Posts

Job info: ಧಾರವಾಡ ಜಿಲ್ಲೆಯಲ್ಲಿ RBSK ವೈದ್ಯಾಧಿಕಾರಿ :30 ಹುದ್ದೆಗಳು (click below)

Image

ಮಿಂಚಿದ ಚೆಟ್ರಿ: ಭಾರತದ ಮಡಿಲಿಗೆ ಸ್ಯಾಫ್ ಕಪ್

Image
4 Jan, 2016 ತಿರುವನಂತಪುರ (ಐಎಎನ್ಎಸ್): ಸುನಿಲ್ ಚೆಟ್ರಿಯ ಚಾಕಚಕ್ಕತೆ ಭಾನುವಾರದ ಸಂಜೆಗೆ ವಿಜಯೋತ್ಸವದ ರಂಗು ತುಂಬಿತು. ಭಾರತ ಫುಟ್ಬಾಲ್ ತಂಡವು 'ಸ್ಯಾಫ್ ಕಪ್'ಗೆ ಮುತ್ತಿಕ್ಕಿತು. ಕ್ರೀಡಾಂಗಣದಲ್ಲಿ ತುಂಬಿದ್ದ ಅಭಿ ಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಫೈನಲ್ನಲ್ಲಿ ಭಾರತ ತಂಡವು 2–1 ಗೋಲುಗಳಿಂದ ಬಲಿಷ್ಠ ಆಫ್ಘಾನಿಸ್ಥಾನ ತಂಡವನ್ನು ಮಣಿಸಿತು. ಜೆಜೆ ಲಾಲ್ ಪೆಕ್ಲುವಾ (72ನಿ) ಮತ್ತು ಪಂದ್ಯದ ಹೆಚ್ಚುವರಿ ಅವಧಿಯ 11ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಗಳಿಸಿದ ಗೋಲುಗಳು ಭಾರತ ತಂಡಕ್ಕೆ ಜಯದ ಕಾಣಿಕೆ ನೀಡಿದವು. 2013ರ ಟೂರ್ನಿಯ ಫೈನಲ್ನಲ್ಲಿ ಇದೇ ತಂಡದ ಎದುರು ಅನುಭವಿಸಿದ್ದ ಸೋಲಿಗೆ ಭಾರತ ಮುಯ್ಯಿ ತೀರಿಸಿ ಕೊಂಡಿತು. ಆತಿಥೆಯ ತಂಡವು ಸ್ಯಾಫ್ ಕಪ್ ಗೆದ್ದಿದ್ದು ಇದು ಏಳನೇ ಬಾರಿ. ಕಠಿಣ ಸವಾಲು: ಫಿಫಾ 150ನೇ ಸ್ಥಾನ ದಲ್ಲಿರುವ ಆಫ್ಘನ್ ತಂಡವು ಸುಲಭ ವಾಗಿ ಶರಣಾಗಲಿಲ್ಲ. ಆತಿಥೇಯ ಭಾರತವೂ ಜಗ್ಗಲಿಲ್ಲ. ಪಂದ್ಯದ ಮೊದಲ ಎಪ್ಪತ್ತು ನಿಮಿಷಗಳವರೆಗೂ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪ್ರಮುಖ ಆಟಗಾರ ರಾಬಿನ್ ಸಿಂಗ್ ಗಾಯಗೊಂಡು ಕಣಕ್ಕೆ ಇಳಿಯಲಿಲ್ಲ. ಅವರ ಕೊರತೆಯಿಂದ ತಂಡಕ್ಕೆ ಹಿನ್ನಡೆಯಾಗುವ ಆತಂಕ ಕೋಚ್ ಸ್ಟೀಫನ್ ಕಾನ್ಸ್ಟೆಂಟೈನ್ ಅವರಿಗೆ

ಹಿಂದು ಪಂಚಾಂಗ (ಕ್ಯಾಲೆಂಡರ್ ):**-:

ಪಂಚಾಂಗ (ಆಂಗ್ಲ: ಕ್ಯಾಲೆಂಡರ್) ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ. #ಹಿಂದೂ #ಪಂಚಾಂಗ ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ , ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ. #ತಿಥಿಗಳು ತಿಥಿಗಳು ಮೂವತ್ತು(30). 30 ತಿಥಿಗಳನ್ನು ಎರಡುಪಕ್ಷಗಳಲ್ಲಿ 15ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ (ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ 15 ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ. ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ 15 ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನಂತೆ ಇರುತ್ತದೆ . #ಶುಕ್ಲಪಕ್ಷ : ಪಾಡ್ಯ (1) ಬಿದಿಗೆ (2) ತದಿಗೆ (3) ಚೌತಿ (4) ಪಂಚಮಿ (5) ಷಷ್ಠಿ (6 ) ಸಪ್ತಮಿ (7) ಅಷ್ಟಮಿ (8) ನವಮಿ (9) ದಶಮಿ (10) ಏಕಾದಶಿ (11) ದ್ವಾದಶಿ (12) ತ್ರಯೋದಶಿ (13) ಚತುರ್ದಶಿ (14) ಹುಣ್ಣಿಮೆ (15) #ಕೃಷ್ಣಪಕ್ಷ : ಪಾಡ್ಯ (1) ಬಿದಿಗೆ (2) ತ

K.S.R.TC.ಯ ಚಾಲಕ, ದರ್ಜೆ- 3 ,ಹುದ್ದೆಗಳ ಸಂಭವನೀಯ ಪಟ್ಟಿ ದಿ. 01/01/2016 ರಂದು ಪ್ರಕಟಿಸಲಾಗಿದೆ. (23/03/2015ರ ಅನುಸಾರ)

Image

ದಿವ್ಯಾಂಗ ಪರ್ವತಾರೋಹಿ ಅರುಣಿಮಾ ಅರ್ಜೆಂಟೀನಾದ ಅಕಾಂಗೊ ಪರ್ವತವೇರುವ ಮೂಲಕ ಮತ್ತೊಂದು ಸಾಹಸ!

Image
BY ವಿಜಯವಾಣಿ ನ್ಯೂಸ್ · JAN 2, 2016 ಲಖನೌ : ದೇಶದ ಖ್ಯಾತ ದಿವ್ಯಾಂಗ ಪರ್ವತಾರೋಹಿ ಅರುಣಿಮಾ ಸಿನ್ಹಾ ಮೌಂಟ್ ಎವರೆಸ್ಟ್ ಪರ್ವತ ಏರಿ ದಾಖಲೆ ನಿರ್ವಿುಸಿದ್ದು ಇತಿಹಾಸ. ಈಗ ಮತ್ತೊಂದು ಸಾಹಸದ ಮೂಲಕ ಅವರು ಸುದ್ದಿಯಾಗಿದ್ದಾರೆ. ಅರ್ಜೆಂಟೀನಾದ ಅಕಾಂಗೊ ಪರ್ವತವೇರುವ ಮೂಲಕ ವಿಶ್ವದ ಗಮನ ಸೆಳೆಯುವಲ್ಲಿ ಅರುಣಿಮಾ ಯಶಸ್ವಿಯಾಗಿದ್ದಾರೆ. ಎರಡನೇ ಮೌಂಟ್ ಎವರೆಸ್ಟ್ ಎಂದೇ ಪ್ರಸಿದ್ಧಗೊಂಡಿರುವ ಈ ಪರ್ವತವನ್ನು ಎಡಗಾಲಿನ ನ್ಯೂನತೆ ಇರುವ ಅರುಣಿಮಾ ಏರಿ ಹೊಸದೊಂದು ಸಾಧನೆ ಮಾಡಿದ್ದಾರೆ. ಡಿಸೆಂಬರ್ 12 ರಂದು ಪರ್ವತ ಹತ್ತಲು ಶುರು ಮಾಡಿ ಡಿಸೆಂಬರ್ 25 ರಂದು ತುತ್ತ ತುದಿ ತಲುಪಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಅಕಾಂಗೊ ಪರ್ವತ ಸಮುದ್ರ ಮಟ್ಟದಿಂದ 6960.8 ಮೀಟರ್ ಎತ್ತರವಿದ್ದು, ಏಷ್ಯೇತರ ಬೆಟ್ಟಗಳಲ್ಲಿಯೆ ಅತಿ ದೊಡ್ಡದೆನಿಸಿಕೊಂಡಿದೆ. ಸಾಧನೆಗೆ ಸಂತಸ ವ್ಯಕ್ತಪಡಿಸಿದ ಅರುಣಿಮಾ, ನಾನು ಜಗತ್ತಿನ 7 ದೊಡ್ಡ ಪರ್ವತವೇರುವ ಗುರಿ ಹೊಂದಿದ್ದೇನೆ. ಅದರಲ್ಲಿ 5 ನೇ ಪರ್ವತ ಇದಾಗಿದೆ. ಜತೆಗೆ 5 ಪರ್ವತಗಳನ್ನೇರಿದ ಪ್ರಥಮ ವಿಕಲಾಂಗ ಮಹಿಳೆ ಎಂದು ವಿಶ್ವ ದಾಖಲೆ ಬರೆದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅರುಣಿಮಾಗೆ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ 24 ಹಾಗು ವಿಜಯಪುರ ಜಿಲ್ಲೆಯಲ್ಲಿ 16 ವೈದ್ಯಾಧಿಕಾರಿ ಹುದ್ದೆಗಳ (ಗುತ್ತಿಗೆ ಆಧಾರ) ನೇಮಕ ಕುರಿತ ಪತ್ರಿಕಾ ಪ್ರಕಟಣೆ:

Image

ತಿಂಗಳ ತಿರುಳು: ಜನೆವರಿ 2016 (TINGALA TIRULU :JANUARY 2016)

Image