Posts

ಸಂಶೋಧನೆ::ನದಿ ರಭಸವಾದಷ್ಟು ಹೆಚ್ಚಿನ ಇಂಗಾಲ ಡೈಆಕ್ಸೈಡ್ ಬಿಡುಗಡೆ:-:

ಲಂಡನ್: ನದಿಗಳು ರಭಸವಾಗಿ ಹರಿದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ! ಇಂಗ್ಲೆಂಡ್​ನ ಗ್ಲಾಸ್​ಗೋ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಸಂಶೋಧನೆಯಿಂದ ಈ ಅಂಶ ಬಹಿರಂಗಗೊಂಡಿದೆ. ಸಂಶೋಧಕರ ತಂಡದ ಪ್ರಕಾರ ರಭಸವಾಗಿ ಹರಿಯುವ ನದಿಗಳು ಹಾಗೂ ಕಠಿಣ ಪರಿಶ್ರಮದ ಕೆಲಸ ಮಾಡುವ ಮಾನವನ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಕಠಿಣ ಪರಿಶ್ರಮದ ಕೆಲಸ ಮಾಡುವಾಗ ಮನುಷ್ಯರು ಹೇಗೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನ್ನು ಹೊರಹಾಕುತ್ತಾರೋ ಅದೇ ರೀತಿ ನದಿಗಳು ಕೂಡ ರಭಸವಾಗಿ ಹರಿದಂತೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಸ್ಕಾಟ್ಲೆಂಡ್​ನಲ್ಲಿ ಎರಡು ನದಿಗಳು ಮತ್ತು ಪೆರುವಿಯನ್ ಅಮೆಜಾನ್​ನಲ್ಲಿ ನಾಲ್ಕು ನದಿಗಳ ಬಳಿ ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಈ ವಿಷಯ ಖಚಿತಪಟ್ಟಿದ್ದಾಗಿ ಸಂಶೋಧಕರ ತಂಡ ತಿಳಿಸಿದೆ. ಜಾಗತಿಕ ವಾತಾವರಣದ ಮೇಲೆ ಮಾನವನ ಚಟುವಟಿಕೆಗಳಿಂದಾಗಿ ಆಗುವ ಪರಿಣಾಮವನ್ನು ಅರಿಯಲು ಅತ್ಯಂತ ಜಟಿಲವಾಗಿರುವ ಕಾರ್ಬನ್ ಸೈಕಲ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನದಿ, ಸಮುದ್ರ ಮತ್ತು ಮಹಾಸಾಗರಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಇಂಗಾಲ ಅನಿಲದಿಂದಾಗುವ ಪರಿಣಾಮದ ಬಗ್ಗೆ ವಿಜ್ಞಾನಿಗಳ ಸಂಕುಲ ಇದುವರೆಗೆ ಭಾರಿ ಅವಜ್ಞೆ ತೋರಿರುವುದಾಗಿ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ. ಸಂಶೋಧನೆ ನಡೆಸಿ

ಗ್ರಂಥಾಲಯ ಇಲಾಖೆಯ 477 ಹುದ್ದೆಗಳನ್ನು ಭರ್ತಿಗೆ ಕ್ರಮ:

ಹೈದರಾಬಾದ್ ಕರ್ನಾಟಕ ಭಾಗದ 87 ಹುದ್ದೆ ಸಹಿತ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ 477 ವಿವಿಧ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಯಲಿದೆ ಎಂದು ಇಲಾಖೆ ನಿರ್ದೇಶಕ ಡಾ.ಸತೀಶ್ ಎಸ್.ಹೊಸಮನಿ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈ-ಕ ಭಾಗದ 6 ಜಿಲ್ಲೆಗಳ ಅರ್ಜಿಗಳು ಈಗಾಗಲೇ ಸ್ವೀಕೃತವಾಗಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಖಾಲಿ ಇರುವ ಇಲಾಖೆ ಉಪ ನಿರ್ದೇಶಕರ ಹುದ್ದೆ ಸೇರಿ ವಿವಿಧ 390 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದರು. 5,766 ಗ್ರಾಪಂ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಸೇವೆ ಕಾಯಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೊಳಚೆ ಪ್ರದೇಶ, ಅಲೆಮಾರಿ ಗ್ರಂಥಾಲಯಗಳ ಮೇಲ್ವಿಚಾರಕರ ವೇತನವನ್ನು 5,500 ರೂ.ಗೆ ಹೆಚ್ಚಿಸಲಾಗುವುದು. ಹಣಕಾಸು ಇಲಾಖೆ ಅನುಮೋದನೆ ನಿರೀಕ್ಷಿಸಲಾಗಿದೆ. ಹೈ-ಕ ಭಾಗದ 250 ಗ್ರಂಥಾಲಯಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲಾಗುತ್ತಿದ್ದು, 25 ಕೋಟಿ ರೂ. ವೆಚ್ಚದಲ್ಲಿ ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತು ಖರೀದಿಸಲಾಗುವುದು. ಪ್ರತಿ ಗ್ರಂಥಾಲಯಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದರು.

Ross Taylor ticks off records during epic 290:::-

New Zealand batsman Ross Taylor entered cricket's record books on Monday during the course of his excellent 290 against Australia in Perth, which lifted the visiting team to their highest total against the hosts in a 53-match history dating back to 1946. Foremost of those was a breaking a record that had stood for almost 112 years, that of the highest individual score by a visiting batsman in Australia. His career-best 290 from 374 balls surpassed England batsman Tip Foster's 287 scored in Sydney in December 1903. Overall, only England great Len Hutton's 364 at Lord's in 1938 stands as the highest score against Australia after Taylor's sublime effort. Thanks largely to Taylor's incredible innings, New Zealand overtook Australia's first-innings score of 559/9 declared and made 624. It was also the highest total scored against Australia since England made 644 in Sydney during the 2010-11 Ashes. Their previous best versus Australia in Tests was the 553/7

24/06/2003 ರ ನಂತರ ಪ್ರಾಥಮಿಕ ಶಾಲಾ ಶಿಕ್ಷಕರು ಸರ್ಕಾರಿ ಪ್ರೌಢಶಾಲಾ ಭಾಷಾ ಸಹ ಶಿಕ್ಷಕರಾಗಿ ಬಡ್ತಿ ಪಡೆದವರ ವಿವರಗಳನ್ನು 25/1/2015 ರೊಳಗೆ ಸಾ.ಶಿ ಇಲಾಖೆಗೆ ಒದಗಿಸುವ ಕುರಿತು..

Image

ಇಂದಿನಿಂದ ಸ್ವಚ್ಛ ಭಾರತ ಸೆಸ್ ಜಾರಿ : ಪಾನ್ಕಾರ್ಡ್ ಬೆಲೆ 107ಕ್ಕೆ ಏರಿಕೆ

Image
ನವದೆಹಲಿ, ನ.15-ಕೇಂದ್ರ ಸರ್ಕಾರ ಪ್ರಾಯೋಜಿತ ಸ್ವಚ್ಛ ಭಾರತ ಸೆಸ್ ಯೋಜನೆ ಇಂದಿನಿಂದ ಅನುಷ್ಠಾನಕ್ಕೆ ಬಂದಿದ್ದು, ಬಹುಪಯೋಗಿ ಪಾನ್ಕಾರ್ಡ್ ಬೆಲೆ 1ರೂ. ಹೆಚ್ಚಲಿದೆ. ಇದುವರೆಗೆ 106 ರೂ.ಗಳಿಗೆ ದೊರೆಯುತ್ತಿದ್ದ ಪಾನ್ (ಪಿಎಎನ್- ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ ಇಂದಿನಿಂದ 107ರೂ. ಆಗಲಿದೆ. ಕಳೆದ ವಾರವೇ ಕೇಂದ್ರ ಸರ್ಕಾರ ಘೋಷಿಸಿದ್ದ ಶೇ.0.5ರಷ್ಟು ಸೆಸ್ ಅನ್ನು ತೆರಿಗೆ ವಿಧಿಸಲರ್ಹವಾದ ಎಲ್ಲಾ ಸೇವೆಗಳ ಮೇಲೆ ವಿಧಿಸುವ ನೂತನ ವ್ಯವಸ್ಥೆ ಇಂದಿನಿಂದ (ನ.15) ಕಾರ್ಯಾನುಷ್ಠಾನದಲ್ಲಿ ಬಂದಿದೆ. ದೇಶೀಯವಾಗಿ ಯಾವುದೇ ಕಂಪೆನಿ ಅಥವಾ ವ್ಯಕ್ತಿಗಳ ಎಲ್ಲಾ ಆರ್ಥಿಕ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ನೀಡಲಾಗುವ ಖಾಯಂ ಖಾತಾ ಸಂಖ್ಯೆ (ಪಾನ್) ಕಾರ್ಡ್ ಪಡೆಯಲು ಇನ್ನು 106ರೂ.ಗಳಿಗೆ ಬದಲು 107 ರೂ.ಗಳನ್ನು ತೆರಬೇಕಾಗುತ್ತದೆ. ಇದೇ ರೀತಿ ದೇಶಬಿಟ್ಟು ವಿದೇಶಗಳಲ್ಲಿ ಪಾನ್ ಕಾರ್ಡ್ ಪಡೆಯಲು ಈವರಗೆ ಕೊಡುತ್ತಿದ್ದ 985 ರೂ.ಗಳ ಬದಲು ಹೆಚ್ಚುವರಿ 4 ರೂ. ಅಂದರೆ 989ರೂ. ನೀಡಬೇಕಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 436 ವಾಹನ ಚಾಲಕರ ಹುದ್ದೆಗಳಿಗೆ online ಮೂಲಕ ಅರ್ಜಿ ಆಹ್ವಾನ

Image

ನೂತನ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್:

Image
ಬೆಂಗಳೂರು: ಕರ್ನಾಟಕ ಸರಕಾರದ ಅಡ್ವೊಕೇಟ್ ಜನರಲ್ ಆಗಿ ಹಿರಿಯ ನ್ಯಾಯವಾದಿ ಮಧುಸೂದನ್ ನಾಯಕ್ ಅವರನ್ನು ನೇಮಿಸಲಾಗಿದೆ. ಅಡ್ವೊಕೇಟ್ ಜನರಲ್ ಆಗಿದ್ದ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಅವರು ಅ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿದ್ದರು. ದಿಲ್ಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿಗೆ ವಾಪಸ್ ಆದ ಬಳಿಕ ಇನ್ನೊಮ್ಮೆ ಚರ್ಚಿಸಿ ರಾಜೀನಾಮೆ ಅಂಗೀಕರಿಸುವ ಬಗ್ಗೆ ತೀರ್ಮಾನಿಸುವೆ ಎಂದು ಹೇಳಿದ್ದರು. ರವಿವರ್ಮಕುಮಾರ್ ರಾಜೀನಾಮೆ ಅಂಗೀಕರಿಸಿದ್ದ ಸಿದ್ದರಾಮಯ್ಯ, ನ.13ರಂದು ನೂತನ ಎ.ಜಿ.ಯಾಗಿ ಮಧುಸೂದನ್ ನಾಯಕ್ ಅವರನ್ನು ನೇಮಿಸಿ ಆದೇಶ ಹೊರಡಿಸುವಂತೆ ಕಾನೂನು ಇಲಾಖೆಗೆ ಸೂಚಿಸಿದ್ದರು. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪ್ರೊ. ರವಿವರ್ಮಕುಮಾರ್ ಅವರನ್ನು ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿದ್ದರು. ಅಹಿಂದ, ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ ದ ರವಿವರ್ಮಕುಮಾರ್, ಸರಕಾರದ ಪ್ರಗತಿಪರ ನಡೆಗೆ ಬೆನ್ನುಲುಬಾಗಿ ನಿಲ್ಲಲಿದ್ದಾರೆ ಎಂಬ ನಂಬಿಕೆಯೂ ಸರಕಾರಕ್ಕೆ ಇತ್ತು. ಭಾಷಾ ಮಾಧ್ಯಮದ ವಿಷಯದಲ್ಲಿ ಅವರು ಸಮರ್ಥವಾಗಿ ವಾದ ಮಂಡಿಸಲಿಲ್ಲ ಎಂದು ಪ್ರತಿಪಕ್ಷ ನಾಯಕರು ಅನೇಕ ಬಾರಿ ಟೀಕಿಸಿದ್ದುಂಟು. ಸಿದ್ದರಾಮಯ್ಯ ಸಂಪುಟದ ಅನೇಕ ಸಚಿವರಿಗೆ ಅವರ ಧೋರಣೆ ಕುರಿತು ಆಕ್ಷೇಪವೂ ಇತ