:ಭಾರತದ ಕೃಷಿ ವಿಜ್ಞಾನಿ ಡಾ| ಸಂಜಯ್ ರಾಜಾರಾಮ್'ಗೆ ವಿಶ್ವ ಆಹಾರ ಪ್ರಶಸ್ತಿ
Jun
ನ್ಯೂಯಾರ್ಕ್(ಜೂ. 21): ವಿಶ್ವಖ್ಯಾತ ಗೋದಿ ವಿಜ್ಞಾನಿ ಡಾ| ಸಂಜಯ್ ರಾಜಾರಾಮ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ವಿಶ್ವ ಆಹಾರ ಪ್ರಶಸ್ತಿಯ ಗೌರವ ಲಭಿಸಿದೆ. 71 ವರ್ಷದ ಡಾ| ರಾಜಾರಾಮ್ ಈ ಪ್ರಶಸ್ತಿ ಪಡೆದ ಏಳನೇ ಭಾರತೀಯನೆನಿಸಿದ್ದಾರೆ. ವಿಶ್ವಾದ್ಯಂತ ಗೋಧಿ ಬೆಳೆಯಲ್ಲಿ ಹೊಸ ಕ್ರಾಂತಿಯನ್ನ ಸೃಷ್ಟಿಸಿದ ಅಪರೂಪದ ಸಾಧಕ ಎನಿಸಿದ್ದಾರೆ.
ಡಾ| ಸಂಜಯ್ ರಾಜಾರಾಮ್ ವಿವಿಧ ಹವಾಗುಣಕ್ಕೆ ಹೊಂದಿಕೊಳ್ಳಬಲ್ಲ ಮತ್ತು ತುಂಬಾ ಪ್ರತಿಕೂಲ ಹವೆಯಲ್ಲೂ ಬೆಳೆಯಬಲ್ಲ ಗೋದಿ ತಳಿಗಳನ್ನ ರೂಪಿಸಿದ್ದಾರೆ. ಇವರ 480 ಗೋದಿ ತಳಿಗಳು ವಿಶ್ವಾದ್ಯಂತ 51 ದೇಶಗಳಲ್ಲಿ ರೈತರ ಬಾಳಿಗೆ ನೆಮ್ಮದಿ ತಂದಿವೆ.
ಉತ್ತರಪ್ರದೇಶದ ಕುಗ್ರಾಮವೊಂದರಲ್ಲಿ ಜನಿಸಿದ ಸಂಜಯ್ ರಾಜಾರಾಮ್ ಅವರು ಸದ್ಯ ಮೆಕ್ಸಿಕೋದಲ್ಲಿ ನೆಲಸಿದ್ದಾರೆ. ಈಗ ಅವರು ಮೆಕ್ಸಿಕೋದಲ್ಲಿರುವ ಅಂತಾರಾಷ್ಟ್ರೀಯ ಗೋದಿ ಮತ್ತು ಜೋಳ ಅಭಿವೃದ್ಧಿ ಕೇಂದ್ರದಲ್ಲಿ ಗೋದಿ ತಳಿ ಯೋಜನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯರ ಪಟ್ಟಿ..
1) ಪ್ರೊ| ಎಂ.ಎಸ್.ಸ್ವಾಮಿನಾಥನ್ - 1987
2) ಡಾ| ವರ್ಗೀಸ್ ಕುರಿಯನ್ - 1989
3) ಡಾ| ಗುರುದೇವ್ ಖುಷ್ - 1996
4) ಡಾ| ಬಿ.ಆರ್.ಬರ್ವಾಲೆ - 1998
5) ಡಾ| ಸುರೀಂದರ್ ಕೆ.ವಾಸಲ್ - 2000
6) ಡಾ| ಮೋದಡುಗು ವಿಜಯ್ ಗುಪ್ತ - 2005
7) ಡಾ| ಸಂಜಯ್ ರಾಜಾರಾಮ್ - 2014
—
Comments
Post a Comment