ಜನಧನ ಯೋಜನೆ ಎಂದರೇನು?

ಬೆಂಗಳೂರು, ಆ.29 : ದೇಶದ
ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ
ನೀಡುವ ಮಹತ್ವಾಕಾಂಕ್ಷೆಯ 'ಜನಧನ'
ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನೀಡಿದ್ದಾರೆ. ನಿರ್ದಿಷ್ಟ
ಸಮಯದೊಳಗೆ ಯೋಜನೆ ಗುರಿ
ಮುಟ್ಟಲು ಸರ್ಕಾರಿ ಸ್ವಾಮ್ಯದ ಅನೇಕ
ಬ್ಯಾಂಕಿಂಗ್ ಘಟಕಗಳು ಕೈಜೋಡಿಸಲು ಒಪ್ಪಿಗೆ
ಸೂಚಿಸಿವೆ.
'ಮೇರಾ ಕಥಾ- ಭಾಗ್ಯ ವಿಧಾತಾ' ಎಂಬ ಘೋಷಣೆಯಡಿ
ಆರಂಭವಾಗಿರುವ ಯೋಜನೆ ರಾಷ್ಟ್ರದ
ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ
ರೀತಿಯ ಬ್ಯಾಂಕಿಂಗ್ ಸೌಲಭ್ಯ
ಕಲ್ಪಿಸುವ ಗುರಿ ಹೊಂದಿದೆ.
ಜನಧನ ಯೋಜನೆ ಎಂದರೇನು?
* ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ
ಬ್ಯಾಂಕಿಂಗ್
ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ
ಮತ್ತು ಮೊದಲ ಗುರಿ. ಬ್ಯಾಂಕ್
ಖಾತೆಯಿಂದ ಹಿಡಿದು, ವಿಮೆ ಮತ್ತು ಕ್ರೆಡಿಟ್ ಕಾರ್ಡ್
ಕಲ್ಪಿಸುವುದು ಯೋಜನೆಯ ಉದ್ದೇಶ.
* ಬ್ಯಾಂಕಿಂಗ್ ಕ್ಷೇತ್ರದ
ಯಾವುದೇ ಜಂಜಾಟಗಳಿಲ್ಲದೇ 1 ಲಕ್ಷ ರೂ. ವರೆಗಿನ
ವಿಮೆ ಎಲ್ಲರಿಗೂ ಲಭ್ಯವಾಗುತ್ತದೆ. ರುಪೆ ಕಾರ್ಡ್ ಹೆಸರಿನ
ಈ ಸೌಲಭ್ಯ ಕೋಟ್ಯಂತರ ಜನರಿಗೆ
ಅನುಕೂಲಕಾರಿಯಾಗಲಿದೆ.
* ಬಡ ವರ್ಗದ ಜನರಿಗೆ ಸರ್ಕಾರದ ವಿವಿಧ
ಹಣಕಾಸು ಸೌಲಭ್ಯ ಕಲ್ಪಿಸುವ ಗುರಿ
ಹೊಂದಲಾಗಿದೆ.
* ಯೋಜನೆ ನಗರ ಮತ್ತು ಗ್ರಾಮೀಣ
ಜನತೆಯನ್ನು ಒಳಗೊಳ್ಳಲಿದ್ದು ಎಲ್ಲರಿಗೂ ಡೊಮೆಸ್ಟಿಕ್
ಡೆಬಿಟ್ ಕಾರ್ಡ್ (ರುಪೆ ಕಾರ್ಡ್) ನೀಡಲಾಗುವುದು.
* ನರೇದ್ರ ಮೋದಿ ಕಲ್ಪನೆಯ ಡಿಜಿಟಲ್ ಭಾರತ ಕನಸಿಗೆ
ಪೂರಕವಾಗಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆಗೆ
ಯೋಜನೆ ಅಡಿಪಾಯ ಹಾಕಲಿದೆ.
ಜನಧನ ಯೋಜನೆಯ ಗುರಿ ಮತ್ತು ಉದ್ದೇಶ
* ಅಪಘಾತ ವಿಮೆ, ಡೆಬಿಟ್ ಕಾರ್ಡ್ ನಿಂದ
ಹಿಡಿದು ಅಪಘಾತ ವಿಮೆವರೆಗಿನ ಎಲ್ಲ ಬಗೆಯ
ಬ್ಯಾಂಕಿಂಗ್ ಕ್ಷೇತ್ರದ ಮೂಲ
ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ.
* ಆಧಾರ್ ಕಾರ್ಡ್ ಸಂಬಂಧಿತ
ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಓವರ್
ಡ್ರಾಪ್ಟ್ ಸೌಲಭ್ಯ ಕಲ್ಪಿಸಲಾಗುವುದು.
* ರುಪೆ ಡೆಬಿಟ್ ಚ ಒಂದು ಲಕ್ಷ ರೂ. ವರೆಗಿನ
ಅಪಘಾತ ವಿಮೆ ಒಳಗೊಂಡಿರುತ್ತದೆ.
* ಈ ಯೋಜನೆಯಡಿ ಖಾತೆ ಮಾಡಿಸಿಕೊಂಡ
ವ್ಯಕ್ತಿ 6 ತಿಂಗಳ ನಂತರ 2.500 ರೂ.
ಓವರ್ ಡ್ರಾಪ್ಟ್ಗೆ ಭಾಜನನಾಗುತ್ತಾನೆ.
* ಬ್ಯಾಂಕ್ ಖಾತೆ ಹೊಂದಿರದ 7.5
ಕೋಟಿ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಿ
15 ಕೋಟಿಗೂ ಹೆಚ್ಚಿನ ಬ್ಯಾಂಕ್ ಖಾತೆ ತೆರೆಯುವ
ಉದ್ದೇಶ ಹೊಂದಲಾಗಿದೆ.
* ಪ್ರತಿಯೊಂದು ಮನೆಗೆ ಕನಿಷ್ಠ
ಎರಡು ಬ್ಯಾಂಕ್ ಖಾತೆ ನೀಡುವ ಗುರಿ
ಹೊಂದಲಾಗಿದೆ.
ಯೋಜೆನೆ ಯಾವಾಗ ಜಾರಿಒಯಾಯಿತು?
* ನರೇಂದ್ರ ಮೋದಿ ಕನಸಿನ ಯೋಜನೆಗೆ ಆಗಸ್ಟ್
28ರಂದು ಸ್ವತಃ ಪ್ರಧಾನಮಂತ್ರಿಯವರೇ ಚಾಲನೆ
ನೀಡಿದರು.
*ದೇಶದ ಪ್ರಮುಖ ನಗರಗಳಾದ ಡೆಹಾಡೂನ್, ಗಯಹವಾಟಿ,
ಪಾಟ್ನಾ, ಮುಜಾಫುರ್, ಮುಂಬೈ, ಗಾಂಧಿನಗರ, ಸೂರತ್,
ಬಿಸ್ಲಾಪುರ್, ರಾಯ್ಪುರ್ ಮುಂತಾದ ಕಡೆ ಏಕಕಾಲಕ್ಕೆ ಜಾರಿ
ಮಾಡಲಾಯಿತು.
* ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು 60
ಸಾವಿರ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶ
ಹೊಂದಲಾಗಿದೆ.
ಯೋಜನೆಯ ಎರಡು ಹಂತಗಳು
* ಯೋಜನೆಯ ಉದ್ದೇಶ
ಮತ್ತು ಧ್ಯೇಯಗಳು ಒಂದು ವರ್ಷದವರೆಗೆ
ನಿರಂತರವಾಗಿ ಚಾಲ್ತಿಯಲ್ಲಿರುತ್ತದೆ. ಅಂದರೆ
ಮುಂದಿನ ಅಗಸ್ಟ್ವರೆಗೆ ಯೋಜನೆಯಡಿ ಬ್ಯಾಂಕ್
ಖಾತೆ ತೆರೆಯುವ ಪ್ರಕ್ರಿಯೆ ನಡೆಯುತ್ತಿರುತ್ತದೆ.
* ಜನರಿಗೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತಿತರ
ಬ್ಯಾಂಕಿಂಗ್ ಸೌಲಭ್ಯ
ಕಲ್ಪಿಸಲು ಮೊದಲು ಗಮನ ಹರಿಸಲಾಗುವುದು.
ಬ್ಯಾಂಕ್ ಖಾತೆ
ಹೊಂದಿರದವರನ್ನು ಗುರುತಿಸುವುದು ಅಷ್ಟೇ ಮುಖ್ಯ.
* ಎರಡನೇ ಹಂತ 2015 ಆಗಸ್ಟ್ನಿಂದ
ಆರಂಭವಾಗಿ 2018ರವರೆಗೆ ಚಾಲ್ತಿಯಲ್ಲಿರುತ್ತದೆ.
* ಸ್ವಾವಲಂಬನಾ ಹೆಸರಿನಲ್ಲಿ ನಿವೃತ್ತಿಯಾದವರಿಗೆ
ಸೌಲಭ್ಯ ಮತ್ತು ವಿಮೆ ಸೌಲಭ್ಯ ಕಲ್ಪಿಸಲಾಗುವುದು.
* ಬ್ಯಾಂಕ್ ಖಾತೆ ತೆರಯಲು ಆಧಾರ್ ಕಾರ್ಡ್
ಕಡ್ಡಾಯವಲ್ಲ ಎಂದು ತಿಳಿಸಲಾಗಿದೆ.
ಯಾಕಾಗಿ ಯೋಜನೆ?
ದೇಶದ ಬಡವ ಮತ್ತು ಅತಿ ಬಡವ ವರ್ಗದವರಿಗೆ ಜನಧನ
ಯೋಜನೆ ಮುಖಾಂತರ ಬ್ಯಾಂಕ್ ಖಾತೆ
ಹೊಂದಲು ಅವಕಾಶವಿದೆ. ದೇಶದ
ಕೋಟ್ಯಂತರ ಕುಟುಂಬಗಳು ಮೊಬೈಲ್
ಹೊಂದಿವೆ ಆದರೆ ಬ್ಯಾಂಕ್ ಖಾತೆ
ಹೊಂದಿಲ್ಲ. ಇದನ್ನು ಬದಲಾವಣೆ
ಮಾಡಬೇಕಾಗಿದೆ ಎಂದು ಪ್ರಧಾನ ಮಂತ್ರಿ
ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಿದ
ನಂತರ ಹೇಳಿದರು.
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಬಡ
ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಯೋಜನೆ
ಸಹಾಯಕಾರಿಯಾಗಲಿದೆ ಎಂದು ಪ್ರಧಾನ ಮಂತ್ರಿ
ತಿಳಿಸಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು