Posts

ಕನ್ನಡದ ಉರ್ವಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ :* ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ ‘ಉರ್ವಿ’ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Image
By Suvarna Web Desk | 10:27 PM Thursday, 06 April 2017 ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ಕುರಿತಾದ ಮತ್ತು ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ 'ಉರ್ವಿ' ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನ್ಯೂಯಾರ್ಕ್ (ಏ.06):  ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ಕುರಿತಾದ ಮತ್ತು ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ  'ಉರ್ವಿ ' ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬುಧವಾರ ರಾತ್ರಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡೀ ಫಿಲಂ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ಚಿತ್ರ ಎಂಬ ಖ್ಯಾತಿಯನ್ನು ಸ್ಯಾಂಡಲ್‌ವುಡ್‌ನ 'ಉರ್ವಿ' ಪಡೆದುಕೊಂಡಿದೆ. ಶೃತಿ ಹರಿಹರನ್, ಶ್ವೇತಾ ಪಂಡಿತ್ ಮತ್ತು 'ಯು ಟರ್ನ್' ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದ ಶ್ರದ್ಧಾ ಶ್ರೀನಾಥ್ ಅಭಿನಯದ ಉರ್ವೀ ಚಿತ್ರ ಜನರ ಗಮನ ಸೆಳೆದಿತ್ತು. ಅಲ್ಲದೆ, ಹಲವು ಅಂತಾರಾಷ್ಟ್ರೀಯ ಫೆಸ್ಟಿವಲ್‌ಗಳ ಪ್ರಶಸ್ತಿಗಳಿಗಾಗಿನ ಪೈಪೋಟಿಯಲ್ಲಿ ಚಿತ್ರ ತೀವ್ರ ಸ್ಪರ್ಧೆಯೊಡ್ಡುತ್ತಿದೆ. 

ವಾಟ್ಸಾಪ್ಪ ಕಾಲದಲ್ಲೊಂದು ಥ್ಯಾಂಕಿಂಗ್ ಲೆಟರ್

Image

*ಪಕ್ಷಿಪ್ರೇಮಿ ಶಿಕ್ಷಕ* ಮಹೇಶ್ ಪೂಜಾರಿ

Image
ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಸ.ಪ್ರಾ.ಶಾಲಾ ಶಿಕ್ಷಕರೊಬ್ಬರ ಹವ್ಯಾಸದ ಹಾದಿ ಕುರಿತು ವರದಿ: (ಕರ್ನಾಟಕ ದರ್ಶನ) * *ಕೃತಕ ಗೂಡು:* ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಸಂತತಿ ಹೆಚ್ಚಿಸುವ ಪಣ ತೊಟ್ಟಂತಿರುವ ಇವರು, ತಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಾಣ ಮಾಡಿದ್ದಾರೆ. ಗುಬ್ಬಚ್ಚಿಗಳು ಕೃತಕ ಗೂಡಿನಲ್ಲಿ ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತಿವೆ. ಇವರ ಕೈತೋಟದ ಗಿಡಗಳಲ್ಲಿ ಹತ್ತಾರು ಜೇನುಗೂಡುಗಳಿವೆ. ಈ ಗೂಡುಗಳಿಂದ ಪ್ರತಿವರ್ಷ ಸುಮಾರು ಒಂದು ಕೆ.ಜಿಯಷ್ಟು ಜೇನುತುಪ್ಪ ಪಡೆಯುತ್ತಿದ್ದಾರೆ. ವರದಿ:ಪ್ರಕಾಶ ಎನ್‌.ಮಸಬಿನಾಳ ಹಲವರಿಗೆ ಪಕ್ಷಿಗಳನ್ನು ತಂದು ಪಂಜರದಲ್ಲಿ ಇಟ್ಟು ಸಾಕುವುದು ಹವ್ಯಾಸ. ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಶಿಕ್ಷಕ ಮಹೇಶ ಪೂಜಾರಿ ಹಾಗಲ್ಲ. ಹಕ್ಕಿಗಳಿಗಾಗಿಯೇ ಕೃತಕ ಗೂಡುಗಳನ್ನು ನಿರ್ಮಿಸಿ ಅವುಗಳಿಗೆ ಆಸರೆ ನೀಡುತ್ತಿದ್ದಾರೆ. ಕೃಷಿ ಪ್ರೇಮಿಯೂ ಇವರಾಗಿದ್ದು ಇವರಿಗೆ 'ಕೃಷಿಶಿಕ್ಷಕ' ಎಂದೂ ಕರೆಯಬಹುದು. ರಜಾ ದಿನಗಳನ್ನು ಮನೆಯ ಕೈತೋಟದ ಅಂದ ಮಾಡುವುದರ ಜೊತೆ ಪಕ್ಷಿಗಳ ಆರೈಕೆಗಾಗಿ ಮೀಸಲು. ಮನೆಯ ಅಂಗಳದಲ್ಲಿ ಬಾಳೆ, ತೆಂಗು, ಅಡಿಕೆ, ಏಲಕ್ಕಿ, ನಿಂಬೆ, ವೆನಿಲಾ ಬೆಳೆದಿರುವುದು ಮಾತ್ರವಲ್ಲದೇ, ಮೂರು ಮೀಟರ್‌ ಸುತ್ತಳತೆಯಲ್ಲಿ ದ್ರಾಕ್ಷಿ, ಮಾವು, ಪೇರಲೆ, ಕಿತ್ತಳೆ ಹಣ್ಣುಗಳನ್ನು ಬೆಳೆಸಿದ್ದಾರೆ. ಇನ್ನೊಂದೆಡೆ, 14 ಜಾತಿಯ ದಾಸವಾಳ

ಭಾರತದ ಮೊದಲ ಮಂಗಳಮುಖಿ ಎಸ್ಐ ಪ್ರೀತಿಕಾ ಯಾಶಿನಿ:*

Image
ಧರ್ಮಪುರಿ: ಮಂಗಳಮುಖಿ ಕೆ.ಪ್ರೀತಿಕಾ ಯಾಶಿನಿ ಧರ್ಮಪುರಿ ಪೊಲೀಸ್ ಇಲಾಖೆಯಲ್ಲಿ ಎಸ್ಐ ಆಗಿ ನೇಮಕಗೊಂಡಿದ್ದಾರೆ. ಇವರು ಪೊಲೀಸ್ ಇಲಾಖೆಯಲ್ಲಿ ಸ್ಥಾನ ಪಡೆದಿರುವ ದೇಶದ ಮೊದಲ ಮಂಗಳಮುಖಿ. ಆದರೆ ಇದಕ್ಕಾಗಿ ಪ್ರೀತಿಕಾ ಬಹಳಷ್ಟು ಕಾನೂನು ಹೋರಾಟ ನಡೆಸಬೇಕಾಯಿತು. ಕರ್ತವ್ಯಕ್ಕೆ ಹಾಜರಾದ ಮೊದಲ ದಿನ ಬಹಳ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನನಗೆ ಸಹಕಾರ ನೀಡಿದ್ದಾರೆ. ಒಂದು ವರ್ಷ ಪಡೆದ ತರಬೇತಿ ಕರ್ತವ್ಯ ನಿರ್ವಹಿಸುವುದಕ್ಕೆ ಬಹಳ ನೆರವಾಗಿದೆ ಎಂದು ಪ್ರೀತಿಕಾ ಹೇಳಿದ್ದಾರೆ. ಚೆನ್ನೈ ಸಮೀಪದ ವಂಡಲೂರು ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ. ಇವರು ಹುಟ್ಟಿನಿಂದ ಗಂಡಾಗಿದ್ದು, ಪ್ರದೀಪ್ ಕುಮಾರ್ ಆಗಿ ಬೆಳೆದವರು. ಪದವಿ ಪಡೆದ ಬಳಿಕ ಲಿಂಗ ಪರಿವರ್ತನೆ ಮಾಡಿಸಿಕೊಂಡು ಪ್ರೀತಿಕಾ ಆದರು. ಹೀಗಾಗಿ ಪೊಲೀಸ್ ಇಲಾಖೆಗೆ ಸೇರಬೇಕಾದರೆ ಬಹಳ ಸವಾಲುಗಳನ್ನು ಎದುರಿಸಬೇಕಾಯಿತು. ಎಸ್ಐ ಪೋಸ್ಟ್ಗೆ ಪ್ರೀತಿಕಾ ಅರ್ಜಿ ಸಲ್ಲಿಸಿದಾಗ ತಿರಸ್ಕೃತಗೊಂಡಿತ್ತು. ಏಕೆಂದರೆ ಅರ್ಜಿಯಲ್ಲಿ ಮಹಿಳೆ, ಪುರುಷ ಎಂಬ ಎರಡೇ ವಿಭಾಗವಿತ್ತು. ಬಳಿಕ ಅವರು ಹೈಕೋರ್ಟ್ ಮೊರೆ ಹೋದರು. ಅಲ್ಲಿ ಅವರ ಪರವಾಗಿ ತೀರ್ಪು ಬಂತು. ಕಳೆದ ವರ್ಷ ಫೆಬ್ರವರಿಯಲ್ಲಿ ನೇಮಕ ಪತ್ರ ಲಭಿಸಿತ್ತು. first transgender SI: K Prithika Yashini, who became the first transgender to become sub-inspector of police, join

ಸಿಂಧೂ ಮಡಿಲಿಗೆ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್

Image
ಹೊಸದಿಲ್ಲಿ: 2017 ಇಂಡಿಯಾ ಓಪನ್ ಸೂಪರ್ ಸಿರೀಸ್ ಫೈನಲ್ ಪಂದ್ಯದಲ್ಲಿ ಸ್ಪೇನ್ನ ಕ್ಯಾರೊಲಿನಾ ಮರಿನ್ ಅವರನ್ನು ಮಣಿಸಿರುವ ಭಾರತದ ಹೆಮ್ಮೆಯ ಪಿ.ವಿ. ಸಿಂಧೂ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮುಡಿಗೇರಿಸಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬದ್ದ ವೈರಿ ಮರಿನ್ ಅವರನ್ನು 21-19, 21-16ರ ನೇರ ಅಂತರದಲ್ಲಿ ಮಣಿಸುವ ಮೂಲಕ ಸಿಂಧೂ ಚೊಚ್ಚಲ ಇಂಡಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿಗೆ ಮುತ್ತಿಕ್ಕಿದರು.

ಸರ್ಕಾರಿ ಶಾಲೆ ಮಕ್ಕಳಿಗಾಗಿ ಸ್ವಲ್ಪ ಓದು, ಸ್ವಲ್ಪ ಮೋಜು..ಎಂಬ ವಿನೂತನ ಯೋಜನೆ

 April 2, 2017  children, , ಸ್ವಲ್ಪ ಓದು , ಸ್ವಲ್ಪ ಮೋಜು ಬೆಂಗಳೂರು,ಏ.2- ಎ ಲ್ಲಾ ಮಕ್ಕಳನ್ನೂ ಮೂಲ ವಿಜ್ಞಾನ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಸ್ವಲ್ಪ ಓದು, ಸ್ವಲ್ಪ ಮೋಜು ಎಂಬ ವಿನೂತನ ಯೋಜನೆಯನ್ನು ಇಲಾಖೆ ಆರಂಭಿಸಿದೆ. 5ರಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಭಾಷೆ, ಗಣಿತ, ವಿಜ್ಞಾನ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ತರಬೇತಿ ನೀಡುವುದಕ್ಕಾಗಿ ಈ ಯೋಜನೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಆಯೋಜಿಸಿದೆ. ಏಪ್ರಿಲ್ ತಿಂಗಳ ಮೊದಲ ವಾರದಿಂದ ಮೇ ತಿಂಗಳ ಕೊನೆಯ ವಾರದವರೆಗೂ ಈ ಶಿಬಿರ ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭವಾಗಲಿದ್ದು, ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುವುದು. ವಿಶೇಷವಾಗಿ ಬರಪೀಡಿತ ತಾಲ್ಲೂಕುಗಳಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಮಕ್ಕಳು ಸಮಯವನ್ನು ವ್ಯರ್ಥ ಮಾಡದೆ ಜ್ಞಾನವೃದ್ದಿಸಿಕೊಳ್ಳಲು ಸರ್ಕಾರ ಇಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ಮಕ್ಕಳು ಆಟಗಳಲ್ಲೇ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಇದರಿಂದ ಅವರ ವಿದ್ಯಾಭ್ಯಾಸ ಕುಂಠಿತವಾಗುತ್ತಿತ್ತು. ಅಲ್ಲದೆ ಖಾಸಗಿ ಶಾಲೆಗಳು ಕೆಲವೇ ದಿನಗಳು ಮಾತ್ರ ರಜೆ ನೀಡಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯ

Which of the following metals forms an amalgam with other metals? A. Tin B. Mercury C. Lead D. Zinc

Which of the following metals forms an amalgam with other metals? A. Tin B. Mercury C. Lead D. Zinc