:ನಿಮ್ಮ ಸಂಸದರಿಗೆ ಪ್ರತಿ ತಿಂಗಳು ಸಿಗುವ ಸಂಬಳ, ಇತರ ಸೌಲಭ್ಯಗಳು ಏನೇನು ಗೊತ್ತಾ..?

ನವದೆಹಲಿ(ಮೇ 22): 16ನೇ ಲೋಕಸಭೆ ಇನ್ನೇನು ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ. 543 ಸಂಸದರ ಆಯ್ಕೆಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ ದಿನದಿಂದಲೇ, ಜನ ಪ್ರತಿನಿಧಿಗಳು ಸರ್ಕಾರಿ ಭತ್ಯೆ ಮತ್ತು ಸೌಲಭ್ಯಗಳಿಗೆ ಭಾಜನರಾಗಲಿದ್ದಾರೆ.

ಪ್ರತಿ ಸಂಸದನಿಗೆ ಸಿಗುವ ಭತ್ಯೆಗಳೇನು..? ಸೌಲಭ್ಯಗಳೇನು..? ಇಲ್ಲಿವೆ ವಿವರ :

ಭತ್ಯೆಗಳು :

1) ರು.50,000/- ಪ್ರತಿ ಸಂಸದರಿಗೆ ಪ್ರತಿ ತಿಂಗಳು ಸಿಗುವ ಸಂಬಳ

2) ರು.2,000/- ಕಲಾಪದ ಸಂದರ್ಭದಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದಲ್ಲಿ ದಿನವೊಂದಕ್ಕೆ ಸಿಗುವ ಭತ್ಯೆ

3) ರು. 45,000/- ಪ್ರತಿ ತಿಂಗಳು ತಮ್ಮ ಕ್ಷೇತ್ರದಲ್ಲಿನ ಖರ್ಚು ವೆಚ್ಚಕ್ಕಾಗಿ

4) ರು.45,000/- ಪ್ರತಿ ತಿಂಗಳು ತಮ್ಮ ಕಚೇರಿ ನಿರ್ವಹಣೆಗಾಗಿ

5) ರು.75,000/- ಕಚೇರಿ ಅಥವಾ ಮನೆಯ ಕರ್ಟನ್ ಪೀಠೋಪಕರಣ, ಬಟ್ಟೆ ಸ್ವಚ್ಛತೆ ಇತ್ಯಾದಿಗಳಿಗಾಗಿ ಪ್ರತ್ಯೇಕ ಭತ್ಯೆ

ಪ್ರವಾಸ ಸೌಲಭ್ಯಗಳು :

1) ಸಂಸತ್ ಕಲಾಪ ಅಥವಾ ಇತರೆ ಯಾವುದೇ ಅಧಿಕೃತ ಕಾರ್ಯಕ್ರಮಕ್ಕೆ ಹೋಗಲು ತಗಲುವ ಸಂಪೂರ್ಣ ಸಂಚಾರಿ ವೆಚ್ಚ

ವಿಮಾನ ಸೌಲಭ್ಯ :

1) ಯಾವುದೇ ವಿಮಾನದ ಟಿಕೆಟ್ನ ಶೇ.25ರಷ್ಟು ಹೆಚ್ಚಿನ ಹಣ ಪ್ರತಿ ಸಂಸದರಿಗೆ ಸಂದಾಯವಾಗುತ್ತದೆ

2) ಒಂದು ವರ್ಷದಲ್ಲಿ ಒಬ್ಬ ಸಂಸದ 34 ಬಾರಿ ಈ ಸೌಲಭ್ಯದಡಿ ವಿಮಾನ ಪ್ರಯಾಣ ಮಾಡಬಹುದು

3) ಸಂಸದನ ಕುಟುಂಬ ವರ್ಗದ ಸದಸ್ಯರೂ ಸಹ ಸಂಸದರನ್ನು ಕಾಣಲು ವರ್ಷಕ್ಕೆ ಎಂಟು ಬಾರಿ ಪ್ರತ್ಯೇಕವಾಗಿ ವಿಮಾನ ಪ್ರಯಾಣ ಮಾಡಬಹುದು. ಆ 34ರಲ್ಲೇ ಇದೂ ಒಳಗೊಳ್ಳುತ್ತದೆ.

ರೈಲ್ವೆ ಪ್ರಯಾಣ ಸೌಲಭ್ಯ :

1) ಯಾವುದೇ ರೈಲಿನಲ್ಲಿ ಎಸಿ ದರ್ಜೆಯ ಪ್ರಯಾಣ ಉಚಿತ. ಎಷ್ಟು ಬಾರಿಯಾದರೂ ಸಂಚರಿಸಬಹುದು

2) ಈ ಸೌಲಭ್ಯದ ಜತೆಗೆ ಒಬ್ಬ ಸಂಸದನಿಗೆ ಒಂದು ಫಸ್ಟ್ ಕ್ಲಾಸ್ ಮತ್ತು ಒಂದು ಸೆಕೆಂಡ್ ಕ್ಲಾಸ್ ಬೋಗಿಯ ಪ್ರಯಾಣದ ಟಿಕೆಟ್ ದರ ಕೂಡ ಲಭ್ಯವಿದೆ

ರಸ್ತೆ ಸಂಚಾರ :

1) ಒಬ್ಬ ಸಂಸದ ರಸ್ತೆ ಮೂಲಕ ಎಷ್ಟೆಲ್ಲಾ ಸಂಚರಿಸುತ್ತಾನೋ ಅಷ್ಟೂ ಪ್ರಯಾಣಕ್ಕೆ ಪ್ರತಿ ಕಿಲೋ ಮೀಟರ್ಗೆ 16 ರೂಪಾಯಿ ಭತ್ಯೆ ಸಿಗಲಿದೆ

ವಸತಿ ಸೌಲಭ್ಯ :

1) ಪ್ರತಿ ಸಂಸದನಿಗೆ ಬಾಡಿಗೆ ರಹಿತ ಕೊಠಡಿ ಸಂಸದರ ಭವನದಲ್ಲಿ ಸಿಗಲಿದೆ.

2) ಅಲ್ಲದೆ, ಯಾವುದೇ ಸಂಸದ ಒಂದು ಬಂಗಲೆ ನೀಡುವಂತೆಯೂ ಮನವಿ ಮಾಡಿಕೊಳ್ಳಬಹುದು. ಹಿರಿಯ ಸಂಸದರಿಗೆ ನೀಡಿ ಉಳಿದಿದ್ದರಷ್ಟೇ ಈ ಸೌಲಭ್ಯ

3) ಸಂಸದರ ಅವಧಿ ಮುಗಿದ ಒಂದು ತಿಂಗಳ ತನಕ ವಸತಿ ಸೌಲಭ್ಯ ಹೊಂದಬಹುದು. ಸಕರ್ಾರಿ ಲೆಕ್ಕದ ಕನಿಷ್ಠ ಬಾಡಿಗೆ ನೀಡಬೇಕಾಗುತ್ತದೆ.

4) ಒಂದು ವೇಳೆ ತನ್ನ ಅಧಿಕಾರಾವಧಿಯಲ್ಲೇ ಒಬ್ಬ ಸಂಸದ ಮೃತಪಟ್ಟರೆ, ಆ ವ್ಯಕ್ತಿಯ ಕುಟುಂಬ ವರ್ಗ ಆರು ತಿಂಗಳ ಕಾಲ ಆ ವಸತಿಯಲ್ಲಿ ಉಳಿದುಕೊಳ್ಳಬಹುದು. ಆದರೆ, ಇದಕ್ಕಾಗಿ, ಸಕರ್ಾರಿ ಬಾಡಿಗೆಯನ್ನು ತೆರಬೇಕು.

5) ತನ್ನನ್ನು ಕಾಣಬರುವ ಅತಿಥಿಗಳಿಗಾಗಿ ಯಾವುದೇ ಸಂಸದ ಜನಪಥ್'ದಲ್ಲಿರುವ ಅತಿಥಿ ಗೃಹವನ್ನು ಬಳಸಿಕೊಳ್ಳಬಹುದು.

ಟೆಲಿಫೋನ್ ಸವಲತ್ತುಗಳು :

1) ಪ್ರತಿ ಸಂಸದನಿಗೆ ನಾಲ್ಕು ಲಕ್ಷದವರೆಗೆ ವಾಹನ ಸಾಲ ಸೌಲಭ್ಯವಿದೆ. ಇದನ್ನು 60 ತಿಂಗಳ ಅವಧಿಯಲ್ಲಿ ಸಂಸದರ ಸಂಬಳದಲ್ಲಿ ಕಡಿತಗೊಳಿಸಲಾಗುವುದು.

2) ಮೂರು ಟೆಲಿಫೋನ್ ಸಂಪರ್ಕಗಳನ್ನು ಪ್ರತಿ ಸಂಸದ ಹೊಂದಬಹುದು. ಒಂದು ದೆಹಲಿಯ ಕಚೇರಿ, ಇನ್ನೊಂದು ತಮ್ಮ ಕ್ಷೇತ್ರದ ಕಚೇರಿ, ಮತ್ತೊಂದು ಸಂಸದ ಇಚ್ಛಿಸಿದ ಯಾವುದೇ ಸ್ಥಳದಲ್ಲಿ.

3) ಅಲ್ಲದೆ, ಒಬ್ಬ ಸಂಸದನಿಗೆ ಎರಡು ಮೊಬೈಲ್ ಫೋನ್ ಹೊಂದುವ ಸವಲತ್ತೂ ಇದೆ. ಒಂದು ಬಿಎಸ್ಎನ್ಎಲ್, ಮತ್ತೊಂದು ಸಂಸದ ಇಚ್ಛಿಸಿದ ಯಾವುದೆ ಕಂಪನಿ ಮೊಬೈಲ್

4) ಈ ಮೊಬೈಲುಗಳಿಗೆ 3ಜಿ ಸೌಲಭ್ಯವೂ ಸಂಸದರಿಗುಂಟು.

5) ಈ ಎಲ್ಲಾ ಫೋನ್ಗಳನ್ನೂ ಒಳಗೊಂಡಂತೆ, ಒಟ್ಟು 1,50,000 (ಒಂದು ಲಕ್ಷದ ಐವತ್ತು ಸಾವಿರ) ಕರೆಗಳನ್ನು ಉಚಿತವಾಗಿ ಮಾಡಬಹುದು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು