Posts

ಐಬಿಪಿಎಸ್ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ

Image
ಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಹಣಕಾಸಿನ ಲಾಬಿ: ನೊಂದ ಅಭ್ಯರ್ಥಿPublished: 11 May 2015 03:22 PM IST | Updated: 11 May 2015 03:33 PM ISTಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಅವ್ಯವಹಾರ ನಡೆದಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದ ನೊಂದ ಅಭ್ಯರ್ಥಿ ಧನರಾಜು, ವಿರೇಶ್ ಬೆಂಗಳೂರು: ಸರಕಾರಿ ಬ್ಯಾಂಕ್‌ಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಸಮಿತಿ ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಿದೆ. ಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಲಾಭಿ ನಡೆದಿದೆ. ಲಿಖಿತ ಪರೀಕ್ಷೆ ಹೊರ ರಾಜ್ಯದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕವನ್ನು ನಾವು ಪಡೆದಿದ್ದರೂ, ಸಂದರ್ಶನದಲ್ಲಿ ನಮಗೆ ಉದ್ದೇಶಕ ಪೂರ್ವಕವಾಗಿ ಕಡಿಮೆ ಅಂಕಗಳನ್ನು ನೀಡಿ ಐಬಿಪಿಎಸ್ ಸಂದರ್ಶನ ವಿಭಾಗ ಅಕ್ರಮವೆಸಗಿದೆ ಎಂದು ನೊಂದ ಅಭ್ಯರ್ಥಿ ಧನರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 2014 ರಲ್ಲಿ ಕ್ಲರಿಕಲ್ 1990 ಹುದ್ದೆಗಳಿಗಾಗಿ ಐಬಿಪಿಎಸ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1200ಕ್ಕಿಂತ ಹೆಚ್ಚು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅಭ್ಯರ್ಥಿಗಳು ನಮಗಿಂತಲೂ ಸಾಕಷ್ಟು ಅಂಕಗಳ ಅಂತರ ಹೊಂದಿದ್ದಾರೆ. ಆದರೆ, ಸಂದರ್ಶನ ವೇಳೆ ಹಣಕಾಸು ಲಾಭಿ ನಡೆಸಿ ಅವರಿಗೆ ಹೆಚ

ಹೊಸ ಮಾದರಿಯಲ್ಲಿ ಬ್ಯಾಂಕಿಂಗ್ ಪರೀಕ್ಷೆ (full details)

ಎ.ಎಂ. ಸುರೇಶ Mon, 05/11/2015 - 01:00 ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡುತ್ತಿರುವ ಬ್ಯಾಂಕಿಂಗ್ ಕ್ಷೇತ್ರ ನಿರುದ್ಯೋಗಿಗಳ ಪಾಲಿನ ಕಾಮಧೇನು ಎಂದರೆ ತಪ್ಪಾಗಲಾರದು. ಅರ್ಥ ವ್ಯವಸ್ಥೆಯ ವಿಸ್ತಾರ ಹಾಗೂ ಸರ್ಕಾರಗಳ ಸಕಾರಾತ್ಮಕ ಧೋರಣೆಯಿಂದಾಗಿ ಬ್ಯಾಂಕಿಂಗ್ ಮತ್ತು ವಿಮಾ ವಲಯ ಇಂದು ಅಗಾಧವಾಗಿ ಬೆಳವಣಿಗೆಯಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೊಸದಾಗಿ ಬ್ಯಾಂಕ್ ಶಾಖೆಗಳು ಆರಂಭವಾಗುತ್ತಿದ್ದು, ಜನರಿಗೆ ಸೇವೆ ನೀಡುವುದರ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತಿವೆ. ಸರ್ಕಾರಿ ಸ್ವಾಮ್ಯದ 27 ಬ್ಯಾಂಕ್‌ಗಳು ಸೇರಿದಂತೆ ದೇಶದಲ್ಲಿ 143 ವಾಣಿಜ್ಯ ಬ್ಯಾಂಕುಗಳಿವೆ. 20 ಖಾಸಗಿ ಬ್ಯಾಂಕ್‌ಗಳು ಹಾಗೂ 40 ವಿದೇಶಿ ಬ್ಯಾಂಕ್‌ಗಳು ದೇಶದಲ್ಲಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಉದ್ಯಮವಾಗಿದೆ. ಸುಮಾರು 12 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದು, ವಾರ್ಷಿಕ ಒಂದು ಲಕ್ಷ ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ವರ್ಷಕ್ಕೆ ಎರಡು ಲಕ್ಷ ನೇಮಕಾತಿ ನಡೆಯಲಿದ್ದು, ಒಂದು ಅಂದಾಜಿನ ಪ್ರಕಾರ 2022ರ ವೇಳೆಗೆ ಹದಿನಾಲ್ಕು ಲಕ್ಷ ಜನರ ನೇಮಕವಾಗಲಿದೆ. ನಿವೃತ್ತಿಯ ಅಂಚಿನಲ್ಲಿ ಇರುವವರ ಸಂಖ್ಯೆ ಹೆಚ್ಚಾಗಿದ್ದು, 3-4 ವರ್ಷಗಳಲ್ಲಿ ನಾಲ್ಕು ಲಕ್ಷ ಮಂದಿ ನಿವೃತ್ತಿಯಾಗಲಿದ್ದಾರೆ. ಈ ಹುದ್ದೆಗಳನ್ನು ತುಂಬುವುದರ ಜೊತೆಗೆ ಹೊಸದಾಗಿ ಸೃಷ್ಟಿಯಾಗುವ ಹುದ್ದೆಗ

ಅಮೆರಿಕದಲ್ಲಿ ಹಿಂದಿ ಕಲಿಕೆಗೆ ಅವಕಾಶ

Published: 11 May 2015 10:23 AM IST ಮೋಂಟಾನ ವಿಶ್ವವಿದ್ಯಾನಿಲಯ ವಾಷಿಂಗ್ಟನ್: ಅಮೆರಿಕದಲ್ಲಿರುವವರೂ ಇನ್ನು ಮುಂದೆ ಹಿಂದಿ ಭಾಷೆ ಕಲಿಯಲು ಅವಕಾಶ ಉಂಟು. ಮುಂದಿನ ಶೈಕ್ಷಣಿಕ ವರ್ಷದಿಂದ ಮೋಂಟಾನದ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರ ಭಾಷೆಯನ್ನು ಕಲಿಸಲಿದೆ. ವಿಶ್ವವಿದ್ಯಾನಿಲಯದಲ್ಲಿ 2015-16ನೇ ಸಾಲಿನಲ್ಲಿ ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಅಧ್ಯಯನ ಕಾರ್ಯಕ್ರಮದಲ್ಲಿ ಹಿಂದಿ ಕಲಿಕೆ ತರಗತಿ ಹಮ್ಮಿಕೊಳ್ಳಲಾಗಿದೆ. ಭಾರತ ಮೂಲದ ಗೌರವ್ ಮಿಶ್ರಾ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ, ಹಿಂದಿಯನ್ನು ಸಾಮಾನ್ಯ ಶೈಕ್ಷಣಿಕ ಭಾಷೆಯಾಗಿ ಆಯ್ಕೆ ಮಾಡಲು ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ

ಜಮಖಂಡಿ ಅಜ್ಜಿಯ ಬದನೆಗೆ ರಾಷ್ಟ್ರಪ್ರಶಸ್ತಿ!

Image
ಉದಯವಾಣಿ, May 10, 2015, 3:40 AM IST ಹುಬ್ಬಳ್ಳಿ:  ಅಂತಾರಾಷ್ಟ್ರೀಯ ಬೀಜ ಕಂಪನಿಗಳು ಪುನರ್ಬಳಕೆ ಮಾಡಲಾಗದ ಹಾಗೂ ರೋಗನಿರೋಧಕ, ಕುಲಾಂತರಿ ತಳಿ ಹೆಸರಿನಲ್ಲಿ ಬಿತ್ತನೆ ಬೀಜಗಳ ಮೇಲೆ ಪಾರಮ್ಯ ಸಾಧಿಸುತ್ತಿರುವ ಸಮಯದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುಲ್ಯಾಳದ ಗುಡ್ಡದ ಸಾವಯವ ಕರಿಬದನೆ ದೇಶ-ವಿದೇಶಗಳಲ್ಲಿ ಬೀಜ ಕಂಪನಿಗಳಿಗೆ ಸಡ್ಡು ಹೊಡೆದಿದೆ. ಹುಲ್ಯಾಳದ ರೈತ ಮಹಿಳೆ ಲಕ್ಷ್ಮೀಬಾಯಿ ಜುಲ್ಫಿ 50 ವರ್ಷಗಳ ಹಿಂದೆ ತಮ್ಮ ಹೊಲದ ಹತ್ತಿರ ಇದ್ದ ಗುಡ್ಡದ ಬಳಿ ಕಂಡ ಬದನೆಕಾಯಿ ತಂದು ಹೊಲದಲ್ಲಿ ನಾಟಿ ಮಾಡಿದ್ದರು. ತನ್ನ ಗಾತ್ರ ಹಾಗೂ ಸಿಹಿರುಚಿಯಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡ ಈ ಗುಡ್ಡದ ಕರಿಬದನೆಯನ್ನು ವ್ಯಾಪಾರದ ಉದೇªಶಕ್ಕೆಂದು ಲಕ್ಷ್ಮೀಬಾಯಿ ಅವರ ಪುತ್ರ ರುದ್ರಪ್ಪ ಪ್ರಯೋಗಕ್ಕೆ ಒಳಪಡಿಸಿ ಸಾವಯವ ಕೃಷಿ ವಿಧಾನದಲ್ಲಿ ಬೆಳೆಯಲಾರಂಭಿಸಿದರು. ಇದರಿಂದ ಬದನೆ ಕಾಯಿ ಗಾತ್ರ, ಹೊಳಪು, ಬಣ್ಣ ಹಾಗೂ ರುಚಿಯಲ್ಲಿ ಇನ್ನಷ್ಟು ರೈತರನ್ನು ಆಕರ್ಷಿಸಿತು. ಅದು ಹಲ್ಯಾಳದಿಂದ ಚೀನಾದವರೆಗೂ ಹೆಸರು ಮಾಡಿತು. ರಾಷ್ಟ್ರೀಯ ಗೌರವ: ಸ್ಥಳೀಯ ಬಿತ್ತನೆ ಬದನೆ ಬೀಜವನ್ನು ಉಳಿಸಿ ಬೆಳೆಸಿದ ಕಾರಣಕ್ಕಾಗಿ ರಾಷ್ಟ್ರೀಯ ತಳಮಟ್ಟದ ಸಂಶೋಧನೆ ಮತ್ತು ಸಂಪ್ರದಾಯ ಜ್ಞಾನ ಪ್ರಶಸ್ತಿಯನ್ನು ಮಾರ್ಚ್‌ 7ರಂದು ರಾಷ್ಟ್ರಪತಿಯವರು ಲಕ್ಷ್ಮೀಬಾಯಿ ಜುಲ್ಫಿ ಅವರಿಗೆ ನೀಡಿ ಗೌರವಿಸಿದರು. ಎಕರೆಗೆ 40 ಟನ್‌ ಬದನೆ: ಬದನೆಯು ಸಾವಯವ ಕೃಷಿಯಲ್ಲಿ ಎಕರೆಗೆ

Coming soon!! One SIM with 9 separate mobile Numbers.

ಒಂದೇ ಸಿಮ್‌ ಕಾರ್ಡಿಗೆ 9 ಪ್ರತ್ಯೇಕ ಮೊಬೈಲ್‌ ನಂಬರ್‌! ಉದಯವಾಣಿ, May 10, 2015, 3:40 AM IST ನವದೆಹಲಿ: ಒಂದೇ ಮೊಬೈಲ್‌ನಲ್ಲಿ ಎರಡು ಸಿಮ್‌ ಕಾರ್ಡ್‌ ಬಳಸುವುದು, ತನ್ಮೂಲಕ ಎರಡು ಪ್ರತ್ಯೇಕ ಮೊಬೈಲ್‌ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುವುದು ಈಗ ಮಾಮೂಲಿ ಎಂಬಂತಾಗಿದೆ. ಆದರೆ ಒಂದೇ ಸಿಮ್‌ ಕಾರ್ಡ್‌ ಮೂಲಕ ಒಂಬತ್ತು ಪ್ರತ್ಯೇಕ ನಂಬರ್‌ಗಳನ್ನು ಬಳಸುವಂತಾದರೆ....? ಆ ಕಾಲವಿನ್ನು ದೂರವಿಲ್ಲ. ಬಹುತೇಕ ವರ್ಷಾಂತ್ಯದ ವೇಳೆಗೆ ಇಂತಹ ಸೇವೆಯೊಂದು ಚಾಲನೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಕೆನಡಾ ಮೂಲದ ಮೊಬೈಲ್‌ ಹ್ಯಾಂಡ್‌ಸೆಟ್‌ ತಯಾರಕ ಕಂಪನಿ ಬ್ಲ್ಯಾಕ್‌ಬೆರ್ರಿ ಇಂತಹದ್ದೊಂದು ತಂತ್ರಜ್ಞಾನವನ್ನು ಭಾರತೀಯರಿಗೆ ಪರಿಚಯಿಸಲು ಹೊರಟಿದೆ. ಈ ಹೊಸ ಸೇವೆಗೆ ಕೇಂದ್ರ ಸರ್ಕಾರದ ಅನುಮತಿ ಕೋರಲಾಗುತ್ತಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅನುಮತಿ ಬೇಡಲಾಗುತ್ತಿದೆ. ಇದೇ ವೇಳೆ, ದೇಶೀಯ ಮೊಬೈಲ್‌ ಸೇವಾದಾರ ಕಂಪನಿಗಳ ಜತೆ ಸೇರಿಕೊಂಡು ಇದರ ಪ್ರಾಯೋಗಿಕ ಪರೀಕ್ಷೆಯನ್ನೂ ಆರಂಭಿಸಲಾಗಿದೆ. ವರ್ಷಾಂತ್ಯದ ವೇಳೆಗೆ ವರ್ಚುವಲ್‌ ಸಿಮ್‌ ಸಲ್ಯೂಷನ್‌ಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಬ್ಲ್ಯಾಕ್‌ಬೆರ್ರಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುನೀಲ್‌ ಲಲವಾನಿ ತಿಳಿಸಿದ್ದಾರೆ. ಆದರೆ ಯಾವ ಸೇವಾದಾರ ಕಂಪನಿಗಳ ಜತೆ ಒಪ್ಪಂದ ಏರ್ಪಡಲಿದೆ ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಈಗಾಗಲೇ ಈ ಸೇವೆ ಆಫ್ರಿಕಾದ ಕೆಲವು ಭಾಗಗಳಲ್ಲಿ ಈ

ಠಿಕಾಣಿ ಹೂಡಿದ ಅಧಿಕಾರಿಗಳ ವರ್ಗಾವಣೆಗೆ ಹೊಸ ನಿಯಮ

Image
Published:  10 May 2015 01:59 PM IST ಕಿಮ್ಮನೆ ರತ್ನಾಕರ ಬೆಂಗಳೂರು : ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಇಲಾಖೆ ಅಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರಂತರ ಸೇವೆಗೆ ತಡೆ ಹಾಕಲು ನಿರ್ಧರಿಸಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ ಎಂಬ ಕಾರಣಕ್ಕೆ ಶಿಕ್ಷಕೇತರ ಸಿಬ್ಬಂದಿ ವರ್ಗಾವಣೆಗೆ ನಿಯಮ ರೂಪಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಎರಡು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದರು. ಕೊನೆಗೂ ಹೊಸ ವರ್ಗಾವಣೆ ನಿಯಮ ತರಲು ಸರ್ಕಾರ ನಿರ್ಧರಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ಕಚೇರಿಯಲ್ಲಿ ಗರಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದು. ಆದರೆ ಜಿಲ್ಲಾ ಉಪನಿರ್ದೇಶಕರು ಹಾಗೂ ತತ್ಸಮಾನ ಹುದ್ದೆ ಹೊಂದಿರುವ ಅಧಿಕಾರಿಗಳನ್ನು ಪ್ರತಿ 2 ವರ್ಷಕ್ಕೊಮ್ಮೆ ವರ್ಗ ಮಾಡಲೇಬೇಕು ಎಂದು ಸರ್ಕಾರ ಹೊರಡಿಸಿರುವ ಕರಡು ನಿಯಮದಲ್ಲಿ ಹೇಳಿದೆ. ಸರ್ಕಾರದ ಈ ನಿಯಮಕ್ಕೆ ಯಾವುದೇ ಆಕ್ಷೇಪಣೆಗಳಿದ್ದರೆ ಮೇ 15ರೊಳಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ. ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ ಸ್ವತಃ ಸಚಿವರೇ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನೋಡಿ ಹೌಹಾರಿದ್ದರು. ತಾವೇ ದಾಳಿ ನಡೆಸಿ ಭ್ರಷ್ಟರನ್ನು ಹಿಡಿದಿದ್ದರು. ಇದಕ್ಕಾ

ಶಶಿ ಕಪೂರ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

:- ಬಾಲಿವುಡ್‌ನ ಹಿರಿಯ ನಟ, ನಿರ್ಮಾಪಕ ಶಶಿ ಕಪೂರ್ ಅವರಿಗೆ ಇಂದು  2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 2011ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದಿದ್ದರು.  ಮುಂಬೈನ ಪೃಥ್ವಿ ಟಾಕೀಸ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹಿರಿಯ ನಟನಿಗೆ ಪ್ರಶಸ್ತಿಯನ್ನು ನೀಡಿದರು. ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು ಹಾಗೂ ಪದಕವನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಗ್ ಬಿ ಅಮಿತಾಬ್‌, ರೇಖಾ, ಹೇಮಾಮಾಲಿನಿ, ಜಯಪ್ರದಾ, ರಣ್‌ಬೀರ್‌ ಕಪೂರ್‌, ಸೈಫ್‌ ಅಲಿಖಾನ್‌, ಕರಿಷ್ಮಾ, ಶಬಾನಾ ಅಜ್ಮಿ, ನಟಿ ಜಿನತ್‌ ಅಮಾನ್‌, ಕಪೂರ್‌ ಕುಟುಂಬದ ಬಹುತೇಕ ಸದಸ್ಯರು ಸೇರಿದಂತೆ ಬಾಲಿವುಡ್‌‌ನ ಹಿರಿಯ, ಕಿರಿಯ ದಿಗ್ಗಜರು ಶಶಿಕಪೂರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಮೇ 3ರಂದು ದೆಹಲಿಯಲ್ಲಿ ನಡೆದ 62ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಶಿ ಕಪೂರ್‌ ಅವರಿಗೆ ಈ ಪ್ರಶಸ್ತಿ ನೀಡಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ದೆಹಲಿಗೆ ತೆರಳಲು ಸಾಧ್ಯವಾಗದಿದ್ದುದರಿಂದ ಇಂದು ಮುಂಬೈನ ಪೃಥ್ವಿ ಚಿತ್ರಮಂದಿರದಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗಕ್ಕೆ ಅನುಪಮ ಕೊಡುಗೆ ಸಲ್ಲಿಸುತ್ತಾ ಬಂದಿರುವ 77 ವರ್ಷದ ಶಶಿ ಕಪೂರ್‌ ಅವರಿಗೆ ನೀಡಲಾಗಿರುವ ಈ ಉನ್ನತ ಪ್

ಐಎನ್‌ಎಸ್ ಸರ್ದಾರ್ ಪಟೇಲ್ ನೂತನ ನೌಕಾನೆಲೆ ಉದ್ಘಾಟನೆ

ರವಿವಾರ - ಮೇ -10-2015 ಪೋರಬಂದರ್, ಮೇ 9: ರಕ್ಷಣಾತ್ಮಕವಾಗಿ ಪ್ರಾಮುಖ್ಯವಾದ ಹೊಸ ನೌಕಾನೆಲೆ-ಐಎನ್‌ಎಸ್ ಸರ್ದಾರ್ ಪಟೇಲ್-ಇಂದಿಲ್ಲಿ ಲೋಕಾರ್ಪಣಗೊಂಡಿದೆ. ಅದು ಗುಜರಾತ್‌ನ 1,600 ಕಿ.ಮೀ. ಉದ್ದದ ಕರಾವಳಿಯ ರಕ್ಷಣೆಯನ್ನು ಹೆಚ್ಚಿಸಲು ನೆರವಾಗಲಿದೆಯೆಂದು ಸಮಾರಂಭದಲ್ಲಿ ಭಾಗವಹಿಸಿದ್ದ ಜಲಸೇನಾ ದಂಡನಾಯಕ ಆರ್.ಕೆ.ಧವನ್ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಈ ನೌಕಾನೆಲೆಯನ್ನು ಉದ್ಘಾಟಿಸಿದರು. ಈ ಸಂದರ್ಭವನ್ನು ಹಿಂದಿನ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿಗೆ ಬಳಸಿಕೊಂಡ ಅವರು, ಅದು ರಾಜ್ಯದ ಕರಾವಳಿಯ ಭದ್ರತಾ ಕಳವಳವನ್ನು ನಿರ್ಲಕ್ಷಿಸಿತ್ತೆಂದು ಆರೋಪಿಸಿದರು. ಆನಂದಿ ಬೆನ್ ಫಲಕವೊಂದನ್ನು ಅನಾವರಣಗೊಳಿಸಿ, ನೂತನ ನೆಲೆಯ ಕಾರ್ಯಾರಂಭದ ಆದೇಶವನ್ನು ಓದಿದರು. ಓಖಾದ ಬಳಿಯ ಐಎನ್‌ಎಸ್ ದ್ವಾರಕಾದ ಬಳಿಕ ಇದು ರಾಜ್ಯದಲ್ಲಿ ಭಾರತೀಯ ನೌಕಾಪಡೆಯ ಎರಡನೆಯ ನೆಲೆಯಾಗಿದೆ. ಹೊಸ ನೆಲೆಯು ತನ್ನ ಕರಾವಳಿಯಲ್ಲಿ ಭದ್ರತೆಯನ್ನು ಬಲಗೊಳಿಸಲು ಗುಜರಾತ್‌ಗೆ ನೆರವಾಗಲಿದೆಯೆಂದು ಧವನ್ ಹೇಳಿದರು. ಗುಜರಾತ್ ವೇಗವಾಗಿ ಬೆಳೆಯುತ್ತಿರುವ ಸಮುದ್ರಯಾನ ರಾಜ್ಯವಾಗಿದ್ದು, 1,600 ಕಿ.ಮೀ. ಕರಾವಳಿಯನ್ನು ಹೊಂದಿದೆ. ರಾಜ್ಯವು 43 ಖಾಸಗಿ ಹಾಗೂ ಸಾರ್ವಜನಿಕ ಬಂದರುಗಳನ್ನು ಹೊಂದಿದ್ದು, ದೇಶದ ಸಾಗರೋದ್ಯಮಗಳಲ್ಲಿ ಶೇ.50ರಷ್ಟು ಕೊಡುಗೆ ನೀಡುತ್ತಿವೆ. ಕಛ್ ಕೊಲ್ಲಿಯಿಂದ ಗುಜರಾತ್‌ನ ಬೇರೆ ಬೇರೆ ಸಂಸ್ಕರಣಾಗಾರಗಳಿಗೆ ಸುಮಾರು 12 ಕೋಟಿ ಟನ್ ಕಚ್

Recruitment for the post of 'Lecturers' in Government PU Colleges has been announced. Download notification here.. http://www.kea.kar.nic.in/pue/notification_detailed.pdf

Image

Recruitment for the post of 'Lecturers' in Government PU Colleges has been announced.... http://www.kea.kar.nic.in/pue/notification_detailed.pdf

Image

JOB NOTIFICATION for 11 posts : university of agriculture and horticultural sciences, shimoga

Image

Barack Obama nominates IIT alumni Sanjita Pradhan to key post:-

ವಾಷಿಂಗ್ಟನ್: ತಮ್ಮ ಸಲಹಾ ಮಂಡಳಿಯ ಪ್ರಮುಖ ಹುದ್ದೆಗೆ ಐಐಟಿ ಪದವೀಧರೆ ಸಂಜಿತಾ ಪ್ರಧಾನ್‌ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಾಮನಿರ್ದೇಶನ ಮಾಡಿದ್ದಾರೆ. ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪದವರಿಗೆ ಸಂಬಂಧಿಸಂತೆ ಸಲಹೆ ನೀಡುವ ಮಂಡಳಿಗೆ ಸಂಜಿತಾ ಪ್ರಧಾನ್‌ ಅವರನ್ನು ಸೇರಿಸಿಕೊಳ್ಳುವುದಾಗಿ ಒಬಾಮ ಶುಕ್ರವಾರ ಘೋಷಿಸಿದ್ದಾರೆ. ಪ್ರಧಾನ್‌ ಮೂಲತಃ ಭಾರತೀಯ ತಂತ್ರಜ್ಞಾನ ಸಂಸ್ಥೆ(ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ)ಯ ಎಂಬಿಎ ಪದವೀಧರೆಯಾಗಿದ್ದಾರೆ. ಇವರು ನಾನಾ ಆಡಳಿತ ಹುದ್ದೆಗಳಿಗೆ ಆಯ್ಕೆಯಾದ ಅತಿ ಪ್ರಮುಖರಲ್ಲಿ ಒಬ್ಬರು. ಈ ಪುರುಷ ಮತ್ತು ಮಹಿಳಾ ಸಹೋದ್ಯೋಗಿಗಳು ತಮ್ಮ ಅಸಾಮಾನ್ಯ ಸಮರ್ಪಣೆ ಮನೋಭಾವದಿಂದ ತಮ್ಮ ಹುದ್ದೆಗಳನ್ನು ನಿರ್ವಹಿಸಲಿದ್ದಾರೆ ಹಾಗು ಅಮೆರಿಕದ ಜನರ ಸೇವೆ ಮಾಡಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಒಬಾಮಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇಪಾಳಿ ಅಮೆರಿಕನ್ ಆಗಿರುವ ಸಂಜಿತಾ ಪ್ರಧಾನ್‌, ಸದ್ಯ ಏಷ್ಯನ್ ಕಚೇರಿ ಮತ್ತು ಪೆಸಿಫಿಕ್ ದ್ವೀಪದವರ ವ್ಯವಹಾರಗಳ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯೋವಾದ ಮಾನವ ಹಕ್ಕುಗಳ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2013ರಿಂದಲೂ ಅವರು ಈ ಹುದ್ದೆಯಲ್ಲಿದ್ದಾರೆ. ಇದಕ್ಕೂ ಮುನ್ನ ಅಂದರೆ 2010ರಿಂದ 2013ರವರೆಗೆ ಅವರು ಆಯೋವಾದ ಕ್ಯಾಥೋಲಿಕ್ ಚಾರಿಟೀಸ್ ಆಪ್‌ ಡೆಮೊಯಿನೆಸ್‌ನಲ್ಲಿ

17 ಅರಣ್ಯ. ರಕ್ಷಕ ಹುದ್ದೆಗಳ ನೇಮಕಾತಿ ಅಧಿಸೂಚನೆ.(ಹೈ.ಕ.ವಿಭಾಗ)

Image

ಮೇ 12ರಂದು ಎಸೆಸೆಲ್ಸಿ ಫಲಿತಾಂಶ

ಶನಿವಾರ - ಮೇ -09-2015 ಬೆಂಗಳೂರು, ಮೇ 8: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2015ನೆ ಸಾಲಿನ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಮೇ 12 ರಂದು ಪ್ರಕಟಗೊಳ್ಳಲಿದೆ. ಮೇ 12ರಂದು ಮಧ್ಯಾಹ್ನ 12 ಗಂಟೆಯ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ದೊರೆಯಲಿದ್ದು, ಮೇ 13ರಂದು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಶುಕ್ರವಾರ ನಡೆದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿ ಫಲಿತಾಂಶ ಪ್ರಕಟನೆಯ ದಿನಾಂಕ ಅಂತಿಮಗೊಳಿಸಿದ್ದಾರೆ. ಮೇ 10ರಂದು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ನೀತಿಸಂಹಿತೆ ಜಾರಿಯಾಗುವುದರಿಂದ, ಪ್ರಸಕ್ತ ವರ್ಷದ ಫಲಿತಾಂಶವನ್ನು ಶಿಕ್ಷಣ ಸಚಿವರು ಪ್ರಕಟಿಸುವುದಿಲ್ಲ, ಬದಲಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಕಟಿಸಲಿದ್ದಾರೆ. 2015ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ 8.57 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 8.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೇ ಮೊದಲ ಬಾರಿಗೆ ಜಾರಿಗೆ ತಂದ ನಿರಂತರ ಮತ್ತು ಸಮಗ್ರ ವೌಲ್ಯಮಾಪನ(ಸಿಸಿಇ)ಪದ್ಧತಿಯಲ್ಲಿ 7.88 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೀಗಾಗಿ ಈ ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿ ಒಟ್ಟು ಅಂಕಗಳ ಜತೆಗೆ ಶ್ರೇಣಿಕೃತ ದರ್ಜೆ ಕೂಡ ಪಡೆಯಲಿದ್ದಾರೆ. ಈ ಪರೀಕ್ಷೆಯಲ

ಬ್ರಿಟನ್‌ ಸಂಸತ್‌ಗೆ ಹತ್ತು ಭಾರತೀಯರ ಆಯ್ಕ

Sat, 05/09/2015 - 01:00   ಲಂಡನ್‌: ಕೀತ್‌ ವಾಜ್‌, ಪ್ರೀತಿ ಪಟೇಲ್‌, ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ ಸೇರಿದಂತೆ ಹತ್ತು ಭಾರತೀಯರು ಬ್ರಿಟನ್‌ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಮರುಆಯ್ಕೆ: ಲೇಬರ್‌ಪಾರ್ಟಿಯ ಪ್ರಮುಖ ಅಭ್ಯರ್ಥಿಗಳಾದ, ಸುದೀರ್ಘ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಕೀತ್‌ ವಾಜ್‌ (ಲೈಸೆಸ್ಟರ್‌ ಈಸ್ಟ್‌), ವಿರೇಂದ್ರ ಶರ್ಮ (ಈಲಿಂಗ್‌ ಸೌತದಲ್‌) ಅವರು ಮರುಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್‌ ಪಾರ್ಟಿಯ ಪ್ರೀತಿ ಪಟೇಲ್‌ ಅವರು ವಿಥಾಮ್‌ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಲೇಬರ್‌ ಪಾರ್ಟಿ  ವಲೇರಿ ವಾಜ್‌ (ವಾಲ್‌ಶಲ್‌ ಸೌತ್‌) ಹಾಗೂ ಸೀಮಾ ಮಲ್ಹೋತ್ರಾ  (ಸೌತ್ ವೆಸ್ಟ್‌ ಲಂಡನ್‌) ಕೂಡ ಮರು ಆಯ್ಕೆಯಾಗಿದ್ದಾರೆ. ಲಿಸಾ ನಂದಿ (ವಿಗಾನ್‌), ಸಾಜಿದ್‌ ಜಾವಿದ್‌ (ಬ್ರಾಮ್ಸ್‌ಗ್ರೋವ್‌),  ಅಲೋಕ್‌ ಶರ್ಮ ( ರೀಡಿಂಗ್‌್ ವೆಸ್ಟ್‌), ಶೈಲೇಶ್‌  ವರಾ (ಕೇಂಬ್ರಿಜ್‌ಷೈರ್‌ ನಾರ್ತ್‌ವೆಸ್ಟ್‌) ಸಹ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಬ್ರಿಟಿಷ್ ಪ್ರಧಾನಿಯಾಗಿ ಪುನರಾಯ್ಕೆಯಾದ:- ಡೇವಿಡ್ ಕ್ಯಾಮರಾನ್

Image
ಬ್ರಿಟನ್‌ ಚುನಾವಣೆ: ಕ್ಯಾಮೆರಾನ್‌ಗೆ ಮತ್ತೆ ಗೆಲುವು Fri, 05/08/2015 - 15:37 2 ಲಂಡನ್‌ (ಪಿಟಿಐ);  ಬ್ರಿಟನ್‌ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಬಿಬಿಸಿ ಸುದ್ದಿ ವಾಹಿನಿ ವರದಿ ಮಾಡಿದೆ. ಡೇವಿಡ್‌ ಕ್ಯಾಮೆರಾನ್‌ ಅವರು ಪ್ರಧಾನಿಯಾಗಿ ಮತ್ತೆ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ. ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು ಕನ್ಸರ್ವೇಟಿವ್‌ ಪಕ್ಷದ  ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.   650 ಕ್ಷೇತ್ರಗಳ ಪೈಕಿ ಕನ್ಸರ್ವೇಟಿವ್‌ ಪಕ್ಷ 325 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಲೇಬರ್‌ ಪಕ್ಷ 230 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. 323 ಸ್ಥಾನಗಳನ್ನು ಪಡೆದ ಪಕ್ಷ ಕೆಳ ಮನೆಯಲ್ಲಿ ಅಧಿಕಾರಕ್ಕೆ ಬರಲಿದೆ. 6.15 ಲಕ್ಷ ಭಾರತ ಮೂಲದ ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ

​ಬ್ರಿಟನ್ ಎಲೆಕ್ಷನ್;20 ವರ್ಷದ ವಿದ್ಯಾರ್ಥಿನಿ (ಮೇರಿ ಬ್ಲ್ಯಾಕ್)ಈಗ ಬ್ರಿಟನ್ ಯುವ ಸಂಸದೆ

Image
ಉದಯವಾಣಿ, May 08, 2015, 1:15 PM IST ಲಂಡನ್:  ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು,ಶುಕ್ರವಾರ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಮತ್ತು ಲೇಬರ್ ಪಕ್ಷದ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆದಿದೆ. ಫಲಿತಾಂಶದಲ್ಲಿ ಸ್ಕಾಟಿಶ್ ನ್ಯಾಷನಲ್ ಪಾರ್ಟಿಯಿಂದ ಸ್ಪರ್ಧಿಸಿದ್ದ 20ರ ಹರೆಯದ ವಿದ್ಯಾರ್ಥಿನಿ ಜಯಭೇರಿ ಗಳಿಸುವ ಮೂಲಕ 300 ವರ್ಷಗಳ ನಂತರ ಬ್ರಿಟನ್ ಅತಿ ಕಿರಿಯ ಸಂಸದೆಯನ್ನು ಆಯ್ಕೆ ಮಾಡಿದಂತಾಗಿದೆ. ಸ್ಕಾಟಿಶ್ ನ್ಯಾಷನಲ್ ಪಾರ್ಟಿ(ಎಸ್ ಎನ್ ಪಿ)ಯಿಂದ ಸ್ಪರ್ಧಿಸಿದ್ದ  ಮೈರಿ ಬ್ಲ್ಯಾಕ್ (20ವರ್ಷ) ತನ್ನ ಪ್ರತಿಸ್ಪರ್ಧಿ ಲೇಬರ್ ಪಕ್ಷದ ಡೋಗ್ಲಾಸ್ ಅಲೆಗ್ಸಾಂಡರ್ ಅವರನ್ನು ಸೋಲಿಸಿದ್ದಾರೆ. ಡೋಗ್ಲಾಸ್ ಅವರನ್ನು ಬ್ಲ್ಯಾಕ್ 6 ಸಾವಿರ ಮತಗಳ ಅಂತರದಿಂದ ಪರಾಜಯಗೊಳಿಸಿದ್ದಾರೆ. ಲೇಬರ್ ಪಕ್ಷದ ಅತ್ಯಂತ ಹಿರಿಯ ಮುಖಂಡ, ಪಕ್ಷದ ಪ್ರಚಾರ ಸಮಿತಿ ಮುಖ್ಯಸ್ಥ ಡೋಗ್ಲಾಸ್ ಕಿರಿಯ ವಯಸ್ಸಿನ ವಿದ್ಯಾರ್ಥಿ ಎದುರು ಸೋಲನ್ನನುಭವಿಸಿರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಮಿಸ್ ಬ್ಲ್ಯಾಕ್ ಇದೀಗ ಬ್ರಿಟನ್ ನ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1667ರಲ್ಲಿ 13 ವರ್ಷದ ಕ್ರಿಸ್ಟೋಪರ್ ಮೋಕ್ಟನ್ ನಲ್ಲಿ ಜಯಗಳಿಸಿದ್ದರು. ಇದೀಗ 300 ವರ್ಷಗಳ ಬಳಿಕ ಬ್ರಿಟನ್ ಸಂಸತ್ ಕಿರಿಯ ಸಂಸದೆಯನ್ನು ಪಡೆ

ವಿಶ್ವ ಪ್ರವಾಸೋದ್ಯಮ ಪಟ್ಟಿಯಲ್ಲಿ ಭಾರತಕ್ಕೆ 52ನೇ ಸ್ಥಾನ-

Fri, 05/08/2015 - 01:00 ಜಿನೀವಾ (ಪಿಟಿಐ): ವಿಶ್ವ ಪ್ರವಾಸೋದ್ಯಮ ಪಟ್ಟಿಯಲ್ಲಿ ಭಾರತ 52ನೇ ಸ್ಥಾನದಲ್ಲಿದ್ದು, ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಪಟ್ಟಿಯಲ್ಲಿ ಸ್ವಲ್ಪಮಟ್ಟಿಗೆ ಮುಂದೆ ಬಂದಿದೆ. 2013ರ ಸಮೀಕ್ಷೆ ಪ್ರಕಾರ ಭಾರತ 65ನೇ ಸ್ಥಾನದಲ್ಲಿತ್ತು.   ವಿಶ್ವ ಆರ್ಥಿಕ ವೇದಿಕೆ ಈಗ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತ 13 ರಾಷ್ಟ್ರಗಳನ್ನು ಹಿಂದಿಕ್ಕಿ 52ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮೂಲಸೌಕರ್ಯ, ಆರೋಗ್ಯ, ಸುರಕ್ಷತೆ, ಭದ್ರತೆ ಇತ್ಯಾದಿ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಚೀನಾ, ಬ್ರೆಜಿಲ್‌, ರಷ್ಯಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಭಾರತಕ್ಕಿಂತ ಮುಂಚೂಣಿಯಲ್ಲಿವೆ. ಪಟ್ಟಿ ಪ್ರಕಾರ ಸ್ಪೇನ್‌, ಫ್ರಾನ್ಸ್‌, ಜರ್ಮನಿ, ಅಮೆರಿಕ, ಬ್ರಿಟನ್‌, ಸ್ವಿಟ್ಜರ್‌ಲೆಂಡ್‌, ಆಸ್ಟ್ರೇಲಿಯಾ, ಇಟಲಿ, ಜಪಾನ್‌ ಮತ್ತು ಕೆನಡಾ ಮೊದಲ ಹತ್ತು ಸ್ಥಾನದಲ್ಲಿವೆ. ಆರ್ಥಿಕ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿರುವ ಚೀನಾ 17ನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್‌ 28ನೇ ಸ್ಥಾನದಲ್ಲಿದೆ.  ರಷ್ಯಾ 45 ಹಾಗೂ ದಕ್ಷಿಣ ಆಫ್ರಿಕಾ 48ನೇ ಸ್ಥಾನದಲ್ಲಿವೆ. ಭಾರತವು ಆರ್ಥಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದ ವ್ಯಾಪಾರ– ವಹಿವಾಟಿನಲ್ಲಿ ಸ್ಪರ್ಧೆ ನೀಡುತ್ತಿರುವ ರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ. 141 ರಾಷ್ಟ್ರಗಳಲ್ಲಿನ 14 ಪ್ರಮುಖ ವಿಷಯಗಳನ್ನು ಆಧಾರವಾ

ಶತ್ರು ವಿನಾಶಕ 'ಆಕಾಶ್‌'ಭಾರತೀಯ ಭೂಸೇನೆಗೆ..

ಶತ್ರು ವಿನಾಶಕ 'ಆಕಾಶ್‌'   ಉದಯವಾಣಿ, May 08, 2015, 3:40 AM IST ಶತ್ರು ವಿಮಾನಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯದ ಆಕಾಶ್‌ ಕ್ಷಿಪಣಿ ಇದೀಗ ಭಾರತೀಯ ಭೂಸೇನೆ ಬತ್ತಳಿಕೆಗೂ ಸೇರಿದೆ. ಈ ಮೊದಲು ವಾಯುಪಡೆಗೆ ಮಾತ್ರ ಸೇರಿದ್ದ ಈ ಕ್ಷಿಪಣಿ, ತಾಂತ್ರಿಕ ಬದಲಾವಣೆಗಳೊಂದಿಗೆ ಭೂ ಸೇನೆಗೂ ಸೇರಿಕೊಂಡಿದೆ. ಇದರಿಂದಾಗಿ ಶತ್ರು ವಿಮಾನ ನಾಶಕದ ಕೊರತೆ ಅನುಭವಿಸುತ್ತಿದ್ದ ಭೂ ಸೇನೆಗೆ ಮತ್ತಷ್ಟು ಬಲ ತುಂಬಿದೆ. ಈ ಹಿನ್ನೆಲೆಯಲ್ಲಿ ಆಕಾಶ್‌ ಕ್ಷಿಪಣಿ ವೈವಿಧ್ಯತೆ ಏನು? ಅದಕ್ಕೇಕೆ ಅಷ್ಟೊಂದು ಮಹತ್ವ ಇತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ. ಆಕಾಶಕ್ಕೆ ಆಕಾಶವೇ ಸರಿಸಾಟಿ ಆಕಾಶ್‌ ಕ್ಷಿಪಣಿ ಲಘು ಮತ್ತು ಕಿರು ವ್ಯಾಪ್ತಿಯ ಕ್ಷಿಪಣಿಗಳಲ್ಲಿ ಅತ್ಯಾಧುನಿಕವಾದದ್ದು. ಪ್ರಮುಖವಾಗಿ ಇದು ನೆಲದಿಂದ ಆಗಸಕ್ಕೆ ಉಡಾಯಿಸಬಲ್ಲ (ಎಸ್‌ಎಎಮ್‌) ಕ್ಷಿಪಣಿ. ವಿವಿಧ ಗುರಿಗಳನ್ನು ಏಕಕಾಲದಲ್ಲಿ ಛಿದ್ರ ಮಾಡಬಲ್ಲ ವ್ಯವಸ್ಥೆ ಇದರಲ್ಲಿದೆ. ವಿಶ್ವದಲ್ಲಿ ಅಮೆರಿಕ, ರಷ್ಯಾ, ಕೆಲವು ಯುರೋಪಿಯನ್‌ ದೇಶಗಳು, ಇಸ್ರೇಲ್‌ ಮತ್ತು ಜಪಾನ್‌ ಈ ತಂತ್ರಜ್ಞಾನದ ಕ್ಷಿಪಣಿಯನ್ನು ಹೊಂದಿವೆ. ಭಾರತದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಇದನ್ನು ನಿರ್ಮಿಸಿದ್ದು, ಇದೀಗ ಸೇನಾ ಆವೃತ್ತಿಯನ್ನೂ ಯಶಸ್ವಿಯಾಗಿ ಪರೀಕ್ಷಿಸಿ ಸೇರ್ಪಡೆಗೊಳಿಸಲಾಗಿದೆ. ಆಕಾಶ್‌ ಕ್ಷಿಪಣಿಯಲ್ಲಿ ಸದ್ಯ ವಾಯು ಮತ್ತೂ ಭೂ ಸೇನೆಗೆ ಹೊಂದಿಕೆಯಾಗುವ ಎರಡು ಮಾದ

16 ವರ್ಷದ ಮಕ್ಕಳಿಗೂ ದೊಡ್ಡವರ ರೀತಿ ಶಿಕ್ಷೆ: ಲೋಕಸಭೆ ಸಮ್ಮತಿ

  ಉದಯವಾಣಿ, May 08, 2015, 3:40 AM IST ನವದೆಹಲಿ: ಘೋರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ 16ರಿಂದ 18 ವರ್ಷದೊಳಗಿನ ಬಾಲಾರೋಪಿಗಳನ್ನು ವಯಸ್ಕರ ಕಾನೂನಿನಡಿ ವಿಚಾರಣೆಗೆ ಒಳಪಡಿಸಿ, ಶಿಕ್ಷಿಸುವ ಮಹತ್ವದ ಮಸೂದೆಗೆ ಲೋಕಸಭೆಗೆ ಗುರುವಾರ ಅನುಮೋದನೆ ನೀಡಿದೆ. ಇನ್ನು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಬಾಕಿ ಇದೆ. ಆದರೆ, 16ರಿಂದ 18 ವರ್ಷದ ವಯೋಮಾನ ದಲ್ಲಿದ್ದಾಗ ಘೋರ ಅಪರಾಧವೆಸಗಿ 21 ವರ್ಷ ತುಂಬಿದ ಬಳಿಕ ಪೊಲೀಸರಿಗೆ ಸಿಕ್ಕಿಬೀಳುವ ವ್ಯಕ್ತಿಯನ್ನು ವಯಸ್ಕ ಕಾನೂನುಗಳಡಿಯೇ ವಿಚಾರಣೆನಡೆಸತಕ್ಕದ್ದು ಎಂಬ ಅಂಶವನ್ನು ವಿಧೇಯಕದಿಂದ ತೆಗೆದು ಹಾಕಿದ ಬಳಿಕ "ಬಾಲಾರೋಪಿ ನ್ಯಾಯ (ಮಕ್ಕಳ ಕಾಳಜಿ ಮತ್ತು ಸಂರಕ್ಷಣೆ) ಮಸೂದೆ'ಗೆ ಲೋಕಸಭೆ ತನ್ನ ಒಪ್ಪಿಗೆ ನೀಡಿತು. ಇದೇ ವೇಳೆ, ಸರ್ಕಾರ ವಿಧೇಯಕಕ್ಕೆ ಸೂಚಿಸಿದ 42 ತಿದ್ದುಪಡಿಗಳಿಗೆ ಸದನ ಅನು ಮೋದನೆ ನೀಡಿತು. ಆದರೆ ಕಾಂಗ್ರೆಸ್ಸಿನ ಶಶಿ ತರೂರ್‌ ಹಾಗೂ ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಅವರು ಮಂಡಿಸಿದ ತಿದ್ದುಪಡಿ ಗಳನ್ನು ತಿರಸ್ಕರಿಸಲಾಯಿತು. 2012ರ ದೆಹಲಿ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ತರಲಾಗುತ್ತಿರುವ ಈ ವಿಧೇಯಕ ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ದುರ್ಬಳಕೆಗೆ ಕಾರಣವಾಗಬಹುದು ಎಂದು ಇದೇ ವೇಳೆ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಮಸೂದೆ ಮಕ್ಕಳ ಪರ