INDRASHANUDMSH*: A HEALTH PROGRAM From Apr 7


ಏ. 7 ರಿಂದ 'ಮಿಷನ್‌ ಇಂದ್ರಧನುಷ್‌'

ರಾಜೇಶ್‌ ರೈ ಚಟ್ಲ

Sun, 03/29/2015 - 01:00

ಹುಬ್ಬಳ್ಳಿ: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ 'ಮಿಷನ್‌ ಇಂದ್ರ
ಧನುಷ್' ವಿಶೇಷ ಲಸಿಕಾ ಕಾರ್ಯಕ್ರಮ ರಾಜ್ಯದ ಆರು ಜಿಲ್ಲೆಗಳಲ್ಲಿ ವಿಶ್ವ ಆರೋಗ್ಯ ದಿನವಾದ ಏ. 7ರಿಂದ ಆರಂಭವಾಗಲಿದೆ.

ಬೆಂಗಳೂರು ನಗರ ಮತ್ತು  ಹೈದರಾಬಾದ್ ಕರ್ನಾಟಕದ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ.'ರಾಜ್ಯದಲ್ಲಿ ಲಸಿಕಾ ಪ್ರಮಾಣ ಶೇ 50ರಷ್ಟಿರುವ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾ
ಲಯದ ಉಪ ನಿರ್ದೇಶಕ (ಲಸಿಕೆ) ಡಾ. ಎ.ರಾಮಚಂದ್ರ ಬಾಯರಿ 'ಪ್ರಜಾವಾಣಿ'ಗೆ ತಿಳಿಸಿದರು.

'ಈ ವಿನೂತನ ಅಭಿಯಾನದ ಭಾಗವಾಗಿ ಎರಡು ವರ್ಷದ ಒಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಲಾಗುವುದು. ಮಕ್ಕಳಿಗೆ ಬಿಸಿಜಿ, ಡಿಪಿಟಿ, ಹೆಪಟೈಟಿಸ್–ಬಿ, ಪೋಲಿಯೊ ಮತ್ತು ಮೀಸಲ್ಸ್‌ (ದಡಾರ) ಲಸಿಕೆಗಳನ್ನು ಮತ್ತು ಗರ್ಭಿಣಿಯರಿಗೆ ಟಿಟಿ ಲಸಿಕೆ ಹಾಕಲಾಗುವುದು.

ರಾಜ್ಯದಲ್ಲಿ ಡಿಪಿಟಿ ಮತ್ತು ಹೆಪ
ಟೈಟಿಸ್–ಬಿ ಸೇರಿರುವ ಪೆಂಟಾ (ಫೈವ್‌–ಇನ್‌–ಒನ್‌) ಲಸಿಕೆ ಬಳಸಲಾಗುವುದು. ವಲಸೆ ಕಾರ್ಮಿಕರು ನೆಲೆಸಿರುವ ಮತ್ತು ಲಸಿಕಾ ಅಭಿಯಾನ ಈವರೆಗೆ ತಲುಪದ ಪ್ರದೇಶಗಳನ್ನು ಗುರುತಿಸಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಮಕ್ಕಳ ಸಮೀಕ್ಷೆ ನಡೆಸಲಾಗುವುದು. ಯಾವುದೇ ಮಗು ಲಸಿಕೆ ಕಾರ್ಯಕ್ರಮದಿಂದ ವಂಚಿತವಾಗದಂತೆ ನೋಡಿ
ಕೊಳ್ಳಲಾಗುವುದು. ಸಂಚಾರಿ ತಂಡಗಳೂ ಅಭಿಯಾನದಲ್ಲಿ ಭಾಗವಹಿಸಲಿವೆ ಎಂದರು.

ದೇಶದಲ್ಲಿ ಮಕ್ಕಳ ಸಂಪೂರ್ಣ ಲಸಿಕಾ ಕಾರ್ಯಕ್ರಮ ಶೇ 65ನ್ನು ದಾಟಿಲ್ಲ. ಇದನ್ನು  ಶೇ 90ಕ್ಕೆ ಏರಿಸುವುದು 'ಇಂದ್ರಧನುಷ್‌' ಗುರಿ. -ಡಾ.ಎ. ರಾಮಚಂದ್ರ ಬಾಯರಿ, ಆರೋಗ್ಯ ಉಪ ನಿರ್ದೇಶಕ (ಲಸಿಕೆ)

ಏಳು ಬಣ್ಣ ಏಳು ರೋಗ
'ಇಂದ್ರಧನುಷ್‌ ಅಂದರೆ ಕಾಮನಬಿಲ್ಲು; ಏಳು ಬಣ್ಣಗಳ ಸಂಗಮ. ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಡಿಫ್ತೀರಿಯಾ (ಗಂಟಲು ಮಾರಿ), ನಾಯಿಕೆಮ್ಮು, ಧನುರ್ವಾಯು, ಪೋಲಿಯೊ, ದಡಾರ, ಬಾಲಕ್ಷಯ ಮತ್ತು ಹೆಪಟೈಟಿಸ್–ಬಿ ಎಂಬ ಏಳು ರೋಗಗಳನ್ನು ಒಂದೊಂದು ಬಣ್ಣಗಳೆಂದು ಗುರುತಿಸಿ, ಅದನ್ನೇ ಈ ಯೋಜನೆಗೆ ನಾಮಕರಣ ಮಾಡಲಾಗಿದೆ.

'ಇಂದ್ರಧನುಷ್‌' ಯಾರಿಗೆ: ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಡಿಪಿಟಿ, ಹೆಪಟೈಟಿಸ್–ಬಿ, ಪೋಲಿಯೊ ಮತ್ತು ಮೀಸಲ್ಸ್‌ (ದಡಾರ) ಪ್ರತ್ಯೇಕ ಲಸಿಕೆ ಹಾಗೂ ಡಿಪಿಟಿ ಮತ್ತು ಹೆಪಟೈಟಿಸ್–ಬಿ ಸೇರಿರುವ ಪೆಂಟಾವಲೆಂಟ್ (ಫೈವ್‌–ಇನ್‌–ಒನ್‌) ಲಸಿಕೆ.

ಗರ್ಭಿಣಿಯರಿಗೆ ಟಿಟಿ: ಮಕ್ಕಳ ವಯಸ್ಸು ಮತ್ತು ಮಗು ಯಾವ ಲಸಿಕೆ ಹಾಕಿಸಿಕೊಂಡಿಲ್ಲ ಎನ್ನುವುದನ್ನು ನೋಡಿಕೊಂಡು (ಪೆಂಟಾವಲೆಂಟ್‌ ತಿಂಗಳ ಅಂತರದಲ್ಲಿ ಮೂರುಬಾರಿ)ಎಷ್ಟು ಬಾರಿ ಹಾಕಬೇಕೆನ್ನುವುದು ನಿರ್ಧಾರವಾಗುತ್ತದೆ.

ವೇಳಾಪಟ್ಟಿ: ಏಪ್ರಿಲ್‌, ಮೇ, ಜೂನ್‌ ಮತ್ತು ಜುಲೈ ತಿಂಗಳಲ್ಲಿ 7 ರಿಂದ 13ರ ವರೆಗೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪಕೇಂದ್ರಗಳಲ್ಲಿ ನಿರ್ದಿಷ್ಟ ಸಮಯದಲ್ಲಿ  ದೊರೆಯುತ್ತವೆ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು