Posts

ಗೀಚಿದ ನೋಟು ರದ್ದತಿ ಇಲ್ಲ: ಆರ್.ಬಿ.ಆಯ್:*

Image
15 Dec, 2015 ಮುಂಬೈ (ಪಿಟಿಐ): ಗೀಚಿದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ರಘುರಾಂ ರಾಜನ್ ಸ್ಪಷ್ಟಪಡಿಸಿದ್ದಾರೆ. 'ವರ್ಷಾಂತ್ಯದಲ್ಲಿ ಆರ್ಬಿಐ ಗೀಚಿದ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತದೆ' ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ನಂಬದಂತೆ ಅವರು ಆಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಗೀಚಿದ ನೋಟುಗಳನ್ನು ಹಿಂದಕ್ಕೆ ಪಡೆದು ಅದರ ಬದಲಾಗಿ ಹೊಸ ನೋಟುಗಳನ್ನು ಚಲಾವಣೆಗೆ ತರುವ ಉದ್ದೇಶವಿದೆ. ಹಾಗೆಂದ ಮಾತ್ರಕ್ಕೆ ಗೀಚಿದ ನೋಟುಗಳು ಕಾನೂನು ಬದ್ಧವಲ್ಲ ಎಂದು ಅರ್ಥವಲ್ಲ. ಅವುಗಳನ್ನು ಎಲ್ಲಿ ಬೇಕಾದರೂ ಬಳಸಬಹುದು. ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ. 2016ರ ಜನವರಿ 1 ರಿಂದ ಗೀಚಿದ ನೋಟುಗಳನ್ನು ಬ್ಯಾಂಕ್ಗಳು ಪಡೆಯುವುದಿಲ್ಲ ಎಂದು ಆರ್ಬಿಐ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ ಎಂಬ ಸಾಮಾಜಿಕ ಮಾಧ್ಯಮಗಳ ವರದಿಯನ್ನು ಆರ್ಬಿಐ ತಳ್ಳಿಹಾಕಿದೆ.

BKS Iyengar’s 97th Birthday: Google Doodle celebrates life of yoga master Creator of 'Iyengar yoga', who suffered from ill-health as a child, taught violinist Yehudi Menuhin the art of yoga and became an international guru:*

Image
 Google has created one of its trademark doodles to celebrate the life of BKS Iyengar, who founded the style of yoga known as 'Iyengar yoga'. Iyengar, whose full name is Bellur Krishnamachar Sundararaja Iyengar, was born in 1918 into a poor family in southern India - one of 13 children, of whom only 10 survived. As a child he suffered from poor health and at the age of 15 one of his brother- in-laws, who ran a yoga school in the state of Mysore, invited Iyengar to visit, in order to improve his health through yoga practice. In 1937, he was 19, he was sent to the city of Pune in the state of Maharashtra to teach yoga but it was not until 1952 that Iyengar became an international guru, after he introduced renowned violinist introduced the violinist Yehudi Menuhin to the art. -- Menuhin was impressed by Iyengar's skills and invited his teacher to Switzerland in 1954. After this introduction Iyengar continued visiting t

ಹಿರಿಯ ನಟ ದಿಲೀಪಕುಮಾರಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ:*

Image
ಬೆಂಗಳೂರು, ಡಿ.೧೪-ಭಾರತೀಯ ಚಿತ್ರರಂಗದ ದಿಗ್ಗಜ ಹಾಗೂ ಹಿರಿಯ ನಟ ದಿಲೀಪ್ಕುಮಾರ್ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ೧೯೯೩ರಲ್ಲಿ ಅತ್ಯುನ್ನತವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ೯೨ರ ಹರೆಯದ ದಿಲೀಪ್ಕುಮಾರ್ ಅವರನ್ನು ಪಾಕಿಸ್ತಾನ ಕೂಡ ಪ್ರತಿಭಾವಂತ ನಟ ಎಂದು ಗೌರವಿಸಿದೆ. ಇಂದು ಮುಂಬೈಯಲ್ಲಿ ದೇಶದ ಎರಡನೇ ಅತ್ಯುತ್ತಮ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಪ್ರದಾನ ಮಾಡಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತಿತರ ಗಣ್ಯರು ಹಾಜರಿದ್ದರು. ದಿಲೀಪ್ ಕುಮಾರ್ ಅವರಿಗೆ ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಈಗಾಗಲೇ ಲಭ್ಯವಾಗಿವೆ. ೮ ಬಾರಿ ಫಿಲಂಫೇರ್ ಪ್ರಶಸ್ತಿ ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟ ಎಂಬ ಹೆಗ್ಗಳಿಕೆ ದಿಲೀಪ್ಕುಮಾರ್ ಅವರದು.

ಗೀತಾ ಭಾಸ್ಕರ್ ಶೆಟ್ಟಿ ಮಾನವಾಧಿಕಾರ ಆಯೋಗ ರಾಜ್ಯ ಕಾರ್ಯದರ್ಶಿ:*

Image
ಉದಯವಾಣಿ, Dec 13, 2015, 4:37 PM IST ಪುಣೆ: ಪುಣೆಯ ಸಮಾಜ ಸೇವಕಿ ಗೀತಾ ಭಾಸ್ಕರ ಶೆಟ್ಟಿ ಅವರು ರಾಷ್ಟ್ರೀಯ ಮಾನವಾಧಿಕಾರ ಆಯೋಗ ರಾಜ್ಯ ಕಾರ್ಯದರ್ಶಿ ಯಾಗಿ ನೇಮಕಗೊಂಡಿದ್ದಾರೆ. ಡಿ. 10ರಂದು ನಗರದ ಸದಾಶಿವ್ ಪೇಟ್ನಲ್ಲಿ ಅಂತರಾಷ್ಟ್ರೀಯ ಮಾನವಾಧಿಕಾರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಅಧ್ಯಕ್ಷ ಶಿವದಾಸ್ ಮಹಾ ಜನ್ ಪ್ರಮಾಣ ಪತ್ರವನ್ನಿತ್ತರು. ಗೀತಾ ಭಾಸ್ಕರ ಶೆಟ್ಟಿ ಕಳೆದ 15 ವರ್ಷಗಳಿಂದ ಪುಣೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ರಾಷ್ಟ್ರೀಯ ಮನವಾಧಿ ಕಾರ ಸಂಘಟನೆಯ ಪುಣೆ ಜಿಲ್ಲಾ ಉಪಾಧ್ಯಕ್ಷೆಯಾಗಿ, ಪುಣೆ ವಡ್ಗಾಂವ್ ಪರಿಸರದ ಎನ್ಸಿಪಿ ಘಟಕದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಮತ್ತು ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೂಲತಃ ಕಾಸರಗೋಡು ಸಿರಿಬಾಗಿಲು ನಾರಾಯಣ ಶೆಟ್ಟಿ ಮತ್ತು ಕುತ್ತಾರುಗುತ್ತು ರಾಜೀವಿ ಶೆಟ್ಟಿ ದಂಪತಿ ಪುತ್ರಿ.

Symbols of States of India:-

≡≡≡≡≡≡≡≡≡≡≡≡ ► Andhra Pradesh . Animal – Blackbuck Bird – Indian Roller Flower -Water Lily State Dance – Kuchipudi Tree – Neem Sport – Kabaddi . ► Arunachal Pradesh . Animal – Mithun(Gayal) Bird – Great Hornbill Flower – Foxtail Orchid Tree – Hollong . ► Assam . Animal – One Horned Rhinoceros Bird – White Winged Wood Duck Flower – Foxtail Orchid(Kopou phul) Tree – Hollong . ► Bihar . Animal -Gaur Bird – House Sparrow Flower – Marigold Tree – Peepal . ► Chhattisgarh . Animal – Wild Buffalo Bird -Hill Myna Tree – Sal . ► Delhi . Animal – Nilgai Bird – House Sparrow . ► Goa . Animal – Gaur Bird – Black-crested bulbul Tree -Matti . ► Gujarat . Animal – Asiatic Lion Bird – Greater Flemingo Flower – Marigold Fruit – Mango Tree – Banyan . ► Haryana . Animal – Blackbuck Bird – Black Francolin Flower – Lotus Tree – Peepal . ► Himachal Pradesh . Animal – Snow leopard

ಡಿ.18 ರಿಂದ ಯುಪಿಎಸ್ಸಿ ಪರೀಕ್ಷೆ : ಅಂತರ್ಜಾಲ(www.upsc.gov.in)ದಲ್ಲಿ ಪ್ರವೇಶಪತ್ರ ಲಭ್ಯ..*

ನವದೆಹಲಿ, ಡಿ.13-ಬರುವ ಶುಕ್ರವಾರದಿಂದ ಆರಂಭವಾಗಲಿರುವ ಈ ವರ್ಷದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಯಾವುದೇ ರೀತಿಯ ಪ್ರವೇಶ ಪತ್ರಗಳನ್ನು (ಅಡ್ಮಿಷನ್ ಕಾರ್ಡ್) ವಿತರಣೆ ಮಾಡಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತಿಳಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಇನ್ನು ಮುಂದೆ ಅಂತರ್ಜಾಲದಲ್ಲಿ ಇ- ಅಲ್ಮೆಟ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ಔಟ್ ತೆಗೆದುಕೊಳ್ಳಬೇಕು. ಅದೇ ಪ್ರವೇಶಾತಿ ಪತ್ರವನ್ನು ಪರೀಕ್ಷೆಗೆ ತರಬೇಕು ಎಂದು ಯುಪಿಎಸ್ಸಿ ಹೇಳಿದೆ. ಯುಪಿಎಸ್ಸಿ ಡಿ.18 ರಿಂದ 23ರವರೆಗೆ ದೇಶದ 23 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಿದೆ. ಪ್ರತಿ ಹಂತಗಳಲ್ಲಿ ಈ ಪರೀಕ್ಷೆ ನಡೆಸುತ್ತಿದೆ. ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನಗಳನ್ನು ಈ ಪರೀಕ್ಷೆ ಒಳಗೊಂಡಿರುತ್ತದೆ. ಈ ಮೂಲಕ ಕೇಂದ್ರವು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆಗಳು (ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಯುಪಿಎಸ್ಸಿ ಪ್ರವೇಶ ಪತ್ರಗಳನ್ನು ಈಗಾಗಲೇ ಅಪ್ಲೋಡ್ ಮಾಡಿದ್ದು, www.upsc.gov.in .ವೆಬ್ ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕೇಂದ್ರ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ. ಅ.12ರಂದು ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ ಈ ಬಾರಿ 15 ಸಾವಿರ ಮಂದಿ ಅಭ್ಯರ್ಥಿಗಳ

SBI's new debit cards to have EMV chip & pin security:-

UdayavaniEnglish.com, Dec 13, 2015, 10:08 AM IST New Delhi: Country's largest lender SBI will issue EMV chip and pin based debit cards to its new customers to ensure enhanced secure transactions. EMV chip and pin feature protects against skimming and card transaction frauds. "All SBI customers opening accounts with the bank hence forth will receive this EMV chip and pin-based debit cards. Existing customers can also request for upgrading their card by visiting their home branch against payment of nominal fee", the bank said in a statement. With this, SBI said, it has become the first large bank to issue 100 per cent EMV cards compliant with RBI's directive on Security and Risk Mitigation Measures for Card Present and Electronic Payment Transactions. The latest offering will allow consumers to transact securely at Point of Sale terminals and would contribute towards making the Indian payment ecosystem more secure, S

e-ಪುಸ್ತಕ:-download :-

10 Dec, 2015 ಕನ್ನಡ ಪುಸ್ತಕಗಳನ್ನು ಪಿಡಿಎಫ್ ಆವೃತ್ತಿಯಲ್ಲಿ ಹಂಚಿಕೊಳ್ಳಲು ಅನೇಕರು ಅನೇಕ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ. ಓಸ್ಮಾನಿಯ ವಿಶ್ವವಿದ್ಯಾಲಯ ಮತ್ತು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಇರುವ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಇರುವ ಕಷ್ಟವನ್ನು ಗಮನಿಸಿ ಕೆಲವರು ಅವನ್ನು ತಮ್ಮದೇ ಆದ ತಾಣಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಮರು ಹಂಚಿಕೆ ಮಾಡುತ್ತಾರೆ. ಹಾಗೆಯೇ ಅಲ್ಲಲ್ಲಿ ಇರುವ ಕನ್ನಡ ಪುಸ್ತಕಗಳನ್ನು ದೊಡ್ಡ ಫೈಲುಗಳನ್ನು ಹಂಚಿಕೊಳ್ಳಲು ಸಾಧ್ಯವಿರುವ ತಾಣಗಳಲ್ಲಿ ಹಾಕಿ ಹಂಚಿಕೊಳ್ಳುವ ವ್ಯವಸ್ಥೆ ಮಾಡಿರುವವರೂ ಇದ್ದಾರೆ. ಅಮೆರಿಕದ ಅರಿಜೊನ ಮಿತ್ರರ ಬ್ಲಾಗ್ ಒಂದು ಇಂಥದ್ದೇ ಕೆಲಸ ಮಾಡುತ್ತಿದೆ. ಸಾಹಿತ್ಯ ಮತ್ತು ಸಂಸ್ಕೃತಿಯ ಆಫ್ ಲೈನ್ ಚರ್ಚೆಗಳನ್ನು ಏರ್ಪಡಿಸುವ ಈ ಗುಂಪು ತನ್ನ ಬ್ಲಾಗ್ನಲ್ಲಿ ಕನ್ನಡದ ಕೆಲವು ಮಹತ್ವದ ಕೃತಿಗಳನ್ನು ಹಂಚಿಕೊಳ್ಳುತ್ತಿದೆ. ತ್ರಿವೇಣಿ, ಎಂ.ಕೆ.ಇಂದಿರಾ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ ಕೃತಿಗಳು ಇಲ್ಲಿ ಲಭ್ಯವಿವೆ. ಈ ಪುಸ್ತಕಗಳ ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಈ ತಾಣ ಹೇಗೆ ನಿರ್ವಹಿಸುತ್ತದೆ ಎಂಬುದು ಸ್ಪಷ್ಟವಿಲ್ಲ. ಅಂತರ್ಜಾಲದಲ್ಲಿ ಲಭ್ಯವಿರುವ ಪುಸ್ತಕಗಳ ಪಟ್ಟಿಯೊಂದನ್ನು ಈ ಬ್ಲಾಗ್ ಪ್ರಕಟಿಸಿದೆ. 2012ರಿಂದ ಇಲ್ಲಿ ಹೊಸ ಪೋಸ್ಟ್ಗಳು ಬಂದಿಲ್ಲ. ಇಲ್ಲ

ಸೌದಿ ಚುನಾವಣೆ: ಮೊದಲ ಬಾರಿ ಮಹಿಳೆಯರಿಗೆ ಮತದಾನ ಹಕ್ಕು:-

12 Dec, 2015 ರಿಯಾದ್ (ಎಎಫ್ಪಿ): ಸೌದಿ ಅರೇಬಿಯಾದಲ್ಲಿ ನಗರಸಭೆ ಚುನಾವಣೆಯ ಮತದಾನ ಶನಿವಾರ ಬೆಳಿಗ್ಗೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. 284 ಸ್ಥಾನಗಳಿಗೆ ನಡೆಯುತ್ತಿರುವ ನಗರಸಭೆ ಚುನಾವಣೆಯಲ್ಲಿ ಒಟ್ಟು 900 ಮಹಿಳೆಯರು ಸ್ಪರ್ಧಿಸಿದ್ದಾರೆ. 6 ಸಾವಿರಕ್ಕೂ ಹೆಚ್ಚು ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಜಾಗೃತಿ ಕೊರತೆಯಿಂದಾಗಿ ಮಹಿಳೆಯರು ಮತ ಚಲಾಯಿಸಲು ಮುಂದೆ ಬರುತ್ತಿಲ್ಲ, ಸಾಕಷ್ಟು ಮಹಿಳೆಯರ ಹೆಸರನ್ನು ಅಧಿಕಾರಿಗಳು ಉದ್ದೇಶಪೂರ್ವಕಾಗಿಯೇ ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಮಹಿಳೆಯರು ಮುಕ್ತವಾಗಿ ಮತ ಚಲಾಯಿಸುವುದಕ್ಕೆ ಅಡ್ಡಿ ಮಾಡಲಾಗುತ್ತಿದೆ ಎಂದು ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳು ದೂರಿದ್ದಾರೆ. ಸೌದಿಯಲ್ಲಿ 2005 ಮತ್ತು 2011ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಆದರೆ ಕಳೆದ ಚುನಾವಣೆಗಳಲ್ಲಿ ಪುರುಷರು ಮಾತ್ರ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಹಕ್ಕನ್ನು ಹೊಂದಿದ್ದರು. ಸೌದಿಯ ಹಿಂದಿನ ರಾಜ ಅಬ್ದುಲ್ಲಾ 2005ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಸಿದ್ದರು. 2015ರಲ್ಲಿ ಮಹಿಳೆಯರಿಗೆ ಮತದಾನ, ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಹೇಳಿದ್ದರು. ಜನವರಿ ತಿಂಗಳಲ್ಲಿ ಅಬ್ದುಲ್ಲಾ ಮೃತಪಟ್ಟರು. ನಂತರ ಅಧಿಕಾರಕ್ಕೆ ಬಂದ ಸಲ್ಮಾನ್ ಮ

B.Ed ಕೋರ್ಸ್ 2015-16 ರ ಬಗ್ಗೆ ಸಂಪೂರ್ಣ ಮಾಹಿತಿ"

(1) ಬಿ.ಎಡ್ ಕೋರ್ಸ್'ಗೆ ಆನ್'ಲೈನ್ ಅರ್ಜಿ ಹಾಕುವ ವೆಬ್'ಸೈಟ್ ವಿಳಾಸ: http://bed15.caconline.in/Default.aspx (2) ಬಹು ಮುಖ್ಯವಾದ ಸೂಚನೆಗಳು: http://bed15.caconline.in/PDF/Instructions_to_candidates.pdf (3) ಮುಖ್ಯ ದಿನಾಂಕಗಳು: http://bed15.caconline.in/KeyDates.aspx (4) ಬ್ರೌಚರ್ (ಬಿ.ಎಡ್ ಬಗ್ಗೆ ವಿವರಣೆಯಳ್ಳ ಪುಸ್ತಕ) http://bed15.caconline.in/PDF/BEdBroucher_2015.pdf (5) FAQs (ಆಗಾಗ್ಗೆ ಕೇಳಲಾದ ಪ್ರಶ್ನೆಗಳು) http://bed15.caconline.in/PDF/FAQ_2015_16.pdf [ಈ ವರ್ಷದಿಂದ ರೆಗ್ಯುಲರ್ B.Ed ಕೋರ್ಸ್'ನ ಅವಧಿ: 2 ವರ್ಷಗಳು]

ರಾಷ್ಟ್ರಮಟ್ಟದ ಇನ್ ಸ್ಪೈರ್ಡ ಆವಾರ್ಡ: ಅನನ್ಯಾ ಗೆ ಎರಡನೆಯ ಸ್ಥಾನ

Image

ನಗರ ಭೂ ಸಾರಿಗೆ ಇಲಾಖೆಯಲ್ಲಿ 21 ವಿವಿಧ ಹುದ್ದೆಗಳ ನೇಮಕಾತಿ :-

ನಗರ ಭೂ ಸಾರಿಗೆ ಇಲಾಖೆಯಲ್ಲಿ 21 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮಾ, ಯಾವುದೇ ಪದವಿ ಬಿ.ಟೆಕ್, ಎಂ.ಟೆಕ್, ಪಿಜಿ ವಿದ್ಯಾರ್ಹತೆ ಹೊಂದಿದವರು ದಿನಾಂಕ 31-12-2015ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ www.urbantransport.kar.gov.in ಗೆ ಭೇಟಿನೀಡಿ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಕಿರಿಯ ಮಾರ್ಗಕರ್ಮಿ ಹುದ್ದೆ ನೇಮಕಾತಿ ಕೌನ್ಸಿಲಿಂಗ ದಿ.16 -19 ಡಿಸೆಂಬರ್ 2015

Image

ಟೈಮ್’ ವರ್ಷದ ವ್ಯಕ್ತಿಯಾಗಿ ಏಂಜೆಲಾ ಮರ್ಕೆಲ್ ಆಯ್ಕೆ*-:

10 Dec, 2015 ನ್ಯೂಯಾರ್ಕ್ (ಪಿಟಿಐ): 'ಟೈಮ್' ಪತ್ರಿಕೆಯ ವರ್ಷದ (2015) ವ್ಯಕ್ತಿಯಾಗಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಆಯ್ಕೆಯಾಗಿದ್ದಾರೆ. ಮರ್ಕೆಲ್ ಅವರ ಆಯ್ಕೆಯನ್ನು ಘೋಷಿಸಿರುವ 'ಟೈಮ್', 'ಏಂಜೆಲಾ ಅವರ ಚತುರ ನಾಯಕತ್ವ ಆರ್ಥಿಕ ಸಂದಿಗ್ಧ ಸ್ಥಿತಿಯಲ್ಲಿತ್ತ ಯುರೋಪ್ ಅನ್ನು ರಕ್ಷಿಸಲು ಹಾಗೂ ಉಕ್ರೇನ್ನ ಸಂಘರ್ಷಮಯ ವಾತಾವರಣದಲ್ಲಿ ನಿರಾಶ್ರಿತರ ಬಿಕ್ಕಟ್ಟನ್ನು ಶಮನಗೊಳಿಸಲು ನೆರವಾಗಿದೆ' ಎಂದು ಹೇಳಿದೆ. 61 ವರ್ಷದ ಮರ್ಕೆಲ್, ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆ ಎನಿಸಿದ್ದಾರೆ. ಟೈಮ್ ವರ್ಷದ ವ್ಯಕ್ತಿ ಪಟ್ಟಿಯಲ್ಲಿ ಮರ್ಕೆಲ್, ಜಗತ್ತಿನ ಪ್ರಭಾವಿ ವ್ಯಕ್ತಿಗಳಾದ ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಸ್ಲಾಮಿಕ್ ಸ್ಟೇಟ್ (ಐಎಸ್) ನಾಯಕ ಅಬು ಬಕ್ರ್ ಅಲ್– ಬಾಗ್ದಾದಿ ಹಾಗೂ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಮತ್ತಿತರ ಪ್ರಮುಖರನ್ನು ಹಿಂದಿಕ್ಕಿದ್ದಾರೆ.

ಜಾಗತಿಕ ಶಿಕ್ಷಕರ ಪ್ರಶಸ್ತಿ ಪಟ್ಟಿ ಬೆಂಗಳೂರಿನ ಶಿಕ್ಷಕಿ( ಶಾಂತಿ)ಗೆ ಸ್ಥಾನ:-

Image
10 Dec, 2015 ಲಂಡನ್ (ಪಿಟಿಐ): 'ಬೋಧನೆಗಾಗಿ ನೀಡುವ ನೊಬೆಲ್ ಪ್ರಶಸ್ತಿ' ಎಂದು ಪರಿಗಣಿತವಾಗಿರುವ 'ಜಾಗತಿಕ ಶಿಕ್ಷಕ ಪ್ರಶಸ್ತಿ'ಯ 50 ಪ್ರಮುಖರ ಪಟ್ಟಿಯಲ್ಲಿ ಬೆಂಗಳೂರಿನ ಶಿಕ್ಷಕಿ ಸೇರಿ ಭಾರತದ ನಾಲ್ವರು ಶಿಕ್ಷಕರು ಸ್ಥಾನ ಪಡೆದಿದ್ದಾರೆ. ಪ್ರಶಸ್ತಿ ಮೊತ್ತ 10 ಲಕ್ಷ ಡಾಲರ್ (₹ 5.53 ಕೋಟಿ) ಇದೆ. ಪ್ರಶಸ್ತಿಯ 50 ಅತ್ಯುತ್ತಮ ಶಿಕ್ಷಕರ ಪಟ್ಟಿಯಲ್ಲಿರುವ ಭಾರತದ ನಾಲ್ವರು ಶಿಕ್ಷಕರಲ್ಲಿ ಮುಂಬೈನ ಇಬ್ಬರು, ಬೆಂಗಳೂರು ಮತ್ತು ದೆಹಲಿಯ ತಲಾ ಒಬ್ಬರು ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಎಡ್ವೆಂಚರ್ ಅಕಾಡೆಮಿಯ ಶಾಂತಿ ಕರಮ್ಚೇಟಿ, ಮುಂಬೈನ ಕೆಂಪು ದೀಪದ ಬಾಲಕಿಯರಿಗಾಗಿ ಸ್ಥಾಪಿಸಿರುವ 'ಕ್ರಾಂತಿ' ಸಂಸ್ಥೆ ಸ್ಥಾಪಕ ರಾಬಿನ್ ಚೌರಾಸಿಯಾ, ಮುಂಬೈನ ಜೆನೆಸಿಸ್ ಶಿಕ್ಷಣ ಸಂಸ್ಥೆಯ ಧವಲ್ ಭಾಟಿಯಾ ಮತ್ತು ದೆಹಲಿಯ ಹಂಸರಾಜ್ ಮಾದರಿ ಶಾಲೆಯ ರಶ್ಮಿ ಕಥೂರಿಯಾ ಅವರ ಹೆಸರು ಇದೆ. ಕೇರಳ ಮೂಲದ ಉದ್ಯಮಿ, ಲಂಡನ್ನ ವಾರ್ಕೆ ಫೌಂಡೇಷನ್ನ ಸ್ಥಾಪಕ ಸನ್ನಿ ವಾರ್ಕೆ ಎಂಬುವರು ಗ್ಲೋಬಲ್ ಎಜುಕೇಷನ್ ಅಂಡ್ ಸ್ಕಿಲ್ಸ್ ಫೋರಂ 2014 (ಜಿಇಎಂಎಸ್) ಅಡಿ ಜಾಗತಿಕ ಶಿಕ್ಷಕ ಪ್ರಶಸ್ತಿ ಸ್ಥಾಪಿಸಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದ್ದು, 2016ರ ಮಾರ್ಚ್ ತಿಂಗಳಲ್ಲಿ ಪ

ಗ್ರ್ಯಾಮಿ ಪ್ರಶಸ್ತಿ ಪಟ್ಟಿಯಲ್ಲಿ ಕೋಲಾರದ ರುದ್ರೇಶ್::*

ಲಾಸ್ ಏಂಜಲೀಸ್: ಕೋಲಾರ ಮೂಲದ ಖ್ಯಾತ ಸ್ಯಾಕ್ಸೊಫೋನ್ ವಾದಕ ರುದ್ರೇಶ್ ಮಹಾಂತಪ್ಪ ಸೇರಿದಂತೆ ನಾಲ್ವರು ಭಾರತೀಯ ಮೂಲದ ಕಲಾವಿದರ ಹೆಸರನ್ನು ಪ್ರಸಕ್ತ ಸಾಲಿನ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಳಿಸಲಾಗಿದೆ. ಸಿತಾರ್ ವಾದಕಿ ಅನೂಷ್ಕಾ ಶಂಕರ್, ಆಸೀಫ್ ಕಪಾಡಿಯಾ ಮತ್ತು ಜೆಫ್ ಭಾಸ್ಕರ್ ಉಳಿದ ಮೂವರು.  ರುದ್ರೇಶ್ ಅವರ 'ದ ಅಫೋವಾ' ಲ್ಯಾಟಿನ್ ಜಾಝ್ ಸ್ಯೂಟ್' ಆಲ್ಬಮ್ ಅತ್ಯುತ್ತಮ ವಾದ್ಯ ಸಂಗೀತ ಸಂಯೋಜನೆ ವಿಭಾಗದಲ್ಲಿ ನಾಮನಿದೇರ್ಶನಗೊಂಡಿದೆ. ಸದ್ಯ ರುದ್ರೇಶ್ ಅಮೆರಿಕದಲ್ಲಿ ನೆಲೆಸಿದ್ದು, ಅವರ ಪೂರ್ವಿಕರು ಕೋಲಾರ ಮೂಲದವರು. ರುದ್ರೇಶ್ ಕುರಿತು ಕನ್ನಡಿಗರು ಹೆಮ್ಮೆ ಪಡುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಶಿಷ್ಯ ಈ ರುದ್ರೇಶ್ ಎನ್ನುವುದು.  ಅನುಷ್ಕಾ ಅವರ 'ಹೋಮ್ ಅಲ್ಬಂ' ಬೆಸ್ಟ್ ವರ್ಲ್ಡ್ ಮ್ಯೂಸಿಕ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರೆ, ಭಾರತೀಯ ಮೂಲದ ಬ್ರಿಟಿಷ್ ನಿರ್ದೇಶಕ ಅಸೀಫ್ ಕಪಾಡಿಯಾ ಅವರ 'ಆಮಿ' ಅತ್ಯುತ್ತಮ ಸಂಗೀತ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಜೆಫ್ ಭಾಸ್ಕರ್ ಅವರು ತಮ್ಮ ಮಾರ್ಕ್ ರಾನ್ಸನ್, ಬರ್ಮೊಮಾರ್ಸ್ ಎಂಬ ಕೃತಿಗಳ ಮೂಲಕ 'ರಿಕಾರ್ಡ್ ಆಫ್ ದಿ ಇಯರ್' ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಜೀವಸತ್ವಗಳು ನಮಗೆ ಏಕೆ ಬೇಕು?

Image
9 Dec, 2015 ಡಾ. ವೀಣಾ ಭಾಸ್ಕರ್ ಜೀವಸತ್ವಗಳು (ವಿಟಮಿನ್) ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ (Water Soluble) ಜೀವಸತ್ವಗಳೆಂದು ವಿಂಗಡಿಸಲಾಗಿದೆ. ಜೀವಸತ್ವ ಎ.ಡಿ.ಇ.ಕೆ.ಗಳನ್ನು (ವಿಟಮಿನ್ ಎ,ಡಿ,ಇ,ಕೆ) ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ. ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ. ಜೀವಸತ್ವ 'ಎ' (Vitamin A) ಹಾಲು, ಬೆಣ್ಣೆ, ಕೆನೆ, ಮೊಟ್ಟೆಯ ಹಳದಿ, ಹಸಿರು ಮತ್ತು ಹಳದಿ/ಕೇಸರಿ ಬಣ್ಣದ ಹಣ್ಣು, ತರಕಾರಿಗಳಾದ ಕ್ಯಾರೆಟ್, ಮಾವು, ಪಪ್ಪಾಯಿ, ಕುಂಬಳಕಾಯಿಯಲ್ಲಿ ಹೇರಳವಾಗಿದ್ದು ನಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ. ಕಣ್ಣಿನ ದೃಷ್ಟಿ ಬಲಗೊಳ್ಳಲು, ಕತ್ತಲು ಮತ್ತು ಬೆಳಕಿನಲ್ಲಿ ದೃಷ್ಟಿಯ ಸಮತೋಲನ ಕಾಪಾಡಲು ಚರ್ಮದ ಮೇಲ್ಮೈ ಆರೋಗ್ಯಕರವಾಗಿ– ಕಾಂತಿಯುಕ್ತವಾಗಿರಲು, ಗಂಡಸರಲ್ಲಿ ಆರೋಗ್ಯಪೂರ್ಣ ವೀರ್ಯ ಉತ್ಪಾದನೆಯಾಗಲು ಮತ್ತು ಅನ್ನನಾಳ, ವಾಯುನಾಳ, ಮೂತ್ರನಾಳಗಳ ಆರೋಗ್ಯ ಕಾಪಾಡಲು 'ಎ' ಜೀವಸತ್ವ ಮಹತ್ವದ ಪಾತ್ರ ವಹಿಸುತ್ತದೆ. ದೇಹದಲ್ಲಿ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ: ಕಿರಿಯ ಸ್ಟೇಷನರಿ ಪರಿಚಾರಕ ಹುದ್ದೆ ನೇಮಕಾತಿ ಕೌನ್ಸಿಲಿಂಗ ದಿ.21 -23 ಡಿಸೆಂಬರ್ 2015

Image

ಬಾಹ್ಯಾಕಾಶ ನಿಲ್ದಾಣಕ್ಕೆ 15ರ ಸಂಭ್ರಮ

Image
* ಮಹಮ್ಮದ್ ನೂಮಾನ್ ---------------------- ಬಾಹ್ಯಾಕಾಶದಲ್ಲಿರುವ ಅತಿ ದೊಡ್ಡ ಮಾನವ ನಿರ್ಮಿತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ಐಎಸ್ಎಸ್) ಇದೀಗ 15ರ ಸಂಭ್ರಮದಲ್ಲಿದೆ. ಜೀವ ವಿಜ್ಞಾನ, ಭೌತ ವಿಜ್ಞಾನ, ಪವನಶಾಸ್ತ್ರ ಹಾಗೂ ಖಗೋಳ ವಿಜ್ಞಾನ ಒಳಗೊಂಡಂತೆ ಹಲವು ವಿಷಯಗಳಲ್ಲಿ ಸಂಶೋಧನೆಗೆ ನೆರವಾಗುತ್ತಿರುವ ಈ ನಿಲ್ದಾಣದಲ್ಲಿ ಮಾನವನ ಉಪಸ್ಥಿತಿ ಆರಂಭವಾಗಿ ಒಂದೂವರೆ ದಶಕ ಕಳೆದಿದೆ. 2000 ಇಸವಿಯ ನವೆಂಬರ್ 2 ರಂದು ಇಲ್ಲಿ ಗಗನಯಾತ್ರಿಗಳು ಮೊದಲು ವಾಸ ಆರಂಭಿಸಿದ್ದರು. ಆ ಬಳಿಕ ನಿರಂತರ 15 ವರ್ಷಗಳ ಕಾಲ ಇಲ್ಲಿ ಮಾನವನ ಉಪಸ್ಥಿತಿ ಇದೆ. ಐಎಸ್ಎಸ್ನ ನಿರ್ಮಾಣ ಕಾರ್ಯ 1998ರಲ್ಲಿ ಆರಂಭಗೊಂಡಿತ್ತು. ಎರಡು ಎರಡು ವರ್ಷಗಳ ಬಳಿಕ ಇಲ್ಲಿ ಗಗನಯಾತ್ರಿಗಳ ವಾಸ ಆರಂಭವಾಗಿತ್ತು. ಮೂವರು ಗಗನಯಾತ್ರಿಗಳನ್ನು ಹೊತ್ತುಕೊಂಡ ಸೋಯುಜ್ ವ್ಯೋಮನೌಕೆ 2000 ಇಸವಿಯ ಅಕ್ಟೋಬರ್ 31ರಂದು ಗಗನಕ್ಕೆ ನೆಗೆದಿತ್ತು. ಎರಡು ದಿನಗಳ ಬಳಿಕ (ನವೆಂಬರ್ 2 ರಂದು) ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಅತಿಹೆಚ್ಚು ವರ್ಷ ಮಾನವನ ಉಪಸ್ಥಿತಿ ಹೊಂದಿದ ಬಾಹ್ಯಾಕಾಶ ನಿಲ್ದಾಣ ಇದು. ಮಿರ್ ಬಾಹ್ಯಾಕಾಶ ನಿಲ್ದಾಣ 9 ವರ್ಷ 357 ದಿನಗಳ ಕಾಲ ಮಾನವನ ಉಪಸ್ಥಿತಿ ಹೊಂದಿತ್ತು. ಆದನ್ನು ಐಎಸ್ಎಸ್ ಮುರಿದಿದೆ. ಈ ಬಾಹ್ಯಾಕಾಶ ನಿಲ್ದಾಣವು ವಿಮಾನ, ರೈಲು ಅಥವಾ ಬಸ್ ನಿಲ್ದಾಣಗಳಂತ

ಕೇರಳ ಪ್ರವಾಸೋದ್ಯಮಕ್ಕೆ ಕೇಂದ್ರದಿಂದ 200ಕೋಟಿ ರೂ.ಬಿಡುಗಡೆ:*-

· DEC 8, 2015 KERALA TORI ತಿರುವನಂತಪುರಂ : ಆಧ್ಯಾತ್ಮಿಕ ಹಾಗೂ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಗೊಳಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 200 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಪ್ರವಾಸೋದ್ಯಮ ಮಂತ್ರಿ ಎ.ಪಿ. ಅನಿಲ್ ಕುಮಾರ್ ತಿಳಿಸಿದ್ದಾರೆ. ಐತಿಹಾಸಿಕ ತಿರುವನಂತಪುರ ದೇವಾಲಯದ ಅಭಿವೃದ್ಧಿ ಹಾಗೂ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೋಸ್ಕರ ಈಗಾಗಲೇ ನೂರು ಕೋಟಿ ಹಣ ಪಡೆದಿದ್ದು, ಇದರಲ್ಲಿ 84 ಕೋಟಿ ರೂ. ಸ್ವಾಮಿ ಪದ್ಮನಾಭ ದೇವಾಲಯದಲ್ಲಿನ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ, 5.6 ಕೋಟಿ ಪಾರ್ಥಸಾರಥಿ ದೇವಾಲಯ ಜೀಣೋದ್ಧಾರಕ್ಕೆ, 6 ಕೋಟಿ ರೂ. ಶಬರಿಮಲೈ ದೇವಾಲಯ ಅಭಿವೃದ್ಧಿಗೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕಾಪು: ಡಿ.15ರಿಂದ 17 ರವರೆಗೆ ರಾಜ್ಯಮಟ್ಟದ ಫ್ರೌ.ಶಾ. ಮಕ್ಕಳ ಪ್ರತಿಭಾ ಕಾರಂಜಿ:-

ಕಾಪು: 15ರಿಂದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ 8 Dec, 2015 ಪ್ರಜಾವಾಣಿ ವಾರ್ತೆ ಕಾಪು (ಪಡುಬಿದ್ರಿ): ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇದೇ 15, 16 ಮತ್ತು 17ರಂದು ಆಯೋಜಿಸಲಾಗಿರುವ ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಯ ಲಾಂಛನವನ್ನು ಉಡುಪಿ ಜಿಲ್ಲಾಧಿ ಕಾರಿ ಆರ್.ವಿಶಾಲ್ ಸೋಮವಾರ ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, 'ಕಾರ್ಯಕ್ರಮದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಸುಮಾರು 2,210 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 25 ವೈಯುಕ್ತಿಕ ವಿಭಾಗ ಹಾಗೂ 6 ಸಾಮೂ ಹಿಕ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ, 13 ಬೇರೆ ಬೇರೆ ಸಮಿತಿಗಳನ್ನು ರಚಿಸಲಾಗಿದೆ. 15ರಂದು ಮಧ್ಯಾಹ್ನ 2 ಗಂಟೆಗೆ ದಂಡತೀರ್ಥದಿಂದ ವಿದ್ಯಾನಿ ಕೇತನ ಶಾಲೆಯವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ರಾಜ್ಯದ ನದಿಗಳ ಹೆಸರುಳ್ಳ 4 ವೇದಿಕೆಗಳು ಹಾಗೂ 11 ಕೊಠಡಿಗಳಲ್ಲಿ ಸ್ಪರ್ಧೆಗಳನ್ನು ನಡೆಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಸ್ಪರ್ಧೆಗಳ ತೀರ್ಪುಗಾ ರರಾಗಿ ಪ್ರತಿ ಸ್ಪರ್ಧೆಗೆ ಈ ಜಿಲ್ಲೆಯಿಂದ ಒಬ್ಬರು ಹಾಗೂ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿಯಿರುವ 131 ಹುದ್ದೆಗಳ ನೇಮಕಾತಿ ಅಧಿಸೂಚನೆ .ದಿ.7/12/2015

Image

2017ಕ್ಕೆ ಕೂಡಗಿ ವಿದ್ಯುತ್ ಘಟಕ ಆರಂಭ:-

8 Dec, 2015 ನವದೆಹಲಿ (ಪಿಟಿಐ ): ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್ಟಿಪಿಸಿ) ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿ ನಿರ್ಮಿಸುತ್ತಿರುವ ನಾಲ್ಕು ಸಾವಿರ ಮೆಗಾ ವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ 2017ರಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಕೂಡಗಿಯ 800 ಮೆಗಾ ವಾಟ್ ಸಾಮರ್ಥ್ಯದ ಮೂರು ಸ್ಥಾವರಗಳು ದಕ್ಷಿಣ ಭಾರತದ ವಿದ್ಯುತ್ ಬೇಡಿಕೆ ಪೂರೈಸಲಿವೆ ಎಂದು ಎಂದು ಇಂಧನ ಸಚಿವ ಪಿಯೂಷ್ ಗೋಯೆಲ್ ಸೋಮವಾರ ರಾಜ್ಯಸಭೆಗೆ ತಿಳಿಸಿದರು. ಮಳೆ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆ ಕುಸಿದ ಕಾರಣ ಕರ್ನಾಟಕ ತೀವ್ರ ವಿದ್ಯುತ್ ಅಭಾವ ಎದುರಿಸುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಸಮರ್ಪಕ ವಿದ್ಯುತ್ ಸರಬರಾಜು ಜಾಲದ ಕಾರಣ ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಎದುರಾಗಿವೆ ಎಂದು ಸಚಿವರು ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿಯಿರುವ 53 ಬ್ಯಾಕಲಾಗ್ ಹುದ್ದೆಗಳ ನೇಮಕಾತಿ ಅಧಿಸೂಚನೆ

Image

High Court of Karnataka Group-D (Peon, Sweeper, Watchman) – 27 Posts 10th Class/ Equivalent last date 31/12/2015

Image

KAS ತಯಾರಿ ಹೇಗೆ?

Dec 7, 2015, 04.00 AM IST By KAS-lakshman-reddy -------------------------- ನಿರೂಪಣೆ: ಚಿತ್ರಾ ಸಂತೋಷ್ ನನ್ನೂರು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬಿಜೋಗಟ್ಟೆ. ಅಪ್ಪ- ಅಮ್ಮ ಕೃಷಿಕರು. ಪ್ರೈಮರಿ ಓದಿದ್ದು ನನ್ನೂರಲ್ಲಿ. ಡಿಗ್ರಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ಡಿಗ್ರಿ ಮುಗಿದ ಮೇಲೆ ಬಿ.ಎಡ್, ಎಂ.ಎಡ್. ಮಾಡಿದ್ದೆ. ದೂರಶಿಕ್ಷಣದ ಮೂಲಕ ಎಂ.ಎ, ಎಂ.ಫಿಲ್ ಕೂಡ ಮುಗಿಸಿಕೊಂಡೆ. ಓದುತ್ತಿರುವಾಗಲೇ ನಾನು ಕನಸು ಕಂಡಿದ್ದು ಪೊಲೀಸ್ ಆಗಬೇಕೆಂದು. ನನ್ನಣ್ಣ ಇನ್ಸ್ಪೆಕ್ಟರ್. ಖಾಕಿಧಾರಿ ಅಣ್ಣನ ನೋಡುವಾಗ ನಾನೂ ಇನ್ಸ್ಪೆಕ್ಟರ್ ಆಗಬೇಕು ಎಂಬ ಕನಸು ಕಟ್ಟಿದ್ದೆ. ಆವಾಗಲೇ ಓದಲು ಶುರುಮಾಡಿದ್ದೆ. ಆದರೆ, ಆಗಿದ್ದೇ ಬೇರೆ. ಇನ್ಸ್ಪೆಕ್ಟರ್ ಆಗದೆ ಕೆಎಎಸ್ ಅಧಿಕಾರಿಯಾದೆ. ಇದನ್ನೂ ಇಷ್ಟಪಟ್ಟು ಕಷ್ಟದಿಂದ ಜಯಿಸಿದೆ. ಈ ಬಗ್ಗೆ ಹೆಮ್ಮೆ ಇದೆ ನನಗೆ. ನಾನು 2010ರಲ್ಲಿ ಕೆಎಎಸ್ ಪಾಸು ಮಾಡಿರುವುದು. ಅದಕ್ಕೆ ಮೊದಲು ಅಂದರೆ 2009ರಲ್ಲಿ ಕರ್ನಾಟಕ ಎಜುಕೇಶನ್ ಸರ್ವೀಸ್ ನಡೆಸಿದ ಎಗ್ಸಾಮ್ ಪಾಸು ಮಾಡಿದ್ದೆ. ಆವಾಗ ಕೆಎಎಸ್ ಕೂಡ ಬರೆಯಬೇಕು ಅನಿಸಿತು. ಹಾಗೇ ನೋಡಿದರೆ ಕೆಎಎಸ್ಗೆ ತಯಾರಿ ನಡೆಸಿದ್ದು ಕೇವಲ ಒಂದೇ ವರ್ಷ. ಒಂದು ವರ್ಷದಲ್ಲಿ ಒಂದು ಕಾಂಪಿಟೇಟಿವ್ ಎಗ್ಸಾಮ್ಗೆ ತಯಾರಿ ನಡೆಸಲು ಸಾಧ್ಯವೇ? ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಯೆಸ್, ಸಾಧ್ಯ. ಕಾಂಪಿಟೇಟಿವ

ಉನ್ನತ ಹುದ್ದೆಯಲ್ಲಿ ಕನ್ನಡಿಗರು

BY ವಿಜಯವಾಣಿ ನ್ಯೂಸ್ · NOV 21, 2015 ಕನ್ನಡ ನಾಡಿನ ಪರಂಪರೆ ಉನ್ನತವಾದುದು. ಕರ್ನಾಟಕದಲ್ಲಿ ಜನಿಸಿದ ಶ್ರೇಷ್ಠ ವಿಜ್ಞಾನಿಗಳು, ಶಿಕ್ಷಣತಜ್ಞರು, ಇತರ ಕ್ಷೇತ್ರಗಳ ಸಾಧಕರು ದೇಶಕ್ಕೆ ಅಷ್ಟೇ ಅಲ್ಲ, ಜಗತ್ತಿಗೆ ಮಹತ್ವದ ಕೊಡುಗೆ ನೀಡಿದವರು. ಇತ್ತೀಚೆಗೆ ದೇಶ- ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಏಳು ಸಾಧನಶೀಲ ಪ್ರತಿಭಾನ್ವಿತ ಕನ್ನಡಿಗರ ಕುರಿತ ಪುಟ್ಟ ಪರಿಚಯ ನೀಡುತ್ತಿದ್ದೇವೆ. ಡಾ. ಎ. ಸೂರ್ಯಪ್ರಕಾಶ್ ಪ್ರಸಾರ ಭಾರತಿ ಅಧ್ಯಕ್ಷ ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಡಾ. ಸೂರ್ಯಪ್ರಕಾಶ್ ಅವರು ಅರಕಲಗೂಡು ಸೂರ್ಯಪ್ರಕಾಶ್ ಎಂದೇ ಪರಿಚಿತರು. ಆಕಾಶವಾಣಿ ಮತ್ತು ದೂರದರ್ಶನ ಒಳಗೊಂಡ ದೇಶದ ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆ 'ಪ್ರಸಾರ ಭಾರತಿ' ಅಧ್ಯಕ್ಷರು. ಕಳೆದ 44 ವರ್ಷಗಳಿಂದ ಭಾರತೀಯ ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಮಾಧ್ಯಮ ಕ್ಷೇತ್ರದ ಅತ್ಯುನ್ನತ ಹುದ್ದೆಯನ್ನು ನಿಭಾಯಿಸಿದ್ದಾರೆ. ದೇಶದ ಜನಜೀವನದಲ್ಲಿ ಮಹತ್ವದ ಬದಲಾವಣೆಗೆ ಅವರು ಕೈಗೊಂಡ ಕ್ರಮಗಳು ಕಾರಣವಾಗಿವೆ. ಲೋಕಸಭಾ ಸದಸ್ಯರ ಸ್ಥಳೀಯ ಅಭಿವೃದ್ಧಿ ಯೋಜನೆಯ ಹಣ ದುರ್ಬಳಕೆ ಕುರಿತು ಅವರು ನೀಡಿದ ವರದಿಯು ಯೋಜನೆ ಅನುಷ್ಠಾನದಲ್ಲಿನ ವಂಚನೆಯನ್ನು ಬಯಲಿಗೆಳೆಯಿತು. ಜನಸಂಖ್ಯಾ ಹೆಚ್ಚಳ ನಿಯಂತ್ರಿಸುವಲ್ಲಿ ಕೈಗೊಳ್ಳಬೇಕಾದ ಕುಟುಂಬ

ಮೋಹಕ ಬಲೆಯ ಮಾಂಸಾಹಾರಿ ಸಸ್ಯಗಳು

Image
BY ವಿಜಯವಾಣಿ ನ್ಯೂಸ್ · DEC 5, 2015 ನಯನ ಎಸ್ ಸಸ್ಯಗಳನ್ನು ಕೀಟಗಳು ತಿನ್ನುವುದನ್ನು, ಹೂವಿನ ಮಕರಂದವನ್ನು ದುಂಬಿ ಹೀರುವುದನ್ನು ನೋಡಿದ್ದೇವೆ. ತಮ್ಮ ಬೇರುಗಳ ಮೂಲಕ ಮಣ್ಣಿನಲ್ಲಿಯ ಪೋಷಕಾಂಶಗಳು, ನೀರು ಪಡೆದು ಸಸ್ಯಗಳು ಬೆಳೆಯುತ್ತವೆ ಎನ್ನುವುದು ಕೂಡ ಹೊಸ ಸಂಗತಿಯೇನಲ್ಲ. ಕುಂಡ, ಕೈತೋಟ, ಗದ್ದೆ, ತೋಟಗಳಲ್ಲಿ ಗಿಡಗಳು ಬಾಡಲಾರಂಭಿಸಿದಾಗ ಯಥೇಚ್ಛ ಗೊಬ್ಬರ, ನೀರು ಒದಗಿಸಿ, ಬೆಳವಣಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವುದನ್ನೂ ನೋಡಿದ್ದೇವೆ. ಆದರೆ ತಮ್ಮನ್ನು ತಿನ್ನಲು ಬರುವ, ಆಶ್ರಯ ಬಯಸಿ ಬರುವ ಕೀಟ, ಚಿಟ್ಟೆ, ದೊಡ್ಡ ದುಂಬಿ, ಕಪ್ಪೆ ಮರಿಗಳು ಇಂಥ ಪುಟ್ಟ ಜೀವಿಗಳನ್ನೇ ಸ್ವಾಹಾ ಮಾಡುವ ಸಸ್ಯಗಳಿವೆ ಎನ್ನುವುದು ಗೊತ್ತಾ? ಹೌದು, ಅಂಥ 'ಮಾಂಸಾಹಾರಿ ಸಸ್ಯ'ಗಳೂ ನಮ್ಮ ಭೂಮಿ ಮೇಲಿವೆ, 'ಸೈಲೆಂಟ್ ಕಿಲ್ಲರ್' ಥರ. ಸೃಷ್ಟಿ ವೈಚಿತ್ರ್ಯ ಗಣಿಯಲ್ಲಿನ ವಿಶೇಷದ ಪಟ್ಟಿಗೆ ಈ ಮಾಂಸಾಹಾರಿ ಸಸ್ಯಗಳು ಸೇರಿವೆ. ಈ ಗಿಡಗಳೆಲ್ಲ ಕೀಟಗಳನ್ನು ಹೇಗೆ ಆಕರ್ಷಿಸುತ್ತ್ತೆ, ಕೀಟಗಳೂ ಇವುಗಳ ಆಕರ್ಷಣೆಗೆ ಹೇಗೆ ಬಲಿಯಾಗುತ್ತವೆ ಎಂಬ ಕುತೂಹಲದ ಮಾಹಿತಿ ನಿಮಗಾಗಿ. ಅದೊಂದು ಸಸ್ಯದಲ್ಲಿ ಸುಂದರವಾದ ಹೂವೊಂದು ಅರಳಿದೆ. ಮಕರಂದವನ್ನರಸಿ ಹಾರಿಕೊಂಡು ಬಂದ ದುಂಬಿಯೊಂದು ರೆಕ್ಕೆಗಳನ್ನು ಮಡಚುತ್ತ ಆ ಹೂವಿನ ಮೇಲೆ ಕುಳಿತುಕೊಳ್ಳಲು ಕಾಲುಗ

ಅಂಬೇಡ್ಕರ್ ಸ್ಮರಣಾರ್ಥ ಎರಡು ನಾಣ್ಯಗಳ ಬಿಡುಗಡೆ:-

BY ವಿಜಯವಾಣಿ ನ್ಯೂಸ್ · DEC 6, 2015 ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ 'ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ'ಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಎರಡು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಅಂಬೇಡ್ಕರ್ ಅವರ ಭಾವಚಿತ್ರವಿರುವ 125 ರೂ. ಮತ್ತು 10 ರೂ. ನಾಣ್ಯಗಳನ್ನು ಬಿಡುಗಡೆಗೊಳಿಸಿದ ಮೋದಿ, ಅಂಬೇಡ್ಕರ್ ನಿಧನರಾಗಿ 60 ವರ್ಷಗಳೇ ಕಳೆದಿದ್ದರೂ ಈಗಲೂ ಬದುಕಿದ್ದಾರೆ ಎಂದೆನಿಸುತ್ತದೆ. ಅಂಬೇಡ್ಕರ್ ಅವರ ಮುನ್ನೋಟ ಈಗಲೂ ಪ್ರಸ್ತುತ. ಅವರ ವಿಸõತ ಆರ್ಥಿಕ ಆಲೋಚನೆಗಳು, ದೃಷ್ಟಿಕೋನಗಳನ್ನು ಪೂರ್ತಿಯಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಮಹಿಳಾ ಸಬಲೀಕರಣ, ಶಿಕ್ಷಣ, ಸಮಾನತೆಗೆ ಅಂಬೇಡ್ಕರರ ಕೊಡುಗೆ ಅಪಾರ ಎಂದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಸಮಾಜ ಕಲ್ಯಾಣ ಸಚಿವ ಥಾವರ್ ಚಾಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸತ್ ಭವನದಲ್ಲಿ ಸ್ಥಾಪಿಸಲಾಗಿರುವ ದಲಿತ ಮುಖಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಶನಿವಾರ ಮೋದಿ ಗೌರವ ಸಲ್ಲಿಸಿದ್ದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ 14/12/2015 ರ ವರೆಗೆ ವಿಸ್ತರಣೆ

Image

ಎಸ್​ಎಸ್​ಎಲ್​ಸಿ (2016 )ಪರೀಕ್ಷಾ ವೇಳಾಪಟ್ಟಿ ಪ್ರಕಟ *:

DEC 5, 2015 ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 30ಕ್ಕೆ ಆರಂಭವಾಗುವ ಪರೀಕ್ಷೆಗಳು ಏಪ್ರಿಲ್ 13ಕ್ಕೆ ಮುಗಿಯಲಿವೆ. ವೇಳಾಪಟ್ಟಿ ಇಂತಿದೆ: ದಿನಾಂಕ : ವಿಷಯ 30-03-2016 : ಪ್ರಥಮ ಭಾಷೆ 01-04-2016 : ವಿಜ್ಞಾನ 04-04-2016 : ಗಣಿತ 06-04-2016 : ದ್ವಿತೀಯ ಭಾಷೆ 07-04-2016 ರಿಂದ 10-04-2016ರವರೆಗೆ ರಜಾ 11-04-2016 : ಸಮಾಜ ವಿಜ್ಞಾನ 13-04-2016 : ತೃತೀಯ ಭಾಷೆ ---------------------------- freegksms.blogspot.in ---------------------------- SSLC time table 2016 March 30 Kannada April 1 Science April 4 Maths   April 6 English April 11 Social science April 13 Hindi

ಮುಂಬಡ್ತಿ ಇಂಗ್ಲಿಷ್ ಶಿಕ್ಷಕರಿಗೆ ಹಿಂಬಡ್ತಿ ಭೀತಿ:*

BY ವಿಜಯವಾಣಿ ನ್ಯೂಸ್ · DEC 5, 2015 State_8 ರಾಜು ಖಾರ್ವಿ ಬೆಂಗಳೂರು: ಸರ್ಕಾರದ ವೃಂದ ಮತ್ತು ನೇಮಕಾತಿ ನಿಯಮದ ಅನುಸಾರ ಮುಂಬಡ್ತಿ ಪಡೆದಿರುವ ಸಾವಿರಾರು ಇಂಗ್ಲಿಷ್ ಪ್ರೌಢಶಾಲಾ ಶಿಕ್ಷಕರಿಗೆ ಈಗ ಹಿಂಬಡ್ತಿಯ ಭೀತಿ ಎದುರಾಗಿದೆ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕರಾಗಿ ಮುಂಬಡ್ತಿ ಪಡೆದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹಿಂಪಡೆಯುವಂತೆ ಇತ್ತೀಚೆಗೆ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠ ಆದೇಶಿಸಿದೆ. ಆದೇಶಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸದಿರುವುದರಿಂದ ಮುಂಬಡ್ತಿ ಪಡೆದಿರುವ ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಹಿಂಬಡ್ತಿ ಭಯ ಕಾಡಲಾರಂಭಿಸಿದೆ. ಆದೇಶ ಪಾಲನೆಗೆ ಚಿಂತನೆ: ನ್ಯಾಯಾಲಯದ ಆದೇಶದನ್ವಯ ಮುಂಬಡ್ತಿ ಹೊಂದಿರುವ ಹಾಗೂ ನೇರ ನೇಮಕಾತಿಯಾಗಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನು 6 ತಿಂಗಳೊಳಗೆ ಜಾರಿ ಮಾಡದಿದ್ದರೆ ನ್ಯಾಯಾಂಗ ನಿಂದನೆ ಆಗಬಹುದು ಎಂಬ ಭಯದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆತುರಾತುರವಾಗಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಇಂಗ್ಲಿಷ್ ಮತ್ತು ಬಿ.ಇಡಿ ಕೋರ್ಸ್​ನಲ್ಲಿ ಇಂಗ್ಲಿಷ್ ಬೋಧನಾ ವಿಷಯವಾಗಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಪ್ರೌಢಶಾಲಾ ಇ

ದೇಶದಲ್ಲೇ ಮೊದಲ ಹೊಗೆ ರಹಿತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಚಕುರಹಳ್ಳಿ:-

ಬೆಂಗಳೂರು, ಡಿ.4- ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವ್ಯಾಚಕುರಹಳ್ಳಿ ಗ್ರಾಮವು ದೇಶದಲ್ಲೇ ಮೊಟ್ಟ ಮೊದಲ ಹೊಗೆ ರಹಿತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಲಾಖೆ ಘೋಷಣೆ ಮಾಡಿರುವಂತೆ ವ್ಯಾಚಕುರಹಳ್ಳಿ ದೇಶದ ಮೊಟ್ಟ ಮೊದಲ ಹೊಗೆ ರಹಿತ ಗ್ರಾಮ ಎಂದು ದಾಖಲೆ ಬರೆದಿದೆ. ಕಾರಣ, ಈ ಗ್ರಾಮದಲ್ಲಿರುವ 275 ನಿವಾಸಿಗಳು ಸೌದೆಯನ್ನು ಬಳಸದೆ ಪ್ರತಿಯೊಬ್ಬರೂ ಅಡುಗೆ ಅನಿಲ (ಎಲ್ಪಿಜಿ) ಬಳಸುತ್ತಾರೆ. ದೇಶದ ಯಾವುದೇ ಗ್ರಾಮದಲ್ಲಿ ಪ್ರತಿಯೊಬ್ಬರೂ ಅಡುಗೆ ಅನಿಲ ಬಳಸುವ ಪದ್ಧತಿ ಇಲ್ಲ. ಈಗಲೂ ಅನೇಕ ಕಡೆ ಸೀಮೆಎಣ್ಣೆ ಹಾಗೂ ಸೌದೆಯಿಂದ ಊಟ, ತಿಂಡಿ ತಯಾರಿಸುವ ಪ್ರವೃತ್ತಿಯಿದೆ. ವ್ಯಾಚಕುರಹಳ್ಳಿಯ 275 ಮನೆಗಳಲ್ಲೂ ಪ್ರತಿಯೊಬ್ಬರೂ ಅಡುಗೆ ಅನಿಲ ಬಳಸಿ ಊಟ, ತಿಂಡಿ ಸಿದ್ಧಪಡಿಸಿಕೊಳ್ಳುತ್ತಾರೆ. ಇಲ್ಲಿ ಸೀಮೆಎಣ್ಣೆ ಮತ್ತು ಸೌದೆ ಬಳಸುವುದನ್ನು ಕಳೆದ ಹಲವು ದಿನಗಳಿಂದ ನಿಲ್ಲಿಸಲಾಗಿದೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು (ವಿಎ) ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಪಡೆದು ಗ್ರಾಮವನ್ನು ಹೊಗೆ ರಹಿತ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಈ ಕುಗ್ರಾಮಕ್ಕೆ ಅನೇಕ ಸವಲತ್ತುಗಳು ಇನ್ನು ಮುಂದೆ ಸಿಗಲಿವೆ. ಈಗಾಗಲೇ ಭಾರ