Drop


Monday, September 28, 2015

ಇಸ್ರೋ ಸಾಧನೆ: ಚೊಚ್ಚಲ ‘ಆಸ್ಟ್ರೋಸ್ಯಾಟ್​’​ ಉಡಾವಣೆ:


ಶ್ರೀಹರಿಕೋಟಾ(ಸೆ.28):
ಬಾಹ್ಯಕಾಶ ಕ್ಷೇತ್ರದಲ್ಲಿ
ಬೇರೆಲ್ಲಾ ದೇಶಗಳಿಗೂ ಸೆಡ್ಡು
ಹೊಡೆಯುತ್ತಿರುವ ಭಾರತದ
ಇಸ್ರೋ ಸಂಸ್ಥೆ ಮತ್ತೊಂದು
ಸಾಧನೆ ಮಾಡಿದ್ದು, ದೇಶಿ ನಿರ್ಮಿತ
ಚೊಚ್ಚಲ 'ಆಸ್ಟ್ರೋಸ್ಯಾಟ್​'​
ಉಪಗ್ರಹವನ್ನು ಯಶಸ್ವಿ ಉಡಾವಣೆ
ಮಾಡಿದೆ.
ದೇಶಿ ನಿರ್ಮಿತ ಚೊಚ್ಚಲ ಖಗೋಳ
ವೀಕ್ಷಣಾಲಯ ಉಪಗ್ರಹ
ಇದಾಗಿದ್ದು, 1513 ಕೆ.ಜಿ ತೂಕದ
'ಆಸ್ಟ್ರೋಸ್ಯಾಟ್​'​ ಉಪಗ್ರಹವನ್ನು
ಸತೀಶ್​ ಧವನ್​ ಬ್ಯಾಹಾಕಾಶ
ಕೇಂದ್ರದಿಂದ ಪಿಎಸ್​​ಎಲ್​ವಿ ಸಿ-30
ರಾಕೆಟ್​ ಮೂಲಕ ಉಡಾವಣೆ
ಮಾಡಲಾಗಿದೆ.
ಈ 'ಆಸ್ಟ್ರೋಸ್ಯಾಟ್​'​ ಉಡಾವಣೆ
ಮೂಲಕ ಇಸ್ರೋ ಇತಿಹಾಸ
ಸೃಷ್ಟಿಸಿದ್ದು, ಬ್ಯಾಹಾಕಾಶದ
ಕಾಯಗಳ ವೀಕ್ಷಣೆಗೆ
'ಆಸ್ಟ್ರೋಸ್ಯಾಟ್​'​
ಸಹಾಯಕಾರಿಯಾಗಲಿದೆ. ಕಪ್ಪು
ರಂಧ್ರಗಳು, ನಕ್ಷತ್ರಗಳ ಹುಟ್ಟು
ಸಾವಿನ ಬಗ್ಗೆ ಅಧ್ಯಯನ ನಡೆಸಲು ಇದು
ನೆರವಾಗಲಿದೆ.
ಇದಲ್ಲದೇ ಮತ್ತೊಂದು
ಸಾಧನೆಯ ಕೀರಿಟ ಎಂದರೇ
'ಆಸ್ಟ್ರೋಸ್ಯಾಟ್​'​ ಜೊತೆಯಲ್ಲಿ
ಮೊದಲ ಬಾರಿಗೆ ಅಮೆರಿಕದ ಉಪಗ್ರಹ
ಭಾರತದಲ್ಲಿ ಉಡಾವಣೆಯಾಗಿದೆ,
ಅಮೆರಿಕದ ನಾಲ್ಕು, ಕೆನಡಾ,
ಇಂಡೋನೇಷ್ಯಾದ ತಲಾ
ಒಂದು ಉಪಗ್ರಹ ಇಂದಯ
ಉಡಾವಣೆಗೊಂಡಿದೆ.
ಕ್ರಯೋಜನಿಕ್​​ ತಂತ್ರಜ್ಞಾನವನ್ನು
ಭಾರತಕ್ಕೆ ನೀಡಿದೆ ಇಸ್ರೋ ಮೇಲೆ
ತಾಂತ್ರಿಕ ದಿಗ್ಬಂಧನ ಹೇರಿದ್ದ
ಅಮೆರಿಕ, ಕ್ರಯೋಜನಿಕ್​
ತಂತ್ರಜ್ಞಾನವನ್ನು ಭಾರತಕ್ಕೆ
ನೀಡಿದಂತೆ ಇತರೆ ದೇಶಗಳ ಮೇಲೂ
ಒತ್ತಡ ಹೇರಿತ್ತು. ಆದರೆ ಈ ಬಾರಿ
ಅಮೆರಿಕಾದ ಉಪಗ್ರಹಗಳನ್ನು ಈ ಬಾರಿ
ಪಿಎಸ್​​ಎಲ್​ವಿ ಸಿ-30 ಮೂಲಕ
ಬಾಹ್ಯಕಾಶಕ್ಕೆ ಕಳುಹಿಸಲಾಗಿದ್ದು,
ಇದು ಇಸ್ರೋ ಸಾಧನೆಗೆ ಹಿಡಿದ
ಕೈಗನ್ನಡಿಯಾಗಿದೆ.
ಅಮೆರಿಕ ಕ್ರಯೋಜನಿಕ್​​
ತಂತ್ರಜ್ಞಾನವನ್ನು ನೀಡದಿದ್ದ
ಕಾರಣ, ಭಾರತ ತನ್ನದೇ
ಕ್ರಯೋಜನಿಕ್​​ ತಂತ್ರಜ್ಞಾನವನ್ನು
ಅಭಿವೃದ್ಧಿ ಪಡಿಸಿತ್ತು. ಅದರಲ್ಲಿ ಯಶಸ್ಸು
ಸಹ ಸಾಧಿಸಿದನ್ನು ನಾವಿಲ್ಲಿ
ಸ್ಮರಿಸಬಹುದು.