Posts

2016ರಲ್ಲಿ 22 ಸಾರ್ವತ್ರಿಕ ರಜಾ ದಿನಗಳನ್ನು ನಿಗದಿಪಡಿಸಿ ಸರ್ಕಾರ ಆದೇಶ:

ಬೆಂಗಳೂರು, ನ.10- ರಾಜ್ಯ ಸರ್ಕಾರ 2016ನೆ ಸಾಲಿನ ರಾಷ್ಟ್ರೀಯ ಹಾಗೂ ವಿವಿಧ ಹಬ್ಬಗಳಿಗೆ ಸಂಬಂಧಿಸಿದಂತೆ 22 ಸಾರ್ವತ್ರಿಕ ರಜಾ ದಿನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಭಾನುವಾರಗಳಂದು ಬರುವ ಕಾರ್ಮಿಕರ ದಿನಾಚರಣೆ, ಗಾಂಧಿಜಯಂತಿ ಹಾಗೂ ಕ್ರಿಸ್ಮಸ್ ರಜಾ ದಿನಗಳು ಈ ಪಟ್ಟಿಯಲ್ಲಿ ಸೇರಿಲ್ಲ. ಅ.17ರಂದು ತುಲಾ ಸಂಕ್ರಮಣ ಹಾಗೂ ಡಿ.14ರಂದು ಬರುವ ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗೆ ಸೀಮಿತವಾಗಿ ಸರ್ಕಾರ ರಜಾ ಘೋಷಿಸಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವತ್ರಿಕ ರಜಾದಿನಗಳ ಜತೆಗೆ ಎರಡು ದಿನಗಳಿಗೆ ಮೀರದಂತೆ ರಾಜ್ಯ ಸರ್ಕಾರಿ ನೌಕರರು ಪರಿಮಿತಿ ರಜೆಯನ್ನು ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲು ನಿರ್ದೇಶಿಸಲಾಗಿದೆ. ಜನವರಿ 15ರಂದು ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬ. ಜ.26 ಗಣರಾಜ್ಯೋತ್ಸವ, ಮಾ.7 ಮಹಾಶಿವರಾತ್ರಿ, ಮಾ.25 ಗುಡ್ಫ್ರೈಡೆ, ಏ.8ಚಾಂದ್ರಮಾನ ಯುಗಾದಿ, ಏ.14 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಏ.19 ಮಹಾವೀರ ಜಯಂತಿ, ಮೇ 9 ಬಸವಜಯಂತಿ, ಜು

Public Holidays for the year 2016( Karnataka Government announced on 9/11/15)

Image

ಗ್ರೇಡ್-1 ಪ್ರಾಂಶುಪಾಲರ ವರ್ಗಾವಣೆಗೆ ಕೌನ್ಸೆಲಿಂಗ್

ಗ್ರೇಡ್-1 ಪ್ರಾಂಶುಪಾಲರ ವರ್ಗಾವಣೆಗೆ ಕೌನ್ಸೆಲಿಂಗ್ GKPOINTS ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-1 ಪ್ರಾಂಶುಪಾಲರ 2015-16ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ಸರಕಾರ ಅನುಮೋದನೆ ನೀಡಿದ್ದು, ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಗ್ರೇಡ್-1 ಪ್ರಾಂಶುಪಾಲರು ನ. 15ರ ವರೆಗೆ ಇಎಂಐಎಸ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. 17ರಂದು ವರ್ಗಾವಣೆಗೆ ಅರ್ಹರಿರುವ ಪ್ರಾಂಶುಪಾಲರ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನ.19ರಂದು ನಗರದ ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ಕಾಯಂ ಗ್ರೇಡ್-1 ಪ್ರಾಂಶುಪಾಲರು ಮಾತ್ರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಬಹುದು. ಆದರೆ, ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹ/ ಸಹಾಯಕ ಪ್ರಾಧ್ಯಾಪಕರು ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಿರುವುದಿಲ್ಲ. ವರ್ಗಾವಣೆ ಕೌನ್ಸೆಲಿಂಗ್ಗೆ ಹಾಜರಾಗುವ ಅರ್ಹ ಪ್ರಾಂಶುಪಾಲರು ಅಂಗವೈಕಲ್ಯ, ಮಾರಣಾಂತಿಕ ಕಾಯಿಲೆ, ಪತಿ-ಪತ್ನಿ ಪ್ರಕರಣ/ವಿಧವೆ ಈ ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆ, ಗುರುತಿನ ಪತ್ರ ಹಾಗೂ ಆನ್ಲೈನ್ ಮೂಲಕ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಡೆದಿರುವ ಸ್ವೀಕೃತಿ ಪತ್ರದೊಂದಿಗೆ ಕೌನ್ಸೆಲಿಂಗ್ಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಧವಾ ವಿಶೇಷ ಪ

3 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್:

ಪಾಟ್ನಾ, ನ.8-ಅತ್ಯಂತ ಕ್ಲಿಷ್ಟಕರವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟವನ್ನು ಅಧಿಕಾರಕ್ಕೆ ತರುವ ಮೂಲಕ ನಿತೀಶ್ಕುಮಾರ್ ಮೂರನೆ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಬಿಹಾರದ ಅತ್ಯಂತ ಹಿಂದುಳಿದ ಕುರ್ಮಿ ಜನಾಂಗಕ್ಕೆ ಸೇರಿದ ನಿತೀಶ್ಕುಮಾರ್ ಓದಿದ್ದು ಎಂಜಿನಿಯರಿಂಗ್. ಕುಗ್ರಾಮದಿಂದ ಬಂದು ಜಯಪ್ರಕಾಶ್ ನಾರಾಯಣ್ ಅವರ ತತ್ವ-ಆದರ್ಶಗಳಿಗೆ ಮೊರೆ ಹೋಗಿ ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ಪ್ರಾರಂಭದಲ್ಲಿ ಎರಡು ಚುನಾವಣೆ ಸೋತಾಗ ನನಗೆ ರಾಜಕೀಯ ಸಹವಾಸವೇ ಬೇಡ ಎಂದು ದೂರ ಸರಿದಿದ್ದರು. ಅಂದು ಬಿಹಾರದಲ್ಲಿ ಕಾಂಗ್ರೆಸ್ ಪಾರುಪತ್ಯ ಇದ್ದ ವೇಳೆ ಹಣ- ಹೆಂಡ, ಜಾತಿ-ಧರ್ಮವೇ ಗೆಲುವಿಗೆ ಮಾನದಂಡವಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮಂತಹವರಿಗೆ ರಾಜಕೀಯ ಕ್ಷೇತ್ರ ಸಲ್ಲದು ಎಂದಿದ್ದ ನಿತೀಶ್ಕುಮಾರ್, ಎರಡು ಚುನಾವಣೆ ಸೋತಿದ್ದರಿಂದ ಎಂಜಿನಿಯರಿಂಗ್ ವೃತ್ತಿಯನ್ನೇ ಮುಂದುವರೆಸಬೇಕೆಂಬ ಆಲೋಚನೆ ಹೊಂದಿದ್ದರು. ಆದರೆ, ದೇಶದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಜಯಪ್ರಕಾಶ್ ನಾರಾಯಣ್ ಆಂದೋಲನ ರೂಪಿಸಿದಾಗ ಇದೇ ನಿತೀಶ್ಕುಮಾರ್ ರಾಜಕಾರಣಕ್ಕೆ ಧುಮುಕಿದರು

ಉತ್ತಮ ರಾಜ್ಯ: ಕರ್ನಾಟಕ ರಾಜ್ಯಕ್ಕೆ ದೇಶದಲ್ಲಿ 3ನೇ ಸ್ಥಾನ::

ಹೊಸದಿಲ್ಲಿ: ಇಂಡಿಯಾ ಟುಡೆ ನಿಯತಕಾಲಿಕೆ ನಡೆಸುವ ವರ್ಷದ ಉತ್ತಮ ಮೊದಲ ಮೂರು ರಾಜ್ಯಗಳು ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಕಳೆದ ವರ್ಷ ನಮ್ಮ ರಾಜ್ಯ 9ನೇ ಸ್ಥಾನದಲ್ಲಿತ್ತು. ಈ ವರ್ಷ ಮೊದಲ ಸ್ಥಾನದಲ್ಲಿ ಗುಜರಾತ್ ಮತ್ತು ಎರಡನೇ ಸ್ಥಾನದಲ್ಲಿ ಕೇರಳ ರಾಜ್ಯಗಳಿವೆ. ಸಮೀಕ್ಷೆ ವರದಿ ಸಿದ್ದಪಡಿಸುವಾಗ ಆಯಾ ರಾಜ್ಯಗಳ ಬಂಡವಾಳ ಹೂಡಿಕೆ, ಶಿಕ್ಷಣ, ಆಡಳಿತ, ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ, ಕೃಷಿ, ಆರೋಗ್ಯ, ಮೌಲಸೌಕರ್ಯ, ಆರ್ಥಿಕತೆ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆಯಾ ರಾಜ್ಯ ಸರಕಾರಗಳ ದತ್ತಾಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗುತ್ತದೆ. ಕಡೆಯ ಸ್ಥಾನಗಳಲ್ಲಿ ಉತ್ತರಾಖಂಡ ಸಿಕ್ಕಿಂ, ಪುದುಚೇರಿ, ಮೇಘಾಲಯಗಳಿದ್ದು, ಗೋವಾ 9 ಮತ್ತು ಮಿಜೋರಂ 10ನೇ ಸ್ಥಾನಕ್ಕೆ ಕುಸಿದಿವೆ. ಕರ್ನಾಟಕಕ್ಕೆ ವರವಾದ ಅಂಶಗಳು: ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ನಮ್ಮ ರಾಜ್ಯ ಈ ಸಲ 2ನೇ ಸ್ಥಾನಕ್ಕೇರಿದೆ. ಶಿಕ್ಷಣದಲ್ಲಿ 19ನೇ ಸ್ಥಾನದಿಂದ 8ನೇ ಸ್ಥಾನ, ಆಡಳಿತದಲ್ಲಿ 18ನೇ ಸ್ಥಾನದಿಂದ 13ನೇ ಸ್ಥಾನಕ್ಕೇರಿದೆ. ಇನ್ನು ನಿಯತಕಾಲಿಕೆ ಸೇರಿಸಿರುವ ಹೊಸ ವಿಭಾಗಗಳಾದ ಸುಸ್ಥಿರ ಅಭಿವೃದ್ಧಿಯಲ್ಲಿ 13ನೇ ಸ್ಥಾನ, ಪರಿಸರ ಸಂರಕ್ಷಣೆಯಲ್ಲಿ 7ನೇ ಸ್ಥಾನ, ಸ್ವಚ್ಛ ಅಭಿಯಾನದಲ್ಲಿ 3ನೇ ಸ್ಥಾನ ಪಡೆದಿದೆ. ಕೃಷಿ ಕ್ಷೇತ್ರದ

ಫೋರ್ಬ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಪುನೀತ್, ಸುದೀಪ್ ಸೇರಿದಂತೆ ಐವರು::

ಪ್ರಸಿದ್ಧ ನಿಯತಕಾಲಿಕೆ ಫೋರ್ಬ್ಸ್ ಪ್ರಕಟಿಸುವ 100 ಪ್ರಭಾವಿಗಳ ಪಟ್ಟಿಯಲ್ಲಿ ಸ್ಯಾಂಡಲ್ ವುಡ್'ನ ಹೆಸರಾಂತ ನಟರಾದ ಪುನೀತ್ ರಾಜ್ಕುಮಾರ್ ಹಾಗೂ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಐವರು ಸ್ಥಾನ ಪಡೆದಿದ್ದಾರೆ. ಮನರಂಜನೆ, ಕ್ರೀಡೆ ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ವರ್ಷದ ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುತ್ತದೆ. ಬಾಲಿವುಡ್-ಟಾಲಿವುಡ್-ಕಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳೇ ಜಾಸ್ತಿ ಕಂಡು ಬರುವ ಈ ಪಟ್ಟಿಯಲ್ಲಿ ಈ ಬಾರಿ ಸ್ಯಾಂಡಲ್ವುಡ್ನ ಸೆಲೆಬ್ರೆಟಿಗಳಾದ ಪುನೀತ್ರಾಜ್ಕುಮಾರ್, ಸುದೀಪ್, ರಘು ದೀಕ್ಷೀತ್, ಪ್ರಿಯಾಮಣಿ, ವಿಜಯ್ ಪ್ರಕಾಶ್ ಹೆಸರು ಸೇರ್ಪಡೆಯಾಗಿದೆ. ಡಿಸೆಂಬರ್ 11ರಂದು ಫೋರ್ಬ್ಸ್ನ 100 ಪ್ರಭಾವಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದ್ದು, ಅಂದು ಯಾವ ಸ್ಟಾರ್ಸ್ ಯಾವ ಸ್ಥಾನದಲ್ಲಿದ್ದಾರೆ ಎಂಬುದು ತಿಳಿಯಲಿದೆ.

ಭಾರತದ ಪ್ರಥಮ ತೃತೀಯ ಲಿಂಗಿ ಸಬ್ ಇನ್ಸ್ಪೆಕ್ಟರ್ ಚೆನ್ನೈನ ಪ್ರೀತಿಕಾ ಯಾಶಿನಿ :-

ಭಾರತದ ಪ್ರಥಮ ತೃತೀಯ ಲಿಂಗಿ ಸಬ್ ಇನ್ಸ್ಪೆಕ್ಟರ್ ಇವರು ಚೆನ್ನೈ, ಶುಕ್ರವಾರ, 6 ನವೆಂಬರ್ 2015 ಚೆನ್ನೈನ ಪ್ರೀತಿಕಾ ಯಾಶಿನಿ ದೇಶದ ಪ್ರಥಮ ತೃತೀಯ ಲಿಂಗಿ ಪೊಲೀಸ್ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ರೀತಿಕಾ ಮೊದಲ ಹೆಸರು ಪ್ರದೀಪ್ ಕುಮಾರ್. ಪ್ರೌಢವಸ್ಥೆಗೆ ಬರುತ್ತಿದ್ದಂತೆ ಅವರಲ್ಲಿ ಹೆಣ್ಣಿನ ಲಕ್ಷಣಗಳು ಕಾಣಿಸಿಕೊಂಡಿವೆ. ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಪದವಿ ಓದಿರುವ ಇವರು ಲಿಂಗ ಬದಲಾವಣೆ ಸರ್ಜರಿ ಮಾಡಿಕೊಳ್ಳುವುದರ ಮೂಲಕ ಪ್ರೀತಿಕಾ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಬೇಕೆಂಬ ಮಹದಾಸೆ ಹೊಂದಿದ್ದ ಪ್ರೀತಿಕಾ ಅದನ್ನು ನನಸು ಮಾಡಿಕೊಳ್ಳಲು ದುರ್ಗಮವಾದ ಹಾದಿಯನ್ನೇ ಕ್ರಮಿಸಬೇಕಾಯಿತು. ಸಬ್ ಇನ್ಸಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅವರು ಅರ್ಜಿಯನ್ನು ಪೊಲೀಸ್ ನೇಮಕಾತಿ ಮಂಡಳಿ ತಿರಸ್ಕರಿಸಿತ್ತು. ಅರ್ಜಿಯಲ್ಲಿ ಲಿಂಗದ ಬಗ್ಗೆ ತಿಳಿಸಬೇಕಾದ ಕಾಲಂನ್ನು ಅವರು ತುಂಬಿರಲಿಲ್ಲ. ಇದರಿಂದ ಅರ್ಜಿ ತಿರಸ್ಕೃತಗೊಂಡಿತ್ತು. ಹೀಗಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಅವರಿಗೆ ಜಯ ಸಿಕ್ಕಿದ್ದು ಈಗ ಸಬ್ ಇನ್ಸಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ನ್ಯಾಯಮೂರ್ತಿ ಎಸ್ ಕೆ.ಕೌಲ್ ಹಾಗೂ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಒಳಗೊಂಡ ಪೀಠ ತೃತೀಯ ಲಿಂಗಿಗಳು ಸರ್ಕಾರಿ ಕೆಲಸ ನಿರ್ವಹಿಸಲು ಸಮರ್ಥರು ಮತ್ತು ಕೆಲಸದ ಅ

ಭಾರತೀಯ ಮೂಲದ ಹರ್ಜಿತ್ ಸಿಂಗ್ ಕೆನಡಾದ ನೂತನ ರಕ್ಷಣಾ ಸಚಿವ:

Image
ಒಟ್ಟಾವಾ (ಕೆನಡಾ): ಭಾರತೀಯ ಮೂಲದ ಕೆನಡಾ ಸಿಖ್ಖ್ ಹರ್ಜಿತ್ ಸಜ್ಜಾನ್ (45ವರ್ಷ) ಅವರನ್ನು ಕೆನಡಾದ ನೂತನ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ಪ್ರಧಾನಿ ಜುಸ್ಟಿನ್ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ರಧಾನಿ ಜುಸ್ಟಿನ್ ಅವರ 30 ಕ್ಯಾಬಿನೆಟ್ ಸದಸ್ಯರು ಬುಧವಾರ ಒಟ್ಟಾವಾದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆನಡಾ ಆರ್ಮಿ ಫೋರ್ಸ್ ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದ ಹರ್ಜಿತ್ ಸಜ್ಜಾನ್ ಅವರು ಕೆನಡಾ ದಕ್ಷಿಣ ವ್ಯಾನ್ ಕೋವರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ನಿವೃತ್ತ ಕರ್ನಲ್ ಸಜ್ಜಾನ್, ಹಾಲಿ ರಕ್ಷಣಾ ಸಚಿವ. ಭರ್ಜರಿ ಸಮಾರಂಭದಲ್ಲಿ ಜುಸ್ಟಿನ್ ಕೆನಡಾದ 23ನೇ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಹರ್ಜಿತ್ ಸಜ್ಜಾನ್ ಬೋಸ್ನಿಯಾ ಮತ್ತು ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಮಿಲಿಟರಿ ಸೇವೆ ಸಲ್ಲಿಸಿದ್ದರು. ಹರ್ಜಿತ್ ಸೇವೆಗಾಗಿ 2013ರಲ್ಲಿ ಪದಕವನ್ನು ಪಡೆದಿದ್ದರು.

Indo-Canadian Sikh named Canada's new Defence Minister:

Image
Ottawa : Harjit Sajjan, an Indo-Canadian Sikh, was named Canada's new Defence Minister as Prime Minister Justin Trudeau's 30-member cabinet was sworn in at a ceremony in Ottawa on Wednesday. Mr Sajjan, a decorated Lt Colonel in the Canadian Armed Forces who was elected as a lawmaker for Vancouver South, is a combat veteran and has served in Bosnia and had three deployments to Kandahar, Afghanistan. Justin Trudeau was sworn in as Canada's 23rd Prime Minister before a packed crowd, almost 50 years after his father took on the job. Mr Sajjan, who is part of Mr Trudeau's 30-member Cabinet that was sworn in during a ceremony at Rideau Hall, has received numerous military honours, including the Meritorious Service Medal in 2013, for reducing the Taliban's influence in the Kandahar Province. "His approach, based on his knowledge of local culture and tribal dynamics, helped senior management to engage with influential

ಟಿ.ಎಸ್. ಠಾಕೂರ್ ಮುಂದಿನ ಸಿಜೆಐ:

ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಸುಪ್ರೀಂಕೋರ್ಟ್ನ 43ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಡಿಸೆಂಬರ್ 2ರಂದು ನಿವೃತ್ತರಾಗಲಿದ್ದು, ಸುಪ್ರೀಂಕೋರ್ಟ್ನ ಅತಿ ಹಿರಿಯ ನ್ಯಾಯಮೂರ್ತಿಗಳಾದ ಠಾಕೂರ್ ಅವರು ತೆರವಾಗುವ ಸ್ಥಾನವನ್ನು ತುಂಬಲಿದ್ದಾರೆ. ಕೇಂದ್ರ ಸರ್ಕಾರಕ್ಕೆ ಠಾಕೂರ್ ಅವರ ಹೆಸರನ್ನು ದತ್ತು ಅವರು ಸೋಮವಾರ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯಾಯಮೂರ್ತಿ ಠಾಕೂರ್ ಅವರ ನೇಮಕದ ಕಡತಕ್ಕೆ ಕಾನೂನು ಸಚಿವಾಲಯವು ಅನುಮೋದನೆ ನೀಡಿದ ಬಳಿಕ ಅದನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅವರ ಅನುಮತಿ ದೊರೆತ ಬಳಿಕ ಅವರಿಗೆ ಅಧಿಕಾರ ನೀಡಲಾಗುತ್ತದೆ. 1952ರಂದು ಜನಿಸಿದ ನ್ಯಾಯಮೂರ್ತಿ ಠಾಕೂರ್ ಅವರು, 1972ರಿಂದ ವಕೀಲಿಕೆ ಪ್ರಾರಂಭಿಸಿದರು. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನಲ್ಲಿ ನಾಗರಿಕ, ಅಪರಾಧ, ತೆರಿಗೆ ಮತ್ತು ಸಾಂವಿಧಾನಿಕ ಹಾಗೂ ಸೇವಾ ಪ್ರಕರಣ ಸೇರಿದಂತೆ ಎಲ್ಲಾ ವಿಧದ ವಿಷಯಗಳಲ್ಲಿಯೂ ವಕೀಲಿಕೆ ಮಾಡಿದರು. ಬಳಿಕ ಖ್ಯಾತ ನ್ಯಾಯವಾದಿಯಾಗಿದ್ದ ತಂದೆ ಡಿ.ಡಿ. ಠಾಕೂರ್ ಅವರೊಂದಿಗೆ ಸೇರಿಕೊಂಡರು. ಡಿ.ಡಿ. ಠಾಕೂರ್ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ, ನಂತರ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1990ರಲ

ಚಿನ್ನದ ಠೇವಣೆ ಯೋಜನೆಗೆ ಪ್ರಧಾನಿ ಚಾಲನೆ

ಹೊಸದಿಲ್ಲಿ: ಮನೆಯ ಕಪಾಟುಗಳಲ್ಲಿ ಭದ್ರವಾಗಿರಿಸಿರುವ ಟನ್ಗಟ್ಟಲೆ ಚಿನ್ನವನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರುವ ಚಿನ್ನದ ಠೇವಣೆ ಯೋಜನೆಗೆ ಪ್ರಧಾನಿ ಗುರುವಾರ ಚಾಲನೆ ನೀಡಿದರು. 'ದೇಶದಲ್ಲಿ ಸುಮಾರು 20,000 ಟನ್ ಚಿನ್ನ ಕೆಲಸಕ್ಕೆ ಬಾರದೇ ಒಂದೇ ಕಡೆ ಇರುವುದರಿಂದ ಭಾರತ ಬಡ ರಾಷ್ಟ್ರವಾಗಿದೆ,' ಎಂದು ಪ್ರಧಾನಿ ಹೇಳಿದ್ದಾರೆ. ಹಳದಿ ಲೋಹದ ಜತೆ ಭಾರತೀಯ ಮಹಿಳೆಯರಿಗಿರುವ ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸಿದ ಪ್ರಧಾನಿ, 'ಚಿನ್ನವನ್ನು ಹೊರತುಪಡಿಸಿ ಭಾರತೀಯ ಮಹಿಳೆಯರ ಹೆಸರಿನಲ್ಲಿ ಬೇರೇನೂ ಇರದು. ಇದು ಅವರ ಸಾಮರ್ಥ್ಯ. ಈ ಯೋಜನೆಯ ಯಶಸ್ಸಿನ ಹಿಂದೆ ಭಾರತದ ಮಹಿಳೆಯರಿದ್ದಾರೆ,'ಎಂದು ಹೇಳಿದರು. 'ಚಿನ್ನದ ಆಮದನ್ನು ಕಡಿತಗೊಳಿಸುವುದು ಅನಿವಾರ್ಯ,' ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 'ಚಿನ್ನ ಎಂದರೆ ಭದ್ರತೆ, ಆದಾಯದ ಮೂಲ. ಅದೀಗ ನಮ್ಮ ರಾಷ್ಟ್ರ ನಿರ್ಮಾಣದ ಭಾಗವಾಗಲಿದೆ,'ಎಂದು ಜೇಟ್ಲಿ ಹೇಳಿದದರು. ಚಿನ್ನವನ್ನು ನಗದೀಕರಿಸಲು ನಡೆಸಿದ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದವು, ಆದರೆ, ಈ ಬಾರಿ ಹೆಚ್ಚು ಮೊತ್ತದ ಬಡ್ಡಿ ದರ ನೀಡುತ್ತಿರುವುದರಿಂದ ಯೋಜನೆ ಯಶಸ್ವಿ ಆಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ. ಯೋಜನೆ ಏನು ? ಚಿನ್ನವನ್ನು ಕಾಲಕಾಲಕ್ಕೆ ಹರಾಜು ಹಾಕಲು ಇಲ್ಲ

SDA /JR.ASST IN STATE CIVIL SERVICES AND JR. ASST IN FOOD AND CIVIL SUPPLIES EXAMINATION HELD ON 18-10-2015

Image
GENERAL KANNADA SUB CODE 70:          A  B  C  D Series Keys

OFFICIAL KEYS: SDA /JR.ASST IN STATE CIVIL SERVICES AND JR. ASST IN FOOD AND CIVIL SUPPLIES EXAMINATION HELD ON 18-10-2015

Image
GENERAL KNOWLEDGE  SUB CODE 69    Series A  B  C  D keys

OFFICIAL KEYS: FDA /ASST IN STATE CIVIL SERVICES AND SR. ASST IN FOOD AND CIVIL SUPPLIES EXAMINATION HELD ON 04-10-2015

Image
GENERAL KANNADA SUB CODE 67         SERIES A   B  C  D KEYS

OFFICIAL KEYS: FDA /ASST IN STATE CIVIL SERVICES AND SR. ASST IN FOOD AND CIVIL SUPPLIES EXAMINATION HELD ON 04-10-2015 GENERAL KNOWLEDGE SUB CODE 66: A, B, C ,D SERIES KEYS

Image

Official KEY ANSWERS For SR. & JR ASST posts IN FOOD AND CIVIL SUPPLIES EXAMINATION HELD ON 03-10-2015 COMPUTER LITERACY SUB CODE 64 A B C D

Image

KARNATAKA PUBLIC SERVICE COMMISSION* KEY ANSWERS OF SR.ASST./FDA/ ASST./JR.ASST./SDA

http://kpsc.kar.nic.in/KEY%20ANS%20OF%20FDA_SDA.htm

Singapore has been declared as the world’s healthiest country in a recent reports with India securing the 103rd position. :

Singapore has been declared as the world's healthiest country in a recent reports with India securing the 103rd position. The list ranked the countries with the help of the data from the United Nations, the World Bank and the World Health Organisation. Singapore receives an overall grade of 89.45%. Italy is in second place with 89.07%, while Australia comes third with 88.33%. The rankings are dominated by Asian and European countries. North and South American countries did not feature in the top 20s. Israel was the only Middle Eastern country to make it in the top 10 league. The UK also failed to reach the top 20, ranking at number 21 with a score of 76.84% per cent, behind Belgium, Ireland and Norway. India ranked 103rd with an overall score of 22.17%. Most African nations occupied the latter half of the list with Lesotho, Democratic republic of Congo, Chad and Mozambique falling in the bottom 10. Swaziland was the at the very bo

ಸಿಂಗಪುರ: ಟ್ರೋಫಿ ಗೆದ್ದ ಸಾನಿಯಾ-ಮಾರ್ಟಿನಾ ವಿಶ್ವದ ನಂ.1

ಸಿಂಗಪುರ: ಟ್ರೋಫಿ ಗೆದ್ದ ಸಾನಿಯಾ-ಮಾರ್ಟಿನಾ ವಿಶ್ವದ ನಂ.1 ಸಿಂಗಪುರ, ನ.01: ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು ಸಿಂಗಪುರ ಡಬ್ಲ್ಯೂಟಿಎ ಫೈನಲ್ ನಲ್ಲಿ ಭರ್ಜರಿ ವಿಜಯ ದಾಖಲಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ಯಶಸ್ವಿ ಜೋಡಿ 9ನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕದ ವಿಶ್ವದ ಡಬಲ್ಸ್ ನಂ. 1 ಜೋಡಿ ಎನಿಸಿಕೊಂಡಿದೆ. ಟಾಪ್ ಸೀಡ್ ನ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು ಎಂಟನೇ ಸೀಡ್ ನ ಗಾರ್ಬಿನ್ ಮುಗುರುಜಾ ಹಾಗೂ ಕರ್ಲಾ ಸ್ವಾರೇಜ್ ನವರೋ ಅವರನ್ನು ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ 6-0, 6-3 ನೇರ ಸೆಟ್ ಗಳಲ್ಲಿ ಜಯ ದಾಖಲಿಸಿದ್ದಾರೆ. ಸುಮಾರು ಒಂದು ಗಂಟೆ 6 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 9ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಹಿಂಗಿಸ್ ಹಾಗೂ ಮಿರ್ಜಾ ಅವರು 10 ಫೈನಲ್ ಗಳನ್ನು ಪ್ರವೇಶಿಸಿ 9-1 ನಂತೆ ಯಶಸ್ಸು ಗಳಿಸಿದ್ದಾರೆ. * ಎರಡು ಗ್ರ್ಯಾನ್ ಸ್ಲಾಮ್ (ವಿಂಬಲ್ಡನ್, ಯುಎಸ್ ಓಪನ್) * ಐದು ಡಬ್ಲ್ಯೂಟಿಎ ಪ್ರಿಮಿಯರ್ ಪ್ರಶಸ್ತಿ (ಬಿಎನ್ ಪಿ ಪರಿಬಾಸ್ ಓಪನ್, ಇಂಡಿಯನ್ ವೆಲ್ಸ್, ಮಿಯಾಮಿ ಓಪನ್, ಫ್ಯಾಮಿಲಿ ಸರ್ಕಲ್ ಕಪ್- ಚಾರ್ಲೆಸ್ಟನ್, ಡೊಂಗ್ ಫೆಂಗ್ ಮೋಟರ್ ವುಹಾನ್ ಓಪನ್, ಚೀನಾ ಓಪನ್-ಬೀಜಿಂಗ್) * ಒಂದು ಡಬ್ಲ್ಯೂಟಿಎ ಅಂತಾರಾಷ್ಟ್ರೀಯ ಪ್ರ

‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮ :-

ರವಿವಾರ - ನವೆಂಬರ್ -01-2015 ಹೊಸದಿಲ್ಲಿ, ಅ.31: ರಾಜ್ಯವೊಂದು ಪ್ರತಿವರ್ಷವೂ ಇನ್ನೊಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡು ಅದರ ಸಂಸ್ಕೃತಿ ಮತ್ತು ಭಾಷೆಗೆ ಉತ್ತೇಜನ ನೀಡುವ ವಿನೂತನ ಅಭಿಯಾನ ವೊಂದನ್ನು ಕೇಂದ್ರ ಸರಕಾರ ರೂಪಿಸುತ್ತಿದೆ. 'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ ಹೊಸ ಕಾರ್ಯಕ್ರಮವೊಂದನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ಸದ್ಯದಲ್ಲೇ ಈ ಯೋಜನೆಯನ್ನು ಆರಂಭಿ ಸಲಾಗುತ್ತಿದ್ದು, ದೇಶದ ಜನರ ನಡುವೆ ಸಾಂಸ್ಕೃತಿಕ ಸಂಪರ್ಕ ಸೇತುವೆಯಾಗಲಿದೆ. ಜೊತೆಗೆ, ಬೇರೆಬೇರೆ ರಾಜ್ಯಗಳಲ್ಲಿ ವಾಸಿಸುತ್ತಿರುವ ಜನರ ನಡುವೆ ಹೆಚ್ಚಿನ ಸಂವಾದಕ್ಕೆ ನೆರವಾ ಗಲಿದೆ ಎಂದು ತಿಳಿಸಲಾಗಿದೆ. ಈ ಕಾರ್ಯಕ್ರಮದ ಸಂಬಂಧ ವಾಗಿ ನಾನು ಸಣ್ಣ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ಯು ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ರವರ ಜನ್ಮದಿನದ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪ್ರಧಾನಿ ಈ ವಿಷಯವನ್ನು ತಿಳಿಸಿದರು. ಉದಾಹರಣೆಗೆ, 2016ರಲ್ಲಿ ಹರ್ಯಾಣವು ತಮಿಳುನಾಡಿನೊಂದಿಗೆ ಸಂಪರ್ಕ ಬೆಳೆಸಲು ನಿರ್ಧರಿಸಿದಲ್ಲಿ ಹರ್ಯಾಣದ ಶಾಲೆಗಳ ವಿದ್ಯಾರ್ಥಿಗಳಿಗೆ ತಮಿಳು ಭಾಷೆಯ ನೂರು ವಾಕ್ಯಗ