧಾರಿತ ಅಣ್ವಸ್ತ್ರ ಕ್ಷಿಪಣಿ 'ಧನುಷ್': ಪರೀಕ್ಷೆ ಯಶಸ್ವಿ ಒಡಿಷಾ: ಭಾರತದ ನೌಕಾಧಾರಿತ ಅಣ್ವಸ್ತ್ರ ಕ್ಷಿಪಣಿ 'ಧನುಷ್'ನ ಪರೀಕ್ಷಾರ್ಥ ಉಡ್ಡಯನ ಗುರುವಾರ ಒಡಿಷಾ ಕಡಲ ತೀರದ ನೌಕೆಯೊಂದರಲ್ಲಿ ನಡೆಯಿತು. ನೌಕಾಧಾರಿತ ಅಣ್ವಸ್ತ್ರ ಕ್ಷಿಪಣಿ ಧನುಷ್ 500 ಕೆ.ಜಿ. ತೂಕದ ಅಣ್ವಸ್ತ್ರ ಕೊಂಡೊಯ್ಯುವ ಸಾಮರ್ಥ್ಯಹೊಂದಿದೆ. ಈ ಅಣ್ವಸ್ತ್ರ ಕ್ಷಿಪಣಿಯನ್ನು ಆಫ್​ಶೋರ್ ಪ್ಯಾಟ್ರೋಲಿಂಗ್ ವೆಸೆಲ್​ನ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ವಿಭಾಗದ ಸಿಬ್ಬಂದಿ ಗುರುವಾರ ಬೆಳಗ್ಗೆ 11. 02ಕ್ಕೆ ಪರೀಕ್ಷಾರ್ಥ ಉಡ್ಡಯನ ನಡೆಸಿದರು. ನಿಗದಿತ ಗುರಿಗೆ ಕರಾರುವಾಕ್ ಆಗಿ ಅಪ್ಪಳಿಸುವ ಮೂಲಕ ಇದೊಂದು ಪರಿಪೂರ್ಣ ಕ್ಷಿಪಣಿ ಎಂದು ಸಾಬೀತಾಗಿದೆ. ಕ್ಷಿಪಣಿ ಭೂಮಿ ಹಾಗೂ ಸಮುದ್ರ ಎರಡೂ ಕಡೆ ಇರುವ ಗುರಿಯ ಮೇಲೆ ಕಾರ್ಯನಿರ್ವಹಿಸಬಲ್ಲದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ರೂಪಿಸಿದ 5 ಪ್ರಮುಖ ಕ್ಷಿಪಣಿಗಳ ಪೈಕಿ ಧನುಷ್ ಕೂಡ ಒಂದು ಎಂದು ವಿಜ್ಞಾನಿಗಳು ತಿಳಿಸಿದರು.

HIGHSCHOOL TEACHERS ' RECRUITMENT : CET ON 13,14 AND 15 OF JUNE,2015

Image

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು.09-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು.09-04-2015 01.ಅಕ್ಟೋಬರ್ 1959 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಯಿತು ? A. ಕರ್ನಾಟಕ B. ರಾಜಸ್ತಾನ ■■■ C. ಕೇರಳ D. ಮಹಾರಾಷ್ಟ್ರ 02. ಈ ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗಿದೆ     1ಮೃಚ್ಛಕಟಿಕ          -     ಶೂದ್ರಕ     2ಬುದ್ಧಚರಿತ          -     ವಸುಬಂಧು     3ಮುದ್ರಾರಾಕ್ಷಸ      -     ವಿಶಾಖದತ್ತ     4ಹರ್ಷಚರಿತ          -      ಬಾಣಬಟ್ಟ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ A. 1, 3 ಮತ್ತು 4■■■ B. 1, 2 ಮತ್ತು 3 C. 2, 3 ಮತ್ತು 4 D. ಮೇಲಿನ ಎಲ್ಲವೂ 03. ಬ್ಯಾಂಕುಗಳು ತಮ್ಮ ನಗದು ಹಣ ಮತ್ತು ಒಟ್ಟು ಆಸ್ತಿಗಳ ನಡುವೆ ಹೊಂದಿರಲೇಬೇಕಾದ ಅನುಪಾತವನ್ನು ಈ ರೀತಿ ಕರೆಯುತ್ತಾರೆ. A. ಶಾಸನೀಯ ಬ್ಯಾಂಕ್ ಅನುಪಾತ (Statutory Bank Ratio) B. ಶಾಸನೀಯ ದ್ರವ್ಯತ್ವ ಅನುಪಾತ (Statutory Liquid Ratio) C. ನಗದು ಮೀಸಲು ಅನುಪಾತ (Cash Reserve Ratio)■■■ D. ಕೇಂದ್ರ ದ್ರವ್ಯತ್ವ ಮೀಸಲು (Central Liquid Reserve) 04. ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ A

South India's First Canal(Alamatti Left Bank) Solar Panel Unveiled Today

Image
ದಕ್ಷಿಣ ಭಾರತದ ಮೊದಲ ಕಾಲುವೆ ಸೌರಫ‌ಲಕ ಇಂದು ಲೋಕಾರ್ಪಣೆ ಉದಯವಾಣಿ, Apr 09, 2015, 3:40 AM IST ಬಾಗಲಕೋಟೆ:  ಆಲಮಟ್ಟಿ ಬಲದಂಡೆ ಕಾಲುವೆ ಮೇಲೆ ನಿರ್ಮಿಸಿದ ಸೌರಶಕ್ತಿ ವಿದ್ಯುತ್‌ ಉತ್ಪಾದನೆಯ ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಲಿದೆ. ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನೀರಾವರಿ ಕಾಲುವೆಯೊಂದರ ಮೇಲೆ ಸ್ಥಾಪಿಸಿದ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕ ಎಂಬ ಖ್ಯಾತಿಗೆ ಇದು ಒಳಗಾಗಲಿದೆ. ಇದೇ ವೇಳೆ, ಆಲಮಟ್ಟಿ ಜಲಾಶಯದಲ್ಲಿ ನೂತನವಾಗಿ ಅಳವಡಿಸಿದ "ಲಾಲ್‌ ಬಹದ್ದೂರ್‌ ಶಾಸ್ತ್ರೀ ಸಾಗರ' ಮೆಟ್ಯಾಲಿಕ್‌ ನಾಮಫಲಕ ಅನಾವರಣ ಕಾರ್ಯಕ್ರಮ ಕೂಡ ನಡೆಯಲಿದೆ. ಗುರುವಾರ ಸಂಜೆ 4:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯನ್ನು ಲೋಕಾರ್ಪಣೆಗೈಯಲಿದ್ದು, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಐಟಿ-ಬಿಟಿ ಸಚಿವ ಎಸ್‌.ಆರ್‌.ಪಾಟೀಲ ಉಪಸ್ಥಿತರಿರಲಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಮೊದಲು: ಗುಜರಾತ್‌ನಲ್ಲಿ ಕಾಲುವೆಗಳ ಮೇಲೆ ನಿರ್ಮಿಸಲಾದ ಸೌರ ವಿದ್ಯುತ್‌ ಉತ್ಪಾದನಾ ಘಟಕ ಮಾದರಿಯಲ್ಲೇ ಬಾಗಲಕೋಟೆ ತಾಲೂಕಿನ ರಾಮಪುರ ಬಳಿ ಇರುವ ಆಲಮಟ್ಟಿ ಬಲದಂಡೆ ಕಾಲುವೆಯ ಮೇಲೆ ಈ ಘಟಕ ಸ್ಥಾಪಿಸಲಾಗಿದೆ. ದಕ್ಷಿಣ ಭಾರತದಲ್ಲಿಯೇ ಇಂತಹ ಘಟಕ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಕಾಲುವೆ ಆರಂಭದ 8ನೇ ಕಿ.ಮೀ.ನಿಂದ 10.50 ಕಿಮೀ.ವರೆಗೆ ಸುಮಾರು 2.50 ಕಿ.ಮೀ.ದೂರ ಈ ಘಟಕ ನಿರ್ಮಾಣವಾಗಿದೆ. ಒಟ್ಟು 3,280 ಸೌರಫಲಕಗಳನ್ನು ಅಳವಡಿಸ

ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನಸೀಂ ಜೈದಿ:

Image
ನವದೆಹಲಿ, ಏ.9- ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ಹಾಲಿ ಆಯುಕ್ತ ನಸೀಂ ಜೈದಿ ಅವರು ನೇಮಕವಾಗುವುದು ಖಚಿತವಾಗಿದೆ. ಹಾಲಿ ಆಯುಕ್ತರಾಗಿರುವ ನಸೀಂ ಜೈದಿ ಅವರನ್ನೇ ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದು, ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ದೊರಕಿದೆ . ಇದೇ ತಿಂಗಳ 19ರಂದು ಹಾಲಿ ಆಯುಕ್ತ ಎಚ್.ಎಸ್.ಬ್ರಹ್ಮ ಅಧಿಕಾರಾವಧಿ ಮುಗಿಯಲಿದೆ. ಅಂದೇ ನಸೀಂ ಜೈದಿ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. .

ಐವರು ಕನ್ನಡಿಗರಿಗೆ ಪದ್ಮ ಪುರಸ್ಕಾರ

Image

FREEGKSMS ನ ಇಂದಿನ ನೇರ ಪ್ರಶ್ನೆಗಳಿಗೆ ನೇರ ಉತ್ತರಗಳು.(08-04-2015)

FREEGKSMS ನ ಇಂದಿನ ನೇರ ಪ್ರಶ್ನೆಗಳಿಗೆ ನೇರ ಉತ್ತರಗಳು.(08-04-2015) 01.ರಾಜ್ಯ ಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ A. ಉಪ ರಾಷ್ಟ್ರಪತಿಯು ಪದನಿಮಿತ್ತ ರಾಜ್ಯಸಭೆಯ ಅಧ್ಯಕ್ಷರಾಗಿರುತ್ತಾರೆ B.ರಾಜ್ಯಸಭೆಯು ಪ್ರಧಾನ ಮಂತ್ರಿಗಳಿಂದ ನಾಮನಿರ್ದೇಶನಗೊಂಡ 12 ಸದಸ್ಯರನ್ನೊಳಗೊಂಡಿದೆ●●● C. ಪ್ರತಿ ಎರಡು ವರ್ಷಗಳಿಗೊಮ್ಮೆ ರಾಜ್ಯಸಭೆಯ 1/3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ D. ರಾಜ್ಯಸಭೆಯನ್ನು ವಿಸರ್ಜಿಸಲು ಅವಕಾಶವಿಲ್ಲ ನಾಮನಿರ್ದೇಶನಗೊಂಡ 12 ಸದಸ್ಯರನ್ನೊಳಗೊಂಡಿದೆ 02.ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದು ಹೋಗುತ್ತದೆ 1ಮಹಾರಾಷ್ಟ್ರ 2ಪಶ್ಚಿಮ ಬಂಗಾಳ 3ಮಣಿಪುರ 4ತ್ರಿಪುರ 5ಜಾರ್ಖಂಡ್ A. 1, 3, 4 ಮತ್ತು 5 B.2, 3 ಮತ್ತು 5 C. 1, 2, 3 ಮತ್ತು 4 D. 2, 4 ಮತ್ತು 5●●● 03 ಪಶ್ಚಿಮ ಕರಾವಳಿ ತೀರ ಮೈದಾನ ಪ್ರದೇಶಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ. 1 ಡಿಯು ನಿಂದ ಗೋವ ವರೆಗಿನ ಪಶ್ಚಿಮ ಕರಾವಳಿ ಪ್ರದೇಶವನ್ನು 'ಕೊಂಕಣ' ತೀರ ಮೈದಾನಗಳು ಎಂದು ಕರೆಯುತ್ತಾರೆ 2ಈ ತೀರ ಪ್ರದೇಶಗಳು ಉತ್ತರದ ಕಡೆ ಕಿರುದಾಗಿಯೂ ದಕ್ಷಿಣದ ಕಡೆಗೆ ವಿಶಾಲವಾಗಿಯೂ ಇದೆ ಇವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ A. 1 ಮಾತ್ರ ಸರಿಯಾಗಿದೆ B.2 ಮಾತ್ರ ಸರಿಯಾಗಿದೆ C. 1 ಮತ್ತು 2 ಸರಿಯಾ

ಸಣ್ಣ ಉದ್ದಿಮೆದಾರ ಆಶಾಕಿರಣ 'ಮುದ್ರಾ ಬ್ಯಾಂಕ್'

ಗೆ ಮೋದಿ ಚಾಲನೆ ನವದೆಹಲಿ,ಏ.8-ನಮ್ಮ ಸರ್ಕಾರ ಸಣ್ಣ ಸಣ್ಣ ಉದ್ಯಮಿಗಳು ಹಾಗೂ ರೈತರ ಪರ ಸರ್ಕಾರವಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಮುದ್ರಾ ಬ್ಯಾಂಕ್(ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ರೀಫೈನಾನ್ಸ್ ಏಜೆನ್ಸಿ)ಗೆ ಚಾಲನೆ ನೀಡಿ ಅವರು ಮಾತನಾಡಿದರು. ಗುಜರಾತ್ನಲ್ಲಿ ಗಾಳಿಪಟ ಉದ್ಯಮದಲ್ಲಿ ಈ ರೀತಿಯ ಮುದ್ರಾ ಬ್ಯಾಂಕ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ಪರೀಕ್ಷೆ ಮಾಡಿದ್ದೇನೆ. ಗಾಳಿಪಟ ಉದ್ಯಮ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಅಭಿವೃದ್ದಿ ಹೊಂದಿದೆ. ಭಾರೀ ಉದ್ದಿಮೆಗಳಿಗಿಂತ ದೇಶದ ಅಭಿವೃದ್ಧಿ, ಉದ್ಯೋಗವಕಾಶಗಳಲ್ಲಿ ಸಣ್ಣ ಉದ್ದಿಮೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಇಂದಿನ ಈ ಮುದ್ರಾ ಬ್ಯಾಂಕ್ ಯೋಜನೆಯಿಂದ ದೇಶದಲ್ಲಿ 5.77 ಕೋಟಿ ಮೈಕ್ರೊ ಬ್ಯಾಂಕ್ಗಳು ಕಾರ್ಯಾರಂಭ ಮಾಡಲಿದ್ದು, ಹಲವಾರು ಕೋಟಿ ಸಣ್ಣ ಉದ್ದಿಮೆದಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮೋದಿ ಹೇಳಿದ್ದಾರೆ. ರೈತರ ಕಲ್ಯಾಣಕ್ಕಾಗಿ ನಾವು ಮಾರ್ಗಸೂಚಿಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇವೆ. ಈ ಬದಲಾವಣೆಯಿಂದಾಗಿ ಅತಿವೃಷ್ಟಿ-ಅನಾವೃಷ್ಟಿ ಸೇರಿದಂತೆ ವಿವಿಧ ಬಗೆಯ ಪ್ರಕೃತಿ ವಿಕೋಪಗಳಿಂದುಂಟಾಗುವ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಲ

2014ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

ಬೆಂಗಳೂರು, ಏ.7- ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪತ್ರಕರ್ತರಿಗೆ ನೀಡಲಾಗುವ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2014ನೆ ಸಾಲಿನ ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿಯನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವಿಜಯಕರ್ನಾಟಕ ವರದಿಗಾರ ಸಿದ್ಧಲಿಂಗ ಸ್ವಾಮಿ, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಯನ್ನು ರಾಯಚೂರು ವಾಣಿ, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಯನ್ನು , ಉತ್ತರ ಕನ್ನಡ ಜಿಲ್ಲೆಯ ಲೋಕ ದುನಿ ದಿನಪತ್ರಿಕೆಯ ವರದಿಗಾರ ಶ್ರೀಧರ ಅವರಿಗೆ ನೀಡಲಾಗಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2014ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿ ಈ ಕೆಳಕಂಡವರಿಗೆ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 16ರಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದ್ದು , ಪ್ರಶಸ್ತಿ ಪುರಸ್ಕೃತರಿಗೆ 20,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಪುರಸ್ಕೃತರ ಪಟ್ಟಿ 2014ರ ವಿಶೇಷ ಪ್ರಶಸ್ತಿ ಎಂ.ಎಸ್. ಪ್ರಭಾಕರ್ (ಕಾಮರೂಪಿ)- (ಕೋಲಾರ) 2014ನೇ ಸಾಲಿನ ವಾರ್ಷಿಕ ಪ್ರಶಸ್ತಿ 1.ಕೋಟಿಗಾನಹಳ್ಳಿ ರಾಮಯ್ಯ - (ಕೋಲಾರ) 2. ಎಂ.ಕೆ. ಭಾಸ್ಕರರಾವ್ - (ಶಿವಮೊಗ್ಗ) 3. ಎಂ. ನಾಗ

High-school Teacher's Recruitment Gazette Apr 2,2015: apply from Apr 6 onwards

Image

Top Indian mountaineer Malli Mastan Babu , who went missing on Mar 24, found dead:

Image
ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಮೃತದೇಹ ಪತ್ತೆ Published: 04 Apr 2015 11:28 AM IST | Updated: 04 Apr 2015 11:39 AM IST ಮಲ್ಲಿ ಮಸ್ತಾನ್ ಬಾಬು ನವದೆಹಲಿ:  ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರ ಮೃತದೇಹ ಪತ್ತೆಯಾಗಿದೆ. ಮಾರ್ಚ್ 24ರಂದು ಕಣ್ಮರೆಯಾಗಿದ್ದ ಅವರ ಮೃತದೇಹವನ್ನು ರಕ್ಷಣಾ ತಂಡ ಹೊರ ತೆಗೆದಿದೆ. ಅರ್ಜೆಂಟಿನಾ ಮತ್ತು ಚಿಲಿ ನಡುವಿನ ಎತ್ತರದ ಪರ್ವತಗಳನ್ನು ಹತ್ತಲು ಹೋಗಿದ್ದರು. ಈ ವೇಳೆ ಮಲ್ಲಿ ಮಸ್ತಾನ್ ಬಾಬು ಕಣ್ಮರೆಯಾಗಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ ಎಂದು ಮಸ್ತಾನ್ ಬಾಬು ಅವರ ಸ್ನೇಹಿತ ಸತ್ಯಂ ಭೀಮರಶೆಟ್ಟಿ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ. ಮಸ್ತಾನ್ ಬಾಬು ಕಣ್ಮರೆಯಾದ ದಿನದಿಂದ ಅವರ ಸ್ನೇಹಿತ ಸತ್ಯಂ ಅವರು ಫೇಸ್ ಬುಕ್ ಪೇಜ್ ನಲ್ಲಿ ಬಾಬು ಅರ್ಜೆಂಟಿನಾ, ಚಿಲಿ ಪರ್ವತಗಳ ನಡುವೆ ಕಣ್ಮರೆಯಾಗಿದ್ದಾರೆ ಎಂದು ಘೋಷಿಸಿದ್ದರು. ಅರ್ಜೆಂಟಿನಾ ಮತ್ತು ಚಿಲಿ ದೇಶಗಳ ಹೆಲಿಕಾಫ್ಟರ್ ತಂಡ ಅಂಡೇಸ್ ಪರ್ವತಗಳಲ್ಲಿ ಮಲ್ಲಿ ಮಸ್ತಾನ್ ಬಾಬು ಅವರಿಗಾಗಿ ಹುಡುಗಾಟ ನಡೆಸಿದ್ದವು. ಉತ್ತರ ಅಮೆರಿಕಾದ ಮೌಂಟ್‌ ದೆನಾಲಿ, ಅಂಟಾರ್ಟಿಕಾದ ಮೌಂಟ್‌ ವಿನ್ಸರ್‌ ಮಾಸ್ಸಿಫ್‌, ಆಸ್ಟ್ರೇಲಿಯಾದ ಕೊಸಸಿಯೋಸ್ಕೋ ಮತ್ತು ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ವಿಶ್ವದ ಎಲ್ಲ ಏಳು ಗಿರಿಶೃಂಗಗಳನ್ನು ಏರಿದ ಭಾರತೀಯ ಎಂಬ ಖ್ಯಾತಿಗೆ ಆಂಧ್ರಪ್

FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು. 07-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು. 07-04-2015 01).  ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮೆರಿನ್‌) ನೌಕೆ  a) ಸ್ಕಾರ್ಪಿಯನ್●‌ b) ವಿಕ್ರಮಾದಿತ್ಯಾ c) ಸೌರಭಿ d) ತೇಜಸ್ 02). ಮುಂಬೈನ ಮಜಗಾಂವ್‌ ಹಡಗುಕಟ್ಟೆಯಲ್ಲಿ ಸೋಮವಾರ ಭಾರತೀಯ ನೌಕಪಡೆಗೆ ಹಸ್ತಾಂತರಗೊಂಡ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆ 'ಸ್ಕಾರ್ಪಿಯನ್‌'ನ್ನು ಹಸ್ತಾಂತರಿಸಿದ ಭಾರತದ ರಕ್ಷಣಾ ಸಚಿವರು ಯಾರು? a) ದೇವೇಂದ್ರ ಫಡ್ನವೀಸ್ b) ಮನೋಹರ್‌ ಪರಿಕ್ಕರ್●‌ c) ಸುರೇಶ್ ಪ್ರಭು d) ಯಾರೂ ಅಲ್ಲ 03).  ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ದೇಶದ ಮೊದಲ ವಾಯು ಗುಣಮಟ್ಟ ಸೂಚಕಕ್ಕೆ ಸೋಮವಾರ ಯಾರು ಚಾಲನೆ ನೀಡಿದರು? a) ರಾಷ್ಟಪತಿ ಪ್ರಣಬ್ ಮುಖರ್ಜಿ b) ಮನಮೋಹನ್ ಸಿಂಗ್ c) ಪ್ರಧಾನಿ ನರೇಂದ್ರ ಮೋದಿ ● d) ಅರವಿಂದ ಕೇಜ್ರಿವಾಲ್ 04). ದೇಶದ ಮೊದಲ ವಾಯು ಗುಣಮಟ್ಟ ಸೂಚಕಕ್ಕೆ ಪ್ರಧಾನಿ ಎಲ್ಲಿ ಚಾಲನೆ ನೀಡಿದರು? a) ಮುಂಬೈ b) ಕೋಲ್ಕತ್ತ c) ಹರಿಯಣ d) ಹೊಸದಿಲ್ಲಿ● 05). 'ಮೊನಾಲಿಸಾ' ಚಿತ್ರವನ್ನು ಬಿಡಿಸಿದ ಕಲಾವಿಧ ಯಾರು? a) ಲಿಯೊನಾರ್ಡೋ ಡಾ ವಿಂಚಿ● b) ಮಾರ್ಟೀನ್ ಲೂಥರ್ c) ಮೈಕಲ್ ಎಂಜೆಲೋ d) ರಾಫೆಲ್ 06). ಒಲಂಪಿಕ್ ನಂತರ ಅತೀ ದೊಡ್ಡ ಕ್ರೀಡಾಕೂಟ ಯಾವುದು ? a) ಏಶಿಯನ್ ಕ್ರೀ