ಇಸ್ರೋ ಸಾಧನೆ: ಚೊಚ್ಚಲ ‘ಆಸ್ಟ್ರೋಸ್ಯಾಟ್’ ಉಡಾವಣೆ:
ಶ್ರೀಹರಿಕೋಟಾ(ಸೆ.28):
ಬಾಹ್ಯಕಾಶ ಕ್ಷೇತ್ರದಲ್ಲಿ
ಬೇರೆಲ್ಲಾ ದೇಶಗಳಿಗೂ ಸೆಡ್ಡು
ಹೊಡೆಯುತ್ತಿರುವ ಭಾರತದ
ಇಸ್ರೋ ಸಂಸ್ಥೆ ಮತ್ತೊಂದು
ಸಾಧನೆ ಮಾಡಿದ್ದು, ದೇಶಿ ನಿರ್ಮಿತ
ಚೊಚ್ಚಲ 'ಆಸ್ಟ್ರೋಸ್ಯಾಟ್'
ಉಪಗ್ರಹವನ್ನು ಯಶಸ್ವಿ ಉಡಾವಣೆ
ಮಾಡಿದೆ.
ದೇಶಿ ನಿರ್ಮಿತ ಚೊಚ್ಚಲ ಖಗೋಳ
ವೀಕ್ಷಣಾಲಯ ಉಪಗ್ರಹ
ಇದಾಗಿದ್ದು, 1513 ಕೆ.ಜಿ ತೂಕದ
'ಆಸ್ಟ್ರೋಸ್ಯಾಟ್' ಉಪಗ್ರಹವನ್ನು
ಸತೀಶ್ ಧವನ್ ಬ್ಯಾಹಾಕಾಶ
ಕೇಂದ್ರದಿಂದ ಪಿಎಸ್ಎಲ್ವಿ ಸಿ-30
ರಾಕೆಟ್ ಮೂಲಕ ಉಡಾವಣೆ
ಮಾಡಲಾಗಿದೆ.
ಈ 'ಆಸ್ಟ್ರೋಸ್ಯಾಟ್' ಉಡಾವಣೆ
ಮೂಲಕ ಇಸ್ರೋ ಇತಿಹಾಸ
ಸೃಷ್ಟಿಸಿದ್ದು, ಬ್ಯಾಹಾಕಾಶದ
ಕಾಯಗಳ ವೀಕ್ಷಣೆಗೆ
'ಆಸ್ಟ್ರೋಸ್ಯಾಟ್'
ಸಹಾಯಕಾರಿಯಾಗಲಿದೆ. ಕಪ್ಪು
ರಂಧ್ರಗಳು, ನಕ್ಷತ್ರಗಳ ಹುಟ್ಟು
ಸಾವಿನ ಬಗ್ಗೆ ಅಧ್ಯಯನ ನಡೆಸಲು ಇದು
ನೆರವಾಗಲಿದೆ.
ಇದಲ್ಲದೇ ಮತ್ತೊಂದು
ಸಾಧನೆಯ ಕೀರಿಟ ಎಂದರೇ
'ಆಸ್ಟ್ರೋಸ್ಯಾಟ್' ಜೊತೆಯಲ್ಲಿ
ಮೊದಲ ಬಾರಿಗೆ ಅಮೆರಿಕದ ಉಪಗ್ರಹ
ಭಾರತದಲ್ಲಿ ಉಡಾವಣೆಯಾಗಿದೆ,
ಅಮೆರಿಕದ ನಾಲ್ಕು, ಕೆನಡಾ,
ಇಂಡೋನೇಷ್ಯಾದ ತಲಾ
ಒಂದು ಉಪಗ್ರಹ ಇಂದಯ
ಉಡಾವಣೆಗೊಂಡಿದೆ.
ಕ್ರಯೋಜನಿಕ್ ತಂತ್ರಜ್ಞಾನವನ್ನು
ಭಾರತಕ್ಕೆ ನೀಡಿದೆ ಇಸ್ರೋ ಮೇಲೆ
ತಾಂತ್ರಿಕ ದಿಗ್ಬಂಧನ ಹೇರಿದ್ದ
ಅಮೆರಿಕ, ಕ್ರಯೋಜನಿಕ್
ತಂತ್ರಜ್ಞಾನವನ್ನು ಭಾರತಕ್ಕೆ
ನೀಡಿದಂತೆ ಇತರೆ ದೇಶಗಳ ಮೇಲೂ
ಒತ್ತಡ ಹೇರಿತ್ತು. ಆದರೆ ಈ ಬಾರಿ
ಅಮೆರಿಕಾದ ಉಪಗ್ರಹಗಳನ್ನು ಈ ಬಾರಿ
ಪಿಎಸ್ಎಲ್ವಿ ಸಿ-30 ಮೂಲಕ
ಬಾಹ್ಯಕಾಶಕ್ಕೆ ಕಳುಹಿಸಲಾಗಿದ್ದು,
ಇದು ಇಸ್ರೋ ಸಾಧನೆಗೆ ಹಿಡಿದ
ಕೈಗನ್ನಡಿಯಾಗಿದೆ.
ಅಮೆರಿಕ ಕ್ರಯೋಜನಿಕ್
ತಂತ್ರಜ್ಞಾನವನ್ನು ನೀಡದಿದ್ದ
ಕಾರಣ, ಭಾರತ ತನ್ನದೇ
ಕ್ರಯೋಜನಿಕ್ ತಂತ್ರಜ್ಞಾನವನ್ನು
ಅಭಿವೃದ್ಧಿ ಪಡಿಸಿತ್ತು. ಅದರಲ್ಲಿ ಯಶಸ್ಸು
ಸಹ ಸಾಧಿಸಿದನ್ನು ನಾವಿಲ್ಲಿ
ಸ್ಮರಿಸಬಹುದು.
Comments
Post a Comment