ಪೇಸ್ ಮೇಕರ್ :

ಭ್ರೂಣಕ್ಕೇ ಅಳವಡಿಸಬಹುದಾದ 'ಪೇಸ್ ಮೇಕರ್'

ಲಾಸ್ ಏಂಜೆಲಿಸ್: ಹೃದಯದಲ್ಲಿ ತಡೆ (ಹಾರ್ಟ್ ಬ್ಲಾಕ್) ಸಮಸ್ಯೆ ಇರುವ ಭ್ರೂಣಕ್ಕೆ ನೇರವಾಗಿ ಅಳವಡಿಸಬಹುದಾದ ಸೂಕ್ಷ್ಮ ಗತಿ ನಿಯಂತ್ರಕವನ್ನು (ಮೈಕ್ರೋ ಪೇಸ್​ವೆುೕಕರ್) ಅಮೆರಿಕದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಬೆಳವಣಿಗೆ ಹಂತದಲ್ಲಿ ಇರುವ ಭ್ರೂಣದ ಹೃದಯದ ಎಲೆಕ್ಟ್ರಿಕಲ್ ವ್ಯವಸ್ಥೆಯಲ್ಲಿ ಉಂಟಾಗುವ ಲೋಪಕ್ಕೆ ಕಂಜೀನಿಯಲ್ ಹಾರ್ಟ್ ಬ್ಲಾಕ್ ಎನ್ನಲಾಗುತ್ತದೆ. ಇದರಿಂದ ಹೃದಯಬಡಿತ ನಿಧಾನಗೊಳ್ಳುತ್ತದೆ. ಪರಿಣಾಮವಾಗಿ ಹೃದಯದ ರಕ್ತ ಹೊರತಳ್ಳುವ ಸಾಮರ್ಥ್ಯಕುಗ್ಗುತ್ತದೆ.

ಭ್ರೂಣಾವಸ್ಥೆಗೂ ಮೊದಲೇ ಈ ಸಮಸ್ಯೆಯನ್ನು ಕಂಡು ಹಿಡಿಯಬಹುದಾಗಿದ್ದರೂ, ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತಹ ಮಾದರಿ ಗುಣಮಟ್ಟದ ಗತಿ ನಿಯಂತ್ರಕ ಅಭಿವೃದ್ಧಿ ಗೊಳಿಸುವ ಪ್ರಯತ್ನಗಳು ವಿಫಲಗೊಂಡಿದ್ದವು.

'ಈವರೆಗೆ ನಾವು ಭ್ರೂಣದಲ್ಲಿ ಚಿಕಿತ್ಸೆಗಾಗಿ ಬಳಸುತ್ತಿದ್ದ ಗತಿ ನಿಯಂತ್ರಕ ಸಾಧನಗಳು ವಯಸ್ಕರಿಗಾಗಿ ವಿನ್ಯಾಸಗೊಂಡಂತಹವುಗಳಾಗಿದ್ದವು. ಈಗ ಭ್ರೂಣಾವಸ್ಥೆಯಲ್ಲೇ ಪರಿಣಾಮಕಾರಿಯಾಗಿ ಬಳಸಬಲ್ಲಂತಹ ವಿನ್ಯಾಸದ ಗತಿ ನಿಯಂತ್ರಕವನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆ' ಎಂದು ಲಾಸ್ ಏಂಜೆಲಿಸ್ ಮಕ್ಕಳ ಆಸ್ಪತ್ರೆಯ ಶಿಶು ಹೃದಯ ತಜ್ಞ ಯನಿವ್ ಬಾರ್- ಕೊಹೆನ್ ಹೇಳಿದರು.

'ಈಗ ನಾವು ವಿನ್ಯಾಸಗೊಳಿಸಿರುವ ಗತಿ ನಿಯಂತ್ರಕವನ್ನು ಭ್ರೂಣಾವಸ್ಥೆಗೂ ಮೊದಲೇ ಭ್ರೂಣಕ್ಕಾಗಲೀ, ತಾಯಿಗಾಗಲೀ ಯಾವುದೇ ಹಾನಿಯೂ ಆಗದಂತೆ ಅಳವಡಿಸಬಹುದು' ಎಂದು ಮಕ್ಕಳ ಆಸ್ಪತ್ರೆಯ ನಿರ್ದೇಶಕ ರಾಮೆನ್ ಎಚ್. ಚಾಮೈಟ್ ವಿವರಿಸಿದರು.

'ಹಾರ್ಟ್ ರಿದಮ್ ನಿಯತಕಾಲಿಕದಲ್ಲಿ ಸಂಶೋಧನೆಯ ವಿವರಗಳು ಪ್ರಕಟಗೊಂಡಿವೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು